
ದಿನಾಂಕ: 1 ಫೆಬ್ರವರಿ 2003
ಸ್ಥಳ: ಟೆಕ್ಸಾಸ್, ಅಮೆರಿಕ
ನಾಸಾದ ಬಾಹ್ಯಾಕಾಶ ನೌಕೆ ಕೊಲಂಬಿಯಾ ಶಟಲ್ STS-107 ವೇಗವಾಗಿ ಭೂಮಿಗೆ ಮರಳುತ್ತಿತ್ತು. ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ತಮ್ಮ ಎರಡನೇ ಬಾಹ್ಯಾಕಾಶ ಯಾತ್ರೆಯನ್ನು ಪೂರ್ಣಗೊಳಿಸಿ ಈ ನೌಕೆಯಿಂದ ಭೂಮಿಗೆ ವಾಪಾಸಾಗುತ್ತಿದ್ದರು. ಗಂಟೆಗೆ 20 ಸಾವಿರ ಕಿಲೋಮೀಟರ್ ವೇಗದಲ್ಲಿ ಬರುತ್ತಿದ್ದ ನೌಕೆ ಇನ್ನೇನುಭೂಮಿಯಿಂದ ಸುಮಾರು 2 ಲಕ್ಷ ಅಡಿ ದೂರದಲ್ಲಿದ್ದಾಗ ಹಾಗೂ ಭೂಸ್ಪರ್ಶ ಮಾಡಲು 16 ನಿಮಿಷಗಳು ಬೇಕಾಗಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ನಾಸಾ ನೌಕೆಯೊಂದಿಗಿನ ಸಂಪರ್ಕ ಕಳೆದುಕೊಂಡಿತು. ನೌಕೆಯಲ್ಲಿ ದೊಡ್ಡ ಸ್ಫೋಟ ಸಂಭವಿಸಿ, ಆಗಸದಲ್ಲಿ ಉರಿಯುತ್ತಿರುವ ಬೆಂಕಿಯುಂಡೆಯಾಗಿ ಬದಲಾಯಿತು.
ಇದರ ಬೆನ್ನಲ್ಲೇ, ಕೊಲಂಬಿಯಾ ನೌಕೆಯ ಬಾಹ್ಯಾಕಾಶ ನೌಕೆ ಅಪಘಾತಕ್ಕೀಡಾಗಿದ್ದು, ಕಲ್ಪನಾ ಚಾವ್ಲಾ ಸೇರಿದಂತೆ ಎಲ್ಲಾ 7 ಗಗನಯಾತ್ರಿಗಳು ಸಾವನ್ನಪ್ಪಿದ್ದಾರೆ ಎಂದು ನಾಸಾ ಅಧಿಕೃತವಾಗಿ ಘೋಷಿಸಿತು.
22 ವರ್ಷಗಳ ಹಿಂದೆ ಆಗಿದ್ದೇನು?
16 ದಿನಗಳ ಮಿಷನ್, ಕೇವಲ 16 ನಿಮಿಷದ ಅಂತರದಲ್ಲಿ ಯಶಸ್ಸಿನಿಂದ ವಂಚಿತವಾಯಿತು: ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ಹಿಂದಿರುಗಿದ ಕಾರಣ ಇಂದು ಇಡೀ ದೇಶದಲ್ಲಿ ಸಂಭ್ರಮದ ವಾತಾವರಣವಿದೆ, ಆದರೆ 2003 ರಲ್ಲಿ, ಇದೇ ರೀತಿಯ ಕಾರ್ಯಾಚರಣೆ ವಿಫಲವಾಗಿದ್ದಕ್ಕೆ, ಇಡೀ ದೇಶ ಕಣ್ಣೀರಾಗಿತ್ತು. ಕಲ್ಪನಾ ಚಾವ್ಲಾ ಅವರು ಮೊದಲ ಬಾರಿಗೆ 1997ರ ನವೆಂಬರ್ 19 ರಂದು ಬಾಹ್ಯಾಕಾಶಕ್ಕೆ ಹಾರಿದ್ದರು. ಅವರ ಮೊದಲ ಬಾಹ್ಯಾಕಾಶ ಪ್ರಯಾಣದಲ್ಲಿ, ಅವರು 372 ಗಂಟೆಗಳ ಕಾಲ ಬಾಹ್ಯಾಕಾಶದಲ್ಲಿದ್ದರು. ಇದಾದ ನಂತರ, 2003 ಜನವರಿ 16ರಂದು ಎರಡನೇ ಬಾರಿಗೆ ಬಾಹ್ಯಾಕಾಶಕ್ಕೆ ಹೋಗುವ ಅವಕಾಶ ಅವರಿಗೆ ಸಿಕ್ಕಿತು.
