8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್‌ ಇನ್ನು ಬರೋದು 2025ರ ಫೆಬ್ರವರಿಯಲ್ಲಿ!

By Santosh Naik  |  First Published Aug 8, 2024, 8:40 PM IST


Sunita Williams Return to Earth by 2025 february ಕೇವಲ 8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್ಮೋರ್‌ ಮುಂದಿನ ವರ್ಷದ ಫೆಬ್ರವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.


ವಾಷಿಂಗ್ಟನ್‌ (ಆ.8): ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್‌ ಹಾಗೂ ಸುನೀತಾ ವಿಲಿಯಮ್ಸ್‌ 2025ರ ಫೆಬ್ರವರಿಯಲ್ಲಿ ಭೂಮಿಗೆ ವಾಪಾಸಾಗಲಿದ್ದಾರೆ ಎಂದು ನಾಸಾ ತಿಳಿಸಿದೆ. ಇವರಿಬ್ಬರು ಒಂದೇ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಬರೋದಿಲ್ಲ. ಬೇರೆ ಬೇರೆ ಬಾಹ್ಯಾಕಾಶ ನೌಕೆಯಲ್ಲಿ ಅವರು ಮರಳಬಹುದು ಎಂದುಸ ನಾಸಾ ತಿಳಿಸಿದ್ದು, ಈ ನೌಕೆ ಸ್ಟಾರ್‌ಲೈನರ್‌ ಆಗಿರುವುದು ಕೂಡ ಅನುಮಾನ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ಗುರುವಾರ ತಿಳಿಸಿದೆ. ಅಲ್ಲಿಯವರೆಗೂ ಸ್ಟಾರ್‌ಲೈನರ್‌ ನೌಕೆಯನ್ನು ಬಳಸಿಕೊಂಡು ಭೂಮಿಗೆ ವಾಪಾಸ್‌ ಆಗೋದು ಅಸುರಕ್ಷಿತ ಎಂದು ಪರಿಗಣಿಸಿದರೆ, ಈ ಇಬ್ಬರು ಗಗನಯಾತ್ರಿಗಳು 2025ರ ಫೆಬ್ರವರಿಯಲ್ಲಿ ಸ್ಪೇಸ್‌ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ಮೂಲಕ ಭೂಮಿಗೆ ಮರಳಬಹುದು ಎಂದು ತಿಳಿಸಿದೆ. ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ಹೋಗಿರುವ ಮೊದಲ ಸಿಬ್ಬಂದಿಯಾದ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್‌ಗಾಗಿ ಮುಂಬರುವ ಕ್ರ್ಯೂ ಡ್ರ್ಯಾಗನ್ ಉಡಾವಣೆಯಲ್ಲಿ ಎರಡು ಆಸನಗಳನ್ನು ಖಾಲಿ ಬಿಡಲು ಸ್ಪೇಸ್‌ಎಕ್ಸ್‌ನೊಂದಿಗೆ ಸಂಭಾವ್ಯ ಯೋಜನೆಗಳನ್ನು ಯುಎಸ್ ಬಾಹ್ಯಾಕಾಶ ಸಂಸ್ಥೆ ಚರ್ಚೆ ಮಾಡುತ್ತಿದೆ.

ಕೇವಲ 8 ದಿನ ಯೋಜನೆ: ಬೋಯಿಂಗ್‌ ಸ್ಟಾರ್‌ಲೈನರ್‌ನ ಗಗನಯಾತ್ರಿಗಳ ಪರೀಕ್ಷಾ ಮಿಷನ್‌ ಬಾಹ್ಯಾಕಾಶದಲ್ಲಿ ಕೇವಲ 8 ದಿನಗಳ ಯೋಜನೆ ಆಗಿತ್ತು. ಆದರೆ, ಸ್ಟಾರ್‌ಲೈನರ್‌ನ ಪ್ರೊಪಲ್ಶನ್‌ ಸಿಸ್ಟಮನ್‌ನಲ್ಲಿ ಆದ ಸಮಸ್ಯೆಯಿಂದಾಗಿ ಇದು ಭೂಮಿಗೆ ಯಶಸ್ವಿಯಾಗಿ ಮರಳುವುದು ಅನುಮಾನ ಎನ್ನಲಾಗಿದೆ. ಹಾಗೇನಾದರೂ ವಾಪಾಸ್ ಆದಲ್ಲಿ ಆಗಸದ ಮಧ್ಯೆಯೇ ಸುಟ್ಟು ಭಸ್ಮವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

Latest Videos

undefined

ಸ್ಟಾರ್‌ಲೈನರ್‌ನ ಕಾರ್ಯಾಚರಣೆಯನ್ನು ಬದಲಾಯಿಸಲು ನಾಸಾ ನಿರ್ಧರಿಸಿದರೆ, ಕಂಪನಿಯು "ಸ್ಟಾರ್‌ಲೈನರ್ ಅನ್ನು ಸಿಬ್ಬಂದಿಯಿಲ್ಲದ ಹಿಂತಿರುಗಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಬೋಯಿಂಗ್ ವಕ್ತಾರ ಹೇಳಿದ್ದಾರೆ. ಇದಲ್ಲದೆ ಸ್ಟಾರ್‌ಲೈನರ್‌ ಕ್ಯಾಪ್ಸುಲ್‌ನಲ್ಲಿ ಹಲವಾರು ಹೀಲಿಯಂ ಸೋರಿಕೆಗಳನ್ನೂ ಪತ್ತೆ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಸ್ಟಾರ್‌ಲೈನರ್‌ ಬಳಸಿ ಭೂಮಿಗೆ ಬರೋದು ಸೂಕ್ತವಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿದೆ.

