ಎಚ್‌ಎಎಲ್‌ ತೇಜಸ್‌ ವಿಮಾನ ನಂ.18 ಸ್ಕ್ವಾಡ್ರನ್‌ಗೆ ಸೇರ್ಪಡೆ

By Kannadaprabha NewsFirst Published May 28, 2020, 9:10 AM IST
Highlights

ದೇಶೀ ನಿರ್ಮಿತ ತೇಜಸ್‌ ಲಘು ಯುದ್ಧವಿಮಾನಗಳು ವಾಯುಪಡೆಗೆ ಸೇರ್ಪಡೆಯಾದ 4 ವರ್ಷದ ಬಳಿಕ, ‘ಫ್ಲೈಯಿಂಗ್‌ ಬುಲೆಟ್‌’ ಎಂದೇ ಖ್ಯಾತಿ ಪಡೆದ ಈ 4ನೇ ತಲೆಮಾರಿನ ಸಮರ ವಿಮಾನಗಳು ವಾಯುಪಡೆಯ ‘ನಂ.18 ಸ್ಕ್ವಾಡ್ರನ್‌ಗೆ ಸೇರಿಕೊಂಡಿವೆ. ಈ ಮೂಲಕ ದೇಶದ ವಾಯುದಳಕ್ಕೆ ಮತ್ತಷ್ಟು ಭೀಮಬಲ ಬಂದಂತಾಗಿದೆ.

ಕೊಯಮತ್ತೂರು (ಮೇ. 28):  ದೇಶೀ ನಿರ್ಮಿತ ತೇಜಸ್‌ ಲಘು ಯುದ್ಧವಿಮಾನಗಳು ವಾಯುಪಡೆಗೆ ಸೇರ್ಪಡೆಯಾದ 4 ವರ್ಷದ ಬಳಿಕ, ‘ಫ್ಲೈಯಿಂಗ್‌ ಬುಲೆಟ್‌’ ಎಂದೇ ಖ್ಯಾತಿ ಪಡೆದ ಈ 4ನೇ ತಲೆಮಾರಿನ ಸಮರ ವಿಮಾನಗಳು ವಾಯುಪಡೆಯ ‘ನಂ.18 ಸ್ಕ್ವಾಡ್ರನ್‌ಗೆ ಸೇರಿಕೊಂಡಿವೆ. ಈ ಮೂಲಕ ದೇಶದ ವಾಯುದಳಕ್ಕೆ ಮತ್ತಷ್ಟು ಭೀಮಬಲ ಬಂದಂತಾಗಿದೆ.

ತಮಿಳುನಾಡಿನ ಕೊಯಮತ್ತೂರು ಬಳಿಯ ಸೂಳೂರು ವಾಯುನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ ಅವರ ಸಮ್ಮುಖದಲ್ಲಿ ಈ ದೇಶೀ ನಿರ್ಮಿತ ಸಮರ ವಿಮಾನವು ‘ನಂ.18 ಸ್ಕ್ವಾಡ್ರನ್‌ಗೆ ಸೇರ್ಪಡೆಗೊಂಡಿತು.

ಪಾಕಿಸ್ತಾನ ಗಢ ಗಢ: ಗಡಿಯಲ್ಲಿ ಯುದ್ಧ ವಿಮಾಗಳ ಹಾರಾಟ, ಮತ್ತಷ್ಟು ಕಣ್ಗಾವಲು!

ಈ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಸಿ ‘ಫ್ಲೈಯಿಂಗ್‌ ಬುಲೆಟ್‌’ ಮುಂದೆ ತೆಂಗಿನಕಾಯಿ ಒಡೆಯಲಾಯಿತು. ಬಳಿಕ ಭದೌರಿಯಾ ಅವರು ಖುದ್ದು ಈ ತೇಜಸ್‌ ಯುದ್ಧ ವಿಮಾನ ಹಾರಿಸಿ ಗಮನ ಸೆಳೆದರು. ಬೆಂಗಳೂರಿನ ಎಚ್‌ಎಎಲ್‌ ಹಾಗೂ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ ತೇಜಸ್‌ ಅನ್ನು ಅಭಿವೃದ್ಧಿಪಡಿಸಿದೆ.

ಸೂಳೂರಿನಲ್ಲಿರುವ ವಾಯುಪಡೆಯ ಸ್ಕ್ವಾಡ್ರನ್‌ಗೆ 18ಗೂ ಮುನ್ನ ‘45 ಸ್ಕ್ವಾಡ್ರನ್‌ಗೆ‌’ ಪಡೆಗೆ ತೇಜಸ್‌ ಸೇರ್ಪಡೆ ಆಗಿದ್ದವು. ಈಗ ಸ್ಕ್ವಾಡ್ರನ್‌ಗೆ 18ಗೂ ಸೇರ್ಪಡೆ ಆಗುವ ಮೂಲಕ ತೇಜಸ್‌ ಪಡೆದ 2ನೇ ಪಡೆ ಎನ್ನಿಸಿಕೊಂಡಿದೆ.

ನಂ.18 ಸ್ಕ್ವಾಡ್ರನ್‌ಗೆ‌ ಪಡೆಗಳನ್ನು 1965ರಲ್ಲಿ ‘ತೀವ್ರ ಹಾಗೂ ನಿರ್ಭಯ’ ಎಂಬ ಧ್ಯೇಯದೊಂದಿಗೆ ಪ್ರಾರಂಭಿಸಲಾಗಿತ್ತು. ಈ ಪಡೆಯು ಈ ಮುನ್ನ ಮಿಗ್‌ 27 ಯುದ್ಧವಿಮಾನ ಹಾಡಿಸುತ್ತಿತ್ತು. ಸ್ಕ್ವಾಡ್ರನ್‌ಗೆ‌ ಪಡೆ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿತ್ತು. ಕಳೆದ ಏ.1 ರಂದು ಈ ಪಡೆಯನ್ನು ಪುನರುತ್ಥಾನಗೊಳಿಸಲಾಗಿತ್ತು.

ಪಾಕ್ ವಾಯುಸೇನೆಯಲ್ಲಿ ಮೊದಲ ಹಿಂದೂ ಪೈಲಟ್, 26ರ ಯುವಕನ ಕಮಾಲ್!

ವಾಯುಪಡೆ ಈಗ 40 ಹೊಸ ತೇಜಸ್‌ ಯುದ್ಧವಿಮಾನಗಳಿಗೆ ‘ಆರ್ಡರ್‌’ ನೀಡಿದೆ. ಇನ್ನೂ 38 ಸಾವಿರ ಕೋಟಿ ರು. ವೆಚ್ಚದಲ್ಲಿ 83 ತೇಜಸ್‌ ಯುದ್ಧವಿಮಾನಗಳ ನಿರ್ಮಾಣಕ್ಕೆ ಎಚ್‌ಎಎಲ್‌ ಜತೆ ಶೀಘ್ರ ಒಪ್ಪಂದಕ್ಕೆ ಸಹಿ ಹಾಕಲಿದೆ.

click me!