ಬಾಹ್ಯಾಕಾಶ ಪ್ರಯಾಣ ಮಾಡಿ ಯಶಸ್ವಿಯಾಗಿ ಭೂಮಿಗೆ ಮರಳಿದ ಪಾಪ್‌ ಸ್ಟಾರ್‌ ಕೇಟಿ ಪೆರ್ರಿ!

Published : Apr 15, 2025, 12:00 PM ISTUpdated : Apr 15, 2025, 12:22 PM IST
ಬಾಹ್ಯಾಕಾಶ ಪ್ರಯಾಣ ಮಾಡಿ ಯಶಸ್ವಿಯಾಗಿ ಭೂಮಿಗೆ ಮರಳಿದ ಪಾಪ್‌ ಸ್ಟಾರ್‌ ಕೇಟಿ ಪೆರ್ರಿ!

ಸಾರಾಂಶ

ಏಪ್ರಿಲ್ 14 ರಂದು, ಬ್ಲೂ ಆರಿಜಿನ್‌ನ ಗಗನಯಾತ್ರಿಗಳ ತಂಡ ಯಶಸ್ವಿಯಾಗಿ ಬಾಹ್ಯಾಕಾಶ ಪ್ರಯಾಣ ಮುಗಿಸಿ ಭೂಮಿಗೆ ಮರಳಿದೆ. ಈ ತಂಡದಲ್ಲಿ ಗಾಯಕಿಯರು, ಪತ್ರಕರ್ತರು, ವಿಜ್ಞಾನಿಗಳು ಮತ್ತು ಉದ್ಯಮಿಗಳು ಸೇರಿದ್ದರು. ಅವರು ಭೂಮಿಯಿಂದ 62 ಮೈಲುಗಳಷ್ಟು ಎತ್ತರಕ್ಕೆ ಪ್ರಯಾಣಿಸಿ, ನಾಲ್ಕು ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿದ್ದರು. ಈ ಅನುಭವವು ತಮ್ಮನ್ನು ಬದಲಾಯಿಸಿದೆ ಎಂದು ಗಗನಯಾತ್ರಿಗಳು ಹೇಳಿದ್ದಾರೆ.

ವಾಷಿಂಗ್ಟನ್‌ (ಏ.15): ಬಾಹ್ಯಾಕಾಶ ಪ್ರಯಾಣ ಮುಗಿಸಿ ಬ್ಯೂ ಆರಿಜಿನ್‌ನ ಪೂರ್ಣ ಮಹಿಳೆಯರೇ ಇದ್ದ ಗಗನಯಾತ್ರಿಗಳ ತಂಡ ಏಪ್ರಿಲ್‌ 14ರಂದು ಭೂಮಿಗೆ ವಾಪಾಸಾಗಿದೆ. ಬಾಹ್ಯಾಕಾಶದ ಅಂಚಿನವರೆಗೂ ಪ್ರಯಾಣ ಮಾಡಿದ್ದ ಈ ಟೀಮ್‌, ಕೆಲ ಕಾಲ ಅಲ್ಲೇ ಇದ್ದು, ಭೂಮಿಗೆ ವಾಪಾಸಾಗಿದೆ.

ಈ ಐತಿಹಾಸಿಕ ಪ್ರಯಾಣ ಮಾಡಿದ ಗಗನಯಾತ್ರಿಗಳ ಪೈಕಿ ಪಾಪ್‌ ಸಿಂಗರ್‌ ಕೇಟಿ ಪೆರ್ರಿ, ಜರ್ನಲಿಸ್ಟ್‌ ಗೇಲ್‌ ಕಿಂಗ್‌, ಮಾಜಿ ನಾಸಾ ರಾಕೆಟ್‌ ಸೈಂಟಿಸ್ಟ್‌ ಆಯಿಷಾ ಬೋವ್‌, ಸಾಮಾಜಿಕ ಹಕ್ಕುಗಳ ಹೋರಾಟಗಾರ್ತಿ ಅಮಂಡಾ ನಗ್ಯುನ್‌, ಸಿನಿಮಾ ಪ್ರೊಡ್ಯುಸರ್‌ ಕೇರೈನ್‌ ಫ್ಲೈನ್‌ ಹಾಗೂ ಬ್ಯೂ ಆರಿಜಿನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ನ ಗೆಳತಿ ಲೌರೇನ್‌ ಸ್ಯಾಂಚೇಜ್‌ ಇದ್ದರು.