ಕಲ್ಪನಾ ಚಾವ್ಲಾ 2003ರ ಫೆಬ್ರವರಿ 1 ರಂದು ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಬೇಕಿತ್ತು. ಭೂಮಿಯನ್ನು ಮುಟ್ಟುವ ಕನಸು ಶಾಶ್ವತವಾಗಿ ಅವರಿಗೆ ಕನಸಾಗಿಯೇ ಉಳಿದುಹೋಯಿತು. ಕಲ್ಪನಾ ಚಾವ್ಲಾ ಅವರ ಬಾಹ್ಯಾಕಾಶ ನೌಕೆ ಐಎಸ್‌ಎಸ್‌ನಿಂದ ಹೊರಡುವ ಸಮಯದಲ್ಲಿ, ಬಾಹ್ಯಾಕಾಶ ನೌಕೆಯ ಇಂಧನ ಟ್ಯಾಂಕ್‌ನಿಂದ ಇನ್ಸ್ಯುಲೇಟಿಂಗ್ ಫೋಮ್‌ನ ತುಂಡುಗಳು ನೌಕೆಯ ಎಡ ರೆಕ್ಕೆಗೆ ಅಪ್ಪಳಿಸಿದ್ದವು. ಬಾಹ್ಯಾಕಾಶ ನೌಕೆಯನ್ನು ತೀವ್ರವಾದ ಶಾಖದಿಂದ ರಕ್ಷಿಸುವ ಅಂಚು ಹಾನಿಯಾಗಿದ್ದರಿಂದ ಭೂವಾತಾವರಣ್ಕೆ ಪ್ರವೇಶಿಸಿದಾಗ ಈ ಅಪಘಾತ ಸಂಭವಿಸಿತ್ತು ಎಂದು ತಜ್ಞರು ಹೇಳಿದ್ದಾರೆ. ಇದರಿಂದಾಗಿ, ಕಲ್ಪನಾ ಚಾವ್ಲಾ ಅವರ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ತಲುಪಿದ ತಕ್ಷಣ, ಗಾಳಿಯ ತೀವ್ರ ಘರ್ಷಣೆಯ ಶಾಖದಿಂದಾಗಿ ದೊಡ್ಡ ಸ್ಫೋಟ ಸಂಭವಿಸಿತು ಮತ್ತು ಎಲ್ಲಾ ಗಗನಯಾತ್ರಿಗಳು ಸಾವನ್ನಪ್ಪಿದರು.
ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಿದ್ದ ಕಲ್ಪನಾ: ಕಲ್ಪನಾ ಚಾವ್ಲಾ 1962 ಜುಲೈ 1 ರಂದು ಹರಿಯಾಣದ ಕರ್ನಾಲ್‌ನಲ್ಲಿ ಜನಿಸಿದರು. ಅವರು ನಾಲ್ವರು ಒಡಹುಟ್ಟಿದವರಲ್ಲಿ ಕಿರಿಯರು. ಬಾಲ್ಯದಿಂದಲೂ ಕಲ್ಪನಾ ವಿಮಾನ ಮತ್ತು ಹಾರಾಟದ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದರು. ಕರ್ನಾಲ್‌ನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದಿದ್ದ ಕಲ್ಪನಾ ನಂತರ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿದರು.
ಕಲ್ಪನಾ ಚಾವ್ಲಾ 1982 ರಲ್ಲಿ ಯುಎಸ್‌ಗೆ ಹೋದರು ಮತ್ತು 1984 ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, 1986 ರಲ್ಲಿ, ಅವರು ತಮ್ಮ ಎರಡನೇ ಸ್ನಾತಕೋತ್ತರ ಪದವಿ ಮತ್ತು ನಂತರ ಅದೇ ವಿಷಯದಲ್ಲಿ ಪಿಎಚ್‌ಡಿ ಪಡೆದರು. ಕಲ್ಪನಾ ಚಾವ್ಲಾ 1983 ರಲ್ಲಿ ಫ್ರಾನ್ಸ್‌ನ ಜೀನ್ ಪಿಯರೆ ಅವರನ್ನು ವಿವಾಹವಾದರು. ಇವರು ವೃತ್ತಿಯಲ್ಲಿ ಫ್ಲೈಯಿಂಗ್ ಇನ್ಸ್‌ಸ್ಟ್ರಕ್ಟರ್ ಆಗಿದ್ದರು.
