ಎರಡು ಭಾಗಗಳಾಗಿ ವಿಂಗಡನೆಯಾಗ್ತಿದೆ ಭಾರತದ ಭೂಭಾಗ? ವಿಜ್ಞಾನಿಗಳಿಂದ ಭೀಕರ ಭೂಕಂಪದ ಸುಳಿವು

Massive Earthquake: ಭಾರತದ ಭೂಭಾಗವು ಎರಡು ಭಾಗಗಳಾಗಿ ವಿಭಜನೆಯಾಗುವ ಸಾಧ್ಯತೆಯಿದೆ ಎಂದು ಭೂಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಭೂಮಿಯ ಒಳಗೆ ನಡೆಯುತ್ತಿರುವ ಡಿಲಾಮಿನೇಷನ್ ಪ್ರಕ್ರಿಯೆಯೇ ಇದಕ್ಕೆ ಕಾರಣವೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Is India s land mass splitting into two Scientists warn of a massive earthquake mrq

ನವದೆಹಲಿ: ಭಾರತದ ಭೂಭಾಗಕ್ಕೆ ಸಂಬಂಧಿಸಿದ ಮಹತ್ವದ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಹೌದು, ಭೂಗೋಳಶಾಸ್ತ್ರಜ್ಞರು, ಭೂಭಾಗದಲ್ಲಿ ಮಹಾಬಿರುಕು, ಭೀಕರ ಭೂಕಂಪದ ಸುಳಿವು ನೀಡಿದ್ದಾರೆ. ಭಾರತದ ಭೂಭಾಗ ಎರಡು  ಭಾಗಗಳಾಗಿ ವಿಭಜನೆಯಾಗಲಿದ್ದು, ಇದರಲ್ಲಿ ಹಿಮಾಲಯವುಳ್ಳ ಪರ್ವತ ಪ್ರದೇಶದಲ್ಲಿ ಹೊಸ ಪರಿವರ್ತನೆಗಳು ಉಂಟಾಗುವ ಸಾಧ್ಯತೆಗಳಿವೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಭಾರತದ ಭೂಮಿ ಎರಡು ಭಾಗಗಳಲ್ಲಿ ವಿಭಜನೆಯಾಗಲಿದೆ. ಈ ವಿಭಜನೆಯಾಗುವ ಭೂಕ್ಷೇತ್ರ ಶಾಶ್ವತವಾಗಿ ಹೊಸ ರೂಪ ಪಡೆದುಕೊಳ್ಳಲಿದೆ. ಅಮೆರಿಕನ್ ಜಿಯೋಲಾಜಿಕಲ್ ಯುನಿಯನ್ ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ಅಚ್ಚರಿಯಾದ ಈ ಮಾಹಿತಿ ಒಳಗೊಂಡಿದೆ. ಈ ಅಧ್ಯಯನದ ವರದಿ ಪ್ರಕಾರ, ಉಪಖಂಡವಾಗಿರುವ ಭಾರತಕ್ಕೆ ಎದುರಾಗುವ ಭೂಕಂಪ ಮತ್ತು ಅಪಾಯಗಳ ಕುರಿತ ಹಲವು ಪ್ರಮುಖ ಮಾಹಿತಿಯನ್ನು ನೀಡಲಾಗಿದೆ.