ಈ ಮಹಿಳೆಯರು ಒಟ್ಟಾಗಿ ನಾಲ್ಕು ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿದ್ದರು. ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶದ ನಡುವಿನ ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಯಾದ ಕಾರ್ಮನ್ ರೇಖೆಗೆ ಭೂಮಿಯಿಂದ 62 ಮೈಲುಗಳಷ್ಟು ಎತ್ತರದಲ್ಲಿ ಇವರು ಪ್ರಯಾಣಿಸಿದರು.

ಬ್ಲೂ ಒರಿಜಿನ್‌ನ ನೌಕೆ ಪಶ್ಚಿಮ ಟೆಕ್ಸಾಸ್ ಉಡಾವಣಾ ಸ್ಥಳದಲ್ಲಿ ವಾಪಾಸ್‌ ಬಂದ ನಂತರ, ಕೇಟಿ ಪೆರ್ರಿ ಮತ್ತು ಗೇಲ್ ಕಿಂಗ್ ತಕ್ಷಣವೇ ಕೃತಜ್ಞತೆಯ ಸೂಚಕವಾಗಿ ನೆಲಕ್ಕೆ ಮುತ್ತಿಟ್ಟರು.

ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ಉತ್ಸಾಹದಲ್ಲಿದ್ದ ಲೌರನ್‌ ಸ್ಯಾಂಚೇಜ್‌ ತಮಾಷೆ ಮಾಡುತ್ತಾ, 'ನಾವು ಮದುವೆಯಾಗುತ್ತಿದ್ದೇವೆ. ಹಾಗೇನಾದರೂ ನಾನು ವಾಪಾಸ್ ಬರದೇ ಇದ್ದರೆ, ನನೆ ಬಹ ಬೇಸರವಾಗುತ್ತಿತ್ತು' ಎಂದು ಬ್ಲ್ಯೂ ಆರಿಜಿನ್‌ನ ಅಧಿಕಾರಿಗಳಿಗೆ ತಿಳಿಸಿದರು. ಅದರೊಂದಿಗೆ ಶೀಘ್ರದಲ್ಲೇ ಬ್ಲ್ಯೂ ಆರಿಜಿನ್‌ ಹಾಗೂ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ನೊಂದಿಗೆ ವಿವಾಹವಾಗುತ್ತಿರುವುದನ್ನು ಖಚಿತಪಡಿಸಿದರು.

ಬಾಹ್ಯಾಕಾಶಕ್ಕೆ ಹೋಗುವ ಕನಸು ಕಂಡಿದ್ದ ಆಯಿಷಾ ಬೋವ್, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಉಡಾವಣೆಯ ಸಮಯದಲ್ಲಿ ತಾವು ಭಾವುಕರಾಗಿದ್ದನ್ನೂ ನೆನಪಿಸಿಕೊಂಡದರು. "ನಾವು ಕ್ಯಾಪ್ಸುಲ್‌ ಒಳಗೆ ಹೋಗಿ ಹತ್ತರಿಂದ ಎಣಿಸಿದಾಗ, ನಾನು ಕೆಲವು ಹಾಡುಗಳನ್ನು ಕೇಳಲು ಪ್ರಾರಂಭಿಸಿದೆ, ಮತ್ತು ನಾವು ಮೇಲಕ್ಕೆ ಹಾರಿದೆವು. ಕ್ಯಾಪ್ಸುಲ್‌ನಲ್ಲಿರುವ ಶಕ್ತಿಯನ್ನು ಎಲ್ಲರೂ ಅನುಭವಿಸಿದೆವು" ಎಂದು ಅವರು ಹೇಳಿದರು. "ನಾವು ಅಲ್ಲಿಗೆ ಹೋಗಿ ನಮ್ಮ ಆಸನಗಳಿಂದ ಹೊರಬಂದಾಗ, ನಾವೆಲ್ಲರೂ ಒಬ್ಬರನ್ನೊಬ್ಬರು ನೋಡಿದೆವು - ಅದು ಒಂದು ಸುಂದರವಾದ, ಹಂಚಿಕೊಂಡ ಕ್ಷಣವಾಗಿತ್ತು' ಎಂದಿದ್ದಾರೆ.

