Deep Water Bridge Building: ನೀರಿದ್ದರೂ ನದಿಗೆ ಎಂಜಿನೀಯರ್ಸ್ ಬ್ರಿಡ್ಜ್ ಹೇಗೆ ಕಟ್ತಾರೆ?

Published : Oct 23, 2025, 01:43 PM IST
Bridge

ಸಾರಾಂಶ

Bridge Construction : ಭೋರ್ಗರೆವ ನದಿ ಮೇಲೆ ನಾವು ಸುಲಭವಾಗಿ ಓಡಾಟ ನಡೆಸ್ತೇವೆ ಅಂದ್ರೆ ಅದಕ್ಕೆ ಕಾರಣ ಸೇತುವೆ. ಬಲವಾದ ಸೇತುವೆ ನಿರ್ಮಾಣ ಹೇಗಾಗುತ್ತೆ? ಹೆಚ್ಚು ವರ್ಷ ಬಾಳಿಕೆ ಬರಲು ಏನೆಲ್ಲ ಕೆಲ್ಸ ನಡೆಯುತ್ತೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಡಿಜಿಟಲ್ ಜಗತ್ತಿನಲ್ಲಿ ನಾವು ಬದುಕ್ತಿದ್ದೇವೆ. ಆದ್ರೆ ಕೆಲವೊಂದು ಸಾಮಾನ್ಯ ವಿಷ್ಯದ ಜ್ಞಾನ ನಮಗೆ ಇರೋದಿಲ್ಲ. ಅನೇಕಾನೇಕ ವರ್ಷಗಳಿಂದ ನಾವು ಬ್ರಿಡ್ಜ್ ಮೇಲೆ ಓಡಾಟ ನಡೆಸ್ತೇವೆ. ಒಂದ್ಕಡೆಯಿಂದ ಇನ್ನೊಂದ್ಕಡೆ ಸಂಚಾರಕ್ಕೆ ಸೇತುವೆ ಬಹಳ ಅಗತ್ಯ. ನೀರಿನಲ್ಲಿ ಹೊಂಡ ತೆಗೆಯೋದು ಸುಲಭದ ಕೆಲ್ಸ ಅಲ್ಲ. ನದಿ ಮಧ್ಯೆ ಬ್ರಿಡ್ಜ್ ನಿರ್ಮಾಣಕ್ಕೆ ಅಡಿಪಾಯ ಹಾಕ್ಬೇಕು, ಕಂಬಗಳನ್ನು ಏರಿಸ್ಬೇಕು. ಅದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬರೋದು ಸಹಜ. ನೋಡೋಕೆ ಸಿಂಪಲ್ ಆಗಿದ್ರೂ ನಿರ್ಮಾಣದಲ್ಲಿ ಅನೇಕ ಸವಾಲುಗಳಿವೆ. ತಿಂಗಳಾಯ್ತು, ಆರು ತಿಂಗಳಾಯ್ತು ಇನ್ನೂ ಬ್ರಿಡ್ಜ್ (Bridge )ನಿರ್ಮಾಣ ಆಗಿಲ್ಲ ಅಂತ ನಾವು ಬೈತೇವೆ. ನಿರ್ಮಾಣದಲ್ಲಿ ಎಷ್ಟೆಲ್ಲ ಸಮಸ್ಯೆಗಳು ಎದುರಾಗುತ್ವೆ, ಹೇಗೆಲ್ಲ ನಿರ್ಮಾಣ ನಡೆಯುತ್ತೆ ಎಂಬುದಕ್ಕೆ ಉತ್ತರ ಇಲ್ಲಿದೆ.

