ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ 'ಜಯಂತಮೂರ್ತಿ' ಹೆಸರಿಟ್ಟ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ

By Santosh NaikFirst Published Mar 22, 2024, 7:31 PM IST
Highlights

ಈ ಹಿಂದೆ 2005 EX296 ಎಂದು ಹೆಸರಿಸಲಾಗಿದ್ದ ಕ್ಷುದ್ರಗ್ರಹವನ್ನು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅಧಿಕೃತವಾಗಿ (215884) ಜಯಂತಮೂರ್ತಿ ಎಂದು ಹೆಸರನ್ನಿಟ್ಟಿದೆ. ಪ್ರೊ. ಜಯಂತ್ ಮೂರ್ತಿ ಅವರು 2021 ರಲ್ಲಿ ನಿವೃತ್ತರಾಗುವ ಮೊದಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ನ ನಿರ್ದೇಶಕರಾಗಿದ್ದರು.
 

ನವದೆಹಲಿ (ಮಾ.22): ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪ್ರೊ. ಜಯಂತ್ ಮೂರ್ತಿ ಅವರ ಹೆಸರನ್ನು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (IAU) ಕ್ಷುದ್ರಗ್ರಹಕ್ಕೆ ಇಟ್ಟಿದೆ. ಐಐಎನ ನಿರ್ದೇಶಕರಾಗಿದ್ದ ವಿಜ್ಞಾನಿ 2021ರಲ್ಲಿ ನಿವೃತ್ತರಾಗಿದ್ದರು. ಈ ಹಿಂದೆ 2005 EX296 ಎಂದು ಹೆಸರಿಸಲಾಗಿದ್ದ ಕ್ಷುದ್ರಗ್ರಹವನ್ನು ಇನ್ನು ಮುಂದೆ ಜಯಂತಮೂರ್ತಿ (215884) ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ ಎಂದು ಐಎಯು ತಿಳಿಸಿದೆ.  ಮಾರ್ಚ್ 18 ರಂದು IAU ತನ್ನ ವರ್ಕಿಂಗ್‌ ಗ್ರೂಪ್‌ ಮೂಲಕ ಸ್ಮಾಲ್‌ ಬಾಡೀಸ್‌ ನೋಮೆನ್‌ಕ್ಲೇಚರ್‌ (ಸಣ್ಣ ವಸ್ತುಗಳ ನಾಮಕರಣ) ಮೂಲಕ ಘೋಷಣೆ ಮಾಡಿತು. ಇದು ಬಾಹ್ಯಾಕಾಶದಲ್ಲಿ ಕಂಡು ಬರುವ ಎಲ್ಲಾ ಸಣ್ಣ ಸಣ್ಣ ವಸ್ತುಗಳನ್ನು ಹೆಸರಿಸುವ ಏಕೈಕ ಪ್ರಾಧಿಕಾರವಾಗಿದೆ. 2021 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ನಿಂದ ನಿವೃತ್ತರಾದ ಜಯಂತಮೂರ್ತಿ ಅವರು, ಜುಲೈ 2018ರಿಂದ ಅಕ್ಟೋಬರ್‌ 2019ರವರೆಗೆ ಐಐಎನ ಹಂಗಾಮಿ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.

ಈ ಕುರಿತಾಗಿ ಪ್ರಕಟಣೆ ನೀಡಿರುವ ಐಐಎ, ಈ ವರ್ಕಿಂಗ್‌ ಗ್ರೂಪ್,‌ ಸೌರವ್ಯೂಹದ ಎಲ್ಲಾ ಕ್ಷುದ್ರಗ್ರಹಗಳು, ಧೂಮಕೇತುಗಳು ಮತ್ತು ಇತರ ಸಣ್ಣ ವಸ್ತುಗಳಿಗೆ ಅಧಿಕೃತ ಹೆಸರುಗಳನ್ನು ಒದಗಿಸಲು ಗೊತ್ತುಪಡಿಸಿದ ಸಂಸ್ಥೆಯಾಗಿದೆ.  ಕ್ಷುದ್ರಗ್ರಹ (215884) ಜಯಂತ್‌ಮೂರ್ತಿಯನ್ನು 2005 ರಲ್ಲಿ ಅಮೆರಿಕದ ಅರಿಝೋನಾದ ಕಿಟ್ ಪೀಕ್ ರಾಷ್ಟ್ರೀಯ ವೀಕ್ಷಣಾಲಯದಲ್ಲಿ ಎಂ.ಡಬ್ಲ್ಯು. ಬ್ಯುಯೆ ಅವರು ಕಂಡುಹಿಡಿದರು.  ಬಾಹ್ಯಾಕಾಶದಲ್ಲಿ ನೇರಳಾತೀತ ಹಿನ್ನೆಲೆಯ ವಿಕಿರಣವನ್ನು ವೀಕ್ಷಿಸಲು ನಾಸಾದ ನ್ಯೂ ಹೊರೈಜನ್ಸ್ ಸೈನ್ಸ್ ತಂಡದಲ್ಲಿ ಅವರು ಮಾಡಿದ ಕೆಲಸವನ್ನು ಗುರುತಿಸಿ ಪ್ರೊ.ಮೂರ್ತಿ ಅವರ ಹೆಸರನ್ನು ಈ ಕ್ಷುದ್ರಗ್ರಹಕ್ಕೆ ಇಡಲಾಗದೆ. ಕ್ಷುದ್ರಗ್ರಹವು ಪ್ರತಿ 3.3 ವರ್ಷಗಳಿಗೊಮ್ಮೆ ಮಂಗಳ ಮತ್ತು ಗುರುಗಳ ನಡುವೆ ಇರುವ ಕಕ್ಷೆಯಲ್ಲಿ ಸೂರ್ಯನ ಸುತ್ತ ಹೋಗುತ್ತದೆ' ಎಂದು ತಿಳಿಸಿದೆ.

