ಲಡಾಖ್ ಆಗಸದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ ಕಾವ್ಯ, ಓಡೋಡಿ ಬಂದ ವಿಜ್ಞಾನಿಗಳ ತಂಡ

Published : Aug 26, 2026, 06:46 PM IST
Stunning Cloud Iridescence

ಸಾರಾಂಶ

ಲಡಾಖ್ ಆಗಸದಲ್ಲಿ ಅಚ್ಚರಿ ದೃಶ್ಯ ಸೆರೆಯಾಗಿದೆ. ಆಗಸದ ವಿಶೇಷ ಹಾಗೂ ಅಪರೂಪದ ವಿದ್ಯಮಾನ ಕಂಡ ಹಲವು ಅಚ್ಚರಿಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ವಿಜ್ಞಾನಿಗಳ ತಂಡ ಸ್ಥಳಕ್ಕೆ ಆಗಮಿಸುತ್ತಿದೆ.

ಲಡಾಖ್ (ಆ.26) ಆಗಸದಲ್ಲಿ ಹಲವು ಅಚ್ಚರಿಗಳು ನಡೆಯುತ್ತಿರುತ್ತದೆ. ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಾ ಕೆಲ ವಿದ್ಯಾಮಾನಗಳನ್ನು ಸೆರೆ ಹಿಡಿಯುತ್ತಾರೆ. ನೈಸರ್ಗಿಕವಾಗಿ ಸಂಭವಿಸುವ ಹಲವು ಅಚ್ಚರಿಗಳು ವಿಜ್ಞಾನ ಲೋಕಕ್ಕೂ ಸರ್ಪ್ರೈಸ್ ಕೊಟ್ಟಿದೆ. ಇದೀಗ ಲಡಾಖ್ ಪ್ರದೇಶದ ಆಗಸದಲ್ಲಿ ಕೆಲ ಅಚ್ಚರಿ ಸಂಭವಿಸಿದೆ. ಪ್ರವಾಸಿಗರು ಈ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಲಡಾಖ್ ಭೂಭಾಗದ ಆಸದ ಅಕ್ಷರಶ ಚಿತ್ರದ ರೀತಿ ಗೋಚರಿಸಿದೆ. ಕಲಾವಿದನ ಪೈಂಟಿಂಗ್‌ನಲ್ಲಿ ಮೂಡಿಬಂದ ಚಿತ್ತಾರದಂತೆ ಗೋಚರಿಸಿದೆ. ಹಲವು ಬಣ್ಣಗಳು, ಅದ್ಭುತ ದೃಶ್ಯ ಕಾವ್ಯಕ್ಕೆ ಜನರು ಬೆರರಾಗಿದ್ದಾರೆ.

ಹಲವು ಬಣ್ಣಗಳಲ್ಲಿ ಕಂಗೋಳಿಸಿದ ಆಗಸ

ಲಡಾಖ್‌ನ ಭೂಭಾಗದ ಹಲವು ಪ್ರದೇಶಗಳಲ್ಲಿ ಆಗಸ ಗುಲಾಬಿ, ಹಸಿರು, ನೀಲಿ, ನೇರಳೆ, ಬಿಳಿ ಬಣ್ಣಗಳ ಮೂಲಕ ಕಂಗೊಳಿಸಿದೆ. ಹೊಳೆಯುವ ಮೋಡುಗಳು ಅದ್ಭುತವಾಗಿ ಮೂಡಿಬಂದಿದೆ. ಅಕ್ಷರಶ ಕಲಾವಿದ ಪೇಂಟಿಂಗ್ ಮಾಡಿದ ರೀತಿಯಲ್ಲೇ ಆಗಸ ಕಾಣಿಸಿದೆ. ಈ ಪ್ರಕ್ರಿಯೆಗೆ ವೈಜ್ಞಾನಿಕವಾಗಿ ಕ್ಲೌಡ್ ಇರಿಡೆಸೆನ್ಸ್ ಎಂದು ಹೇಳುತ್ತಾರೆ.

ಏನಿದು ಕ್ಲೌಡ್ ಇರಿಡೆಸೆನ್ಸ್

ಕ್ಲೌಡ್ ಇರಿಡೆನ್ಸ್ ಸಾಮಾನ್ಯ ಹಾಗೂ ಸ್ವಾಭಾವಿಕ ಪ್ರಕ್ರಿಯೆ. ಇದು ಆಗಸದಲ್ಲಿ ನಡೆಯುತ್ತಲೇ ಇರುತ್ತದೆ. ಹಲವು ಬಾರಿ ಗೋಚರಿಸುವುದಿಲ್ಲ . ಕಾರಣ ಮಳೆ ಮೋಡಗಳಿಂದ ಇದು ಭೂಮಿ ಮೇಲಿರುವ ಜನರಿಗೆ ಕಾಣಿಸುವುದಿಲ್ಲ. ಲಡಾಖ್‌ನ ಭೂಭೂಗದಲ್ಲಿ ಶುಭ್ರ ವಾತಾವರಣದಲ್ಲಿ ಈ ಅದ್ಭುತ ಗೋಚರಿಸಿದೆ. ವಿಶೇಷವಾಗಿ ಲಡಾಖ್ ಆಗಸದ ವಿದ್ಯಮಾನ ವೀಕ್ಷಿಸಲು ಉತ್ತಮ ಭೂಪ್ರದೇಶವಾಗಿದೆ.

ಈ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿದ್ದಂತೆ ಆಗಸದ, ವಿಜ್ಞಾನದ ಕುರಿತು ಆಸಕ್ತ ಹಾಗೂ ಅಧ್ಯಯನದಲ್ಲಿ ನಿರತರಾಗಿರುವ ಸ್ಥಳೀಯ ಹಲವು ವಿಜ್ಞಾನಿಗಳು, ಸಂಶೋಧಕರು ಲಡಾಖ್ ಭೂಪ್ರದೇಶತ್ತ ಧಾವಿಸುತ್ತಿದ್ದಾರೆ. ಈ ಚಿತ್ತಾರ ಕಣ್ತುಂಬಿಕೊಳ್ಳಲು ಮುಂದಾಗಿದ್ದಾರೆ. ಇತ್ತ ಹಲವರು ಈ ವಿಡಿಯೋ ನೋಡಿ ಕಳೆದ ಬಾರಿ ಮಿಸ್ಸ್ ಆಗಿದ್ದ ಲಡಾಖ್ ಪ್ರವಾಸ ಮಾಡಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವರು ಇದು ಎಐ ಸೃಷ್ಟಿ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಇದು ನೈಜ ದೃಶ್ಯ, ಇದೇ ಲಡಾಖ್‌ನಲ್ಲಿ ಹಲವು ಬಾರಿ ಘಟಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ದೇವತೆಗಳ ಸಂತೃಪ್ತಿಗಾಗಿ ಅಪ್ರಾಪ್ತ ಬಾಲಕಿಯ ಬಲಿ? ಹಿಮದಡಿಯಲ್ಲಿ ಸಿಕ್ಕ ಮಮ್ಮಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸತ್ಯ!
ಕಾವಲಿ ಬಿಸಿಯಾಗಿದ್ದಾಗ್ಲೇ ಅದರ ಮೇಲೆ ನೀರು ಹಾಕ್ತೀರಾ? 90% ಜನರಿಗೆ ಗೊತ್ತಿಲ್ಲ ಇದರ ಭಯಾನಕ ಸತ್ಯ