ಗೇಲ್ ಕಿಂಗ್ ಬಾಹ್ಯಾಕಾಶದಿಂದ ಕಾಣುವ ದೃಶ್ಯವನ್ನು ವಿನಮ್ರ ಮತ್ತು ಶಾಂತ ಎಂದು ಬಣ್ಣಿಸಿದರು. "ಇದು ನಿಜವಾಗಿಯೂ ನನ್ನನ್ನು ಯೋಚಿಸುವಂತೆ ಮಾಡಿತು - ನಾವು ಉತ್ತಮವಾಗಿ ಏನನ್ನಾದರೂ ಮಾಡಬೇಕಾಗಿದೆ" ಎಂದು ಅವರು ಹೇಳಿದರು. "ನಾವು ಶಾಶ್ವತವಾಗಿ ಬಂಧದಲ್ಲಿದ್ದೇವೆ. ನಾವು ಅನುಭವಿಸಿದ್ದನ್ನು ನೀವು ಅನುಭವಿಸಿ ಉಳಿಯಲು ಸಾಧ್ಯವಿಲ್ಲ. ಇದು ನಿಜವಾಗಿಯೂ ನಿಜವಾದ ಸಹೋದರತ್ವ' ಎಂದಿದ್ದಾರೆ.

ಬಾಹ್ಯಾಕಾಶಕ್ಕೆ ನೆಗೆದ 6 ಮಹಿಳೆಯರ ತಂಡ: ಇತಿಹಾಸದಲ್ಲಿ ಇದೇ ಮೊದಲು!

ಬಾಹ್ಯಾಕಾಶದಿಂದ ಕೆಳಗೆ ಇಳಿಯುವಾಗ ಕೇಟಿ ಪೆರ್ರಿ, ಲೂಯಿಸ್ ಆರ್ಮ್‌ಸ್ಟ್ರಾಂಗ್ ಅವರ ವಾಟ್ ಎ ವಂಡರ್‌ಫುಲ್ ವರ್ಲ್ಡ್ ಅನ್ನು ಹಾಡಿದರು. "ನಾನು ಆ ಹಾಡನ್ನು ಮೊದಲು ಹಾಡಿದ್ದೇನೆ, ಮತ್ತು ಸ್ಪಷ್ಟವಾಗಿ, ನನ್ನ ಉನ್ನತ ವ್ಯಕ್ತಿ ಇದನ್ನು ಮುನ್ನಡೆಸುತ್ತಿದ್ದರು ಏಕೆಂದರೆ ನಾನು ಒಂದು ದಿನ ಬಾಹ್ಯಾಕಾಶದಲ್ಲಿ ಹಾಡುತ್ತೇನೆ ಎಂದು ನನಗೆ ತಿಳಿದಿರಲಿಲ್ಲ" ಎಂದು ಅವರು ಹೇಳಿದರು. "ಇದು ಭವಿಷ್ಯದ ಮಹಿಳೆಯರಿಗೆ ಸ್ಥಳಾವಕಾಶ ಕಲ್ಪಿಸುವ ಬಗ್ಗೆ. ಇದೆಲ್ಲವೂ ಭೂಮಿಯ ಪ್ರಯೋಜನಕ್ಕಾಗಿ' ಎಂದು ಹೇಳಿದ್ದಾರೆ.

ಜೆಫ್ ಬೆಜೋಸ್‌ನ ನೌಕೆಯಲ್ಲಿ‌ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯನಾಗಿ ಇತಿಹಾಸ ನಿರ್ಮಿಸಿದ ಗೋಪಿಚಂದ್

ಉಡಾವಣೆಗೂ ಮುನ್ನ, ಜೆಫ್ ಬೆಜೋಸ್ ರಾಕೆಟ್‌ನಲ್ಲಿ ತಮ್ಮ ಬೆಂಬಲವನ್ನು ತೋರಿಸಲು ಸಿಬ್ಬಂದಿಯೊಂದಿಗೆ ಸ್ವಲ್ಪ ಸಮಯ ಇದ್ದರು. "ನಾನು ನಿಮಗಾಗಿ ತುಂಬಾ ಉತ್ಸುಕನಾಗಿದ್ದೇನೆ, ನಾನು ಕ್ಯಾಪ್ಸುಲ್‌ನಿಂದ ಇಳಿಯುವ ಮನಸ್ಸಾಗುತ್ತಲ್ಲ" ಎಂದು ಅವರು ಅವರಿಗೆ ಹೇಳಿದರು. "ನೀವು ಹಿಂತಿರುಗಿದಾಗ, ಅದು ನಿಮ್ಮನ್ನು ಹೇಗೆ ಬದಲಾಯಿಸಿದೆ ಎಂದು ಕೇಳಲು ನಾನು ಕಾಯುತ್ತಿರುತ್ತೇನೆ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ' ಎಂದಿದ್ದರು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