Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

By Suvarna News  |  First Published Dec 9, 2021, 7:20 PM IST
  • 2022ರ  ಗಗನಯಾನಕ್ಕೂ ಮುನ್ನ ಭಾರತದ ಹೊಸ ಯೋಜನೆ
  • ಎರಡು ಮಾನವರಹಿತ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಭಾರತ
  • ಮಾನವ ರಹಿತ ಮಿಷನ್ ಗಳ ಉಡಾವಣೆಗೆ ವಾಯುಮಿತ್ರ ಎಂದು ನಾಮಕರಣ
     

ನವದೆಹಲಿ(ಡಿ.9): 2022ರ ಅಂತ್ಯದ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ 'ಗಗನಯಾನ' (Gaganyaan)  ಆರಂಭವಾಗಲಿದ್ದು,  ಈ ಯೋಜನೆಗೂ ಮುನ್ನ ಭಾರತ ಮುಂದಿನ ವರ್ಷ ಎರಡು ಮಾನವರಹಿತ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಅವರು ಗುರುವಾರ ಮಾಹಿತಿ ನೀಡಿದ್ದಾರೆ. ಬಾಹ್ಯಾಕಾಶ ಯೋಜನೆಗಳ ಕುರಿತು  ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದ ಸಚಿವ ಜಿತೇಂದ್ರ ಸಿಂಗ್  ಈ ಮಾನವ ರಹಿತ ಬಾಹ್ಯಾಕಾಶ ಯಾನದಲ್ಲಿ"ವಾಯುಮಿತ್ರ" ಎಂಬ ಹೆಸರಿನ ರೋಬಾಟ್‌ಗಳನ್ನು ಬಳಸಲಾಗುವುದು. ಇದನ್ನು ಅನುಸರಿಸಿದರೆ ಮುಂದಿನ 2023ರ ಗಗನಯಾನ ಯೋಜನೆಗೆ ಸಹಾಯಕವಾಗಲಿದೆ ಎಂದಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಾಹ್ಯಾಕಾಶ ಯೋಜನೆಗಳು ವಿಳಂಬವಾಗುತ್ತಿವೆ ಸದ್ಯದ ಮಾಹಿತಿಯಂತೆ 2022ರಲ್ಲಿ ಶುಕ್ರ ಮಿಷನ್, 23ರಲ್ಲಿ ಸೌರ ಮಿಷನ್ ಹಾಗೂ 2030ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆ ಸರಕಾರ ಪಟ್ಟಿಯಲ್ಲಿದೆ. 

Tap to resize

Latest Videos

undefined

ಮುಂದಕ್ಕೆ ಹೋಗುತ್ತಿರುವ ಗಗನಯಾನ ಯೋಜನೆ : ಇಸ್ರೋ ಸಂಸ್ಥೆಯ (ISRO) ಮಹತ್ವಾಕಾಂಕ್ಷಿ ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು 2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ (Narendra modi) ಅವರು 2022ರ ವೇಳೆಗೆ ಮಾಡುವುದಾಗಿ ಘೋಷಿಸಿದ್ದರು.  ಈ ಯೋಜನೆಗೆ 2021ರ ಡಿಸೆಂಬರ್‌ನಲ್ಲಿ ಚಾಲನೆ ದೊರೆಯಬೇಕಿತ್ತು, ಬಳಿಕ 2022ರ ಜೂನ್ ಒಳಗೆ ಗಗನಯಾನ ಆರಂಭಗೊಳ್ಳಲಿದೆ ಎನ್ನಲಾಗಿತ್ತು. ಕೋವಿಡ್ ಮಾತ್ರವಲ್ಲದೆ ಒಂದಿಲ್ಲ ಒಂದು ಕಾರಣಕ್ಕೆ ಈ ಯೋಜನೆ ಮುಂದಕ್ಕೆ ಹೋಗುತ್ತಲೇ ಇದೆ. ಕೇವಲ ಗಗನಯಾನ ಮಾತ್ರವಲ್ಲದೇ ಚಂದ್ರಯಾನ-3 ಸೇರಿದಂತೆ ಇಸ್ರೋದ ಬಹಳಷ್ಟು ಯೋಜನೆಗಳೂ ಕೂಡ ಕೊರೋನಾ ಸಾಂಕ್ರಾಮಿಕದಿಂದಾಗಿ ಮುಂದೂಡಲ್ಪಟ್ಟಿವೆ. 

