ಬಾಹ್ಯಾಕಾಶದಲ್ಲಿ 16,09,344 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ನಿಗೂಢ ವಸ್ತು ಪತ್ತೆ!

Published : Aug 18, 2024, 11:21 PM IST
ಬಾಹ್ಯಾಕಾಶದಲ್ಲಿ 16,09,344 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ನಿಗೂಢ ವಸ್ತು ಪತ್ತೆ!

ಸಾರಾಂಶ

ಬಾಹ್ಯಾಕಾಶದಲ್ಲಿ ಅತ್ಯಂತ ವೇಗ ಅಂದರೆ ಗಂಟೆಗೆ 16,09,344 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ನಿಗೂಢ ವಸ್ತುವೊಂದು ಪತ್ತೆಯಾಗಿದೆ. ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ ನಿಗೂಡ ವಸ್ತು ಇದೀಗ ಕುತೂಹಲ ಹೆಚ್ಚಿಸಿದೆ.

ವಾಶಿಂಗ್ಟನ್(ಆ.18) ನಿಗೂಢ ವಸ್ತುವೊಂದು ಪ್ರತಿ ಗಂಟೆಗೆ 1 ಮಿಲಿಯನ್ ಮೈಲು ವೇಗದಲ್ಲಿ ಚಲಿಸುತ್ತಿರುವುದು ಬಾಹ್ಯಕಾಶದಲ್ಲಿ ಪತ್ತೆಯಾಗಿದೆ. ನಾಸಾ ಸಿಟಿಜನ್ ವಿಜ್ಞಾನಿಗಳು ಈ ನಿಗೂಢ ವಸ್ತುವನ್ನು ಪತ್ತೆ ಹಚ್ಚಿದ್ದಾರೆ. ಇದೇ ಮೊದಲ ಬಾರಿಗೆ ಈ ನಿಗೂಢ ವಸ್ತು ಪತ್ತೆಯಾಗಿದೆ. ಸಣ್ಣ ನಕ್ಷತ್ರದ ಗಾತ್ರದಲ್ಲಿರುವ ಈ ನಿಗೂಢ ವಸ್ತುವಿಗೆ ವಿಜ್ಞಾನಿಗಳು CWISE J124909.08+362116.0 ಎಂದು ಹೆಸರಿಟ್ಟಿದ್ದಾರೆ. ಇದುವರೆಗೂ ಯಾರ ಕಣ್ಣಿಗೆ ಬೀಳದೆ ಅತೀ ವೇಗವಾಗಿ ಚಲಿಸುತ್ತಿರುವ ಈ ನಿಗೂಢ ವಸ್ತುವೇನು ಅನ್ನೋ ಕುತೂಹಲ ಹೆಚ್ಚಾಗಿದೆ.

ಆಗಸ್ಟ್ 15 ರಂದು ನಾಸಾ ವಿಜ್ಞಾನಿಗಳು ಈ ನಿಗೂಢ ವಸ್ತು ಪತ್ತೆ ಹಚ್ಚಿದ್ದಾರೆ. ಈ ನಿಗೂಢ ವಸ್ತು ಗುರುತ್ವಾಕರ್ಷಣಾ ಬಲದಿಂದ ತಪ್ಪಿಸಿಕೊಂಡು ಇಂಟರ್ ಗ್ಯಾಲಕ್ಟಿಕ್ ಬಾಹ್ಯಕಾಶ ಕ್ಷೇತ್ರ ಪ್ರವೇಶದತ್ತ ವೇಗವಾಗಿ ಚಲಿಸುತ್ತಿದ್ದ ವೇಳೆ ಪತ್ತೆ ಮಾಡಲಾಗಿದೆ. ಗಂಟೆಗೆ  16,09,344 ಕಿ.ಮೀ ವೇಗದಲ್ಲಿ ಸಂಚರಿಸುತ್ತಿರುವ ಈ ನಿಗೂಢ ವಸ್ತುವಿನ ದ್ರವ್ಯ ರಾಶಿ ಅತ್ಯಂತ ಕಡಿಮೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಇಸ್ರೋದಿಂದ ಮತ್ತೊಂದು ಸಾಧನೆ: ಭೂ ಪರಿವೀಕ್ಷಣಾ ಉಪಗ್ರಹ EOS8 ಯಶಸ್ವಿ ಉಡಾವಣೆ!

