
ವಾಶಿಂಗ್ಟನ್(ಏ.13) ಸೂರ್ಯ, ಚಂದ್ರ, ಮಂಗಳ ಸೇರದಂತೆ ಹಲವು ಗ್ರಹಗಳ ಕುರಿತು, ನಕ್ಷತ್ರಗಳ ಕುರಿತು ಭೂಮಿಯಿಂದ ನೋಡುವುದು ಅಧ್ಯಯನ ಮಾಡುವುದು ಕೌತುಕದ ವಿಷಯ. ಅದೇ ರೀತಿ ಬಾಹ್ಯಾಕಾಶಕ್ಕೆ ತೆರಳಿ ಅಲ್ಲಿಂದ ಭೂಮಿ ಹೇಗೆ ಕಾಣುತ್ತೆ ಅನ್ನೋದುು ಅಷ್ಟೇ ರೋಚಕ. ಸೂರ್ಯನ ಬೆಳಕಿನಲ್ಲಿ, ರಾತ್ರಿ ವೇಳೆ ಭೂಮಿ ಹೇಗೆ ಕಾಣುತ್ತದೆ ಅನ್ನೋ ಕೆಲ ಫೋಟೋ, ವಿಡಿಯೋಗಳನ್ನು ಉಪಗ್ರಹಗಳು ಕಳುಹಿಸಿದೆ. ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಾಲ್ಕು ದೇಶಗಳು ಕತ್ತಲಲ್ಲಿ ಹೇಗೆ ಕಾಣುತ್ತದೆ ಅನ್ನೋ ಫೋಟೋವನ್ನು ಕಳುಹಿಸಿದೆ.ಅಮೆರಿಕ, ಭಾರತ, ಕೆನಡಾ ಹಾಗೂ ದಕ್ಷಿಣ ಏಷ್ಯಾ ದೇಶಗಳ ಫೋಟೋ ಇದಾಗಿದೆ. ಈ ಪೈಕಿ ರಾತ್ರಿ ವೇಳೆ ವಿದ್ಯುತ್ ಬೆಳಕಿನಲ್ಲಿ ಭಾರತವೇ ಸೂಪರ್.
ನಾಲ್ಕು ಫೋಟೋ ಕಳುಹಿಸಿ ISS
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ(ISS) ಈ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಇದೀಗ ISS ಈ ಫೋಟೋಗಳನ್ನು ಹಂಚಿಕೊಂಡಿದೆ. ನಾಲ್ಕು ಫೋಟೋಗಳ ಪೈಕಿ ಅಕಾಶದಲ್ಲಿರುವ ನಕ್ಷತ್ರ ಪುಂಜಗಳಂತೆ, ಚಂದ್ರನ ಪ್ರಕಾಶಮಾನವಾದ ಬೆಳಕಿನಂತೆ ಭಾರತ ಕಾಣುತ್ತಿದೆ. ಕಾರಣ ಭಾರತದ ಜನಸಂದಣಿ ನಗರಗಳು, ವಿದ್ಯುತ್ ದೀಪ್, ಬೆಳಕು ಸೇರಿದಂತೆ ಹಲವು ಕಾರಣಗಳಿಂದ ಭಾರತವನ್ನು ಬಾಹ್ಯಾಕಾಶ ಕೇಂದ್ರದಿಂದ ರಾತ್ರಿ ವೇಳೆ ನೋಡಿದರೂ ಅಷ್ಟೇ ಪ್ರಕಾಶಮಾನವಾಗಿ ಹೊಳೆಯುತ್ತಿದೆ.
ನಮಗೆ ಕಾಣದ ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಅದ್ಭುತ ವಿಡಿಯೋ ಸೆರೆ
ಭಾರತವೇ ರಾಕಿಂಗ್ ಸ್ಟಾರ್
ISS ಈ ಫೋಟೋಗಳನ್ನು ಹಂಚಿಕೊಂಡು ಭಾರತ ಪ್ರಕಾಶಿಸುತ್ತಿದೆ ಎಂದು ಬರೆದುಕೊಂಡಿದೆ. ಇನ್ನು ಅಮೆರಿಕ, ಕೆನಾಡ ಸೇರಿ ಇತರ ಫೋಟೋಗಳು ಸಾಮಾನ್ಯವಾಗಿದೆ. ಇಲ್ಲೂ ಬೆಳಕು ಕಾಣಬಹುದು. ಆದರೆ ಭಾರತದ ರೀತಿಯಲ್ಲಿ ಚಿತ್ತಾರ ನೋಡಲು ಸಾಧ್ಯವಿಲ್ಲ. ಈ ಫೋಟೋಗಳಿಗೆ ಹಲವರು ಕಮೆಂಟ್ ಮಾಡಿದ್ದಾರೆ. ಭಾರತವೇ ಇಲ್ಲಿ ರಾಕಿಂಗ್ ಸ್ಟಾರ್ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಏಷ್ಯಾ ದೇಶಗಳ ಒಟ್ಟು ಫೋಟೋವನ್ನು ISS ಬಿಡುಗಡೆ ಮಾಡಿದೆ. ಹಲವು ದೇಶಗಳನ್ನು ಒಟ್ಟೂಗೂಡಿಸಿ ತೆಗೆದ ಫೋಟೋ ಇದು. ಆದರೂ ಭಾರತವೇ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಿದೆ. ಇಷ್ಟೇ ಅಲ್ಲ ಭಾರತ ಅಕ್ಷರಶ ರಾತ್ರಿ ವೇಳೆಯ ಆಕಾಶವನ್ನೇ ಹೋಲುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೋಲ್ಸ್ ವಿಡಿಯೋ
ಇತ್ತೀಚೆಗೆ ಎಲಾನ್ ಮಸ್ಕ್ ಫ್ರಾಮ್2 ಮಿಷನ್ ಗಗನಯಾತ್ರಿಗಳ ತಂಡ ಭೂಮಿ ಪೋಲ್ಸ್ ವಿಡಿಯೋ ಸೆರೆ ಹಿಡಿತ್ತು. ಭೂಮಿಯ ಧ್ರುವ ಭಾಗದ ಈ ವಿಡಿಯೋ ಹಲವು ಅಚ್ಚರಿಗೆ ಕಾರಣವಾಗಿತ್ತು. ಇದುರೆಗೆ ಯಾರೂ ಸೆರೆ ಹಿಡಿಯದ ಭೂಮಿ ಧ್ರುವ ಪ್ರದೇಶಗಳ ವಿಡಿಯೋ ಇದಾಗಿತ್ತು. ನಾವು ಭೂಮಿ ಮೇಲೆ ಇದ್ದರೂ ಈ ಪ್ರದೇಶ ಗೋಚರಿಸುವುದಿಲ್ಲ. ಆದರೆ ಭೂಮ್ ಮೇಲೆ 90 ಡಿಗ್ರಿ ಕೋನದಲ್ಲಿ ನಿಂತು ಈ ವಿಡಿಯೋ ಸೆರೆ ಹಿಡಿಯಲಾಗಿದೆ. ಹೀಗೆ 90 ಡಿಗ್ರಿ ಕೋನದ ವರೆಗೆ ಬಾಹ್ಯಾಕಾಶದಲ್ಲಿ ಯಾರು ಸಂಚರಿಸಿಲ್ಲ. ಈ ವಿಡಿಯೋ ಕೂಡ ಅಚ್ಚರಿಗೆ ಕಾರಣವಾಗಿತ್ತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.