ISRO Gaganyaan Project : ಪ್ರಧಾನಿಗೆ, ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷರ ಪತ್ರ

ಗಗನಯಾನ ಯೋಜನೆಗೆ (gaganyaan programme) 10,000 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಕನಿಷ್ಟ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಸ್ರೋದ ಈ ಮಹತ್ವಾಕಾಂಕ್ಷೆಯ ಯೋಜನೆ ನಾಲ್ಕು ಮಂದಿ ಗಗನಯಾನಿಗಳು ಆಯ್ಕೆಯಾಗಿದ್ದು, ಇವರೆಲ್ಲರೂ ರಷ್ಯಾದಲ್ಲಿ(Russia) ತಮ್ಮ ತರಬೇತಿಯನ್ನು  ಪೂರ್ಣಗೊಳಿಸಿದ್ದಾರೆ. ರಷ್ಯಾದ ಸ್ಟಾರ್ ಸಿಟಿಯಲ್ಲಿರುವ ಜಿಸಿಟಿಸಿ ಕೇಂದ್ರದಲ್ಲಿ 2020ರ ಫೆಬ್ರವರಿಯಿಂದಲೇ ಇವರಿಗೆ ತರಬೇತಿ ನೀಡಲಾಗಿದ್ದು 2021ರ ಮಾರ್ಚ್‌ನಲ್ಲಿ ಇವರ ತರಬೇತಿ ಪೂರ್ಣಗೊಂಡಿದೆ. ತರಬೇತಿ ಪಡೆದವರಲ್ಲಿ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಹಾಗೂ ಮೂವರು ವಿಂಗ್‌ ಕಮಾಂಡರ್‌ಗಳು ಇದ್ದಾರೆ. ಇವರಿಗೆ ತರಬೇತಿ ನೀಡುವ ಸಂಬಂಧ ಭಾರತ ಹಾಗೂ ರಷ್ಯಾ 2019 ಜೂನ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ರಷ್ಯನ್ ಸ್ಟೇಟ್ ಸ್ಪೇಸ್ ಕೋ ಆಪರೇಷನ್  - ರಾಸ್ಕೋಸ್ಮೋಸ್ ಈ ವಿಚಾರವನ್ನು ಬಹಿರಂಗಪಡಿಸಿತ್ತು.

ದೇಶದ ಗಗನಯಾನಿಗಳ ರಷ್ಯಾ ತರಬೇತಿ ಪೂರ್ಣ!

ಈ ಗಗನಯಾನಿಗಳು(Astronaut) ಭಾರತಕ್ಕೆ ವಾಪಸಾದ ಬಳಿಕ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಮೆಡಿಸಿನ್ , ಪುಣೆಯ ಆರ್ಮಿ ಸ್ಟೋಟ್ಸ್‌ ಇನ್‌ಸ್ಟಿಟ್ಯೂಟ್ ಮತ್ತು ಮುಂಬೈನಲ್ಲಿರುವ  ಇನ್‌ಸ್ಟಿಟ್ಯೂಟ್ ಆಫ್ ನೇವಲ್ ಮೆಡಿಸಿನ್ ನಲ್ಲಿ ತರಬೇತಿ ಪಡೆಯಲಿದ್ದಾರೆ ಎನ್ನಲಾಗಿತ್ತು. 

ಚಂದ್ರಯಾನ-ನಾಸಾ ಆರ್ಬಿಟರ್‌ ಡಿಕ್ಕಿ ತಪ್ಪಿಸಿದ ಇಸ್ರೋ!

ಗಗನಯಾನ ಯೋಜನೆ ಸ್ಥಳಾಂತರಕ್ಕೆ ವಿರೋಧ: ಇಸ್ರೋ (ISRO) ಸಂಸ್ಥೆಯ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಯನ್ನು (Gaganyana project) ಬೆಂಗಳೂರಿನಿಂದ (Bengaluru) ಗುಜರಾತ್‌ಗೆ (Gujarat) ಸ್ಥಳಾಂತರ ಮಾಡುವ ಪ್ರಸ್ತಾಪವಿದ್ದು, ಇದಕ್ಕೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿದೆ. ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮಗೌರವದ ಪ್ರಶ್ನೆ ಎದ್ದಿದೆ. ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿ ಮತ್ತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗಿದೆ.

click me!