Drinkable Seawater ಪ್ರಕೃತಿಯಿಂದ ಸ್ಪೂರ್ತಿ, ಸಮುದ್ರ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಿದ ಭಾರತೀಯ ವಿಜ್ಞಾನಿಗಳ ತಂಡ!

By Suvarna News  |  First Published Dec 19, 2021, 7:55 PM IST
  • ಪ್ರಕೃತಿ ನೀರು ಶುದ್ಧೀಕರಿಸುವ ವಿಧಾನದಲ್ಲೇ ಸಮುದ್ರ ನೀರು ಶುದ್ಧಿ
  • ಭಾರತ, ಆಸ್ಟ್ರೇಲಿಯಾ, ನೆದರ್ಲೆಂಡ್ ವಿಜ್ಞಾನಿಗಳ ಜಂಟಿ ಸಾಧನೆ
  • ಸಮುದ್ರ ನೀರನ್ನು ಅತ್ಯಂತ ಶುದ್ಧಿ ನೀರಾಗಿ ಪರಿವರ್ತನೆ
     

ಚೆನ್ನೈ(ಡಿ.19): ಸಮುದ್ರ ನೀರನ್ನು(seawater) ಕುಡಿಯುವ ನೀರಾಗಿ(Freshwater) ಪರಿವರ್ತಿಸುವ ಹಲವು ಸಂಶೋಧನೆಗಳು ಉತ್ತಮ ಫಲಿತಾಂಶ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಮುದ್ರ ನೀರನ್ನು ಕುಡಿಯುವ ನೀರಾಗಿಸುವ ಶುದ್ಧೀಕರಣ ಘಟಕಗಳು ಇವೆ. ಇದೀಗ ಭಾರತೀಯ ವಿಜ್ಞಾನಿಗಳು(Indian Scientists), ಆಸ್ಟ್ರೇಲಿಯಾ ಹಾಗೂ ನೆದರ್ಲೆಂಡ್ ವಿಜ್ಞಾನಿಗಳು ಜಂಟಿಯಾಗಿ ಸಂಶೋಧನೆ ನಡೆಸಿ ಹೊಸ ವಿಧಾನದ ಮೂಲಕ ನೀರು ಶುದ್ಧೀಕರಿಸಿದ್ದಾರೆ. ಈ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಐಐಟಿ ಮದ್ರಾಸ್ ವಿಜ್ಞಾನಿಗಳು ಸೇರಿದಂತೆ ಮೂರು ದೇಶಗಳ ವಿಜ್ಞಾನಿಗಳ ಸತತ ಸಂಶೋಧನೆಯಿಂದ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ. ವಿಶೇಷ ಅಂದರೆ ಪ್ರಕೃತಿ ಹೇಗೆ ನೀರನ್ನು ಪ್ರಾಕೃತಿಕ ವಿಧಾನದ ಮೂಲಕ(Inspired By Nature) ಶುದ್ದೀಕರಿಸುತ್ತದೆಯೋ ಅದೇ ವಿಧಾನದ ಮೂಲಕ ಸಮುದ್ರ ನೀರನ್ನು ಶುದ್ಧೀಕರಿಸಲು ಸಾಧ್ಯವಾಗಿದೆ. 

Tap to resize

Latest Videos

undefined

Plants Respond to Pain: ಪ್ರಾಣಿಗಳಷ್ಟೇ ಅಲ್ಲ, ನೋವಾದಾಗ ಸಸ್ಯಗಳೂ ಕಿರುಚುತ್ತವೆ ಗೊತ್ತಾ?

