ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್‌ ಬಳಿ ಇರೋದು ಕೇವಲ 96 ಗಂಟೆಗಳ ಆಮ್ಲಜನಕ ಮಾತ್ರ!

By Santosh Naik  |  First Published Aug 22, 2024, 2:33 PM IST


nasa oxygen sunita williams ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾದ ಸುನೀಲಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ ಬಳಿ ಹೆಚ್ಚಿನ ದಿನಕ್ಕೆ ಆಗುವಷ್ಟು ಆಮ್ಲಜನಕ ಕೂಡ ಇಲ್ಲ ಎನ್ನುವ ಮಾಹಿತಿ ಬರುತ್ತಿವೆ.
 


ನವದೆಹಲಿ (ಆ.22): ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನಗಳ ಕಳೆದ ಹಾಗೆ ಅವರ ಜೀವಕ್ಕೆ ಅಪಾಯವಾಗುವಂಥ ಸನ್ನಿವೇಶಗಳು ನಿರ್ಮಾಣವಾಗಬಹುದು ಎನ್ನುವ ಅಂದಾಜಿನ ಸಮಸ್ಯೆಗಳು ಎದುರಾಗುತ್ತಿವೆ. ಬೋಯಿಂಗ್‌ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯೊಂದಿಗೆ ಅವರು ಭೂಮಿಗೆ ವಾಪಾಸಾಗುವ ಹಂತದಲ್ಲಿ ಮೂರು ನಿರ್ಣಾಯಕ ಅಪಾಯಗಳನ್ನು ಅವರು ಎದುರಿಸಲಿದ್ದಾರೆ. ಹಾಗೇನಾದರೂ ಅವರು ಮರುಪ್ರವೇಶ ವಿಫಲವಾದಲ್ಲಿ, ಕೇವಲ 96 ಗಂಟೆಗಳ ಆಮ್ಲಜನಕದೊಂದಿಗೆ ಬಾಹ್ಯಾಕಾಶದಲ್ಲಿ ಸಿಲುಕಿಕೊಳ್ಳಬಹುದು ಎನ್ನಲಾಗಿದೆ. ಇಲ್ಲದೇ ಹೋದಲ್ಲಿ, ಅನಿರ್ದಿಷ್ಟಾವಧಿಯವರೆಗೆ ಅವರು ಬಾಹ್ಯಾಕಾಶ ಕಕ್ಷೆಯಲ್ಲೇ ಉಳಿಯಬೇಕಾದ ಪ್ರಸಂಗ ಎದುರಾಗಬಹುದು ಎನ್ನಲಾಗಿದೆ. ಹಾಗೇನಾದರೂ ಬಾಹ್ಯಾಕಾಶ ನೌಕೆ ಸ್ಟೀಪ್‌ ಆಂಗಲ್‌ಅಲ್ಲಿ ಭೂಮಿಗೆ ಮರಳಿದಲ್ಲಿ, ಅವರ ಹೀಟ್‌ ಶೀಲ್ಡ್‌ ವಿಫಲವಾಗಿ ಸಾವು ಕಾಣುವ ಅಪಾಯವೂ ಇರುತ್ತದೆ ಎನ್ನಲಾಗಿದೆ.

ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ರೀಎಂಟ್ರಿ ಮಾಡ್ಯುಲ್‌ನಲ್ಲಿ ಗಂಭೀರ ಸಮಸ್ಯೆ ಎದುರಾಗಿರುವ ಕಾರಣ ನಾಸಾದ ಗಗನಯಾತ್ರಿಗಳಾದ  ಸುನೀತಾ ವಿಲಿಯಮ್ಸ್ ಹಾಗೂ ಬಚ್‌ ವಿಲ್ಮೋರ್‌ ಐಎಸ್‌ಎಸ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ಜೂನ್‌ 5 ರಂದು ಬಾಹ್ಯಾಕಾಶಕ್ಕೆ ಹೋಗಿದ್ದ ಅವರು, ಒಂದು ವಾರದಲ್ಲಿ ಭೂಮಿಗೆ ವಾಪಾಸಗಬೇಕಿತ್ತು. ಅದೀಗ ಎಂಟು ತಿಂಗಳವರೆಗೆ ವಿಸ್ತರಣೆಯಾಗಿದೆ. ಇದರಿಂದಾಗಿ ಅವರು ಭೂಮಿಗೆ ಮರಳಲು ಸ್ಪೇಸ್‌ ಎಕ್ಸ್‌ನ ಕ್ರೂ ಡ್ರ್ಯಾಗನ್‌ಅನ್ನೇ ನಂಬಿಕೊಳ್ಳಬೇಕಾಗಿದೆ. 

Tap to resize

Latest Videos

ಬೋಯಿಂಗ್‌ ಸ್ಟಾರ್‌ಲೈನರ್‌ನಲ್ಲಿಯೇ ಗಗನಯಾತ್ರಿಗಳನ್ನು ಭೂಮಿಗೆ ಕರೆಸಿಕೊಳ್ಳಬೇಕೇ ಅಥವಾ ಸ್ಪೇಸ್‌ ಎಕ್ಸ್‌ ಯೋಜನೆಯ ಮೂಲಕ ಅವರನ್ನು ಭೂಮಿಗೆ ಮರಳಿ ಕರೆತರಬೇಕೇ ಎನ್ನುವ ನಿಟ್ಟಿನಲ್ಲಿ ನಾಸಾ ಗೊಂದಲದಲ್ಲಿದೆ. ಅದಕ್ಕೆ ಕಾರಣವೂ ಉಂಟು. ಬೋಯಿಂಗ್‌ ಸ್ಟಾರ್‌ಲೈನರ್‌ನ ಗಗನಯಾತ್ರಿಗಳು ಧರಿಸಿರುವ ಸ್ಪೇಸ್‌ ಸೂಟ್‌ನೊಂದಿಗೆ ಸ್ಪೇಸ್‌ ಎಕ್ಸ್‌ನಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ.

ಯುಎಸ್ ಮಿಲಿಟರಿ ಬಾಹ್ಯಾಕಾಶ ವ್ಯವಸ್ಥೆಗಳ ಮಾಜಿ ಕಮಾಂಡರ್ ರೂಡಿ ರಿಡಾಲ್ಫಿ, ಸ್ಟಾರ್ಲೈನರ್ ಅನ್ನು ಮರುಪ್ರವೇಶಕ್ಕೆ ಬಳಸುವುದರಿಂದ ಉಂಟಾಗುವ ಮೂರು ಗಂಭೀರ ಸನ್ನಿವೇಶಗಳನ್ನು ಹೈಲೈಟ್ ಮಾಡಿದ್ದಾರೆ. ಸುರಕ್ಷಿತ ಮರುಪ್ರವೇಶಕ್ಕಾಗಿ ಬಾಹ್ಯಾಕಾಶ ನೌಕೆಯ ಸೇವಾ ಮಾಡ್ಯೂಲ್‌ನ ಜೋಡಣೆಯು ನಿರ್ಣಾಯಕವಾಗಿದೆ. ಭೂಮಿಗೆ ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಟಾರ್ಲೈನರ್ ಅನ್ನು ಸರಿಯಾಗಿ ಇರಿಸಬೇಕು ಎಂದು ರಿಡಾಲ್ಫಿ ವಿವರಿಸಿದರು. ಜೋಡಣೆಯು ತಪ್ಪಾಗಿದ್ದರೆ, ಹಲವಾರು ಅಪಾಯಕಾರಿ ಫಲಿತಾಂಶಗಳು ಸಂಭವಿಸಬಹುದು ಎಂದಿದ್ದಾರೆ.