ನ್ಯೂ ಹೊರೈಜನ್ಸ್ ಅನ್ನು ನಾಸಾ ಉಡಾವಣೆ ಮಾಡಿದ್ದು, 2015 ರಲ್ಲಿ ಪ್ಲುಟೊದ ಹಿಂದೆ ಸಂಚಾರ ನಡೆಸಿದೆ. ಫ್ಲುಟೋವನ್ನು ಅದ್ಭುತವಾಗಿ ಹಾಗೂ ಅತ್ಯಂತ ವಿವರವಾಗಿ ಅಧ್ಯಯನ ಮಾಡಿದ ನ್ಯೂ ಹೊರೆಜೈನ್ಸ್‌ ಈಗ ಅದರ ಹಿಂದೆ ಹಾದು ಹೋಗಿದೆ.

ಭೂಮಿಯ ಮೊದಲ ಚಿತ್ರ ಸೆರೆಹಿಡಿದ ಇಸ್ರೋದ ಇನ್ಸಾಟ್‌-3ಡಿಎಸ್‌: ಅದ್ಭುತವಾಗಿ ಕಂಡ ಭಾರತ!

ಪ್ರೊ.ಮೂರ್ತಿ ಹೇಳಿದರು, "ಡಾ. ಅಲನ್ ಸ್ಟರ್ನ್ ನೇತೃತ್ವದ ನ್ಯೂ ಹೊರೈಜನ್ಸ್ ತಂಡದಲ್ಲಿ ನನ್ನ ಕೆಲಸವನ್ನು ಗುರುತಿಸಿ, ಕ್ಷುದ್ರಗ್ರಹಕ್ಕೆ ನನ್ನ ಹೆಸರನ್ನು ಇಟ್ಟಿರುವುದರಿಂದ ಸಂತಸಗೊಂಡಿದ್ದೇವೆ. ನಾನು ನ್ಯೂ ಹೊರೈಜನ್ಸ್‌ನಲ್ಲಿ ಆಲಿಸ್‌ನ ಎಕ್ಸ್‌ಟ್ರಾಗ್ಯಾಲಕ್ಟಿಕ್ ಲೈಟ್ ಸೇರಿದಂತೆ ಕಾಸ್ಮಿಕ್ ನೇರಳಾತೀತ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಜಯಂತಮೂರ್ತಿ ತಿಳಿಸಿದ್ದಾರೆ.

ಭೂಮಿ ಚಂದ್ರರ ನಡುವೆ ಚಂದ್ರಯಾನ 4ರ ಸೇತುವೆ

ಇದರೊಂದಿಗೆ ಪ್ರೊಫೆಸರ್‌ ಜಯಂತ ಮೂರ್ತಿ ಅವರು ಐಐಎನ ಹಿಂದಿನ ನಿರ್ದೇಶಕರಾದ ಪ್ರೊಫೆಸರ್‌ ಎಂಕೆ ವೈನು ಬಾಪು ಹಾಗೂ ಪ್ರೊಫೆಸರ್‌ ಜೆಸಿ ಭಟ್ಟಾಚಾರ್ಯ ಅವರ ಸಾಲಿಗೆ ಸೇರಿಸಿದ್ದಾರೆ. ಇವರಿಬ್ಬರ ಹೆಸರನ್ನು 2596 ವೈನು ಬಾಪು (1979 KN) ಹಾಗೂ 8348  ಭಟ್ಟಾಚಾರ್ಯ (1988 BX) ಕ್ಷುದ್ರಗ್ರಹಕ್ಕೆ ಇಡಲಾಗಿದೆ. ಪ್ರೊ. ಮೂರ್ತಿಯವರ ಪ್ರಾಥಮಿಕ ಸಂಶೋಧನಾ ಆಸಕ್ತಿಗಳೆಂದರೆ ಅಂತರತಾರಾ ಮಾಧ್ಯಮ ಮತ್ತು ಧೂಳು, ನೇರಳಾತೀತ ಖಗೋಳವಿಜ್ಞಾನ ಮತ್ತು ಬಾಹ್ಯಾಕಾಶ ಕಾರ್ಯಾಚರಣೆಗಳು. ಅವರು ತಮ್ಮ ನಿವೃತ್ತಿಯ ನಂತರ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದಾರೆ.

We are happy to announce that the asteroid 2005 EX296 has been named as "(215884) Jayantmurthy" by in honour of Prof Jayant Murthy!

He is Honorary Prof & former acting director at IIA. pic.twitter.com/E1k6MytYsY

— IIAstrophysics (@IIABengaluru)

 

 

click me!