
ಧಬೆಂಗಳೂರು (ಆ.29): ಚಂದ್ರಯಾನ-3 ಪ್ರಗ್ಯಾನ್ ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣವು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯ ಧಾತುರೂಪದ ಸಂಯೋಜನೆಯ ಮೇಲೆ ಮೊಟ್ಟಮೊದಲ ಇನ್-ಸಿಟು ಮಾಪನಗಳನ್ನು ಮಾಡಿದೆ. ಈ ಇನ್-ಸಿಟು ಮಾಪನಗಳು ಈ ಪ್ರದೇಶದಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ದೃಢೀಕರಿಸಿದೆ. ಇದು ಕಕ್ಷೆಯಲ್ಲಿನ ಉಪಕರಣಗಳಿಂದ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಲಿಬ್ಸ್ ಎನ್ನುವುದು ವೈಜ್ಞಾನಿಕ ತಂತ್ರವಾಗಿದ್ದು, ಇದು ತೀವ್ರವಾದ ಲೇಸರ್ ಪಲ್ಸ್‌ಗಳಿಗೆ ಒಡ್ಡಿಕೊಳ್ಳುವ ಮೂಲಕ ವಸ್ತುಗಳ ಸಂಯೋಜನೆಯನ್ನು ವಿಶ್ಲೇಷಿಸುತ್ತದೆ. ಒಂದು ಉನ್ನತ-ಶಕ್ತಿಯ ಲೇಸರ್ ಪಲ್ಸ್ ಬಂಡೆ ಅಥವಾ ಮಣ್ಣಿನಂತಹ ವಸ್ತುವಿನ ಮೇಲ್ಮೈ ಮೇಲೆ ಕೇಂದ್ರೀಕೃತವಾಗಿರುತ್ತದೆ. ಲೇಸರ್ ಪಲ್ಸ್ ಅತ್ಯಂತ ಬಿಸಿಯಾದ ಮತ್ತು ಸ್ಥಳೀಯ ಪ್ಲಾಸ್ಮಾವನ್ನು ಉತ್ಪಾದಿಸುತ್ತದೆ. ಸಂಗ್ರಹಿಸಿದ ಪ್ಲಾಸ್ಮಾ ಬೆಳಕನ್ನು ಸ್ಪೆಕ್ಟ್ರಲ್ ಆಗಿ ಪರಿಹರಿಸಲಾಗುತ್ತದೆ ಮತ್ತು ಚಾರ್ಜ್ ಕಪಲ್ಡ್ ಸಾಧನಗಳಂತಹ ಡಿಟೆಕ್ಟರ್‌ಗಳಿಂದ ಧಾತುಗಳ ಇರುವಿಕೆಯನ್ನು ಕಂಡುಹಿಡಿಯಲಾಗುತ್ತದೆ. ಪ್ರತಿಯೊಂದು ಅಂಶವು ಪ್ಲಾಸ್ಮಾ ಸ್ಥಿತಿಯಲ್ಲಿದ್ದಾಗ ಬೆಳಕಿನ ತರಂಗಾಂತರಗಳ ವಿಶಿಷ್ಟ ಗುಂಪನ್ನು ಹೊರಸೂಸುವುದರಿಂದ, ವಸ್ತುವಿನ ಧಾತುರೂಪದ ಸಂಯೋಜನೆಯನ್ನು ನಿರ್ಧರಿಸಲಾಗುತ್ತದೆ' ಎಂದು ಇಸ್ರೋ ಬರೆದುಕೊಂಡಿದೆ.
ಪ್ರಾಥಮಿಕ ವಿಶ್ಲೇಷಣೆಗಳು ಹಾಗೂ ಗ್ರಾಫ್‌ಗಳ ಮೇಲೆ ಮಾಡಿರುವ ನಿರೂಪಣೆಗಳಿಂದ ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಗಂಧಕ ಅಂದರೆ ಸಲ್ಪರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ಅನಾವರಣಗೊಳಿಸಿದೆ. ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಜಲಜನಕ ಇರುವಿಕೆಯ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
News Hour: ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಶಾಕ್!
ಲಿಬ್ಸ್ ಪೇಲೋಡ್ ಅನ್ನು ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಬೆಂಗಳೂರಿನ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಈ ಅಂಶಗಳಲ್ಲಿ ಅತ್ಯಂತ ಗಮನಾರ್ಹವಾದ ಅಂಶವೆಂದರೆ ಸಲ್ಫರ್, ಆಮ್ಲಜನಕ. ಹಾಗೇನಾದರೂ ಹೈಡ್ರೋಜನ್ ಅಂದರೆ ಜಲಜನಕದ ಉಪಸ್ಥಿತಿಯನ್ನು ದೃಢೀಕರಿಸಿದರೆ ಅದು ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಬ್ಯಾಕ್ಟೀರಿಯಾದ ಉಪಸ್ಥಿತಿಯನ್ನು ಸೂಚಿಸುತ್ತದೆ, ಇದು ಹೈಡ್ರೋಜನ್ ಸಲ್ಫೈಡ್ (H2S) ಮತ್ತು ಥಿಯೋಸಲ್ಫೇಟ್ (S2O3²‐) ಅನ್ನು ಶಕ್ತಿಯ ಮೂಲವಾಗಿ ಬಳಸುತ್ತದೆ.
ಚಂದ್ರ ಏನು ಮೋದಿ ಅವರ ಆಸ್ತಿನಾ..ಶಿವಶಕ್ತಿ ಅಂತಾ ಹೇಗೆ ಹೆಸರಿಡ್ತಾರೆ? ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.