96 ಗಂಟೆಗಳ ಆಮ್ಲಜನಕದೊಂದಿಗೆ ಬಾಹ್ಯಾಕಾಶದಲ್ಲೇ ಹಾರಾಟ: ಹಾಗೇನಾದರೂ ಥ್ರಸ್ಟರ್‌ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ, ಕೇವಲ 96 ಗಂಟೆಗಳ ಆಮ್ಲಜನಕದೊಂದಿಗೆ ಬಾಹ್ಯಾಕಾಶದಲ್ಲಿ ಸಿಲುಕಿಕೊಳ್ಳಬಹುದು. ಕ್ಯಾಪ್ಸುಲ್ ಅಸಮರ್ಪಕ ಕೋನದಲ್ಲಿ ಮರುಪ್ರವೇಶಿಸಲು ಪ್ರಯತ್ನಿಸಿದರೆ ಈ ಪರಿಸ್ಥಿತಿಯು ಉದ್ಭವಿಸಬಹುದು, ಇದು ಭೂಮಿಯ ವಾತಾವರಣದಿಂದ ಪುಟಿಯುವಂತೆ ಮಾಡುತ್ತದೆ ಮತ್ತು ಕಕ್ಷೆಯಲ್ಲಿ ಉಳಿಯುತ್ತದೆ.

ಇದು ಸ್ವತಃ ನಾಸಾ ಹೇಳಿದ ಅಚ್ಚರಿ..ಭೂಮಿ ಮೇಲಿನ ಪ್ರತಿ ವ್ಯಕ್ತಿ ಕೂಡ ಕೋಟ್ಯಧಿಪತಿ ಆಗಬಹುದು!

ಭೂವಾತಾವರಣಕ್ಕೆ ಬರಲು ವಿಫಲ: ತಪ್ಪಾದ ಅಲೈನ್‌ಮೆಂಟ್‌ನಿಂದಾಗಿ ರೀಎಂಟರ್‌ ಮಾಡ್ಯುಲ್‌ ಭೂವಾತಾವರಣಕ್ಕೆ ಬರಲು ಕೂಡ ಸಾಧ್ಯವಾಗದೇ ಇರಬಹುದು. ಹಾಗೇನಾದರೂ ಆದಲ್ಲಿ, ಭೂಕಕ್ಷೆಯಲ್ಲಿಯೇ ಅನಿರ್ಧಿಷ್ಟಾವಧಿಗಾಗಿ ಅವರು ಉಳಿದುಕೊಳ್ಳಬೇಕಾಗಬಹುದು.

ಸ್ಪೇಸ್‌ಸೂಟ್‌ ಇಲ್ಲದೆ ಭೂಮಿಗೆ ವಾಪಾಗ್ತಾರಾ ಸುನೀತಾ ವಿಲಿಯಮ್ಸ್‌?

ಮರುಪ್ರವೇಶ ಸಮಯದ ಹೀಟ್: ಅತ್ಯಂತ ಭೀಕರ ಸನ್ನಿವೇಶವು ಬಾಹ್ಯಾಕಾಶ ನೌಕೆಯು ತುಂಬಾ ಕಡಿದಾದ ಕೋನದಲ್ಲಿ ವಾತಾವರಣವನ್ನು ಮರುಪ್ರವೇಶಿಸುತ್ತದೆ. ಇದು ಸ್ಟಾರ್‌ಲೈನರ್‌ನ ಹೀಟ್‌ಶೀಲ್ಟ್‌ ವಿಫಲಗೊಳ್ಳಲು ಕಾರಣವಾಗಬಹುದು, ಬಾಹ್ಯಾಕಾಶ ನೌಕೆಯು ಮೇಲ್ಮೈಯನ್ನು ತಲುಪುವ ಮೊದಲು ಸುಟ್ಟುಹೋಗುತ್ತದೆ, ಇದು ಗಗನಯಾತ್ರಿಗಳ ಸಾವಿಗೆ ಕಾರಣವಾಗಬಹುದು.
 

click me!