ನೀವು ಹಿಂದೆಂದೂ ನೋಡಿರದ ಮೌಂಟ್ ಎವರೆಸ್ಟ್: ಇಲ್ಲಿದೆ ಬಾಹ್ಯಾಕಾಶದಿಂದ ನಾಸಾ ಕ್ಲಿಕ್ಕಿಸಿದ ಫೋಟೋ

By Suvarna News  |  First Published Apr 5, 2022, 3:00 PM IST

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ  ಗಗನಯಾತ್ರಿಗಳು ಮೌಂಟ್ ಎವರೆಸ್ಟ್‌ನ ಅದ್ಭುತ ಛಾಯಾಚಿತ್ರವನ್ನು ಚಿತ್ರೀಕರಿಸಿದ್ದಾರೆ
 


NASA  Mount Everest Photo: ವಿಶ್ವದ ಅತ್ಯುನ್ನತ ಹಿಮಶಿಖರವಾದ ಮೌಂಟ್‌ ಎವರೆಸ್ಟ್‌ (8848.86 ಮಿ. ಎತ್ತರ) ನೋಡುವುದೇ ಚೆಂದ. ಮೌಂಟ್‌ ಎವರೆಸ್ಟ್‌ನ ಬೆರಗುಗೊಳಿಸುವಂತಹ ಚಿತ್ರಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಇನ್ನು ಕೊರೋನಾ ಲಾಕ್‌ಡೌನ್‌ನಿಂದಾಗಿ ಜನರ ಚಟುವಟಿಕೆಗಳು ಕಡಿಮೆ ಆಗಿದ್ದರಿಂದ ಪರಿಸರ ಮಾಲಿನ್ಯ ಕೊಂಚ ಕಡಿಮೆಯಾದಾಗ ದಶಕಗಳ ಬಳಿಕ ಮೊದಲ ಬಾರಿ ಉತ್ತರ ಭಾರತದ ಕೆಲವು ಗ್ರಾಮಗಳಿಂದ ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಬರಿಗಣ್ಣಿಗೆ ಗೋಚರಿಸಿತ್ತು. ಈ ಫೋಟೋಗಳು ಕೂಡ ವೈರಲ್‌ ಆಗಿದ್ದವು. ಆದರೆ ಬಾಹ್ಯಾಕಾಶದಿಂದ ಮೌಂಟ್‌ ಎವರೆಸ್ಟ್‌ ಹೇಗೆ ಕಾಣಿಸುತ್ತದೆ ಗೊತ್ತಾ? ಇಲ್ಲಿದೆ ಉತ್ತರ!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಗಗನಯಾತ್ರಿಗಳು ಮೌಂಟ್ ಎವರೆಸ್ಟ್‌ನ ಅದ್ಭುತ ಛಾಯಾಚಿತ್ರವನ್ನು ಚಿತ್ರೀಕರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನಾಸಾ (NASA) ಹಂಚಿಕೊಂಡ ಫೋಟೋ, ಹಿಮದಿಂದ ಆವೃತವಾದ ಅನೇಕ ಶಿಖರಗಳನ್ನು ಹೊಂದಿರುವ ಪರ್ವತದ ವೈಮಾನಿಕ ಚಿತ್ರವನ್ನು ತೋರಿಸುತ್ತದೆ.

Tap to resize

Latest Videos

undefined

ಹಿಂದೆಂದೂ ನೋಡಿರದಂತಹ ಮೌಂಟ್ ಎವರೆಸ್ಟ್: ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ನಾಸಾ  “ನೀವು ಹಿಂದೆಂದೂ ನೋಡಿರದಂತಹ ಮೌಂಟ್ ಎವರೆಸ್ಟ್ "  ಎಂದು ಪೋಸ್ಟ್‌ಗೆ ಕ್ಯಾಪ್ಶನ್ ನೀಡಿದೆ.  ಭೂಮಿಯ ಮೇಲಿನ ಅತಿ ಎತ್ತರದ ಪರ್ವತವು ಬಾಹ್ಯಾಕಾಶದ ದೃಷ್ಟಿಕೋನದಲ್ಲಿ ವಿಭಿನ್ನವಾಗಿ ಕಾಣುತ್ತಿದೆ.   ನಾವು ಸಹಜವಾಗಿ ಗೂಗಲ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಚಿತ್ರಕ್ಕಿಂತ ವಿಭಿನ್ನವಾಗಿ ಮೌಂಟ್‌ ಎವರೆಸ್ಟ್‌ ಕಾಣುತ್ತಿದೆ. 