ಉದ್ದನೆಯ ಮಹಾಬಿರುಕು
ಸುಮಾರು 6 ಕೋಟಿ ವರ್ಷಗಳಿಂದ ಭಾರತದ ಭೂಭಾಗ ಯುರೇಷಿಯನ್ ಪ್ಲೇಟ್‌ಗೆ ನಿರಂತರವಾಗಿ ಡಿಕ್ಕಿ ಹೊಡೆಯುತ್ತಿದೆ. ಇದೀಗ ಈ ಪ್ರಕ್ರಿಯೆಯಲ್ಲಿ ಹೊಸ ಬೆಳವಣಿಗೆಯೊಂದು ಕಂಡು ಬಂದಿದ್ದು, ಇದನ್ನು "ಡಿಲಾಮಿನೇಷನ್" ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಿಂದ ಭಾರತದ ಭೂಭಾಗ ಭೂಮಿಯೊಳಗೆ ಮುಳುಗಿ, ಹೊಸ ರೂಪ ಪಡೆಯಲಿದೆ. ಈ ಸಮಯದಲ್ಲಿ ಭಾರತದ ಭೂಭಾಗದಲ್ಲಿ ಉದ್ದನೆಯ ಮಹಾಬಿರುಕು ಕಾಣಿಸಿಕೊಳ್ಳಲಿದೆ. . ಟಿಬೆಟಿಯನ್ ಬುಗ್ಗೆಗಳಲ್ಲಿನ ಭೂಕಂಪನ ಅಲೆಗಳು ಮತ್ತು ಹೀಲಿಯಂ ಐಸೊಟೋಪ್‌ಗಳ ಬಗ್ಗೆ ಅಧ್ಯಯನ ನಡೆಸಿದ ಬಳಿಕ ವಿಜ್ಞಾನಿಗಳು ಈ ಮಾಹಿತಿಯನ್ನು ಕಂಡುಕೊಂಡಿದ್ದಾರೆ. 

Latest Videos

ಏನಿದು ಡಿಲಾಮಿನೇಷನ್ ಪ್ರಕ್ರಿಯೆ?
ಡಿಲಾಮಿನೇಷನ್ ಅನ್ನೋದು ಭೂಗರ್ಭದಲ್ಲಾಗುವ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಟೆಕ್ಟೋನಿಕ್ ಪ್ಲೇಟ್‌ನ ಕೆಳಗಿನ ಭಾಗ ಬೇರೆಯಾಗಿ ಮೆಟೆಲ್‌ನಲ್ಲಿ ಮುಚ್ಚಲ್ಪಡುತ್ತದೆ. ಈ ಪ್ರಕ್ರಿಯೆ ಪ್ಲೇಟ್‌ ಸ್ಥಿರತೆ ಮೇಲೆಯೇ ನೇರ ಪರಿಣಾಮವನ್ನು ಬೀರುತ್ತದೆ. ಈ ಪ್ರಕ್ರಿಯೆಗೆ ಒಳಪಡುವ ಭೂಭಾಗದಲ್ಲಿ ಭೂಕಂಪ  ಉಂಟಾಗುವ ಸಾಧ್ಯತೆಗಳು ಅಧಿಕವಾಗಿರುತ್ತವೆ. 

ಉಟ್ರೆಕ್ಟ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ಡೌವ್ ವ್ಯಾನ್ ಹಿನ್ಸ್ಬರ್ಗೆನ್ ಅವರ ಪ್ರಕಾರ, ಭೂಖಂಡಗಳು ಈ ರೀತಿಯಾಗಿ ವರ್ತಿಸುತ್ತವೆ ಎಂಬ ವಿಷಯ ನಮಗೆ ತಿಳಿದಿರಲಿಲ್ಲ. ಆದ್ರೆ ಈ ವಿಷಯ ಭೂ ವಿಜ್ಞಾನದಲ್ಲಿ ಅತ್ಯಂತ ಮೌಲ್ಯವನ್ನು ಹೊಂದಿದೆ. ಈ ಅವಿಷ್ಕಾರ ಪ್ರಮುಖವಾಗಿದ್ದು,  ಪ್ಲೇಟ್ ಮೇಲ್ಮೈಯಲ್ಲಿ ವಿಭಿನ್ನ ಪದರಗಳೂ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಆದ್ರೆ ಟೆಕ್ಟೋನಿಕ್ ಶಿಫ್ಟ್ಗಳನ್ನು ಚಾಲನೆ ಮಾಡುವ ಆಂತರಿಕ ಪ್ರಕ್ರಿಯೆಗಳು ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ವೇಗವಾಗಿ ಬದಲಾಗುತ್ತಿದ್ದ, ಇವುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. 

