Water Discovered in Mars: ಮಂಗಳನ ವ್ಯಾಲೆಸ್ ಮ್ಯಾರಿನೆರಿಸ್‌ ಕಣಿವೆಯಲ್ಲಿ ಪತ್ತೆಯಾಯಿತು ಜೀವಜಲ!

By Suvarna News  |  First Published Dec 18, 2021, 1:19 PM IST

*ಮಂಗಳನ ಕಣಿವೆಯಲ್ಲಿ ಬೃಹತ್‌ ಗಾತ್ರದ ನೀರಿನ ಮೂಲ
*ಜೀವಜಲ ಪತ್ತೆ ಮಾಡಿದ Roscosmos ExoMars
*ನೆದರ್ಲ್ಯಾಂಡ್ಸ್‌ ದೇಶದ ಗಾತ್ರದಷ್ಟಿರುವ ಪ್ರದೇಶ
 


Tech Desk: 2016 ರಲ್ಲಿ ಉಡಾವಣೆ ಮಾಡಲಾಗಿದ್ದ ಮಾರ್ಸ್ ಆರ್ಬಿಟರ್ ( Mars orbite-ಉಪಗ್ರಹ) ಮಂಗಳನ ಕಣಿವೆಯ ವ್ಯವಸ್ಥೆಯಲ್ಲಿ (Canyon System) ವ್ಯಾಲೆಸ್ ಮ್ಯಾರಿನೆರಿಸ್ ಎಂದು ಕರೆಯಲ್ಪಡು ಪ್ರದೇಶದಲ್ಲಿ ನೀರನ್ನು ಗುರುತಿಸಿದೆ. ಕಣಿವೆಯ ವ್ಯವಸ್ಥೆಯು ಸೌರವ್ಯೂಹದಲ್ಲಿ ಅತಿ ದೊಡ್ಡದಾಗಿದ್ದು ಮತ್ತು ಭೂಮಿಯ ಗ್ರ್ಯಾಂಡ್ ಕಣಿವೆಗಿಂತ (Grand Canyon) ಸುಮಾರು ಹತ್ತು ಪಟ್ಟು ಹೆಚ್ಚು ಮತ್ತು ಐದು ಪಟ್ಟು ಆಳವಾಗಿದೆ. Roscosmos ExoMars- ಟ್ರೇಸ್ ಗ್ಯಾಸ್ ಆರ್ಬಿಟರ್ (TGO- ಟಿಜಿವೋ) ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ರಷ್ಯಾದ Roscosmos ಏಜೆನ್ಸಿಯ ಜಂಟಿ ಕಾರ್ಯಾಚರಣೆಯಾಗಿದೆ.

ಟ್ರೇಸ್ ಗ್ಯಾಸ್ ಆರ್ಬಿಟರ್‌ನ ಫೈನ್ ರೆಸಲ್ಯೂಶನ್ ಎಪಿಥರ್ಮಲ್ ನ್ಯೂಟ್ರಾನ್ ಡಿಟೆಕ್ಟರ್ (FREND) ಉಪಕರಣವನ್ನು ಬಳಸಿಕೊಂಡು ನೀರನ್ನು ಗುರುತಿಸಲಾಗಿದೆ, ಇದು ಕೆಂಪು ಗ್ರಹದ ಮೇಲ್ಮೈಯಲ್ಲಿ ಹೈಡ್ರೋಜನ್ ಅನ್ನು ಪತ್ತೆ ಮಾಡಲು ಸಹಾಯ ಮಾಡುವ ಉಪಕರಣವಾಗಿದೆ. 

Tap to resize

Latest Videos

undefined

ಧೂಳಿನ ಪದರದ  ಒಂದು ಮೀಟರ್ ಆಳಕ್ಕೆ ನೋಡಬಹುದು!

