ನಾಸಾದಿಂದ ಮಂಗಳ ಗ್ರಹದ ಕ್ಲೀಯರ್ ಫೋಟೋ ಬಿಡುಗಡೆ,140 ಮಿಲಿಯನ್ ಮೈಲು ದೂರದ ಅದ್ಭುತ

Published : Jun 15, 2025, 11:09 PM IST
Mars Image Nasa

ಸಾರಾಂಶ

ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಅತ್ಯಂತ ಕ್ಲಿಯರ್ ಇಮೇಜ್ ಸೆರೆ ಹಿಡಿದು ರವಾನಿಸಿದೆ. ಇದುವರೆಗೆ ತೆಗೆದಿರುವ ಚಿತ್ರಗಳ ಪೈಕಿ ಇದು ಅತ್ಯಂತ ಸ್ಪಷ್ಟತೆಯ ಚಿತ್ರವಾಗಿದೆ.ಬರೋಬ್ಬರಿ 140 ಮಿಲಿಯನ್ ಮೈಲು ದೂರದಲ್ಲಿರುವ ಮಂಗಳ ಗ್ರಹದ ಮೇಲಿನ ಫೋಟೋ ಅಚ್ಚರಿಗೆ ಕಾರಣವಾಗಿದೆ.

ವಾಶಿಂಗ್ಟನ್ ಡಿಸಿ(ಜೂ.15) ಮಂಗಳ ಗ್ರಹದ ಮೇಲೆ ಅಮೆರಿಕದ ಬಾಹ್ಯಕಾಶ ಸಂಸ್ಥೆ ನಾಸಾ ನಿರಂತರವಾಗಿ ಅಧ್ಯಯನ ನಡೆಸುತ್ತಿದೆ. ಇದಕ್ಕಾಗಿ ಹಲವು ಉಪಗ್ರಹಗಳನ್ನು ಉಡಾಯಿಸಿದೆ. ಈ ಪೈಕಿ ಕ್ಯೂರಿಯಾಸಿಟಿ ರೋವರ್ ಇದೀಗ ಮಂಗಳ ಗ್ರಹದ ಮೇಲಿನ ಅತ್ಯಂತ ಸ್ಪಷ್ಟ ಚಿತ್ರವನ್ನು ಸೆರೆ ಹಿಡಿದು ಕಳುಹಿಸಿದೆ.ಈ ಫೋಟೋವನ್ನು ನಾಸಾ ಬಿಡುಗಡೆ ಮಾಡಿದೆ. ಬರೋಬ್ಬರಿ 140 ಮಿಲಿಯನ್ ಮೈಲು ದೂರದಲ್ಲಿರುವ ಮಂಗಳ ಗ್ರಹದ ಅದ್ಭುತ ಫೋಟೋ ಇದೀಗ ಹಲವರ ಕುತೂಹಲ ಹೆಚ್ಚಿಸಿದೆ.

ಮಂಗಳ ಗ್ರಹದ ಮೇಲಿನ ಹಲವು ಫೋಟೋಗಳನ್ನು ನಾಸಾ ಬಿಡುಗಡೆ ಮಾಡಿದೆ. ಎಲ್ಲವೂ ಕೆಂಪು ಮಣ್ಣು, ಪರ್ವತಗಳಂತಿರುವ ಚಿತ್ರಗಳಾಗಿವೆ. ಆದರೆ ಈ ಚಿತ್ರದಲ್ಲಿ ಮಂಗಳ ಗ್ರಹದ ಮೇಲೆ ಮರುಭೂಮಿ ಸ್ಪಷ್ಟ ಚಿತ್ರವಿದೆ. ಮರಳಿನ ದಿಬ್ಬಗಳಂತೆ, ಸಾಮಾನ್ಯವಾಗಿ ಭಾರತದಲ್ಲಿರುವ ಸಹಾರಾ ಮರೂಭೂಮಿಯ ಮರಳಿನ ದಿಬ್ಬಗಳಂತೆ ಕಾಣಿಸುವ ಈ ಫೋಟೋಗಳು ಇದೀಗ ಎಲ್ಲರ ಕುತೂಹಲ ಕೆರಳಿಸಿದೆ. ಮಂಗಳ ಗ್ರಹದಲ್ಲಿ ಬೀಸುವ ಗಾಳಿಯ ವೇಗ ಹಾಗೂ ದಿಕ್ಕುಗಳಿಂದ ಈ ಮರಳಿನ ದಿಬ್ಬಗಳು ಆಕಾರ ಬದಲಿಸಿಕೊಳ್ಳುತ್ತಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ.