ನದಿಗೆ ಸೇತುಗೆ ಕಟ್ಟೋದು ಹೇಗೆ? :

ವೇಗವಾಗಿ ಹರಿಯುವ ನದಿಯ ಮಧ್ಯದಲ್ಲಿ ಕಂಬಗಳನ್ನು ನಿರ್ಮಿಸೋದು ಅತ್ಯಂತ ಅಪಾಯಕಾರಿ ಎಂಜಿನಿಯರಿಂಗ್ ಕಾರ್ಯಗಳಲ್ಲಿ ಒಂದು. ಇದಕ್ಕೆ ನಿಖರತೆ, ಧೈರ್ಯ ಮತ್ತು ಸುಧಾರಿತ ತಂತ್ರಜ್ಞಾನದ ಅಗತ್ಯವಿದೆ. ಒಂದು ಸಣ್ಣ ತಪ್ಪು ತಿಂಗಳುಗಳ ಕಠಿಣ ಪರಿಶ್ರಮವನ್ನು ಹಾಳುಮಾಡಬಹುದು. ಸೇತುವೆ ನಿರ್ಮಾಣಕ್ಕೆ ಮುನ್ನ ಎಂಜಿನಿಯರ್ಗಳು ನದಿಯನ್ನು ಸಂಪೂರ್ಣವಾಗಿ ಸಮೀಕ್ಷೆ ಮಾಡ್ತಾರೆ. ನೀರಿನ ಆಳ, ಮಣ್ಣಿನ ಬಲ ಮತ್ತು ಪ್ರವಾಹದ ವೇಗವನ್ನು ಅಳೆಯುತ್ತಾರೆ. ಈ ಅಂಶಗಳ ಆಧಾರದ ಮೇಲೆ, ಅಗತ್ಯವಿರುವ ಕಂಬಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತೆ. ಸೇತುವೆ ಹೇಗೆ ನಿರ್ಮಾಣ ಆಗ್ಬೇಕು, ಏನೆಲ್ಲ ಅಗತ್ಯವಿದೆ ಎಂಬುದನ್ನು ತೀರ್ಮಾನಿಸಿ ಸೇತುವೆ ವಿನ್ಯಾಸಗೊಳಿಸಲಾಗುತ್ತೆ.

ಇನ್ನು 150 ವರ್ಷ ಬದುಕೋದು ಕಟ್ಟುಕತೆಯಲ್ಲ: ರಷ್ಯಾ ವಿಜ್ಞಾನಿ

ನದಿ ಸೇತುವೆಗಳ ಅಡಿಪಾಯವನ್ನು ನಿರ್ಮಿಸುವಲ್ಲಿ ಕಾಫರ್ಡ್ಯಾಮ್ಗಳು ಪ್ರಮುಖ ಪಾತ್ರವಹಿಸುತ್ತವೆ. ಇದು ತಾತ್ಕಾಲಿಕ ಜಲನಿರೋಧಕ ರಚನೆಯಾಗಿದ್ದು ಅದು ನಿರ್ಮಾಣಕ್ಕಾಗಿ ಒಣ ಪ್ರದೇಶವನ್ನು ಸೃಷ್ಟಿಸುತ್ತದೆ. ಕಾಫರ್ಡ್ಯಾಮ್ಗಳನ್ನು ಶೀಟ್ ಪೈಲ್ಗಳು, 10-20 ಮೀಟರ್ ಉದ್ದದ ಉಕ್ಕಿನ ಹಾಳೆಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಹೈಡ್ರಾಲಿಕ್ ಸುತ್ತಿಗೆಗಳು ಅಥವಾ ವೈಬ್ರೇಟರ್ಗಳನ್ನು ಬಳಸಿ ನದಿಪಾತ್ರಕ್ಕೆ ಸೇರಿಸಲಾಗುತ್ತೆ. ಈ ಹಾಳೆಗಳನ್ನು ಒಟ್ಟಿಗೆ ಜೋಡಿಸಿ ವೃತ್ತಾಕಾರದ ಅಥವಾ ಚೌಕಾಕಾರದ ಗೋಡೆಯನ್ನು ನಿರ್ಮಿಸಲಾಗುತ್ತದೆ. ಇದು ನಿರ್ಮಾಣ ಪ್ರದೇಶಕ್ಕೆ ನೀರು ಸೇರದಂತೆ ತಡೆಯುತ್ತದೆ.

ಬಂಜೆತನ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರ; ಚರ್ಮದ ಕೋಶಗಳಿಂದ ಅಂಡಾಣು ಸೃಷ್ಟಿಸಿದ ಸಂಶೋಧಕರು!