"ಟಿಜಿವೋ ಬಳಸಿ  ನಾವು ಈ ಧೂಳಿನ ಪದರದ  ಒಂದು ಮೀಟರ್ ಆಳಕ್ಕೆ ನೋಡಬಹುದು ಮತ್ತು ಮಂಗಳದ ಮೇಲ್ಮೈ ಕೆಳಗೆ ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನು ಪತ್ತೆ ಮಾಡಬಹುದು. ಮುಖ್ಯವಾಗಿ, ಹಿಂದಿನ ಉಪಕರಣಗಳಿಂದ ಕಂಡುಹಿಡಿಯಲಾಗದ ಜಲ-ಸಮೃದ್ಧ 'ಓಯಸ್'ಗಳನ್ನು ಪತ್ತೆ ಮಾಡಬಹುದು," ಎಂದು . ರಷ್ಯಾದ ಮಾಸ್ಕೋದಲ್ಲಿರುವ ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಇಗೊರ್ ಮಿಟ್ರೊಫಾನೊವ್ (Igor Mitrofanov) ಹೇಳಿದ್ದಾರೆ.

ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ನೀರು!

ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್‌ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹ-ಲೇಖಕ (Co-Author) ಅಲೆಕ್ಸಿ ಮಲಖೋವ್ ( Alexey Malakhov) ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿದ್ದಾರೆ. “ವ್ಯಾಲೆಸ್ ಮರಿನೆರಿಸ್‌ನ ಕೇಂದ್ರ ಭಾಗವು ನೀರಿನಿಂದ ತುಂಬಿರುವುದನ್ನು ನಾವು ಕಂಡುಕೊಂಡಿದ್ದೇವೆ - ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ನೀರು ಇಲ್ಲಿದೆ. ಇದು ಭೂಮಿಯ ಪರ್ಮಾಫ್ರಾಸ್ಟ್ ಪ್ರದೇಶಗಳಂತೆಯೇ (ಭೂಮಿಯ ಮೇಲ್ಮೈ ಮೇಲೆ ಅಥವಾ ಅಡಿಯಲ್ಲಿ ಶಾಶ್ವತವಾಗಿ ಹೆಪ್ಪುಗಟ್ಟಿದ ಪದರ) ಇರುತ್ತದೆ, ಅಲ್ಲಿ ನೀರಿನ ಮಂಜುಗಡ್ಡೆಯು ನಿರಂತರ ಕಡಿಮೆ ತಾಪಮಾನದ ಕಾರಣದಿಂದಾಗಿ ಒಣ ಮಣ್ಣಿನ ಅಡಿಯಲ್ಲಿ ಶಾಶ್ವತವಾಗಿ ಇರುತ್ತದೆ" ಎಂದು ಹೇಳಿದ್ದಾರೆ.

 

Breaking news: I've spotted hidden – either ice or water-rich minerals 🤔 – in ’ Grand Canyon! ❄️💧🔴

The reservoir is large, not too deep below ground, & could be easily exploitable for future explorers 🤩

Read on: https://t.co/lIAEuz2tNW pic.twitter.com/j1jwSCJebq

— ExoMars orbiter (@ESA_TGO)

 

ನೆದರ್ಲ್ಯಾಂಡ್ಸ್‌ ದೇಶದ ಗಾತ್ರದಷ್ಟಿರುವ ಪ್ರದೇಶ!

ವ್ಯಾಲೆಸ್ ಮರಿನೆರಿಸ್‌ನ ಮಧ್ಯಧ ಪ್ರದೇಶದಲ್ಲಿ ನೆಲೆಗೊಂಡಿರುವ ಕ್ಯಾಂಡರ್ ಚೋಸ್‌ನಲ್ಲಿ ಅಸಾಮಾನ್ಯ ಪ್ರಮಾಣದ ಹೈಡ್ರೋಜನ್ ಇದೆ ಎಂದು ಡಿಟೆಕ್ಟರ್ ತೋರಿಸಿದೆ. ಸುಮಾರು 40 ಪ್ರತಿಶತದಷ್ಟು ಮೇಲ್ಮೈ ವಸ್ತುವಿನ ಪ್ರದೇಶವು ನೀರಿರುವಂತೆ ಕಾಣುತ್ತದೆ. ಜತೆಗೆ ಜಲ-ಸಮೃದ್ಧ ಪ್ರದೇಶವು ನೆದರ್ಲ್ಯಾಂಡ್ಸ್‌ ದೇಶದ ಗಾತ್ರದಷ್ಟಿದೆ ಎಂದು ತಂಡವು ತಿಳಿಸಿದೆ. 

