ಅನ್ಯಲೋಕದ ಜೀವಿಗಳನ್ನು ಅಥವಾ ಏಲಿಯನ್‌ಗಳನ್ನು ಸಂಪರ್ಕಿಸುವ ಹೊಸ ಪ್ರಯತ್ನದಲ್ಲಿ, ವಿಜ್ಞಾನಿಗಳು ಇಬ್ಬರು ನಗ್ನ ವ್ಯಕ್ತಿಗಳ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಹೋಸ ಪ್ರಯೋಗಕ್ಕೆ ಸಿದ್ದರಾಗಿದ್ದಾರೆ.
ನವದೆಹಲಿ (ಏ. 04): ಮಾನವರು 150 ವರ್ಷಗಳಿಂದ ಅನ್ಯಲೋಕದ ಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ಈ ಪ್ರಯತ್ನಕ್ಕೆ ಇನ್ನೂ ಯಶಸ್ಸು ಸಿಕ್ಕಿಲ್ಲ, ಅಥವಾ ವಿಜ್ಞಾನಿಗಳು ಈ ಸಾಹಸದಲ್ಲಿ ಯಶಸ್ವಿಯಾಗಿದ್ದರೂ ಕನಿಷ್ಠ ಸಾರ್ವಜನಿಕರಿಗೆ ಈ ಬಗ್ಗೆ ತಿಳಿದಿಲ್ಲ. ಈಗ ಅನ್ಯಲೋಕದ ಜೀವಿಗಳನ್ನು ಅಥವಾ ಏಲಿಯನ್‌ಗಳನ್ನು ಸಂಪರ್ಕಿಸುವ ಹೊಸ ಪ್ರಯತ್ನದಲ್ಲಿ, ವಿಜ್ಞಾನಿಗಳು ಇಬ್ಬರು ನಗ್ನ ವ್ಯಕ್ತಿಗಳ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಹೊಸ ಪ್ರಯೋಗಕ್ಕೆ ಸಿದ್ದರಾಗಿದ್ದಾರೆ.
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳ ಗುಂಪೊಂದು ಹೊಸ ಸಂದೇಶವನ್ನು ಅಭಿವೃದ್ಧಿಪಡಿಸಿದೆ. ಈ ಸಂದೇಶಗಳನ್ನು ಇತರೆ ಗೃಹಗಳಲ್ಲಿ ಅಸ್ತಿತ್ವದಲ್ಲಿರಬಹುದಾದ ಅನ್ಯಲೋಕದ ಬುದ್ಧಿವಂತ ಜೀವಿಗಳಿಗೆ ರವಾನಿಸಬಹುದು ಎಂದು ಸೈಂಟಿಫಿಕ್ ಅಮೇರಿಕನ್ (Scientific American) ವರದಿ ತಿಳಿಸಿದೆ.
undefined
ಇದನ್ನೂ ಓದಿ: ಬ್ರಹ್ಮಾಂಡದಲ್ಲಿ 136 ಜ್ಯೋತಿರ್ವರ್ಷ ದೂರದಲ್ಲಿ ಅಡಗಿದ್ದ ಮಸುಕಾದ ಗ್ಯಾಲಕ್ಸಿ ಪತ್ತೆ!
ಏಲಿಯನ್ ಸಂಪರ್ಕ ಪ್ರಯತ್ನ: ಸಂಭಾವ್ಯ ಅನ್ಯಗ್ರಹ ಜೀವಿಗಳ ಬಗೆಗಿನ ಕುತೂಹಲವನ್ನು ಹೆಚ್ಚಿಸಲು ಮತ್ತು ಸಂವಹನವನ್ನು ಉತ್ತೇಜಿಸಲು ಭೂಮಿಯ ವಾತಾವರಣದಿಂದ ಇಬ್ಬರು ನಗ್ನ ವ್ಯಕ್ತಿಗಳ ಕಾರ್ಟೂನನ್ನು ಕಳುಹಿಸುವ ಮೂಲಕ ವಿಶ್ವದಲ್ಲಿನ ಇತರ ಜೀವ ರೂಪಗಳನ್ನು ಸಂಪರ್ಕಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ಯೋಜನೆಯು ಗುರುತ್ವಾಕರ್ಷಣೆಯ ಚಿತ್ರಣವನ್ನು ಮತ್ತು ಡಿಎನ್‌ಎಯನ್ನು (DNA) ಸಹ ಒಳಗೊಂಡಿದೆ, ಜೊತೆಗೆ ನಗ್ನ ಪುರುಷ ಮತ್ತು ಮಹಿಳೆ ಹಲೋ (Hello) ಎಂದು ಹೇಳುವ ಪಿಕ್ಸಿಲೇಟೆಡ್ ರೇಖಾಚಿತ್ರವನ್ನೂ ಒಳಗೊಂಡಿದೆ.
ಬೀಕನ್ ಇನ್ ದಿ ಗ್ಯಾಲಕ್ಸಿ (Beacon in the Galaxy- BITG) ಹೆಸರಿನ ಹೊಸ ಬಾಹ್ಯಾಕಾಶ ಟಿಪ್ಪಣಿಯನ್ನು (Messege) ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ವಿಜ್ಞಾನಿ ಜೊನಾಥನ್ ಜಿಯಾಂಗ್ ಮತ್ತು ಅವರ ಸಹೋದ್ಯೋಗಿಗಳು ರೂಪಿಸಿದ್ದಾರೆ. ಈ ವಿಜ್ಞಾನಿಗಳು ತಮ್ಮ ಪ್ರೇರಣೆ ಮತ್ತು ವಿಧಾನವನ್ನು ಪ್ರಿಪ್ರಿಂಟ್ ಸೈಟ್‌ನ ಅಧ್ಯಯನದಲ್ಲಿ ಪ್ರಕಟಿಸಿದ್ದಾರೆ.
