'ವಾಸಯೋಗ್ಯ ಭವಿಷ್ಯಕ್ಕಾಗಿ' ಹಸಿರುಮನೆ ಅನಿಲ ನಿಯಂತ್ರಣ ಅತ್ಯಗತ್ಯ: ವಿಶ್ವಸಂಸ್ಥೆ

By Suvarna News  |  First Published Apr 5, 2022, 12:05 PM IST

ಜಾಗತಿಕ ಸರಾಸರಿ ತಾಪಮಾನವು ಈಗಾಗಲೇ ಕೈಗಾರಿಕಾ ಪೂರ್ವದ (1850-1900) ಮಟ್ಟದಿಂದ 1.1 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಿದೆ.


ನವದೆಹಲಿ (ಏ. 05): ಕಳೆದ ದಶಕದಲ್ಲಿ (2010-19) ಸರಾಸರಿ ವಾರ್ಷಿಕ ಜಾಗತಿಕ ಹಸಿರುಮನೆ ಅನಿಲ ( Greenhouse Gas) ಹೊರಸೂಸುವಿಕೆ ಮಾನವ ಇತಿಹಾಸದಲ್ಲಿ ಅತ್ಯಧಿಕ ಮಟ್ಟವನ್ನು ತಲುಪಿದೆ ಎಂದು ಯುಎನ್‌ನ ಹವಾಮಾನ ಬದಲಾವಣೆಯ ಇಂಟರ್‌ಗವರ್ನಮೆಂಟಲ್ ಪ್ಯಾನಲ್ (IPCC) ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೇ ಜಗತ್ತನ್ನು ಹವಾಮಾನ ದುರಂತದಿಂದ ಜಗತ್ತನ್ನು ರಕ್ಷಿಸಲು  ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ  ಸೀಮಿತಗೊಳಿಸುವುದು ಅತ್ಯಗತ್ಯ ಎಂದು ಹೇಳಿದೆ.  

ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ಹೊರಹಾಕುವ ಮೂಲಕ ಎಲ್ಲಾ ವಲಯಗಳಲ್ಲಿ ತಕ್ಷಣ ಹೊರಸೂಸುವಿಕೆ ಕಡಿತಗೊಳಿಸಿದೆ ಇದು ಸಾಧ್ಯವಿಲ್ಲ ಎಂದು ಪ್ಯಾನಲ್‌ ತಿಳಿಸಿದೆ.  ಭಾರತ ಸೇರಿದಂತೆ 65 ದೇಶಗಳ 278 ಲೇಖಕರು ಸಿದ್ಧಪಡಿಸಿದ ವರದಿಯ ಸಂಶೋಧನೆಗಳು ಹೊರಸೂಸುವಿಕೆಯನ್ನು ಕಡಿತಗೊಳಿಸಲು ಅಸಮರ್ಪಕ ಪ್ರಯತ್ನಗಳ ಸ್ಪಷ್ಟ ಪ್ರತಿಬಿಂಬವಾಗಿದೆ.

Tap to resize

Latest Videos

undefined

ಇದನ್ನೂ ಓದಿ: ಬ್ರಹ್ಮಾಂಡದಲ್ಲಿ 136 ಜ್ಯೋತಿರ್ವರ್ಷ ದೂರದಲ್ಲಿ ಅಡಗಿದ್ದ ಮಸುಕಾದ ಗ್ಯಾಲಕ್ಸಿ ಪತ್ತೆ!

2025 ಕ್ಕಿಂತ ಮೊದಲು ಗರಿಷ್ಠ ಮಟ್ಟ:  ಕಳೆದ ದಶಕದಲ್ಲಿ ಹೊರಸೂಸುವಿಕೆಯ ಬೆಳವಣಿಗೆಯ ದರವು ನಿಧಾನವಾಗಿದ್ದರೂ, ತಾಪಮಾನವನ್ನು ಸುಮಾರು 1.5 ಡಿಗ್ರಿ C ಗೆ ಸೀಮಿತಗೊಳಿಸಲು ಜಾಗತಿಕ GHG (ಹಸಿರುಮನೆ ಅನಿಲ) ಹೊರಸೂಸುವಿಕೆಯು ದಲ್ಲಿರಬೇಕು ಮತ್ತು 2030 ರ ವೇಳೆಗೆ 43% ರಷ್ಟು ಕಡಿಮೆಯಾಗಬೇಕು ಎಂದು ಅದು ಹೇಳಿದೆ.

IPCC ಯ ಇತ್ತೀಚಿನ ವರದಿಯು ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯು 2025 ರ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪದಿದ್ದರೆ ಮತ್ತು ನಂತರದ ಐದು ವರ್ಷಗಳಲ್ಲಿ 43% ರಷ್ಟು ಕಡಿಮೆಯಾಗದಿದ್ದರೆ, 2100 ರ ವೇಳೆಗೆ ಪ್ರಪಂಚವು ಸುಮಾರು 3 ಡಿಗ್ರಿ C ಹೆಚ್ಚಿನ ತಾಪಮಾನವನ್ನು ಎದುರಿಸಬೇಕಾಗುತ್ತದೆ.