ಒಂದು ಕಾಲದಲ್ಲಿ ಸರೋವರವಾಗಿದ್ದ ಕೆಂಪು ಗೃಹ!

ಅಕ್ಟೋಬರ್‌ನಲ್ಲಿ ಸೈನ್ಸ್‌ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ ಮಂಗಳನ ಜೆಜೆರೊ ಕುಳಿಯು ಒಂದು ಕಾಲದಲ್ಲಿ ಸರೋವರವಾಗಿತ್ತು ಎಂದು ಹೇಳಲಾಗಿದೆ. ನಾಸಾದ ಪರ್ಸೆವೆರೆನ್ಸ್ ರೋವರ್ (Perseverance Rover) ಕಳುಹಿಸಿದ ಚಿತ್ರಗಳು ಈ ಆವಿಷ್ಕಾರಕ್ಕೆ ಸಹಾಯ ಮಾಡಿವೆ. ಕಳೆದ ವರ್ಷ, ಮತ್ತೊಂದು ಸಂಶೋಧನಾ ಪ್ರಬಂಧವು ಕೆಂಪು ಗ್ರಹದ ದಕ್ಷಿಣ ಧ್ರುವದಲ್ಲಿ ಮೂರು ಭೂಗತ ನೀರಿನ ಸರೋವರಗಳ ಉಪಸ್ಥಿತಿಯನ್ನು ತೋರಿಸಿದ್ದವು.

ಮಂಗಳನ ಅಧ್ಯಯನ ಅತ್ಯಗತ್ಯ!

"ಈಗಿನ ಮಂಗಳದಲ್ಲಿ ನೀರು ಹೇಗೆ ಮತ್ತು ಎಲ್ಲಿ ಅಸ್ತಿತ್ವದಲ್ಲಿದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳುವುದು ಹಾಗೂ ಒಂದು ಕಾಲದಲ್ಲಿ  ಹೇರಳವಾಗಿರುವ ನೀರಿಗೆ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಇದು ವಾಸಯೋಗ್ಯ ಪರಿಸರಗಳು, ಹಿಂದಿನ ಜೀವನದ ಸಂಭವನೀಯ ಚಿಹ್ನೆಗಳು ಮತ್ತು ಮಂಗಳದ ಆರಂಭಿಕ ದಿನಗಳಲ್ಲಿನ ಸಾವಯವ ವಸ್ತುಗಳ ಹುಡುಕಾಟಕ್ಕೆ ಸಹಾಯ ಮಾಡುತ್ತದೆ." ಎಂದು ಎಕ್ಸೋಮಾರ್ಸ್ ಟ್ರೇಸ್ ಗ್ಯಾಸ್ ಆರ್ಬಿಟರ್ ಯೋಜನೆಯ ವಿಜ್ಞಾನಿ ಕಾಲಿನ್ ವಿಲ್ಸನ್ ಹೇಳಿದ್ದಾರೆ.

ಇದನ್ನೂ ಓದಿ:

1) Plants Respond to Pain: ಪ್ರಾಣಿಗಳಷ್ಟೇ ಅಲ್ಲ, ನೋವಾದಾಗ ಸಸ್ಯಗಳೂ ಕಿರುಚುತ್ತವೆ ಗೊತ್ತಾ?

2) Parker Solar Probe ಸೂರ್ಯನಿಗೆ ಪಾರ್ಕರ್‌ ಮೊದಲ ಚುಂಬನ, ಮೊಟ್ಟಮೊದಲ ಬಾರಿ ಸೂರ್ಯನ ಮುಟ್ಟಿದ ನೌಕೆ

3) Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

click me!