ಚಂದ್ರಯಾನ 3 ಉಪಗ್ರಹ ತೆಗೆದ ಚಂದ್ರನ ಮೊದಲ ಚಿತ್ರ ಬಹಿರಂಗ ಪಡಿಸಿದ ಇಸ್ರೋ!

By Suvarna News  |  First Published Aug 6, 2023, 10:50 PM IST

ಇಸ್ರೋ ಕಳುಹಿಸಿದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಉಪಗ್ರಹ ಈಗಾಗಲೇ ಚಂದ್ರನ ಕಕ್ಷೆಗೆ ಸೇರಿಸಲಾಗಿದೆ. ಇದೀಗ ಇಸ್ರೋ ಚಂದ್ರನ ಮೇಲ್ಮೈನ ಮೊದಲ ಚಿತ್ರ ಬಿಡುಗಡೆ ಮಾಡಿದೆ.


ನವದೆಹಲಿ(ಆ.06) ಭಾರತದ ಚಂದ್ರಯಾನ 3 ಉಪಗ್ರಹ ಈಗಾಲೇ ಕಾರ್ಯಾರಂಭ ಮಾಡಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಚಂದ್ರಯಾನ 3 ಈಗಾಗಲೇ ಚಂದ್ರ ಕಕ್ಷೆ ಸೇರಿದೆ. ಇದೀಗ ಇಸ್ರೋ ಚಂದ್ರಯಾನ 3 ಉಪಗ್ರಹ ಸೆರೆ ಹಿಡಿದ ಚಂದ್ರನ ಮೇಲ್ಮೈ ಚಿತ್ರವನ್ನು ಬಿಡುಗಡೆ ಮಾಡಿದೆ. ಜೂನ್ 05 ರಂದು ಚಂದ್ರಯಾನ 3 ಉಪಗ್ರಹವನ್ನು ಯಶಸ್ವಿಯಾಗಿ ಚಂದ್ರನ ಕಕ್ಷಗೆ ಸೇರಿಸಲಾಗಿತ್ತು. ಚಂದ್ರನ ಕಕ್ಷೆಯ ಸುತ್ತುತ್ತಿರುವ ಉಪಗ್ರಹ ಇದೀಗ ಹತ್ತಿರದಿಂದ ಚಂದ್ರ ಚಿತ್ರಗಳನ್ನು ರವಾನಿಸಿದೆ. ಈ ಕುರಿತು ಇಸ್ರೋ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ.

ಜು.14ರಂದು ಶ್ರೀಹರಿಕೋಟಾದಿಂದ ನಭಕ್ಕೆ ನೆಗೆದಿದ್ದ ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ‘ಲೂನಾರ್‌ ಆರ್ಬಿಟ್‌ ಇಂಜೆಕ್ಷನ್‌ (ಎಲ್‌ಒಐ)’ ಪ್ರಕ್ರಿಯೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆ.5ರ ಸಂಜೆ 7 ಗಂಟೆಗೆ ನಡೆಸಿತು. ಆಗಸ್ಟ್ 23 ರಂದು ಉಪಗ್ರಹ ಚಂದ್ರ ಮೇಲ್ಮೈನಲ್ಲಿ ಇಳಿಯಲಿದೆ. ಈ ಕಾರ್ಯವನ್ನು ಯಶಸ್ವಿಗೊಳಿಸಲು ಇಸ್ರೋ ನಿರಂತರ ಕೆಲಸ ಮಾಡುತ್ತಿದೆ. ಇದರ ನಡುವೆ ಉಪಗ್ರಹ ತನ್ನ ಕಾರ್ಯ ಆರಂಭಿಸಿರುವುದು ಕೋಟ್ಯಾಂತರ ಭಾರತೀಯರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

Tap to resize

Latest Videos

Chandrayaan-3: ಭೂಮಿಯನ್ನು ತೊರೆದ 22 ದಿನಗಳ ಬಳಿಕ ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ-3