35ನೇ ವರ್ಷದಲ್ಲಿಯೇ ಸಾವು: ಕಲ್ಪನಾ ಚಾವ್ಲಾ 1991 ರಲ್ಲಿ ಅಮೆರಿಕ ಪೌರತ್ವವನ್ನು ಪಡೆದರು ಮತ್ತು ಅದೇ ವರ್ಷ NASA ಗೆ ಸೇರಿದರು. 1997 ರಲ್ಲಿ, ಅವರು ಬಾಹ್ಯಾಕಾಶಕ್ಕೆ ಹೋಗಲು NASA ಸ್ಪೆಷಲ್ ಶಟಲ್ ಕಾರ್ಯಕ್ರಮಕ್ಕೆ ಆಯ್ಕೆಯಾದರು.ಕಲ್ಪನಾ ಚಾವ್ಲಾ ಅವರ ಮೊದಲ ಬಾಹ್ಯಾಕಾಶ ಯಾನವು 19 ನವೆಂಬರ್ 1997 ರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆಯ (STS-87) ಮೂಲಕ ಪ್ರಾರಂಭವಾಯಿತು. ಇದರೊಂದಿಗೆ, ಅವರು ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮೂಲದ ಮಹಿಳೆಯಾದರು.
ಕಲ್ಪನಾ ಚಾವ್ಲಾ ಸಾವು ಕಲಿಸಿದ ಪಾಠ, ಸುನೀತಾ ವಿಲಿಯಮ್ಸ್‌ಗಾಗಿ ನಾಸಾ ಕಠಿಣ ನಿರ್ಧಾರ
2003ರಲ್ಲಿ ಅಕಾಲಿಕ ಮರಣ ಹೊಂದುವ ವೇಳೆ ಕಲ್ಪನಾ ಚಾವ್ಲಾಗೆ 35 ವರ್ಷ ವಯಸ್ಸಾಗಿತ್ತು. ಅವರ ಮೊದಲ ಬಾಹ್ಯಾಕಾಶ ಯಾನದಲ್ಲಿ, ಚಾವ್ಲಾ 6.5 ಮಿಲಿಯನ್ ಮೈಲುಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಿದರು ಮತ್ತು 376 ಗಂಟೆಗಳಿಗಿಂತ ಹೆಚ್ಚು (15 ದಿನಗಳು ಮತ್ತು 16 ಗಂಟೆಗಳು) ಬಾಹ್ಯಾಕಾಶದಲ್ಲಿ ಕಳೆದರು. ಇದು ಕಲ್ಪನಾ ಚಾವ್ಲಾ ಅವರ ಕೊನೆಯ ಯಶಸ್ವಿ ಬಾಹ್ಯಾಕಾಶ ಪ್ರಯಾಣವಾಯಿತು. 2003 ಜನವರಿ 16ರಂದು, ಕಲ್ಪನಾ ಚಾವ್ಲಾ ಅವರ ಜೀವನದ ಎರಡನೇ ಮತ್ತು ಕೊನೆಯ ಬಾಹ್ಯಾಕಾಶ ಯಾನದ ಭಾಗವಾದರು.
ಸ್ಪೇಸ್‌ನಿಂದ ಭಾರತಕ್ಕೆ ಕಲ್ಪನಾ ಚಾವ್ಲಾರ ಕಡೆಯ ಸಂದೇಶ; ಇಲ್ಲಿದೆ ವಿಡಿಯೋ
ಮೇಕಪ್, ಫ್ಯಾಶನ್‌ನಿಂದ ದೂರವಿದ್ದ ಕಲ್ಪನಾ: ಮೇಕಪ್ ಮತ್ತು ಫ್ಯಾಷನ್‌ನಿಂದ ದೂರವಿದ್ದ ಕಲ್ಪನಾ ಚಾವ್ಲಾ ಯಾವಾಗಲೂ ಟಾಮ್‌ಬಾಯ್ ರೀತಿಯಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಬಾಲ್ಯದಿಂದಲೂ ಚಿಕ್ಕ ಕೂದಲನ್ನು ಇಟ್ಟುಕೊಳ್ಳುವುದು ಅವಳಿಗೆ ಇಷ್ಟವಾಗಿತ್ತು. ಮೇಕಪ್ ಮತ್ತು ಫ್ಯಾಷನ್ ಬಗ್ಗೆ ಆಸಕ್ತಿಯೇ ಇದ್ದಿರಲಿಲ್ಲ. ಅಕ್ಕನ ಮದುವೆಯ ಸಂದರ್ಭದಲ್ಲಿ ಕಲ್ಪನಾ ಚಾವ್ಲಾ ಮೂರು ದಿನ ಕೂಡ ಒಂದೇ ಬಟ್ಟೆ ಧರಿಸಿದ್ದರು. ಈ ಬಗ್ಗ ಪ್ರಶ್ನೆ ಮಾಡಿದಾಗ, ಇದೆಲ್ಲಾ ಅಗತ್ಯವಿಲ್ಲ, ಅದೆಲ್ಲವೂ ಸಮಯ ವ್ಯರ್ಥ ಮಾಡುತ್ತದೆ ಎಂದಿದ್ದರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.