ಶೀಘ್ರವೇ ಆಗಸಕ್ಕೆ ಚಿಮ್ಮಲಿದೆ ಇಸ್ರೋದ GSLV-F17 ರಾಕೆಟ್, ಬಾಹ್ಯಾಕಾಶದಲ್ಲಿದ್ದು ಭಾರತ ಕಾಯಲಿದೆ EOS-5!

Published : Aug 29, 2026, 05:18 PM IST
ISRO GSLV F17

ಸಾರಾಂಶ

ಹಿಂದಿನ ವೈಫಲ್ಯಗಳಿಂದ ಪಾಠ ಕಲಿತಿರುವ ಇಸ್ರೋ, GSLV-F17 ರಾಕೆಟ್ ಮೂಲಕ 'EOS-5' ಭೂ-ವೀಕ್ಷಣಾ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಈ ಉಪಗ್ರಹವು ಭೂಮಿಯಿಂದ 36,000 ಕಿ.ಮೀ ಎತ್ತರದಲ್ಲಿ ನೆಲೆನಿಂತು, ನೈಸರ್ಗಿಕ ವಿಕೋಪಗಳ ಮೇಲೆ ನಿರಂತರ ನಿಗಾ ವಹಿಸಲಿದೆ. ಈ ಉಡಾವಣೆಯು 'ಗಗನಯಾನ್' ಸೇರಿದಂತೆ ಇಸ್ರೋದ ಭವಿಷ್ಯದ ಯೋಜನೆಗಳಿಗೆ ನಿರ್ಣಾಯಕವಾಗಿದೆ.

ಕಳೆದ ಎಂಟು ತಿಂಗಳುಗಳಿಂದ ಯಾವುದೇ ರಾಕೆಟ್ ಉಡಾವಣೆ ನಡೆಸದ ಹಾಗೂ ಸತತ ಎರಡು ಪಿಎಸ್‌ಎಲ್‌ವಿ (PSLV) ಮಿಷನ್‌ಗಳಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಈಗ ಮಹತ್ವದ ಬಾಹ್ಯಾಕಾಶ ಯಾನಕ್ಕೆ ಸಂಪೂರ್ಣ ಸಿದ್ಧವಾಗಿದೆ. ದೇಶದ ಭವಿಷ್ಯದ ಯೋಜನೆಗಳಿಗೆ ದಾರಿದೀಪವಾಗಲಿರುವ ಜಿಎಸ್‌ಎಲ್‌ವಿ (GSLV-F17) ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗಿನ ಜಾವ ದೇಶವು ಇನ್ನೂ ನಿದ್ರಿಸುತ್ತಿರುವಾಗ GSLV F17 ರಾಕೆಟ್ ನಭೋ ಮಂಡಲಕ್ಕೆ ಹಾರಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಪ್ರಾದೇಶಿಕ ಮಾಧ್ಯಮಗಳ ಪ್ರಕಾರ ಉಡಾವಣೆಯು ಸೆಪ್ಟೆಂಬರ್ 4 ರಂದು ಮಧ್ಯರಾತ್ರಿ ಇಡೀ ಲೋಕ ಮಲಗಿರುವಗ ಸಮಯ 2:55 AM ಕ್ಕೆ ನಭಕ್ಕೆ ಚಿಮ್ಮಲಿದೆ!

ಬಾಹ್ಯಾಕಾಶದಲ್ಲಿದ್ದು ದೇಶದ ಕಾವಲು ಕಾಯಲಿದೆ 'EOS-5':

ಈ ಕಾರ್ಯಾಚರಣೆಯ ಮೂಲಕ ಹಿಂದೆ 'GISAT-1A' ಎಂದು ಹೆಸರಿಸಲಾಗಿರುವ 'EOS-5' ಭೂ-ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಹಾರಿಸಲಾಗುತ್ತದೆ. ಭೂಮಿಯಿಂದ ಸುಮಾರು 36,000 ಕಿಲೋಮೀಟರ್ ಎತ್ತರದ ಭೂಸ್ಥಿರ ಕಕ್ಷೆಯಲ್ಲಿ ಇದು ನೆಲೆಸಲಿದೆ. ಎತ್ತರದ ಶಿಖರದಿಂದ ಇಡೀ ಹಳ್ಳಿಯನ್ನು ಕಣ್ಣಿಟ್ಟು ನೋಡುವಂತೆ, ಈ ಉಪಗ್ರಹವು ಭಾರತೀಯ ಭೂಪ್ರದೇಶವನ್ನು 24x7 ಗಂಟೆಯೂ ನಿರಂತರವಾಗಿ ಹದ್ದಿನ ಕಣ್ಣಿಡಲಿದೆ. ಚಂಡಮಾರುತ, ಪ್ರವಾಹ, ಮೇಘಸ್ಫೋಟ ಹಾಗೂ ಕಾಡಿನ ಕಿಚ್ಚಿನಂತಹ ನೈಸರ್ಗಿಕ ವಿಕೋಪಗಳ ತ್ವರಿತ ಮಾಹಿತಿಯನ್ನು ಭೂಮಿಗೆ ಕಳಿಸಲಿದೆ. ಇದು ವಿಪತ್ತು ನಿರ್ವಹಣಾ ಪಡೆಗಳು, ಹವಾಮಾನ ತಜ್ಞರು, ಕೃಷಿ ಯೋಜಕರು ಮತ್ತು ಭದ್ರತಾ ಸಂಸ್ಥೆಗಳಿಗೆ ಅತ್ಯಂತ ಉಪಯುಕ್ತವಾಗಲಿದೆ.