ಇದನ್ನೂ ಓದಿ: ಸೂರ್ಯನ ಅತ್ಯಂತ ಸ್ಪಷ್ಟ ಚಿತ್ರ ಸೆರೆಹಿಡಿದ ಯುರೋಪಿಯನ್ ಸೋಲಾರ್ ಆರ್ಬಿಟರ್!

ಭೂಮಿಯ ಮೇಲಿನ ಅತ್ಯುನ್ನತ ಶಿಖರವು ನೆಲದ ಮೇಲೆ ಅಗಾಧವಾಗಿ ಕಾಣಿಸಬಹುದು, ಆದರೆ ಬಾಹ್ಯಾಕಾಶದಿಂದ ನೋಡಿದಾಗ ಅದು ಸುಲಭವಾಗಿ ಸುತ್ತಮುತ್ತಲಿನ ಭೂಪ್ರದೇಶದಲ್ಲಿ ಬೆರೆತು ಹೋಗಿದೆ. ನೀವು ವೈಮಾನಿಕ ಚಿತ್ರವನ್ನು ನೋಡಿದರೆ, ಪರ್ವತದ ಮೇಲೆ ಅದನ್ನು ಗುರುತಿಸಲೂ ಕಷ್ಟವಾಗಬಹುದು.

ಇನ್ಸ್ಟಾಗ್ರಾಮ್‌‌ ಪೋಸ್ಟ್:‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಯೊಬ್ಬರು ಸಮುದ್ರ ಮಟ್ಟದಿಂದ ಸುಮಾರು 29,029 ಅಡಿ (8,848 ಮೀಟರ್) ಎತ್ತರದಲ್ಲಿರುವ ಮೌಂಟ್ ಎವರೆಸ್ಟ್‌ನ ಈ ಹತ್ತಿರದ ನಾದಿರ್ (ಬಹುತೇಕ ನೇರವಾಗಿ ಕೆಳಗೆ) ಛಾಯಾಚಿತ್ರವನ್ನು ಕ್ಲಿಕ್ಕಿಸಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by NASA (@nasa)

 

"ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಒಮ್ಮುಖದಿಂದ ಉಂಟಾದ ಕ್ರಸ್ಟ್‌ನ ಉನ್ನತಿಯಿಂದಾಗಿ ಈ ವಿಶ್ವ-ಪ್ರಸಿದ್ಧ ಮೌಂಟ್‌ ಎವರೆಸ್ಟ್ ವರ್ಷಕ್ಕೆ ಸರಿಸುಮಾರು 1 ಸೆಂಟಿಮೀಟರ್ ಬೆಳೆಯುತ್ತಲೇ ಇದೆ" ಎಂದು ನಾಸಾ ಶೀರ್ಷಿಕೆಯಲ್ಲಿ ತಿಳಿಸಿದೆ.  ಇನ್ಸ್ಟಾಗ್ರಾಮ್‌ನಲ್ಲಿ ಈ ಫೋಟೋಗೆ 3 ಲಕ್ಷಕ್ಕೂ ಹೆಚ್ಚು ಬಳಕೆದಾರರು ಫೋಟೋವನ್ನು ಲೈಕ್‌ ಮಾಡಿದ್ದಾರೆ. 