ಈ ದಿಬ್ಬವು ಬಾಗ್ನೋಲ್ಡ್ ಡ್ಯೂನ್ ಫೀಲ್ಡ್‌ನ ಭಾಗವಾಗಿದೆ ಎಂದು ನಾಸಾ ಸಂಶೋಧಕರು ಹೇಳಿದ್ದಾರೆ. ಇದು ಗಾಢ-ಮರಳಿನ ಪ್ರದೇಶವಾಗಿದ್ದು, ಪ್ರತಿ ವರ್ಷ ಸುಮಾರು ಒಂದು ಮೀಟರ್‌ನಷ್ಟು ಬದಲಾಗುತ್ತದೆ. ಒರಟಾದ ಭೂಪ್ರದೇಶ ಮತ್ತು ದೂರದ ಪರ್ವತಗಳನ್ನು ಒಳಗೊಂಡ ಈ ಗಮನಾರ್ಹ ಚಿತ್ರಣವು ಮಂಗಳ ಗ್ರಹದ ಮೇಲಿನ ಒಟ್ಟಾರೆ ಚಿತ್ರಣ ನೀಡುತ್ತಿದೆ.

ಕ್ಯೂರಿಯಾಸಿಟಿ ರೋವರ್‌ನ ಮಾಸ್ಟ್‌ ಕ್ಯಾಮೆರಾದಿಂದ ದೃಶ್ಯವನ್ನು ಸೆರೆಹಿಡಿಯಲಾಗಿದೆ, ಇದು ವಿಜ್ಞಾನಿಗಳು ಚಿತ್ರಗಳನ್ನು ಪೂರ್ಣ 360-ಡಿಗ್ರಿ ಪನೋರಮಾದಲ್ಲಿ ಜೋಡಿಸಲು ಅನುವು ಮಾಡಿಕೊಡುವ ಶಕ್ತಿಶಾಲಿ ಸಾಧನವಾಗಿದೆ. ಗಮನಾರ್ಹವಾಗಿ, ಭೂಮಿಯ ಸೂರ್ಯನ ಬೆಳಕಿನಲ್ಲಿ ದೃಶ್ಯವು ಹೇಗೆ ಕಾಣಿಸಬಹುದು ಎಂಬುದನ್ನು ತೋರಿಸಲು ಚಿತ್ರಗಳನ್ನು ಬಣ್ಣ-ಸರಿಪಡಿಸಲಾಗಿದೆ, ಇದು ಮಂಗಳ ಗ್ರಹದ ಭೂದೃಶ್ಯವನ್ನು ಅನಿರೀಕ್ಷಿತವಾಗಿ ಪರಿಚಿತವಾಗಿ ಕಾಣುವಂತೆ ಮಾಡಿದೆ.

ಕೆಲವರಿಗೆ, ಚಿತ್ರಗಳ ಸ್ಪಷ್ಟತೆಯು ವಿಶಿಷ್ಟ ಭದ್ರತಾ ಕ್ಯಾಮೆರಾಗಳ ಕಳಪೆ ರೆಸಲ್ಯೂಶನ್‌ನೊಂದಿಗೆ ಹೋಲಿಕೆಗಳಿಗೆ ಕಾರಣವಾಗಿದೆ, ವಾಣಿಜ್ಯ ತಂತ್ರಜ್ಞಾನದ ಮಿತಿಗಳು ಮತ್ತು ಉನ್ನತ-ಮಟ್ಟದ ಮಿಷನ್-ಗ್ರೇಡ್ ಉಪಕರಣಗಳ ಬಗ್ಗೆ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