
ಶಾಂಘೈ[ಜ.12]: ಭೂಮಿಯ ಆಚೆಗೂ ಜೀವಿಗಳು ಇವೆಯೇ ಎಂಬುದುನ್ನು ಕಂಡುಕೊಳ್ಳುವ ನಿಟ್ಟಿನಿಂದ ನಿರ್ಮಿಸಿದ ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್ ಅನ್ನು ಚೀನಾ ಅಧಿಕೃತವಾಗಿ ಉದ್ಘಾಟಿಸಿದೆ.
ಈ ಟೆಲಿಸ್ಕೋಪ್ 5 ಸಾವಿರ ಮೀಟರ್ ಸುತ್ತಳತೆ ಹೊಂದಿದೆ. ಅಂದರೆ ಇದು 30 ಫುಟ್ಬಾಲ್ ಮೈದಾನದಷ್ಟುದೊಡ್ಡದಾಗಿದೆ. ನೈಋುತ್ಯ ಗುಯ್‌ಝೋವ್ ಪ್ರಾಂತ್ಯದ ಗುಡ್ಡಗಾಡು ಪ್ರಾಂತ್ಯದಲ್ಲಿ ಈ ಬೃಹತ್ ಟೆಲಿಸ್ಕೋಪ್ ಅನ್ನು ಸ್ಥಾಪನೆ ಮಾಡಲಾಗಿದೆ. ಈ ಟೆಲಿಸ್ಕೋಪ್ ಚೀನಾದಲ್ಲಿ ‘ಸ್ಕೈ ಐ’ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.
ಸೌರಮಂಡಲಕ್ಕೆ ಅತಿಥಿಯಾಗಿ ಬಂದ ಧೂಮಕೇತು: ಆದರೆ ಎಲ್ಲಿಂದ ಬಂತು?
2016ರಲ್ಲೇ ಈ ಟೆಲಿಸ್ಕೋಪ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ, ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಟೆಲಿಸ್ಕೊಫ್ ಕಾರ್ಯ ಆರಂಭಿಸಲು ಚೀನಾ ಸರ್ಕಾರ ಅನುಮತಿ ನೀಡಿದೆ. ಬಾಹ್ಯಾಕಾಶ ಸಂಶೋಧನೆ, ಗುರುತ್ವ ತರಂಗಗಳ ಪತ್ತೆಗೆ ಈ ಟೆಲಿಸ್ಕೋಪ್ ಬಳಕೆ ಆಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.