A Beacon in the Galaxy: Updated Arecibo Message for Potential FAST and SETI Projects https://t.co/W1Lnez0vSS pic.twitter.com/oCBn1xzLB9
— Astrobiology (@astrobiology)
ವಿಜ್ಞಾನಿಗಳ ಪ್ರಕಾರ, ಅವರು ಅನ್ಯಗೃಹ ಜೀವಿ ಅಥವಾ ಏಲಿಯನ್‌ಗಳೊಂದಿಗೆ ಸಂಹವನ ಮಾಡುವ ಸವಾಲುಗಳ ಕಾರಣದಿಂದಾಗಿ ಈ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಅನ್ಯಗೃಹ ಜೀವಿಗಳ ಸಂಹವನ ಮಾಧ್ಯಮ ಮಾನವರ ಶೈಲಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಭಾಷೆಯ ಸ್ವರೂಪವನ್ನು ಹೊಂದಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಅಜ್ಞಾತ ಬಾಹ್ಯಾಕಾಶ ವಸ್ತು ಪತ್ತೆ: ಕೆಲ ದಿನಗಳ ಹಿಂದೆ ಬಾಹ್ಯಾಕಾಶದಲ್ಲಿ ಪ್ರತಿ 18 ನಿಮಿಷಗಳಿಗೊಮ್ಮೆ ಸುಮಾರು ಒಂದು ನಿಮಿಷ ಸಕ್ರಿಯವಾಗಿದ್ದ ಹೊಸ ವಸ್ತುವೊಂದನ್ನು ಆಸ್ಟ್ರೇಲಿಯಾದ ರೇಡಿಯೋ ಖಗೋಳಶಾಸ್ತ್ರಜ್ಞರ (Radio Astronomers)ತಂಡವು ಪತ್ತೆ ಮಾಡಿತ್ತು. ಇದು ಭೂಮಿಯಿಂದ ಸುಮಾರು 4,000 ಜ್ಯೋತಿರ್ವಷಗಳಷ್ಟು ದೂರದಲ್ಲಿದ್ದು ಗಂಟೆಗೆ ಮೂರು ಬಾರಿ ನಿಯಮಿತ ಮಧ್ಯಂತರದಲ್ಲಿ ಬಲವಾದ ರೇಡಿಯೊ ಸಂಕೇತಗಳನ್ನು ಕಳುಹಿಸುತ್ತಿತ್ತು.
ಇದನ್ನೂ ಓದಿ: ಸೂರ್ಯನ ಅತ್ಯಂತ ಸ್ಪಷ್ಟ ಚಿತ್ರ ಸೆರೆಹಿಡಿದ ಯುರೋಪಿಯನ್ ಸೋಲಾರ್ ಆರ್ಬಿಟರ್!
ಇದು ಕುಸಿದ ನಕ್ಷತ್ರದ (Collapsed Star) ಅವಶೇಷವಾಗಿರಬಹುದು, ದಟ್ಟವಾದ ನ್ಯೂಟ್ರಾನ್ ನಕ್ಷತ್ರ ಅಥವಾ ಬಲವಾದ ಕಾಂತೀಯ ಕ್ಷೇತ್ರದೊಂದಿಗೆ ಸತ್ತ ಬಿಳಿ ಕುಬ್ಜ ನಕ್ಷತ್ರವಾಗಿರಬಹುದು ( Dwarf Star), ಅಥವಾ ಅದು ಸಂಪೂರ್ಣವಾಗಿ ಬೇರೆ ಯಾವುದಾದರೂ ವಸ್ತು ಆಗಿರಬಹುದು ಎಂಬುದು ಖಗೋಳಶಾಸ್ತ್ರಜ್ಞರ ಅಭಿಪ್ರಾಯಪಟ್ಟಿದ್ದರು. ಇನ್ನು ಇದು ಏಲಿಯನ್‌ಗಳು ಮಾನವರಿಗಾಗಿ ಕಳುಹಿಸಯತ್ತಿರುವ ಸಂದೇಶವಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.
ಈ ಬೆನ್ನಲ್ಲೇ ಮಾಹಿತಿ ನೀಡಿದ್ದ ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ (Curtin University) ಖಗೋಳ ಭೌತಶಾಸ್ತ್ರಜ್ಞ ಡಾ ನತಾಶಾ ಹರ್ಲಿ-ವಾಕರ್ "ನಮ್ಮ ಅವಲೋಕನಗಳ ಸಮಯದಲ್ಲಿ ಈ ವಸ್ತುವು ಕೆಲವು ಗಂಟೆಗಳ ಕಾಲ ಗೋಚರಿಸುತ್ತದೆ ಮತ್ತು ಕಣ್ಮರೆಯಾಗುತ್ತಿದೆ. ಇದು ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು. ಖಗೋಳಶಾಸ್ತ್ರಜ್ಞನಿಗೆ ಇದು ಒಂದು ರೀತಿಯ ಭಯಾನಕ ಸಂಗತಿ. ಏಕೆಂದರೆ ಆಕಾಶದಲ್ಲಿರುವ ಈ ವಸ್ತುವಿನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಇದರ ಬಗ್ಗೆ ಏನೂ ತಿಳಿದಿಲ್ಲ, ”ಎಂದು ಹೇಳಿದ್ದರು.