ನಾಸಾ ಬಾಹ್ಯಾಕಾಶ ಯಾನಿಗಳ ಪಟ್ಟಿಗೆ ಮತ್ತೋರ್ವ ಭಾರತೀಯ, ರಾಜಾಗೆ ಚಾನ್ಸ್!

By Kannadaprabha NewsFirst Published Jan 12, 2020, 2:28 PM IST
Highlights

ನಾಸಾ ಬಾಹ್ಯಾಕಾಶ ಯಾನಿಗಳ ಪಟ್ಟಿಗೆ ಮತ್ತೋರ್ವ ಭಾರತೀಯ| 2 ವರ್ಷಗಳ ಬಾಹ್ಯಾಕಾಶ ಯಾನ ತರಬೇತಿ ಯಶಸ್ವಿ| ಮುಂದಿನ ಬಾಹ್ಯಾಕಾಶ ಯಾನದ ವೇಳೆ ಅವಕಾಶ

ಹೂಸ್ಟನ್‌[ಜ.12]: ಭವಿಷ್ಯದ ಬಾಹ್ಯಾಕಾಶ ಯಾನಿಗಳನ್ನು ತಯಾರಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸಿದ್ದ 2 ವರ್ಷಗಳ ತರಬೇತಿಯಲ್ಲಿ ಭಾರತೀಯ ಮೂಲಕ ಕರ್ನಲ್‌ ರಾಜಾ ಜಾನ್‌ ವುರ್ಪುತ್ತೂರ್‌ ಚಾರಿ ಸೇರಿದಂತೆ 11 ಜನ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ನಾಸಾದ ಮುಂಬರುವ ಬಾಹ್ಯಾಕಾಶ ಯಾನಕ್ಕೆ ಅವರು ಅರ್ಹತೆ ಪಡೆದುಕೊಂಡಿದ್ದಾರೆ. ಈ ಹಿಂದೆ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್‌ ನಾಸಾದಲ್ಲಿ ಇಂಥ ಅವಕಾಶವನ್ನು ಪಡೆದುಕೊಂಡಿದ್ದರು.

ಬಾಹ್ಯಾಕಾಶ ತರಬೇತಿಗಾಗಿ 2017ರಲ್ಲಿ ನಾಸಾ ಆಹ್ವಾನಕ್ಕೆ ಒಟ್ಟಾರೆ 18 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಪೈಕಿ ಎಲ್ಲ ಪರೀಕ್ಷೆಗಳಲ್ಲೂ ತೇರ್ಗಡೆಯಾಗುವ ಮೂಲಕ ಭಾರತ ಮೂಲದ ರಾಜಾ ಜಾನ್‌ ಚಾರಿ ಅವರು ಆಯ್ಕೆಯಾಗಿದ್ದರು. ಇದೀಗ ಎರಡು ವರ್ಷಗಳ ಬಾಹ್ಯಾಕಾಶ ತರಬೇತಿಯನ್ನು ಪೂರ್ಣಗೊಳಿಸಿರುವ ಚಾರಿ ಅವರು, ಭವಿಷ್ಯದಲ್ಲಿ ಕೈಗೊಳ್ಳುವ ಚಂದ್ರಯಾನ ಅಥವಾ ಮಂಗಳಯಾನದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದುಕೊಂಡಿದ್ದಾರೆ.

ಭೂಮಿಗೆ ಗುರುವಿನಿಂದ ಗಂಡಾಂತರ: ಇದೇನಪ್ಪಾ ಅವಾಂತರ?

ಗಗನಯಾನಿಗಳಿಗೆ ಏನೆಲ್ಲಾ ತರಬೇತಿ:

ಈ ಗಗನಯಾನ ತರಬೇತಿ ಪ್ರಕ್ರಿಯೆಯಲ್ಲಿ ಗಗನಯಾನಿಗಳು ಬಾಹ್ಯಾಕಾಶದಲ್ಲಿ ತಾವು ಕೈಗೊಳ್ಳಬೇಕಿರುವ ಹಾಗೂ ಪಾಲಿಸಬೇಕಿರುವ ಸಲಹೆ-ಸೂಚನೆಗಳು, ಬಾಹ್ಯಾಕಾಶದಲ್ಲಿ ನಡಿಗೆಯ ತರಬೇತಿ, ರೋಬೊಟಿಕ್ಸ್‌, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ವ್ಯವಸ್ಥೆಗಳು, ಟಿ-38 ಜೆಟ್‌ ಪ್ರೊಫಿಷಿಯೆನ್ಸಿ ಹಾಗೂ ರಷ್ಯಾದ ಭಾಷೆಯ ಬಗ್ಗೆ ತರಬೇತಿ ಪಡೆದಿದ್ದಾರೆ.

ಭಾರತದ ರಾಕೇಶ್‌ ಶರ್ಮಾ, ದೇಶದ ಪರವಾಗಿ ಬಾಹ್ಯಾಕಾಶ ಕೈಗೊಂಡ ಏಕೈಯ ಯಾನಿಯಾಗಿದ್ದಾರೆ.

click me!