ಮನೆ, ಶಾಲೆ ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ಗ್ರಾಮದ ಮೇಲೆ ದೊಡ್ಡ ಗಾತ್ರದ ಲೋಹದ ಉಂಗುರ ಒಂದು ಬಿದ್ದಿದೆ. ಆಗಸದಿಂದ ಏಕಾಏಕಿ ಈ ಉಂಗುರ ಆಕಾರದ ಲೋಹ ಗ್ರಾಮಸ್ಥರಲ್ಲಿ ಏಲಿಯನ್ ಆತಂಕ ಹೆಚ್ಚಿಸಿತ್ತು. ಇದೀಗ ಬಾಹ್ಯಾಕಾಶ ಕೇಂದ್ರ ಅಧಿಕಾರಿಗಳು ಈ ಕುರಿತು ಉತ್ತರಿಸಿದ್ದಾರೆ.
ಕೀನ್ಯಾ(ಜ.05) ಅನ್ಯಗ್ರಹ ಜೀವಿಗಳು ಇವೆ, ಕೆಲೆವಡೆ ಪತ್ತೆ ಅನ್ನೋ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇತ್ತ ಏಲಿಯನ್ ಕುರಿತು ಹಲವು ಅಧ್ಯಯನ ನಡೆದರೂ ಸ್ಪಷ್ಟತೆ ಇಲ್ಲ. ಇದರ ನಡುವೆ ಕೀನ್ಯಾ ಗ್ರಾಮದ ಜನರು ಭಾರಿ ಆತಂಕಗೊಂಡ ಘಟನೆ ನಡೆದಿದೆ. ಆಗಸದಿಂದ ಏಕಾಏಕಿ ಲೋಹದ ಉಂಗುರ ಆಕಾರವೊಂದು ಭೂಮಿಗೆ ಬಿದ್ದಿದೆ. ಭಾರಿ ಶಬ್ದ ಕೇಳಿ ಗ್ರಾಮಸ್ಥರು ಓಡೋಡಿ ಬಂದಿದ್ದಾರೆ. ಆದರೆ ಹತ್ತಿರಬರುತ್ತಿದ್ದಂತೆ ಉಂಗುರ ಆಕಾರದಲ್ಲಿರುವ ಲೋಹ. ಇದು ಏಲಿಯನ್ ವಿಮಾನ ಇರಬಹುದೇ? ಅಥವಾ ಏಲಿಯನ್ ವಿಮಾನ ಅಪಘಾತದ ಸಂಭವಿಸಿತೆ ಅನ್ನೋ ಆತಂಕ ಜನರಲ್ಲಿ ಕಾಡಿತ್ತು. ಮಾಹಿತಿ ತಿಳಿದು ಹಲವು ಅಧಿಕಾರಿಗಳ ತಂಡ ಕೀನ್ಯಾದ ಮುಕುಕು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಇದೇ ವೇಳೆ ಕೀನ್ಯಾ ಬಾಹ್ಯಾಕಾಶ ಸಂಸ್ಥೆ ಕೂಡ ಸ್ಥಳಕ್ಕೆ ಧಾವಿಸಿ ಅಧ್ಯಯನ ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಬಾಹ್ಯಾಕಾಶ ನೌಕೆಯ ಅವಶೇಷ ಸಾಧ್ಯತೆ ಹೆಚ್ಚು ಎಂದಿದೆ.
ಬಾಹ್ಯಾಕಾಶದ ತ್ಯಾಜ್ಯವು ಮಾನವೀಯತೆಗೆ ದೊಡ್ಡ ಅಪಾಯವಾಗಬಹುದು ಎಂಬ ಆತಂಕಗಳನ್ನು ಹೆಚ್ಚಿಸುವಂತೆ ಘಟನೆ ಕೀನ್ಯಾದಲ್ಲಿ ನಡೆದಿದೆ. ನೆಲಕ್ಕೆ ಬಿದ್ದಿರುವ ಉಂಗುರ ಆಕಾರದ ಲೋಹ ಬಾಹ್ಯಾಕಾಶ ರಾಕೆಟ್‌ನದ್ದೆಂದು ಹೇಳಲಾಗುತ್ತಿದೆ. ಆದರೆ ಕೀನ್ಯಾದ ಮುಕುಕು ಗ್ರಾಮಸ್ಥರ ಆತಂಕ ಮಾತ್ರ ಕಡಿಮೆಯಾಗಿಲ್ಲ. ಮನೆಯಲ್ಲಿ ಇರಲು ಭಯಪಡುತ್ತಿದ್ದಾರೆ. ಯಾವಾಗ ಆಗಸದಿಂದ ಮನೆ ಮೇಲೆ ರೀತಿಯ ಲೋಹದ ಅವಶೇಷ ಮನೆ ಮೇಲೆ ಬೀಳುತ್ತೋ ಎಂದು ಆತಂಕಗೊಂಡಿದ್ದಾರೆ. ಈ ಲೋಹದ ತುಂಡಿನ ಬಗ್ಗೆ ಕೀನ್ಯಾ ಬಾಹ್ಯಾಕಾಶ ಸಂಸ್ಥೆ ತನಿಖೆ ಆರಂಭಿಸಿದೆ.
ಗುಜರಾತ್: ಬಾಹ್ಯಾಕಾಶದಿಂದ ಬಿದ್ದ ವಿಚಿತ್ರ ಲೋಹದ ಚೆಂಡುಗಳು: ಜನರಲ್ಲಿ ಆತಂಕ!