ನಾಸಾದ ವೈಡ್ ಫೀಲ್ಡ್ ಇನ್‌ಫ್ರೇರಡ್ ಎಕ್ಸ್‌ಪ್ಲೋರರ್(WISE) ಮಿಶನ್ ಮ್ಯಾಪಿಂಗ್ ಮೂಲಕ ಗುರುತಿಸಲಾದ ಚಿತ್ರಗಳನ್ನು ಬಳಸಿಕೊಂಡು ಈ ನಿಗೂಢ ವಸ್ತುವನ್ನು ಪತ್ತೆ ಹಚ್ಚಲಾಗಿದೆ ಎಂದು ನಾಸಾ ಹೇಳಿದೆ. ಮ್ಯಾಪಿಂಗ್‌ನಲ್ಲಿ ಈ ವಸ್ತು ಪತ್ತೆಯಾದ ಬಳಿಕ ಟೆಲಿಸ್ಕೋಪ್ ಮೂಲಕ ಈ ವಸ್ತುವಿನ ಮೇಲೆ ನಿಗಾ ಇಡಲಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯುತ್ತಿದೆ ಎಂದು ನಾಸಾ ಸಿಟಿಜನ್ ಸೈಂಟಿಸ್ಟ್ ಮಾರ್ಟಿನ್ ಕಬಾಟ್ನಿಕ್ ಹೇಳಿದ್ದಾರೆ. 

ಬಾಹ್ಯಾಕಾಶದಲ್ಲಿ ಗ್ಯಾಲಕ್ಸಿ, ನಕ್ಷತ್ರಗಳು ಪತ್ತೆಯಾಗುವುದು ಹೊಸದೇನಲ್ಲ. ಆದರೆ ಈ ನಿಗೂಢ ವಸ್ತು ಎಲ್ಲಕ್ಕಿಂತ ಭಿನ್ನವಾಗಿದೆ. ಹಲವು ಅಧ್ಯಯನಗಳಲ್ಲಿ ಸವಿಸ್ತರವಾಗಿ ಬಾಹ್ಯಾಕಾಶದ ನಕ್ಷತ್ರಗಳು, ಗ್ರಹಗಳು ಸೇರಿದಂತೆ ಹಲವು ವಿಚಾರಗ ಕುರಿತು ಸಂಶೋಧನೆ ನಡೆದಿದೆ. ಆದರೆ ಈ ನಿಗೂಢ ವಸ್ತುವಿನ ಕುರಿತು ಯಾವುದೇ ಸುಳಿವು ಕೂಡ ಇರಲಿಲ್ಲ. ಇದರ ವೇಗ, ಗಾತ್ರ ಹಾಗೂ ಕಡಿಮೆ ದ್ರವ್ಯರಾಶಿ ಇದೀಗ ಕುತೂಹಲ ಹೆಚ್ಚಿಸಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಈ ನಿಗೂಢ ವಸ್ತುವಿನ ಮೇಲೆ ತೀವ್ರ ನಿಗಾವಹಿಸಿ ಅಧ್ಯಯನ ನಡೆಸಲಾಗುತ್ತದೆ. ಇದು ಬಾಹ್ಯಕಾಶದಲ್ಲಿ ಸಂಭವಿಸುವ ಸ್ಫೋಟದಿಂದ ಹೊರಬಂದ ಸೂಪರ್‌ನೋವಾ ತುಣುಕಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡಲಾಗಿದೆ. ಗ್ಲೋಬುಲರ್ ಕ್ಲಸ್ಟರ್ ನಕ್ಷತ ಪುಂಜಗಳಿಂದ ಹೊರಬಂದಿರುವ ಕಪ್ಪು ಕುಳಿಗಳ ನಿಗೂಡ ವಸ್ತು ಇದಾಗಿರುವ ಸಾಧ್ಯತೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.  

ಮಂಗಳ ಗ್ರಹದ ಬೃಹತ್‌ ಕಲ್ಲುಗಳ ಕೆಳಗೆ ಇದೆ ಸರೋವರ, ನಾಸಾದ ಹೊಸ ಶೋಧನೆ!
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