ಬಾಲಕಿ ಮೃತಪಟ್ಟ ಆಸ್ಪತ್ರೆಯ ಹಾಸಿಗೆಯಲ್ಲಿ ಈಗಲೂ ವಿಚಿತ್ರ ಶಬ್ದ! ವೈದ್ಯಲೋಕಕ್ಕೇ ಸವಾಲು...

Published : Jun 16, 2025, 07:22 PM IST
Miracle in children hospital

ಸಾರಾಂಶ

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇದೆಯೋ ಇಲ್ಲವೋ ಎನ್ನುವ ವಾದ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯಲೋಕಕ್ಕೇ ಸವಾಲು ಎನ್ನಿಸುವ ಘಟನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಏನದು? 

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಅಂಥ ಒಂದು ಘಟನೆಯ ಬಗ್ಗೆ ಇದೀಗ ರಿವೀಲ್​ ಆಗುತ್ತಿದೆ.

ಅಮೆರಿಕದ ಓಕ್‌ಬ್ರಿಡ್ಜ್ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಇಡೀ ವೈದ್ಯಲೋಕಕ್ಕೇ ಸವಾಲು ಎನ್ನಿಸುವಂತಿದೆ. 1999 ರಲ್ಲಿ 9 ವರ್ಷದ ಬಾಲಕಿ ಎಮಿಲಿ ಹಾಲೋವೇ ಅನಾರೋಗ್ಯದ ನಿಮಿತ್ತ ಇಲ್ಲಿ ದಾಖಲಾಗಿದ್ದಳು. ಕೊಠಡಿ ಸಂಖ್ಯೆ 12ರಲ್ಲಿ ಈಕೆ ಅಡ್ಮಿಟ್​ ಆಗಿದ್ದಳು. ಆದರೆ ಹೃದಯಸ್ತಂಭನ ಆಗಿದ್ದರಿಂದ ಆಕೆ ಮೃತಪಟ್ಟಳು. ಅವಳ ಹಾರ್ಟ್​ಬೀಟ್​ ನಿಲ್ಲುತ್ತಿದ್ದಂತೆಯೇ ಅವಳಿಗೆ ಅಳವಡಿಸಿದ್ದ ಯಂತ್ರವನ್ನು ತೆಗೆದುಹಾಕಲಾಗಿತ್ತು. ಆದರೆ ಆಗಲೂ ಬೀಪ್​ ಶಬ್ದ ಕೇಳಿಸುತ್ತಲೇ ಇತ್ತು. ಆದರೆ ಹೃದಯವನ್ನು ಹೃದಯ ಮಾನಿಟರ್ ಮಾಡುತ್ತಿದ್ದ ಯಂತ್ರ ಸ್ಥಿರವಾಗಿದ್ದರಿಂದ ಆಕೆ ಮೃತಪಟ್ಟಿರುವುದಾಗಿ ಘೋಷಿಸಲಾಗಿತ್ತು. ಆದರೆ ಬೀಪ್​ ಶಬ್ದ ಬರುತ್ತಲೇ ಇದ್ದುದರಿಂದ ಪುನಃ ಆಕೆಯನ್ನು ಪರೀಕ್ಷೆ ಮಾಡಲಾಗಿತ್ತು. ಆದರೆ ಅವಳು ಮೃತಪಟ್ಟಿರುವುದು ಕನ್​ಫರ್ಮ್​ ಆಗಿತ್ತು. ಆದರೆ ಶಬ್ದ ಎಲ್ಲಿಂದ ಬರುತ್ತದೆ ಎಂದು ತಿಳಿಯದ ವೈದ್ಯರು ಏನೋ ಯಂತ್ರದಲ್ಲಿ ದೋಷ ಇರಬಹುದು ಎಂದುಕೊಂಡು ಸುಮ್ಮನಾಗಿಬಿಟ್ಟರು.

ಕೊನೆಗೆ ಯಂತ್ರವನ್ನು ಅನ್‌ಪ್ಲಗ್ ಮಾಡಿ, ಕೊಠಡಿಯನ್ನು ತೆರವುಗೊಳಿಸಿ, ಬಾಲಕಿಯ ವಸ್ತುಗಳನ್ನು ಕುಟುಂಬಕ್ಕೆ ನೀಡಿದರು. ಈ ವಿಷಯವನ್ನು ಅಲ್ಲಿಗೇ ಬಿಟ್ಟಿದ್ದರು. ಆದರೆ ಬಾಲಕಿಯ ಹುಟ್ಟುಹಬ್ಬವಾಗಿರುವ ಏಪ್ರಿಲ್​ 11ರಂದು ಮತ್ತೆ ಆ ಹಾಸಿಗೆಯಿಂದ ಬೀಪ್​ ಶಬ್ದ ಬಂದಿತು. ಅಲ್ಲಿರುವ ಹೃದಯವನ್ನು ಮಾನಿಟರ್​ ಮಾಡುವ ಯಂತ್ರವು ತನ್ನಿಂದ ತಾನೇ ಆನ್​ ಆಗುವುದನ್ನು ವೈದ್ಯರು ಕಂಡರು. ಅದನ್ನು ಪ್ಲಗ್​ ಮಾಡಿರಲಿಲ್ಲ. ವಿದ್ಯುತ್ ಸಂಚಾರವೂ ಇರಲಿಲ್ಲ. ಯಂತ್ರಕ್ಕೆ ಅಳವಡಿಸಲಾದ ತಂತಿಗಳೂ ಇರದಿದ್ದರೂ ಅದು ಶಬ್ದ ಮಾಡುತ್ತಲೇ ಇತ್ತು ಎನ್ನಲಾಗುತ್ತಿದೆ. ಅದನ್ನು ವೈರಿಂಗ್​ ದೋಷ ಎಂದು ಆರಂಭದ ದಿನಗಳಲ್ಲಿ ಅಂದುಕೊಳ್ಳಲಾಗಿತ್ತು.

ಆದರೆ ಅಚ್ಚರಿಯ ವಿಷಯ ಏನೆಂದರೆ, ಪ್ರತಿ ವರ್ಷ ಏಪ್ರಿಲ್​ 11ರಂದು ಈ ಶಬ್ದ ಅದೇ ಹಾಸಿಗೆಯಿಂದ ಕೇಳಿಬರುತ್ತಲೇ ಇದೆಯಂತೆ. ಕಳೆದ ಏಪ್ರಿಲ್‌ 11ರಂದು ಆ ಶಬ್ದವನ್ನು ನರ್ಸ್ ಒಬ್ಬರು ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ. ಅವರು ಅದನ್ನು ಅವರು ಪ್ಲೇ ಮಾಡಿದಾಗ, ಅದು ಆಡಿಯೋ ರೂಪಕ್ಕೆ ಬದಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಅಲ್ಲಿ ಅದು ಬೀಪ್​ ಶಬ್ದವಾಗಿರದೇ ಮಗುವಿನ ಧ್ವನಿಯಾಗಿತ್ತು. ದಯವಿಟ್ಟು ಕೋಣೆಯನ್ನು ತೆರವುಗೊಳಿಸಬೇಡಿ. ನಾನು ಇನ್ನೂ ಇಲ್ಲಿದ್ದೇನೆ ಎಂದು ಅಲ್ಲಿ ರೆಕಾರ್ಡ್​ ಆಗಿತ್ತು ಎಂದು ಹೇಳಲಾಗುತ್ತಿದೆ. ಸದ್ಯ ಇದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಅದರ ಬಗ್ಗೆ ಅಧಿಕೃತವಾಗಿ ತಿಳಿಯಬೇಕಿದೆಯಷ್ಟೇ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