100 ಕಿ.ಮೀ.ನಿಂದ ಚಂದ್ರನ ಮೇಲ್ಮೈಗೆ ಚಂದ್ರಯಾನ-3 ನೌಕೆ ಇಳಿಸುವುದು ಸವಾಲಿನ ಕೆಲಸ: ಇಸ್ರೋ

By Kannadaprabha NewsFirst Published Aug 8, 2023, 11:21 AM IST
Highlights

 ಚಂದ್ರನಂಗಳದಲ್ಲಿ ಉಪಗ್ರಹವನ್ನು ಇಳಿಸುವ ಚಂದ್ರಯಾನ-3ರ ಮಹತ್ವಾಕಾಂಕ್ಷಿ ಮೆಟ್ಟಿಲಾದ ಚಂದ್ರನಲ್ಲಿ ನೌಕೆಯ ಕಕ್ಷೆ ಇಳಿಸುವ 2 ಪ್ರಕ್ರಿಯೆಗಳು ಮಹತ್ವದ್ದಾಗಿದೆ. 

ನವದೆಹಲಿ: ಚಂದ್ರನಂಗಳದಲ್ಲಿ ಉಪಗ್ರಹವನ್ನು ಇಳಿಸುವ ಚಂದ್ರಯಾನ-3ರ ಮಹತ್ವಾಕಾಂಕ್ಷಿ ಮೆಟ್ಟಿಲಾದ ಚಂದ್ರನಲ್ಲಿ ನೌಕೆಯ ಕಕ್ಷೆ ಇಳಿಸುವ 2 ಪ್ರಕ್ರಿಯೆಗಳು ಮಹತ್ವದ್ದಾಗಿದೆ. ಕೊನೆಗೆ 100 ಕಿ.ಮೀ. ಕಕ್ಷೆಗೆ ನೌಕೆಯನ್ನು ಸೇರಿಸುವುದು ಸವಾಲಿನದ್ದು ಎಂದು ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥನ್‌ ತಿಳಿಸಿದ್ದಾರೆ. ಸೋಮವಾರ ಮಾತನಾಡಿದ ಅವರು,‘ಚಂದ್ರಯಾನ-3 ನೌಕೆ ಈಗಾಗಲೇ ಚಂದ್ರನಿಂದ 170 ಕಿಲೋಮೀಟರ್‌ ಎತ್ತರದ ಕಕ್ಷೆಯಲ್ಲಿ ಹಾರಾಟ ನಡೆಸುತ್ತಿದ್ದು, ಇದನ್ನು ಆ.9 ಮತ್ತು 17ರಂದು 100 ಕಿ.ಮೀ. ಎತ್ತರಕ್ಕೆ ಇಳಿಸುವ ಕಾರ್ಯ ನಡೆಯುತ್ತದೆ. ಇದಾದ ಬಳಿಕ ಆ.23ರಂದು ನೌಕೆಯನ್ನು ಚಂದ್ರನ ಮೇಲೆ ಇಳಿಸಲಾಗುತ್ತದೆ’ ಎಂದು ತಿಳಿಸಿದರು.

ಈವರೆಗೆ 100 ಕಿಮೀ.ವರೆಗೆ ಕಕ್ಷೆ ಇಳಿಸುವುದು ಕಠಿಣವಲ್ಲ. ಆದರೆ ನೌಕೆ ಚಂದ್ರನ ಯಾವ ಸ್ಥಳದಲ್ಲಿ ಇಳಿಯುತ್ತದೆ ಎಂಬ ದೃಷ್ಟಿಯಿಂದ ಇನ್ನು ಮುಂದಿನ ಪ್ರಕ್ರಿಯೆಗಳು ಮಹತ್ವದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಜೊತೆಗೆ ಚಂದ್ರಯಾನ-2ರ ಬಗ್ಗೆ ಮಾತನಾಡಿದ ಅವರು,‘ಈ ಬಾರಿ ಚಂದ್ರಯಾನ-2 (Chandrayaan 2) ವಿಫಲಗೊಂಡ ಅಂಶಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲಾಗಿದೆ. ಈ ಅಂಶಗಳನ್ನು ಚಂದ್ರಯಾನ-3ರಲ್ಲಿ ಸರಿಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಬಾರಿ ಯಶಸ್ವಿಯಾಗಿ ನೌಕೆ ಚಂದ್ರನಲ್ಲಿ ಇಳಿಯಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ’ ಎಂದು ತಿಳಿಸಿದರು.

Latest Videos

ಚಂದ್ರಯಾನ 3 ಉಪಗ್ರಹ ತೆಗೆದ ಚಂದ್ರನ ಮೊದಲ ಚಿತ್ರ ಬಹಿರಂಗ ಪಡಿಸಿದ ಇಸ್ರೋ!

ಚಂದ್ರನ ಕಕ್ಷೆಗೆ ಸೇರ್ಪಡೆಯಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 (Chandrayaan3) ನೌಕೆ ಕೆಲ ದಿನಗಳ ಹಿಂದೆ ಹತ್ತಿರದಿಂದ ಚಂದ್ರನ ದೃಶ್ಯಗಳನ್ನು ಸೆರೆ ಹಿಡಿದು ರವಾನಿಸಿದೆ. ಕಕ್ಷೆ ಪ್ರವೇಶಿಸಿದ ಬಳಿಕ ನೌಕೆ ತಾನು ಮೊದಲ ಬಾರಿಗೆ ಸೆರೆಹಿಡಿದ ಚಂದ್ರನ ದೃಶ್ಯಗಳನ್ನು ರವಾನಿಸಿದ್ದು ಇದನ್ನು ಇಸ್ರೋ ಟ್ವೀಟರ್‌ನ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ಆ.1ರಂದು ಚಂದ್ರನ ಕಕ್ಷೆಯತ್ತ ಪ್ರಯಾಣ ಆರಂಭಿಸಿದ್ದ ಚಂದ್ರಯಾನ-3 ನೌಕೆ  ಆಗಸ್ಟ್ 23ರ ವೇಳೆಗೆ ಚಂದ್ರನ ಮೇಲೆ ಲ್ಯಾಂಡ್‌ ಆಗಲಿದೆ. ಈಗಾಗಲೇ 22 ದಿನಗಳ ಅಥವಾ ಮೂರನೇ ಎರಡರಷ್ಟು ಪ್ರಯಾಣವನ್ನು ನೌಕೆ ಯಶಸ್ವಿಯಾಗಿ ಮಾಡಿದೆ.

Chandrayaan-3: ಭೂಮಿಯನ್ನು ತೊರೆದ 22 ದಿನಗಳ ಬಳಿಕ ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ-3

click me!