ಹಳೆಯ ವೈಫಲ್ಯದಿಂದ ಕಲಿತ ಪಾಠ, ಧೃತಿಗೆಡದ ವಿಜ್ಞಾನಿಗಳು:

ಆಗಸ್ಟ್ 12, 2021 ರಂದು GSLV F10 ರಾಕೆಟ್ ಮೂಲಕ 'EOS-03' (ಮೂಲ GISAT) ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಆದರೆ ರಾಕೆಟ್‌ನ ಮೇಲ್ಭಾಗದ ಕ್ರಯೋಜೆನಿಕ್ ಎಂಜಿನ್ ತಾಂತ್ರಿಕ ದೋಷದಿಂದಾಗಿ ಈ ಯೋಜನೆ ವಿಫಲವಾಗಿತ್ತು. ಅಂದಿನ ವಿಫಲತೆಯನ್ನು ಸರಿಪಡಿಸಿಕೊಂಡು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರಸ್ತುತ 'EOS-5' ರೂಪುಗೊಂಡಿದೆ. ಪ್ರಸ್ತುತ ಪಿಎಸ್‌ಎಲ್‌ವಿ (PSLV) ರಾಕೆಟ್‌ಗಳ ಮೇಲೆ ತಾಂತ್ರಿಕ ತಪಾಸಣೆ ನಡೆಯುತ್ತಿದೆಯಾದರೂ, GSLV Mk 2 ರಾಕೆಟ್ ವಿಭಿನ್ನ ವಿನ್ಯಾಸ ಮತ್ತು ಎಂಜಿನ್ ವ್ಯವಸ್ಥೆಯನ್ನು ಹೊಂದಿರುವುದರಿಂದ ಈ ಉಡಾವಣೆಗೆ ಯಾವುದೇ ತಡೆ ಇಲ್ಲ.

'ನಿಸಾರ್' ಯಶಸ್ಸಿನ ಬಲ ಹಾಗೂ ಇಸ್ರೋದ ಮುಂಬರುವ ಯೋಜನೆಗಳು

ಇತ್ತೀಚೆಗಷ್ಟೇ GSLV Mk 2 ರಾಕೆಟ್, ನಾಸಾ ಮತ್ತು ಇಸ್ರೋದ ಜಂಟಿ ಸಾಹಸದ ವಿಶ್ವದ ಅತ್ಯಂತ ದುಬಾರಿ ಭೂ-ವೀಕ್ಷಣಾ ಉಪಗ್ರಹವಾದ 'NISAR' ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು. ಈ ಯಶಸ್ಸು ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನದ ಮೇಲಿನ ವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸಿದೆ.

ಇಸ್ರೋದ ಭವಿಷ್ಯದ ಬೃಹತ್ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡ ಡಾ. ನಾರಾಯಣನ್, ಮಾರ್ಚ್ 2027 ರ ವೇಳೆಗೆ ಒಟ್ಟು 7 ರಾಕೆಟ್‌ಗಳನ್ನು ಉಡಾವಣೆ ಮಾಡಲು ಯೋಜನೆ ರೂಪಿಸಲಾಗಿದೆ.ಭಾರತದ ಮಹತ್ವಾಕಾಂಕ್ಷೆಯ 'ಗಗನಯಾನ್' ಯೋಜನೆಯ ಮೊದಲ ಮಾನವರಹಿತ 'G1' ಮಿಷನ್ ಶೀಘ್ರದಲ್ಲೇ ನಡೆಯಲಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಒಟ್ಟು 12 ಉಪಗ್ರಹಗಳ ನಿರ್ಮಾಣ ಹಾಗೂ 8 ರಾಕೆಟ್‌ಗಳ ಉಡಾವಣೆಯ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆಗಳು ಭಾರತದ ಸಂವಹನ, ಸಂಚರಣೆ (Navigation), ವೈಜ್ಞಾನಿಕ ಸಂಶೋಧನೆ ಹಾಗೂ ಮಾನವಸಹಿತ ಬಾಹ್ಯಾಕಾಶ ಪಯಣಕ್ಕೆ ಹೊಸ ಹೊಸ ದಾರಿಗಳನ್ನು ತೆರೆಯಲಿವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Sikkim Sundari in Kannada: ಈ ಗಿಡ ಹೂವು ಬಿಟ್ಟರೆ ಸಾವು ಖಚಿತ! ಹಿಮಾಲಯದ ಈ ನಿಗೂಢ ಸಸ್ಯದ ಹಿಂದಿನ ರಹಸ್ಯವೇನು?
Screenshot: ಫೋಟೋ, ಸ್ಕ್ರೀನ್‌ಶಾಟ್ ತೆಗೆಯೋ ಅಭ್ಯಾಸ ಇದೆಯಾ? ಹಾಗಾದ್ರೆ ನಿಮ್ಮ ಸ್ಮರಣಶಕ್ತಿ ನಾಶ! ಶಾಕಿಂಗ್ ರಿಪೋರ್ಟ್!