ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಇಸ್ರೋ ಗಗನಯಾತ್ರಿ ಶುಭಾನ್ಷು ಶುಕ್ಲಾ

Published : Jan 31, 2025, 08:11 AM IST
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಇಸ್ರೋ ಗಗನಯಾತ್ರಿ ಶುಭಾನ್ಷು ಶುಕ್ಲಾ

ಸಾರಾಂಶ

ಮುಂದಿನ ಮಾರ್ಚ್‌- ಮೇ ತಿಂಗಳಲ್ಲಿ ನಡೆಯಲಿರುವ ಆ್ಯಕ್ಸಿಯಾಂ- 4 ಮಿಷನ್‌ನಲ್ಲಿ ಇಸ್ರೋದ ಗಗನಯಾತ್ರಿ, ಭಾರತೀಯ ವಾಯುಪಡೆಯ ಪೈಲಟ್‌ ಶುಭಾನ್ಷು ಶುಕ್ಲಾ ಅವರನ್ನು ಕರೆದೊಯ್ಯಲಾಗುವುದು. 

ವಾಷಿಂಗ್ಟನ್‌: ಮುಂದಿನ ಮಾರ್ಚ್‌- ಮೇ ತಿಂಗಳಲ್ಲಿ ನಡೆಯಲಿರುವ ಆ್ಯಕ್ಸಿಯಾಂ- 4 ಮಿಷನ್‌ನಲ್ಲಿ ಇಸ್ರೋದ ಗಗನಯಾತ್ರಿ, ಭಾರತೀಯ ವಾಯುಪಡೆಯ ಪೈಲಟ್‌ ಶುಭಾನ್ಷು ಶುಕ್ಲಾ ಅವರನ್ನು ಕರೆದೊಯ್ಯುವ ಕುರಿತು ಗುರುವಾರ ಅಧಿಕೃತ ಘೋಷಣೆ ಹೊರಬಿದ್ದಿದೆ. ಶುಕ್ಲಾ ಸೇರಿದಂತೆ ನಾಲ್ವರು ಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸ್ವಾಗತಿಸುವ ಕುರಿತು ನಾಸಾ ಮತ್ತು ಬಾಹ್ಯಾಕಾಶ ಕೇಂದ್ರದ ಪಾಲುದಾರರ ದೇಶಗಳು ಸಮ್ಮತಿ ವ್ಯಕ್ತಪಡಿಸಿ ಪ್ರಕಟಣೆ ನೀಡಿವೆ.

ಇದರೊಂದಿಗೆ ಇದೇ ಮೊದಲ ಬಾರಿಗೆ ಭಾರತದ ಗಗನಯಾತ್ರಿಯೊಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಲಭ್ಯವಾದಂತೆ ಆಗಲಿದೆ. ಭಾರತೀಯ ಗಗನಯಾತ್ರಿಯೊಬ್ಬರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯುವ ಬಗ್ಗೆ ಇಸ್ರೋ ಮತ್ತು ನಾಸಾ ಒಪ್ಪಂದ ಮಾಡಿಕೊಂಡಿದ್ದವು. ಈ ಬಗ್ಗೆ ಕಳೆದ ವರ್ಷ ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಘೋಷಣೆ ಮಾಡಲಾಗಿತ್ತು. ಈ ಯೋಜನೆಗೆ ಇಸ್ರೋದ ಬಾಹ್ಯಾಕಾಶ ಯಾನಿಗಳಾದ, ಭಾರತೀಯ ವಾಯುಪಡೆಗೆ ಸೇರಿದ ಶುಭಾನ್ಷಾ ಶುಕ್ಲಾ ಮತ್ತು ಪ್ರಶಾಂತ್‌ ನಾಯರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಅದರ ಭಾಗವಾಗಿ ಇದೀಗ ಶುಭಾನ್ಷು ಶುಕ್ಲಾ ಅವರನ್ನು ಸೇರಿದಂತೆ ನಾಲ್ವರನ್ನು ಹೊತ್ತ ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ರಾಕೆಟ್‌ ಮುಂದಿನ ಮಾರ್ಚ್‌- ಮೇ ತಿಂಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಕೇಂದ್ರಕ್ಕೆ ತೆರಳಲಿದೆ. ನಾಲ್ವರೂ ಯಾನಿಗಳು ಒಟ್ಟು 18 ದಿನಗಳ ಕಾಲ ಅಲ್ಲೇ ಇದ್ದು ವಿವಿಧ ರೀತಿಯ ಸಂಶೋಧನೆ ನಡೆಸಲಿದ್ದಾರೆ. 

ಇದನ್ನೂ ಓದಿ: ಬಾಬಾ ವಾಂಗಾ ಭವಿಷ್ಯ, ಇಸ್ರೋ ಅಧ್ಯಕ್ಷರ ಮಾತು ನಿಜವಾಯ್ತು! ಹಾರುವ ತಟ್ಟೆಯಲ್ಲಿ ಜೀವಂತ ಏಲಿಯನ್? ವಿಡಿಯೋ ವೈರಲ್​

ಈ ಉಡ್ಡಯನಕ್ಕೆ ಅಗತ್ಯವಾದ ತರಬೇತಿಯನ್ನು ಶುಕ್ಲಾ ಈಗಾಗಲೇ ಅಮೆರಿಕದಲ್ಲಿ ಪಡೆದುಕೊಂಡಿದ್ದಾರೆ. ಆ್ಯಕ್ಸಿಯಾಮ್‌ ಎನ್ನುವುದು ಖಾಸಗಿ ಕಂಪನಿಯಾಗಿದ್ದು ಅದು ಸ್ಪೇಸ್‌ಎಕ್ಸ್‌ ನೌಕೆಯ ಮೂಲಕ ನಾಲ್ವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುತ್ತಿದೆ.

ಬಾಹ್ಯಾಕಾಶಕ್ಕೆ ತೆರಳಿದ್ದ ರಾಕೇಶ್‌ ಶರ್ಮಾ
1984ರಲ್ಲಿ ಭಾರತೀಯ ವಾಯುಪಡೆಯ ಪೈಲಟ್‌ ಆಗಿದ್ದ ರಾಕೇಶ್‌ ಶರ್ಮಾ, ರಷ್ಯಾದ ಸೂಯೆಜ್‌ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದರು.

ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 7 ತಿಂಗಳ ವಾಸ, ನಡೆಯೋದನ್ನೇ ಮರೆತುಹೋದ ಸುನೀತಾ ವಿಲಿಯಮ್ಸ್‌

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಚಳಿಗಾಲದಲ್ಲಿ ಹೆಂಡ್ತಿ ಕಾಲು ಕೋಲ್ಡ್​ ಆಗಿದ್ರೆ ಗಂಡನ ಕಾಲು ಬೆಚ್ಚಗಿರೋದು ಯಾಕೆ? ಕಾರಣ ಇಲ್ಲಿದೆ
ಇಸ್ರೋ ಹೊಸ ಮೈಲುಗಲ್ಲು- 6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