ಐಐಟಿ ಮದ್ರಾಸ್, ಆಸ್ಟ್ರೇಲಿಯಾದ(Australia) ಸ್ವಿನ್‌ಬರ್ನ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ, ನೆದರ್ಲೆಂಡ್‌ನ(Netherlands) ಡೆಲ್ಫ್ಟ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ವಿಜ್ಞಾನಿಗಳು ಜಂಟಿಯಾಗಿ ಸಂಶೋಧನೆ ನಡೆಸಿ ಈ ಸಾಧನೆ ಮಾಡಿದ್ದಾರೆ. ಸಮುದ್ರ ನೀರನ್ನು ಅತ್ಯಂತ ಕುಡಿಯುವ ಶುದ್ಧ ಜಲವನ್ನಾಗಿ ಪರಿವರ್ತಿಸಲು ಇಂಗಾಲದ ನ್ಯಾನೋಟ್ಯೂಬ್‌, ಗ್ರ್ಯಾಫಿನ್ ನ್ಯಾನೋಪೋರ್ ಬಳಸಲಾಗಿದೆ. ಸುಧಾರಿತ ಇಂಗಾಲವಾದ ಗ್ರಾಫಿಟಿಕ್‌ನ್ನು ಟ್ಯೂಬ್ ರೀತಿ ರಚಿಸಲಾಗಿದೆ. ಇನ್ನು ನೀರು ಹರಿದು ಹೋಗಲು ಮರಳು ಹಾಗೂ ಅಕ್ವಾಪೊರಿನ್‌ನಿಂದ ಗಡಿಯಾರದಾಕಾರದಲ್ಲಿ ರಚನೆ ಮಾಡಲಾಗಿದೆ. ಇಲ್ಲಿಂದ ಹಾದು ಹೋಗುವ ಸಮುದ್ರ ನೀರು ಶಂಕುವಿನಾಕಾರದ ಮರಳಿನಿಂದ ರಚಿಸಿದ ಒಳಹರಿವನ್ನು ನಿರ್ಮಿಸಿದ್ದಾರೆ. 

ವಿಜ್ಞಾನಿಗಳ ಈ ರಚನೆಯ ಮೂಲಕ ನೀರು ಹಾದು ಹೋಗುವುದರಿಂದ ನೀರಿನಿಂದ ಲವಣಗಳನ್ನು ಬೇರ್ಪಡಿಸಲು ನೆರವಾಗುತ್ತದೆ. ಕಾರ್ಬನ್ ನ್ಯಾನೋಮೆಟಿರಿಯಲ್ ಆಧಾರಿತ ಪೊರೆಗಳನ್ನು ನೀರು ಹಾದು ಹೋಗಲಿದೆ. ಇದರಿಂದ ನೀರಿನಲ್ಲಿ ಮಿಶ್ರಿತಗೊಂಡಿರುವ ಉಪ್ಪು ಹಾಗೂ ಲವಣ ಬೇರ್ಪಡಲಿದೆ. ಈ ಮೂಲಕ ಶುದ್ಧ ನೀರು ಸಿಗಲಿದೆ. ಪ್ರಕೃತಿಯಿಂದ ಸ್ಪೂರ್ತಿ ಪಡೆದು ಅದೇ ವಿಧಾನದಲ್ಲಿ ನೀರು ಶುದ್ಧೀಕರಿಸುವ ಸಂಶೋಧನೆ ಮಾಡಲಾಗಿದೆ.

Kadison–Singer Problem: 1959ರ ಗಣಿತ ಸಮಸ್ಯೆ ಪರಿಹರಿಸಿದ ಭಾರತೀಯ ಮೂಲದ ಅಮೆರಿಕನ್ ನಿಖಿಲ್ ಶ್ರೀವಾಸ್ತವ್!

ಸಂಶೋಧನಾ ತಂಡದ ನಾಯಕರಾಗಿದ್ದ ಮದ್ರಾಸ್ ಐಐಟಿ ಪ್ರೋಫೆಸರ್ ಸರಿತ್ ಪಿ ಸಾಥಿಯನ್ ಈ ಸಂಶೋಧನೆ ಕುರಿತು ಸಂತ ಹಂಚಿಕೊಂಡಿದ್ದಾರೆ. ನೀರನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಅತ್ಯಂತ ಪರಿಣಾಮಕಾರಿಯಾಗಿ ನೀರನ್ನು ಶುದ್ಧೀಕರಿಸುವ ವಿಧಾನವನ್ನು ಸಂಶೋಧಿಸಿದ್ದೇವೆ ಎಂದಿದ್ದಾರೆ.