ಆಗಸ್ಟ್ 5 ರಂದು ಚಂದ್ರಯಾನ 3 ಲೂನಾರ್ ಸೆರೆ ಹಿಡಿದ ಫೋಟೋಗಳನ್ನು ಇಸ್ರೋ ಬಿಡುಗಡೆಗೊಳಿಸಿದೆ. ಚಂದ್ರನ ಮೇಲ್ಮೈನ ಪದರಗಳು ಈ ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಚಿತ್ರಗಳು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಇಷ್ಟೇ ಅಲ್ಲ ಚಂದ್ರ ಮೇಲಿರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

 

The Moon, as viewed by spacecraft during Lunar Orbit Insertion (LOI) on August 5, 2023. pic.twitter.com/xQtVyLTu0c

— LVM3-M4/CHANDRAYAAN-3 MISSION (@chandrayaan_3)

 

ಬಳಿಕ ಆ.23ರಂದು ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಲು ಇಸ್ರೋ ಪ್ರಯತ್ನಿಸುತ್ತಿದೆ. ಚಂದ್ರನ ನೆಲದ ಮೇಲೆ ಲ್ಯಾಂಡರ್‌ ಇಳಿದ ಮೇಲೆ ಅದರಿಂದ ಹೊರಬರುವ ರೋವರ್‌ ಉಪಕರಣವು ಚಂದ್ರನ ಮೇಲೆ ಅಧ್ಯಯನ ನಡೆಸಲಿದೆ.

ಶ್ರೀಹರಿಕೋಟಾದಿಂದ ಚಂದ್ರಯಾನ3 ಉಪಗ್ರಹ ಹೊತ್ತ ನೌಕೆ ನಭಕ್ಕೆ ಹಾರಿದ ಬೆನ್ನಲ್ಲೇ ಇಸ್ರೋ ನಿರಂತರ ಸಂಪರ್ಕದಲ್ಲಿದೆ. ಬೆಂಗಳೂರಿನ ಇಸ್ರೋ ಕೇಂದ್ರದಿಂದ ಉಪಗ್ರಹವನ್ನು ನಿಯಂತ್ರಿಸಲಾಗುತ್ತಿದೆ. ಹಂತ ಹಂತವಾಗಿ ಒಂದೊಂದೆ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದ ಇಸ್ರೋ, ನಿನ್ನೆ ಚಂದ್ರನ ಕಕ್ಷೆಗೆ ಸೇರಿಸಿದೆ. ಚಂದ್ರನ ಕಕ್ಷೆಯಲ್ಲಿ 2 ವಾರಗಳ ಕಾಲ ಸುತ್ತುವ ರೋವರ್, ಆಗಸ್ಟ್ 23ರಂದು ಚಂದ್ರ ಮೇಲೆ ಇಳಿಯಲಿದೆ.

ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಬಹಿರಂಗ: ಭಾರತಕ್ಕೂ ಇದಕ್ಕೂ ಸಂಬಂಧ!

‘ಚಂದ್ರಯಾನ ನೌಕೆಯು 5ರಿಂದ 6 ಬಾರಿ ಭೂಮಿಯನ್ನು ಸುತ್ತು ಹಾಕುತ್ತದೆ. ಈ ವೇಳೆ ನೌಕೆಯ ಕಕ್ಷೆಯನ್ನು ವಿಜ್ಞಾನಿಗಳು ಎತ್ತರಿಸುತ್ತಾರೆ. ಚಂದ್ರನಿಂದ 100 ಕಿ.ಮೀ. ದೂರದಲ್ಲಿ ಅದರ ಕಕ್ಷೆಗೆ ಸೇರಲ್ಪಡುತ್ತದೆ. ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಕಸರತ್ತು ಶುರುವಾಗುತ್ತದೆ. ಆ.23ರಂದು ಸಂಜೆ 5.47ಕ್ಕೆ ಚಂದ್ರನ ಮೇಲೆ ಇಳಿಸುವ ಗುರಿ ಇದೆ. ಬಳಿಕ ವಿಕ್ರಮ್‌ ಲ್ಯಾಂಡರ್‌ನಿಂದ ರೋವರ್‌ ಹೊರಬರಲಿದೆ.

click me!