Pinaka-ER: ಹೊಸ ರಾಕೆಟ್ ಲಾಂಚರ್ ಪಿನಾಕಾ ಯಶಸ್ವಿ ಪರೀಕ್ಷೆ, ಭಾರತಕ್ಕೆ ಮತ್ತೊಂದು ಗರಿ

By Suvarna News  |  First Published Dec 14, 2021, 11:25 AM IST

* ಪಿನಾಕಾ ಇಆರ್(Pinaka ER) ಅನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ
* ದಶಕದಿಂದ ಸೇನೆಯ ಸೇವೆಯಲ್ಲಿರುವ ಪಿನಾಕಾದ ಹೊಸ ಆವೃತ್ತಿ ಇದಾಗಿದೆ
* ರಾಜಸ್ಥಾನದ ಪೋಖ್ರಾನದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. 


ರಾಜಸ್ಥಾನ(ಡಿ. 14): ಭಾರತ (India) ಮತ್ತೊಂದು ಹೊಸ ವಿಕ್ರಮ ಸಾಧಿಸಿದ್ದು, ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಮೂಲಕ ಭಾರತ ತನ್ನ ಶಕ್ತಿ, ಸಾಮರ್ಥ್ಯವನ್ನು ಹೊರ ಜಗತ್ತಿಗೆ ತೋರಿಸಿದೆ. ರಕ್ಷಣಾ  ಸಂಸೋಧನಾ ಮತ್ತು ಅಭಿವೃದ್ಧಿ ಸಂಸ್ಧೆ (DRDO) ಅಭಿವೃದ್ಧಿಪಡಿಸಿರುವ ವಿಸ್ತರಿತ ವ್ಯಾಪ್ತಿಯನ್ನು ಹೊಂದಿರುವ ಪಿನಾಕಾ  (Pinaka-ER) ಮಲ್ಟಿ ರಾಕೆಟ್ ಲಾಂಚರ್ ಅನ್ನು ರಾಜಸ್ಥಾನ (Rajasthan)ದ ಪೋಖ್ರಾನ್ (Pokhran) ರೇಂಜ್‌ನಲ್ಲಿ ಡಿಸೆಂಬರ್ 11ರಂದು ಯಶಸ್ವಿಯಾಗಿ ಪರೀಕ್ಷಿಸಿತು. ಈಗ ಯಶಸ್ವಿಯಾಗಿ ಪರೀಕ್ಷೆಯನ್ನು ರೈಸಿರುವ ಪಿನಾಕಾ ಇಆರ್ (Pinaka ER) ಈ ಹಿಂದಿನ ಪಿನಾಕಾ ರಾಕೆಟ್ ಲಾಂಚರ್ ಸಿಸ್ಟಮ್‌ನ ಮುಂದುವರಿಸಿದ ಸುಧಾರಿತ ಆವೃತ್ತಿಯಾಗಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದ ಪಿನಾಕಾ ರಾಕೆಟ್ ಲಾಂಚರ್ ಕಳೆದ ದಶಕದಿಂದ ಭಾರತೀಯ ಸೇನೆಯ ಸೇವೆಯಲ್ಲಿದೆ ಎಂದು ಭಾರತೀಯ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ ಹೇಳಿಕೊಂಡಿದೆ. ಈ ರಾಕೆಟ್ ಲಾಂಚರ್ ಅನ್ನು ಡಿಆರ್‌ಡಿಒ, ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಲ್ಯಾಬೋರೇಟರಿ ಮತ್ತು ಪುಣೆ ಮೂಲದ ಹೈ ಎನರ್ಜಿ ಮಟಿರೀಯಲ್ಸ್ ರಿಸರ್ಚ್ ಲ್ಯಾಬೋರೇಟರಿ ಅಭಿವೃದ್ಧಿಪಡಿಸಿವೆ..ವ್ಯಾಪ್ತಿಯನ್ನು ಹೆಚ್ಚಿಸಲು ಸುಧಾರಿತ ತಂತ್ರಜ್ಞಾನಗಳೊಂದಿಗೆ ಆಧುನಿಕ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಹೊಸ ರಾಕೆಟ್ ಲಾಂಚರ್ ಅನ್ನು ಅಬಿವೃದ್ಧಿಪಡಿಸಲಾಗಿದೆ ಎಂದು ಹೇಳಬಹುದು.