ಭೀಕರ ಭೂಕಂಪದ ಸುಳಿವು
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಭೂ ಭೌತಶಾಸ್ತ್ರಜ್ಞ ಸೈಮನ್ ಕ್ಲೆಂಪರ್ ಅವರ ಪ್ರಕಾರ, ಹಿಮಾಲಯ ಪ್ರದೇಶವೇ ಹೆಚ್ಚು ಘರ್ಷಣೆಗೊಳಗಾಗುವ ಸಾಧ್ಯತೆಗಳಿವೆ. ಈ ಭಾಗ ಟೆಕ್ಟೋನಿಕ್ ಪ್ಲೇಟ್‌ಗಳು ಅನೇಕ ಬಿರುಕುಗಳನ್ನು ಕಾಣಬಹುದಾಗಿದೆ. ಈ ಬಿರುಕುಗಳು ಭೂಮಿಯ ಹೊರಪದರ ರಚನೆಯ ಮೇಲೆ ಒತ್ತಡ ಬೀರಲಿದೆ. ಈ ಪರಿಣಾಮದಿಂದ ಬಿರುಕುಗಳು ಅಥವಾ ಭೂಕಂಪದ ಅಪಾಯಗಳಿರುತ್ತವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ವಿದ್ಯುತ್ ಬೆಳಕಿನಲ್ಲಿ ಭಾರತ ಹೇಗೆ ಕಾಣಿಸುತ್ತಿದೆ? 4 ದೇಶದ ಫೋಟೋ ಕಳುಹಿಸಿದ ಬಾಹ್ಯಾಕಾಶ ಕೇಂದ್ರ

ಮುಂದುವರಿದು ಮಾತನಾಡಿರುವ ಭೌತಶಾಸ್ತ್ರಜ್ಞ ಸೈಮನ್ ಕ್ಲೆಂಪರ್, ಹಿಮಾಲಯ ಪ್ರದೇಶಗಳು ಭೂಕಂಪ ಪೀಡಿತ ಪ್ರದೇಶಗಳಾಗಿರುತ್ತವೆ. ಸಾಮಾನ್ಯವಾಗಿ ಈ ಭಾಗದ ವ್ಯಾಪ್ತಿಯಲ್ಲಿಯೇ ಭೂಕಂಪದ ಕೇಂದ್ರಗಳು ರಚನೆಯಾಗುತ್ತಿರುತ್ತವೆ. ಈ ಭೂಭಾಗದಲ್ಲಿನ ಒತ್ತಡದಿಂದ ಆಗಾಗ್ಗೆ ಈ ಹಿಮಾಲಯ ಪರ್ವತದ ಪ್ರದೇಶಗಳು ಭೂಕಂಪಗಳಿಗೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಆಳವಾದ ಬಿರುಕುಗಳನ್ನು ಉಂಟುಮಾಡಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

ಇದು ಆರಂಭದ ಸಂಕೇತ!
ಇದು ಡಿಲಾಮಿನೇಷನ್ ಪ್ರಕ್ರಿಯೆಯ ಆರಂಭದ ಸಂಕೇತವಾಗಿದೆ. ಭೂಗರ್ಭದಲ್ಲಿ ನಡೆಯುತ್ತಿರುವ ಬದಲಾವಣೆಗಳ ಆರಂಭದ ಸುಳಿವು ಇದಾಗಿದೆ. ಈ ಕಾರ್ಯವಿಧಾನದ ದೀರ್ಘಕಾಲೀನ ಪರಿಣಾಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಭೂವೈಜ್ಞಾನಿಕ ಬದಲಾವಣೆಗಳು ನಿಧಾನವಾಗಿ ಸಂಭವಿಸುತ್ತವೆ. ಈ  ಬದಲಾವಣೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಮಯ ಮತ್ತು ಅಧ್ಯಯನದ ಅವಶ್ಯಕತೆವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದನ್ನೂ ಓದಿ: ಸ್ಕ್ವೇರ್ ವೇವ್ ಎಂದು ಕರೆಯಲ್ಪಡುವ ಈ ವಿದ್ಯಮಾನಕ್ಕೆ ಕಾರಣ ಏನು?

vuukle one pixel image
click me!