ಮೈಸೂರಿನ ಇಡ್ಲಿ, ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!

By Suvarna News  |  First Published Jan 8, 2020, 10:58 AM IST

ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!| ಇಸ್ರೋ ಗಗನಯಾನಿಗಳಿಗಾಗಿ ಮೈಸೂರಿನಲ್ಲಿ ತಯಾರಿ


ನವದೆಹಲಿ[ಜ.08]:  ದಕ್ಷಿಣ ಭಾರತೀಯರ ಜನಪ್ರಿಯ ಉಪಾಹಾರಗಳಾದ ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಹಾಗೂ ತೆಂಗಿನಕಾಯಿ ಚಟ್ನಿ ಕೂಡ ಬಾಹ್ಯಾಕಾಶಕ್ಕೆ ಹೋಗಲಿವೆ.

2022ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೊದಲ ಬಾರಿಗೆ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ. ಭೂ ಕೆಳ ಕಕ್ಷೆಯಲ್ಲಿ 5ರಿಂದ 6 ದಿನಗಳ ಕಾಲ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಇರಲಿದ್ದಾರೆ. ಅವರ ಹಸಿವು ನೀಗಿಸಲೆಂದು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ವಿಶಿಷ್ಟ ಆಹಾರಗಳನ್ನು ತಯಾರಿಸಿದೆ. ಅದರಲ್ಲಿ ಇಡ್ಲಿ- ಸಾಂಬಾರ್‌, ಉಪ್ಪಿಟ್ಟು, ತೆಂಗಿನಕಾಯಿ ಚಟ್ನಿಯೂ ಇದೆ.

Tap to resize

Latest Videos

undefined

ದೇಶದ ಗಗನಯಾನಿಗಳಿಗೆ ಚಿತ್ರದುರ್ಗ ಬಳಿ ತರಬೇತಿ: ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ!

ಈ ಆಹಾರಗಳನ್ನು ಬಿಸಿ ಮಾಡಿಕೊಳ್ಳಲು ಹೀಟರ್‌ಗಳನ್ನು ಕೂಡ ಇಸ್ರೋ ಬಾಹ್ಯಾಕಾಶಕ್ಕೆ ರವಾನಿಸುತ್ತಿದೆ. ಈಗಾಗಲೇ ನಾಲ್ವರು ಗಗನಯಾತ್ರಿಗಳನ್ನು ಇಸ್ರೋ ಆಯ್ಕೆ ಮಾಡಿದ್ದು, ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ಅವರಿಗೆ ತರಬೇತಿ ಪ್ರಾರಂಭವಾಗಲಿದೆ.

click me!