ಇತ್ತೀಚಿನ ಡೇಟಾವು ಸ್ಟಾರ್‌ಲೈನರ್ ಭೂಮಿಗೆ ಮರಳುವ ಅಪಾಯವನ್ನು ಒಪ್ಪಿಕೊಳ್ಳಬೇಕೆ ಅಥವಾ ಬದಲಿಗೆ ಕ್ರ್ಯೂ ಡ್ರ್ಯಾಗನ್ ಅನ್ನು ಬಳಸಲು ಕರೆ ಮಾಡಬೇಕೆ ಎಂಬುದರ ಕುರಿತು ನಾಸಾದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. 

ಬಾಹ್ಯಾಕಾಶದಲ್ಲಿ 'ಬೋನ್‌ ಲಾಸ್‌' ಸಂಕಷ್ಟಕ್ಕೆ ಈಡಾದ ಸುನೀತಾ ವಿಲಿಯಮ್ಸ್‌, ಗಗನಯಾತ್ರಿ ಭೂಮಿಗೆ ಬರೋದು ಯಾವಾಗ?

ಕಂಪನಿಯ ಘನತೆಗೆ ಕುತ್ತು: ಬೋಯಿಂಗ್‌ ತನ್ನ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಕಳಿಸಿದ್ದ ಇಬ್ಬರು ಗಗನಯಾತ್ರಿಗಳನ್ನು ಪ್ರತಿಸ್ಪರ್ಧಿಯಾಗಿರುವ ಸ್ಪೇಸ್‌ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ನೌಕೆ ಬಳಸಿಕೊಂಡು ಭೂಮಿಗೆ ವಾಪಾಸ್‌ ಕರೆತಂದಲ್ಲಿ ಇದು ಏರೋಸ್ಪೇಸ್‌ ದೈತ್ಯ ಎಂದು ಹೇಳಿಕೊಳ್ಳುವ ಬೋಯಿಂಗ್‌ ಕಂಪನಿಯ ಘನತೆಗೆ ದೊಡ್ಡ ಪೆಟ್ಟು ಬೀಳಲಿದೆ. ಆ ನಿಟ್ಟಿನಲ್ಲಿಯೂ ಕೂಡ ನಾಸಾ ಹಾಗೂ ಬೋಯಿಂಗ್‌ ಯೋಚನೆ ಮಾಡುತ್ತಿದೆ. ಹಲವಾರು ವರ್ಷಗಳಿಂದ ಬೋಯಿಂಗ್‌ ಹಾಗೂ ಸ್ಪೇಸ್‌ ಎಕ್ಸ್‌ ನಡುವೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಈ ವಿಚಾರದ ಮೂಲಕ ಸ್ಪೇಸ್‌ ಎಕ್ಸ್‌ ದೊಡ್ಡ ಮೇಲುಗೈ ಸಾಧಿಸುತ್ತದೆ.

ಅಂತರಿಕ್ಷದಲ್ಲೇ ಉಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್: ಭೂಮಿಗಿಂತ ವಿಭಿನ್ನ ವಾತಾವರಣ..ಎದುರಾಗಲಿದೆ ಆರೋಗ್ಯ ಸಮಸ್ಯೆ!

90 ದಿನ ಮಾತ್ರವೇ ಡಾಕಿಂಗ್‌: ಇನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್‌ (ನಿಲ್ದಾಣ) ಮಾಡಲು ಸ್ಟಾರ್‌ಲೈನರ್‌ಗೆ 90 ದಿನ ಮಾತ್ರವೇ ಅವಕಾಶವಿದೆ. ಇದರಲ್ಲಿ 63 ದಿನ ಈಗಾಗಲೇ ಆಗಿದೆ. ಇನ್ನು ಸ್ಪೇಸ್‌ ಎಕ್ಸ್‌ ತನ್ನ ಕ್ರ್ಯೂ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಮಾಡಬೇಕಾದ ಸ್ಥಳದಲ್ಲಿಯೇ ಈಗ ಸ್ಟಾರ್‌ಲೈನರ್‌ ಇದೆ. ಮಂಗಳವಾರ ಮುಂಜಾನೆ, NASA, SpaceX ರಾಕೆಟ್ ಮತ್ತು ನಾರ್ಥ್‌ರಾಪ್ ಗ್ರುಮನ್ ಕ್ಯಾಪ್ಸುಲ್ ಅನ್ನು ಬಳಸಿಕೊಂಡು, ವಿಲ್ಮೋರ್ ಮತ್ತು ವಿಲಿಯಮ್ಸ್‌ಗೆ ಹೆಚ್ಚುವರಿ ಬಟ್ಟೆಗಳನ್ನು ಒಳಗೊಂಡಂತೆ ಆಹಾರ ಮತ್ತು ಸರಬರಾಜುಗಳ ಸಾಗಾಣೆ ಮಾಡಿದೆ.
 

click me!