ಸಂಶೋಧನಾ ತಂಡದಲ್ಲಿ ಐಐಟಿ ಮದ್ರಾಸ್‌ನಿಂದ ವಿಷ್ಣು ಪ್ರಸಾದ್ ಕುರುಪತ್, ಸ್ಪಿನ್‌ಬರ್ನ್ ವಿಶ್ವವಿದ್ಯಾಲಯದಿಂದ ಡಾ.ಶ್ರೀಧರ್ ಕುಮಾರ್ ಕನ್ನಮ್, ಡೆಲ್ಫ್ಟ್ ವಿಶ್ವವಿದ್ಯಾಲಯಿಂದ ಡಾ. ರೆಮ್ಕೋ ಹಾರ್ಟ್‌ಕ್ಯಾಂಪ್ ಈ ಸಂಶೋಧನೆ ನಡೆಸಿದ್ದಾರೆ. ಈ ವಿಧಾನದಲ್ಲಿ ಸಂಸ್ಕರಿಸಿದ ಕುಡಿಯುವ ನೀರನ್ನು ಮತ್ತೆ ಪರೀಕ್ಷೆ ಮಾಡಲಾಗಿದೆ. ಅತ್ಯಂತ ಶುದ್ಧನೀರಾಗಿ ಪರಿವರ್ತನೆಯಾಗಿದೆ. ಕುಡಿಯಲು ಯೋಗ್ಯವಾಗಿರುವ ಅತ್ಯಂತ ಶುದ್ಧನೀರನ್ನು ಸಂಸ್ಕರಿಸಿದ ಹೆಗ್ಗಳಿಕೆಗೆ ಈ ವಿಜ್ಞಾನಿಗಳ ತಂಡ ಪಾತ್ರವಾಗಿದೆ. 

ಹಲವು ನಗರಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಾಣುತ್ತಿದೆ. ಪ್ರಾಕೃತಿಕ ವಿಕೋಪಗಳು, ಹವಾಮಾನ ಬದಲಾವಣೆ, ಗ್ಲೋಬಲ್ ವಾರ್ಮಿಂಗ್ ಸೇರಿದಂತೆ ಹಲವು ಸಮಸ್ಯೆಗಳು ವಿಶ್ವವನ್ನೇ ಕಾಡುತ್ತಿದೆ. ಕ್ಲೈಮೇಟ್ ಚೇಂಜ್‌ನಿಂದ ಎದ್ದಿರುವ ಕುಡಿಯುವ ನೀರಿನ ಹಾಹಾಕಾರಕ್ಕೆ ಹೊಸ ಸಂಶೋಧನೆ ಉತ್ತರವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ಬೆಂಗಳೂರು, ಚೆನ್ನೈ, ಮುಂಬೈ ಸೇರಿದಂತೆ ಭಾರತದ ಹಲವು ನಗರಗಳು ಪ್ರತಿ ವರ್ಷ ಎಪ್ರಿಲ್ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಹಲವು ಜಿಲ್ಲೆಗಳಲ್ಲಿ ಇವೆ. ಈ ಸಮಸ್ಯೆ ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನದಿ ಜೋಡಣೆ ಯೋಜನೆ, ನದಿ ತಿರುವು ಯೋಜನೆ, ಕಾಲುವೆ ಮೂಲಕ ನೀರು ಪೂರೈಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ಸಮುದ್ರದಿಂದ ಕುಡಿಯುವ ನೀರನ್ನು ಶುದ್ಧೀಕರಿಸುವ ಈ ವಿಧಾನ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗುವ ಸಾಧ್ಯತೆ ಗೋಚರಿಸುತ್ತಿದೆ.

click me!