ಕಾಫರ್ಡ್ಯಾಮ್ ಸ್ಥಾಪಿಸಿದ ನಂತ್ರ, ದೊಡ್ಡ ಪಂಪ್ಗಳ ಸಹಾಯದಿಂದ ಸ್ಥಳದಲ್ಲಿರುವ ನೀರನ್ನು ತೆಗೆಯಲಾಗುತ್ತೆ. ಈ ನೀರನ್ನು ನದಿಗೆ ವಾಪಸ್ ಹಾಕಲಾಗುತ್ತದೆ. ಕಾರ್ಮಿಕರು ಏಣಿಗಳು ಅಥವಾ ಕ್ರೇನ್ಗಳನ್ನು ಬಳಸಿ ಒಣ ಪ್ರದೇಶಕ್ಕೆ ಇಳಿಯುತ್ತಾರೆ. ಮರಳು, ಮಣ್ಣು ಮತ್ತು ಕಲ್ಲುಗಳನ್ನು ತೆಗೆಯುತ್ತಾರೆ. ಅಸ್ಥಿರವಾದ ಮಣ್ಣಿಗೆ ಅಡಿಪಾಯ ಅಗತ್ಯ. ಸೇತುವೆಯ ತೂಕವನ್ನು ಬೆಂಬಲಿಸಲು 20-25 ಮೀಟರ್ ಉದ್ದದ ಕಬ್ಬಿಣದ ಕೊಳವೆಗಳನ್ನು ನದಿಪಾತ್ರಕ್ಕೆ ಸೇರಿಸಲಾಗುತ್ತದೆ. ಅಡಿಪಾಯಕ್ಕಾಗಿ ಕಾಂಕ್ರೀಟ್ ಸುರಿಯಲಾಗುತ್ತದೆ. ಗಾಳಿಯ ಗುಳ್ಳೆಗಳನ್ನು ತೆಗೆದುಹಾಕಲು ಮತ್ತು ರಚನೆಯು ಬಲವಾದ ಮತ್ತು ಬಾಳಿಕೆ ಬರುವಂತೆ ಖಚಿತಪಡಿಸಿಕೊಳ್ಳಲು ವೈಬ್ರೇಟರ್ಗಳನ್ನು ಬಳಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಹೆಚ್ಚು ಅಪಾಯಕಾರಿಯಾಗಿದೆ. ಕಾಫರ್ಡ್ಯಾಮ್ನಲ್ಲಿನ ಯಾವುದೇ ಸೋರಿಕೆ ಅಥವಾ ಭೂಕಂಪದಂತಹ ನೈಸರ್ಗಿಕ ಘಟನೆ ಇದು ಕುಸಿಯಲು ಕಾರಣವಾಗ್ಬಹುದು.

ಈ ಎಲ್ಲ ಕೆಲ್ಸ ಆದ್ಮೇಲೆ ಎಂಜಿನಿಯರ್ಗಳು ಕೈಸನ್ ತಂತ್ರಜ್ಞಾನವನ್ನು ಬಳಸುತ್ತಾರೆ. ಇವು ಜಲನಿರೋಧಕ ಪೆಟ್ಟಿಗೆಗಳಾಗಿದ್ದು, ನದಿಪಾತ್ರದಲ್ಲಿ ಮುಳುಗಿಸಲಾಗುತ್ತದೆ. ಒಳಗಿನ ಕಾರ್ಮಿಕರಿಗೆ ಇದು ಒಣ ಪ್ರದೇಶವನ್ನು ಸೃಷ್ಟಿಸುತ್ತದೆ. ತೆರೆದ ಕೈಸನ್ಗಳು ಕೆಳಭಾಗದಲ್ಲಿ ಒಂದು ರಂಧ್ರವನ್ನು ಹೊಂದಿರುತ್ತವೆ. ಅದು ಅವು ಮುಳುಗಲು ಸಹಾಯ ಮಾಡುತ್ತದೆ. ನ್ಯೂಮ್ಯಾಟಿಕ್ ಕೈಸನ್ಗಳು ನೀರನ್ನು ಹೊರಗಿಡಲು ಸಂಕುಚಿತ ಗಾಳಿಯನ್ನು ಬಳಸುತ್ತವೆ. ಕೆಲಸಗಾರರು ಏರ್ಲಾಕ್ ಮೂಲಕ ಒತ್ತಡದ ಕೋಣೆಯನ್ನು ಪ್ರವೇಶಿಸುತ್ತಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