Tap to resize

Latest Videos

undefined

ಸೇನೆಯೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಕಳೆದ ಮೂರು ದಿನಗಳಲ್ಲಿ ಫೀಲ್ಡ್ ಫೈರಿಂಗ್ ರೇಂಜ್‌ಗಳಲ್ಲಿ ಈ ಉದ್ಯಮ-ಉತ್ಪಾದಿತ ರಾಕೆಟ್‌ಗಳ ಕಾರ್ಯಕ್ಷಮತೆ ಸರಣಿ ಮೌಲ್ಯಮಾಪನ ಪ್ರಯೋಗಗಳನ್ನು ನಡೆಸಿದೆ ಎಂದು ರಕ್ಷಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಸ್ತರಿತ ಶ್ರೇಣಿಯ ಪಿನಾಕಾ ರಾಕೆಟ್‌ಗಳನ್ನು ವಿವಿಧ ಸಿಡಿತಲೆ ಸಾಮರ್ಥ್ಯಗಳೊಂದಿಗೆ ವಿವಿಧ ಶ್ರೇಣಿಗಳಲ್ಲಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಎಲ್ಲಾ ಪ್ರಯೋಗದ ಉದ್ದೇಶಗಳನ್ನು ತೃಪ್ತಿಕರವಾಗಿವೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಚಂದ್ರಯಾನ-ನಾಸಾ ಆರ್ಬಿಟರ್‌ ಡಿಕ್ಕಿ ತಪ್ಪಿಸಿದ ಇಸ್ರೋ!

ಮಲ್ಟಿಪಲ್ ರಾಕೆಟ್ ಲಾಂಚರ್ ಆಗಿರುವ ಪಿನಾಕಾವನ್ನು ಭಾರತೀಯ ಸೇನೆಯು ದಶಕದಿಂದಲೂ ಬಳಸುತ್ತಾ ಬಂದಿದೆ. ಈಗ ಹೊಸ ವಿಸ್ತಾರಿತ ಶ್ರೇಣಿಯ ಪಿನಾಕಾವು ಸೇನೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.

ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

2022ರ ಅಂತ್ಯದ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ 'ಗಗನಯಾನ' (Gaganyaan)  ಆರಂಭವಾಗಲಿದ್ದು,  ಈ ಯೋಜನೆಗೂ ಮುನ್ನ ಭಾರತ ಮುಂದಿನ ವರ್ಷ ಎರಡು ಮಾನವರಹಿತ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಅವರು ಗುರುವಾರ ಮಾಹಿತಿ ನೀಡಿದ್ದಾರೆ.

ಬಾಹ್ಯಾಕಾಶ ಯೋಜನೆಗಳ ಕುರಿತು  ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದ ಸಚಿವ ಜಿತೇಂದ್ರ ಸಿಂಗ್  ಈ ಮಾನವ ರಹಿತ ಬಾಹ್ಯಾಕಾಶ ಯಾನದಲ್ಲಿ"ವಾಯುಮಿತ್ರ" ಎಂಬ ಹೆಸರಿನ ರೋಬಾಟ್‌ಗಳನ್ನು ಬಳಸಲಾಗುವುದು. ಇದನ್ನು ಅನುಸರಿಸಿದರೆ ಮುಂದಿನ 2023ರ ಗಗನಯಾನ ಯೋಜನೆಗೆ ಸಹಾಯಕವಾಗಲಿದೆ ಎಂದಿದ್ದಾರೆ.

Moon Mystery House:ಚಂದ್ರನಲ್ಲಿ ವಿಚಿತ್ರ ಮಿಸ್ಟರಿ ಹೌಸ್ ಪತ್ತೆ, ವಿಜ್ಞಾನಿಗಳಿಗೆ ಅಚ್ಚರಿ ತಂದ ಫೋಟೋ!

ಇಸ್ರೋ ಸಂಸ್ಥೆಯ (ISRO) ಮಹತ್ವಾಕಾಂಕ್ಷಿ ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು 2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ (Narendra modi) ಅವರು 2022ರ ವೇಳೆಗೆ ಮಾಡುವುದಾಗಿ ಘೋಷಿಸಿದ್ದರು.  ಈ ಯೋಜನೆಗೆ 2021ರ ಡಿಸೆಂಬರ್‌ನಲ್ಲಿ ಚಾಲನೆ ದೊರೆಯಬೇಕಿತ್ತು, ಬಳಿಕ 2022ರ ಜೂನ್ ಒಳಗೆ ಗಗನಯಾನ ಆರಂಭಗೊಳ್ಳಲಿದೆ ಎನ್ನಲಾಗಿತ್ತು. ಕೋವಿಡ್ ಮಾತ್ರವಲ್ಲದೆ ಒಂದಿಲ್ಲ ಒಂದು ಕಾರಣಕ್ಕೆ ಈ ಯೋಜನೆ ಮುಂದಕ್ಕೆ ಹೋಗುತ್ತಲೇ ಇದೆ. ಕೇವಲ ಗಗನಯಾನ ಮಾತ್ರವಲ್ಲದೇ ಚಂದ್ರಯಾನ-3 ಸೇರಿದಂತೆ ಇಸ್ರೋದ ಬಹಳಷ್ಟು ಯೋಜನೆಗಳೂ ಕೂಡ ಕೊರೋನಾ ಸಾಂಕ್ರಾಮಿಕದಿಂದಾಗಿ ಮುಂದೂಡಲ್ಪಟ್ಟಿವೆ. 

click me!