ಸುಮಾರು 2.5 ಮೀಟರ್ ವ್ಯಾಸ ಮತ್ತು 500 ಕಿಲೋಗ್ರಾಂ ತೂಕದ ದೊಡ್ಡ ಲೋಹದ ಉಂಗುರವು ಕೀನ್ಯಾದಲ್ಲಿ ಆಕಾಶದಿಂದ ಬಿದ್ದಿದೆ ಎಂದು ಕೀನ್ಯಾ ಬಾಹ್ಯಾಕಾಶ ಸಂಸ್ಥೆ ದೃಢಪಡಿಸಿದೆ. 2024 ರ ಡಿಸೆಂಬರ್ 30 ರಂದು ಈ ಲೋಹದ ಉಂಗುರವು ಕೀನ್ಯಾದ ಮುಕುಕು ಗ್ರಾಮದಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 3 ಗಂಟೆಗೆ ಬಿದ್ದಿದೆ. ಇದು ಬಾಹ್ಯಾಕಾಶ ಉಡಾವಣಾ ವಾಹನದ ಬೇರ್ಪಡಿಕೆ ಉಂಗುರ ಎಂದು ಕೀನ್ಯಾ ಬಾಹ್ಯಾಕಾಶ ಸಂಸ್ಥೆಯ ಪ್ರಾಥಮಿಕ ಮಾಹಿತಿಯಾಗಿದೆ. ಉಡಾವಣೆಯ ನಂತರ ಭೂಮಿಯ ವಾತಾವರಣಕ್ಕೆ ಮರಳಿ ಪ್ರವೇಶಿಸುವಾಗ ಸುಟ್ಟುಹೋಗುವ ರೀತಿಯಲ್ಲಿ ಅಥವಾ ಸಮುದ್ರದಂತಹ ಜನವಸತಿಯಿಲ್ಲದ ಸ್ಥಳಗಳಲ್ಲಿ ಬೀಳುವ ರೀತಿಯಲ್ಲಿ ಇವುಗಳನ್ನು ಸಾಮಾನ್ಯವಾಗಿ ವಿನ್ಯಾಸಗೊಳಿಸಲಾಗುತ್ತದೆ. ಈ ಲೋಹದ ಉಂಗುರವು ಭೂಮಿಗೆ ಬಿದ್ದದ್ದು ಅಸಾಮಾನ್ಯ ಘಟನೆಯಾಗಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕಾನೂನುಗಳ ಚೌಕಟ್ಟಿನ ಪ್ರಕಾರ ಈ ಘಟನೆಯನ್ನು ತನಿಖೆ ಮಾಡಲಾಗುವುದು ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿವರವಾದ ಪರಿಶೀಲನೆಗಾಗಿ ಲೋಹದ ಉಂಗುರ ಬಿದ್ದ ಪ್ರದೇಶವು ಕೀನ್ಯಾ ಬಾಹ್ಯಾಕಾಶ ಸಂಸ್ಥೆಯ ನಿಯಂತ್ರಣದಲ್ಲಿದೆ.\
A metallic object, weighing approximately 500 kilograms and measuring 2 meters in diameter, crashed into Mukuku Village in Eastern Kenya, on December 30.
The Kenya Space Agency has reassured the public that the debris poses no immediate safety threat. pic.twitter.com/tLT2FmFIXu
ಇದು ಬಾಹ್ಯಾಕಾಶ ತ್ಯಾಜ್ಯವಲ್ಲ ಎಂಬ ವಾದವೂ ಸಕ್ರಿಯವಾಗಿದೆ. ಭೂಮಿಯ ವಾತಾವರಣಕ್ಕೆ ಮರಳಿ ಪ್ರವೇಶಿಸುವಾಗ ಬಿಸಿಯಾದ ಯಾವುದೇ ಲಕ್ಷಣಗಳನ್ನು ಈ ಲೋಹದ ಉಂಗುರದಲ್ಲಿ ಕಾಣುತ್ತಿಲ್ಲ ಎಂದು ಆಕಾಶ ವೀಕ್ಷಕ ಜೊನಾಥನ್ ಮೆಕ್‌ಡೊವೆಲ್ ಅಭಿಪ್ರಾಯಪಟ್ಟಿದ್ದಾರೆ. ಅದೇ ಸಮಯದಲ್ಲಿ, ಬಾಹ್ಯಾಕಾಶದ ಅವಶೇಷಗಳು ಯಾವುದೇ ಹಾನಿಯಾಗದಂತೆ ಭೂಮಿಗೆ ಬೀಳುವ ಸಾಧ್ಯತೆಯಿದೆ ಎಂಬ ಅಂದಾಜುಗಳೂ ಸಕ್ರಿಯವಾಗಿವೆ. ಹೀಗಾಗಿ ಇದು ಏಲಿಯನ್ ವಿಮಾನದ ಅವಶೇಷವಾಗಿರಬಹುದು ಅನ್ನೋ ಅಭಿಪ್ರಾಯಗಳು ಕೇಳಿಬಂದಿದೆ. ಏಲಿಯನ್ ವಿಮಾನಗಳು ಚಿತ್ರಗಳಲ್ಲಿ ವೃತ್ತಾಕಾರದಲ್ಲಿದೆ. ಇದೀಗ ಬಿದ್ದಿರುವ ತ್ಯಾಜ್ಯ ಕೂಡ ಇದೇ ಆಕಾರದಲ್ಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಸದ್ಯ ತನಿಖೆ ಹಾಗೂ ಅಧ್ಯಯನ ಮಂದುವರಿದಿದೆ. ಆದರೆ ಕೀನಾದ ಗ್ರಾಮಸ್ಥರು ಗೊಂದಲ, ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