ಈಗಾಗಲೇ 1.1 ಡಿಗ್ರಿ ಸೆಲ್ಸಿಯಸ್‌ ಹೆಚ್ಚು:  2100 ರ ವೇಳೆಗೆ 3-ಡಿಗ್ರಿ ತಾಪಮಾನವು ದೀರ್ಘ ಶಾಖದ ದಿನಗಳು, ಕಾಡ್ಗಿಚ್ಚು, ಸಮುದ್ರ ಮಟ್ಟ ಏರಿಕೆ, ಹಿಮನದಿಗಳ ಕರಗುವಿಕೆ, ಬರ ಮತ್ತು ಚಂಡಮಾರುತಗಳಂತಹ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಅದು ಹೇಳಿದೆ. ಜಾಗತಿಕ ಸರಾಸರಿ ತಾಪಮಾನವು ಈಗಾಗಲೇ ಕೈಗಾರಿಕಾ ಪೂರ್ವದ (1850-1900) ಮಟ್ಟದಿಂದ 1.1 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಿದೆ.

ವರದಿಯು ಜಾಗತಿಕ ತಾಪಮಾನವನ್ನು ಸುಮಾರು 1.5 ಡಿಗ್ರಿ C ಗೆ ಸೀಮಿತಗೊಳಿಸುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದು, ಶಕ್ತಿಯ ಕ್ಷೇತ್ರದಲ್ಲಿ ಪ್ರಮುಖ ಪರಿವರ್ತನೆಯತ್ತ ಜಗತ್ತು ಹೇಗೆ ಸಾಗಬೇಕು ಎಂದು ತಿಳಿಸಿದೆ. ಭರವಸೆಯ ಕಿರಣವಾಗಿ, ಇದು ಕಾರ್ಬನ್ ಡೈಆಕ್ಸೈಡ್ ತೆಗೆಯುವಿಕೆ (CDR) ತಂತ್ರಜ್ಞಾನ ಸೇರಿದಂತೆ ಬಹು ಆಯ್ಕೆಗಳು ಮತ್ತು ವಿವಿಧ ಸಾಧನಗಳ ಲಭ್ಯತೆಯ ಬಗ್ಗೆ ಮಾತನಾಡಿದೆ, ಇದು 2050 ರ ವೇಳೆಗೆ ರಾಷ್ಟ್ರಗಳನ್ನು ಜಾಗತಿಕ ನಿವ್ವಳ-ಶೂನ್ಯ ಗುರಿಯತ್ತ ಕೊಂಡೊಯ್ಯುತ್ತದೆ.

ಇದನ್ನೂ ಓದಿMiyawaki Forest in Bengaluru Metro: ಜಪಾನ್‌ ರೀತಿ ಕಾಡು ಸೃಷ್ಟಿಗೆ ನಮ್ಮ ಮೆಟ್ರೋ ಚಿಂತನೆ!

ನಾಚಿಕೆಗೇಡಿನ ಫೈಲ್: ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಈ ವರದಿಯನ್ನು "ನಾಚಿಕೆಗೇಡಿನ ಫೈಲ್" (file of shame) ಎಂದು ಕರೆದಿದ್ದು, " ವರದಿ ಖಾಲಿ ಪ್ರತಿಜ್ಞೆಗಳನ್ನು ಪಟ್ಟಿಮಾಡುತ್ತದೆ, ಅದು ನಮ್ಮನ್ನು ಬದುಕಲಾಗದ ಪ್ರಪಂಚದತ್ತ ದೃಢವಾಗಿ ಕೊಂಡೊಯ್ಯುತ್ತದೆ" ಎಂದು ಹೇಳಿದ್ದಾರೆ. "IPCC ಯ ಈ ವರದಿಯು ಮುರಿದ ಹವಾಮಾನ ಭರವಸೆಗಳ ಹೂರಣವಾಗಿದೆ, ಜಗತ್ತು ಈಗಾಗಲೇ "ಹವಾಮಾನ ದುರಂತದ ವೇಗದ ಹಾದಿಯಲ್ಲಿದೆ" ಎಂದು ಗುಟೆರೆಸ್ ಹೇಳಿದ್ದಾರೆ.  

 ಮಾನವ-ಉಂಟುಮಾಡುವ GHG ಹೊರಸೂಸುವಿಕೆಯು 2019 ರಲ್ಲಿ1990 ಕ್ಕಿಂತ 54% ಹೆಚ್ಚಾಗಿದ್ದು 59 GtCO2eq ತಲುಪಿದೆ. ಪ್ರಾಥಮಿಕವಾಗಿ ಪಳೆಯುಳಿಕೆ ಇಂಧನಗಳು ಮತ್ತು ಉದ್ಯಮಗಳಿಂದ ಈ ಹೊರಸೂಸುವಿಕೆ ಅಧಿಕ ಎಂದು ವರದಿ ತಿಳಿಸಿದೆ. ಹೊರಸೂಸುವಿಕೆಯಲ್ಲಿ ಸುಮಾರು 34% ಶಕ್ತಿ ವಲಯದಿಂದ, 24% ಉದ್ಯಮದಿಂದ, 22% ಕೃಷಿ, ಅರಣ್ಯ ಮತ್ತು ಭೂ ಬಳಕೆಯಿಂದ, 14% ಸಾರಿಗೆಯಿಂದ ಮತ್ತು 6% ಕಟ್ಟಡಗಳಿಂದ ಬಂದಿದೆ.

click me!