ಚಂದ್ರಯಾನ 3 ಲ್ಯಾಂಡಿಂಗ್‌ ಸೈಟ್‌ಗೆ Statio Shiva Shakti ಹೆಸರು ಅಧಿಕೃತಗೊಳಿಸಿದ ಖಗೋಳ ಒಕ್ಕೂಟ !

By Santosh Naik  |  First Published Mar 24, 2024, 4:36 PM IST

2023ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ನೌಕೆಯ ವಿಕ್ರಮ ಲ್ಯಾಂಡರ್‌ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ಕರೆಯಲಾಗುವುದು ಎಂದು ಘೋಷಣೆ ಮಾಡಿದ್ದರು.


ನವದೆಹಲಿ (ಮಾ.24): ಇಡೀ ವಿಶ್ವವೇ ಅಚ್ಚರಿಪಡುವಂತೆ ಚಂದ್ರಯಾನ-3 ಯೋಜನೆಯ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಕ್ರಮ್‌ ಲ್ಯಾಂಡರ್‌ಅನ್ನು ಅತ್ಯಂತ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡಿತ್ತು. ಈ ಸ್ಥಳವನ್ನು ಪ್ರಧಾನಿ ನರೇಂದ್ರ ಮೋದಿ ಶಿವಶಕ್ತಿ ಪಾಯಿಂಟ್‌ ಎಂದು ಕರೆಯಲಾಗುವುದು ಎಂದು ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ( ಐಎಯು ) ಈ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್‌ ಎನ್ನುವ ಹೆಸರನ್ನು ಅಧಿಕೃತಗೊಳಿಸಿದೆ. ಇದರಿಂದಾಗಿ ಇನ್ನು ಮುಂದೆ ಈ ಸ್ಥಳ ಐಎಯು  ಹಾಗೂ ಇತರ ವೈಜ್ಞಾನಿಕ ದಾಖಲೆಗಳಲ್ಲಿ Statio Shiva Shakti ಎನ್ನುವ ಹೆಸರಿನಿಂದ ಗುರುತಿಸಿಕೊಳ್ಳಲಿದೆ. ಮಾರ್ಚ್‌ 19 ರಂದು ಪ್ಯಾರಿಸ್‌ ಮೂಲದ ಐಎಯು ಚಂದ್ರಯಾನ-3 ಚಂದ್ರನ ಮೇಲೆ ಲ್ಯಾಂಡ್‌ ಆದ ಸ್ಥಳಕ್ಕೆ ಸ್ಟೇಟಿಯೋ ಶಿವ ಶಕ್ತಿ ಎನ್ನುವ ಹೆಸರಿಗೆ ಒಪ್ಪಿಗೆ ನೀಡಿದೆ.  ಖಗೋಳ ಸಂಸ್ಥೆಯಿಂದ ಅನುಮೋದಿಸಲಾದ ಗ್ರಹಗಳ ಹೆಸರುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವ ಗ್ಯಾಜೆಟಿಯರ್ ಆಫ್ ಪ್ಲಾನೆಟರಿ ನಾಮೆನ್‌ಕ್ಲೇಚರ್‌ನಲ್ಲಿ ಇದರ ವರದಿ ಪ್ರಕಟವಾಗಿದೆ.

ಹೆಸರಿನ ಮೂಲದ ಬಗ್ಗೆ ಗೆಜೆಟಿಯರ್‌ನಲ್ಲಿ ವಿವರಣೆ ನೀಡಲಾಗಿದೆ. "ಭಾರತೀಯ ಪುರಾಣದ ಸಂಯುಕ್ತ ಪದವು ಪುಲ್ಲಿಂಗ ('ಶಿವ') ಮತ್ತು ಸ್ತ್ರೀಲಿಂಗ ('ಶಕ್ತಿ') ಪ್ರಕೃತಿಯ ಎರಡು ಅಂಶಗನ್ನು ಚಿತ್ರಿಸುತ್ತದೆ; ಇದೇ ಹೆಸರನ್ನು ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್‌ನ  ಲ್ಯಾಂಡಿಂಗ್ ಸೈಟ್‌ಗೆ ಇಡಲಾಗಿದೆ' ಎಂದು ಮಾಹಿತಿ ನೀಡಿದೆ.

20203ರ ಆಗಸ್ಟ್‌ 26 ರಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಆಗಸ್ಟ್ 23, ಚಂದ್ರಯಾನ-3 ಚಂದ್ರನ ಮೇಲೆ ಇಳಿದ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಕರೆಯಲಾಗುತ್ತದೆ ಎಂದಿದ್ದರು. ಇನ್ನು ಚಂದ್ರಯಾನ-2 ನೌಕೆ ಚಂದ್ರನ ಮೇಲೆ ಬಿದ್ದ ಸ್ಥಳವನ್ನು ತಿರಂಗಾ ಎಂದು ಗುರುತಿಸಲಾಗುವುದು ಎಂದು ಅವರು ಹೇಳಿದ್ದರು.  "ಭಾರತದ ಪ್ರತಿ ಪ್ರಯತ್ನಕ್ಕೂ ಸ್ಫೂರ್ತಿ. ಯಾವುದೇ ವೈಫಲ್ಯವು ಅಂತಿಮವಲ್ಲ" ಎಂದು ನಮಗೆ ತಿರಂಗಾ ಸ್ಪಾಟ್‌ ನೆನಪಿಸುತ್ತದೆ ಎಂದಿದ್ದರು.

Tap to resize

Latest Videos

undefined

ಭಾರತವು ಈಗ ಚಂದ್ರನ ಅನ್ವೇಷಿಸದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎನಿಸಿಕೊಂಡಿದ್ದು, ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡಿಂಗ್‌ ಸಾಧಿಸಿದ ವಿಶ್ವದ ಅಗ್ರ ನಾಲ್ಕು ರಾಷ್ಟ್ರಗಳೊಂದಿಗೆ ಭಾರತ ಕೂಡ ಸ್ಥಾನ ಪಡೆದಿದೆ. ಕಳೆದ ವಾರ, ಚಂದ್ರಯಾನ-3 ಮಿಷನ್‌ನಲ್ಲಿನ ಸಾಧನೆಗಳಿಗಾಗಿ ಇಸ್ರೋಗೆ ಪ್ರತಿಷ್ಠಿತ ಏವಿಯೇಷನ್ ವೀಕ್ ಲಾರೆಟ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಚಂದ್ರಯಾನ-4 ಉದ್ದೇಶ ಬಹಿರಂಗಪಡಿಸಿದ ಇಸ್ರೋ, ಚಂದ್ರನ ಮೇಲೆ ಲ್ಯಾಂಡ್‌ ಮಾತ್ರವಲ್ಲ ಮರಳಿ ಭೂಮಿಗೆ ಬರುತ್ತೆ ನೌಕೆ!

ಏವಿಯೇಷನ್ ವೀಕ್ ಲಾರೆಟ್ಸ್ ಪ್ರಶಸ್ತಿಯು ಏರೋಸ್ಪೇಸ್ ಉದ್ಯಮದಲ್ಲಿನ ಅಸಾಧಾರಣ ಸಾಧನೆಗಳನ್ನು ಗುರುತಿಸಿ ಮನ್ನಣೆ ನೀಡುತ್ತದೆ. ಈ ವರ್ಷ, ಇದು ಇಸ್ರೋದ ಅಭೂತಪೂರ್ವ ಚಂದ್ರಯಾನ-3 ಯಶಸ್ಸನ್ನು ಆಚರಣಿಸಿದೆ. 

ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಗೆ ಕೇಂದ್ರ ಅನುಮತಿ!

click me!