ಗಗನಯಾತ್ರಿಗಳಿಗೆ ಕಣ್ಣಿಗೆ ಹಬ್ಬ: ಐಎಸ್‌ಎಸ್‌ನಲ್ಲಿರುವ ಗಗನಯಾತ್ರಿಗಳಿಗೆ ಇತರ ಜವಾಬ್ದಾರಿಗಳ ಜತಗೆ ಛಾಯಾಗ್ರಹಣವು ಬಹುಶಃ ನೆಚ್ಚಿನ ಹವ್ಯಾಸವಾಗಿದೆ. ಅದು ಈಜಿಪ್ಟ್‌ನ ಪಿರಮಿಡ್‌ಗಳಾಗಲಿ ಅಥವಾ ಚೀನಾದ ಮಹಾಗೋಡೆಯಾಗಿರಲಿ, ನಾಸಾ ವಿಜ್ಞಾನಿಗಳು ಭೂಮಿಯ ಕೆಲವು ಅದ್ಭುತ ನೋಟಗಳು ಮತ್ತು ಅದರ ಪ್ರಮುಖ ಹೆಗ್ಗುರುತುಗಳಿಗೆ ಸಾಕ್ಷಿಯಾಗಿದ್ದಾರೆ. 

ಇದನ್ನೂ ಓದಿ: The Observable Universe: ಒಂದೇ ಫೋಟೋದಲ್ಲಿ ಇಡೀ ಬ್ರಹ್ಮಾಂಡ: ನಾಸಾದ ಚಿತ್ರ ವೈರಲ್!‌

ಕೆಲವು ವರ್ಷಗಳ ಹಿಂದೆ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಗಗನಯಾತ್ರಿ ಥಾಮಸ್ ಪೆಸ್ಕ್ವೆಟ್ ISSನಿಂದ ಗಿಝಾದಲ್ಲಿನ ಈಜಿಪ್ಟ್ ಪಿರಮಿಡ್‌ಗಳ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರರು.  "ನಾನು ಅಂತಿಮವಾಗಿ ಪಿರಮಿಡ್‌ಗಳನ್ನು ಸರೆ ಹಿಡಿದ್ದೇನೆ ಎಂದು ಭಾವಿಸಿದೆ, ಆದರೆ ಇವು ಬಾಹ್ಯಾಕಾಶದ ದಕ್ಷಿಣಕ್ಕೆ ಚಿಕ್ಕದಾಗಿ ಕಾಣುತ್ತವೆ. ಇವು ಬಾಹ್ಯಾಕಾಶದಿಂದ ಗುರುತಿಸಲು ಸುಲಭವಲ್ಲ! ಇನ್ನೂ ನೋಡುತ್ತಿದ್ದೇನೆ” ಎಂದು ಪೆಸ್ಕ್ವೆಟ್ ಟ್ವೀಟ್ ಮಾಡಿದ್ದರು.

 

Thought I finally had the pyramids, but these are the smaller ones further south. Gosh they’re not easy to spot from space! Still looking ;) pic.twitter.com/qbAanafovf

— Thomas Pesquet (@Thom_astro)

 

ನಂತರ, 2018 ರಲ್ಲಿ, ರಷ್ಯಾದ ಗಗನಯಾತ್ರಿ ಓಲೆಗ್ ಆರ್ಟೆಮಿಯೆವ್ ಅವರು ISSನಿಂದ ಫೋಟೋವನ್ನು ಪೋಸ್ಟ್ ಮಾಡಿದ್ದರು, ಅದರಲ್ಲಿ ಅವರು ಚೀನಾದ ಮಹಾ ಗೋಡೆಯ ಫೋಟೋ ಕ್ಲಿಕ್ಕಿಸಲು ಯಶಸ್ವಿಯಾಗಿದ್ದರು. ಆದರೆ ಈ ಮಹಾಗೋಡೆಯ ರಚನೆಯು ಚಿತ್ರದಲ್ಲಿ ಕಂಡುಹಿಡಿಯುವುದ ಕಷ್ಟಕರವಾಗಿತ್ತು.

 

The flies over China. and I think that in this photo we can see the Great Wall of China. I've been looking for it for a long time! pic.twitter.com/W5sN1xlmDC

— Oleg Artemyev (@OlegMKS)

 

click me!