ದೀಪಾವಳಿಯ ಸಮಯದಲ್ಲಿ ಬಾನಲ್ಲಿ ಗೋಚರಿಸಲಿದೆ ಮೂರು ಧೂಮಕೇತುಗಳು, ಬರಿಗಣ್ಣಿಂದ ಎಲ್ಲರೂ ನೋಡಬಹುದು

Published : Oct 20, 2025, 08:19 PM IST
Comets

ಸಾರಾಂಶ

ಈ ದೀಪಾವಳಿ ಹಬ್ಬದಂದು 'ಲೆಮೆನ್', 'ಸ್ವಾನ್' ಹಾಗೂ 'ಅಟ್ಲಸ್' ಎಂಬ ಮೂರು ಧೂಮಕೇತುಗಳು ಬಾನಂಗಳದಲ್ಲಿ ಕಾಣಿಸಿಕೊಳ್ಳಲಿವೆ. ಇವುಗಳಲ್ಲಿ ಲೆಮೆನ್ ಧೂಮಕೇತು ಬರಿಗಣ್ಣಿಗೆ ಗೋಚರಿಸಲಿದ್ದು, ಅಟ್ಲಸ್ ಧೂಮಕೇತು ನಮ್ಮ ಸೌರವ್ಯೂಹದ ಹೊರಗಿನಿಂದ ಬಂದಿರುವುದು ವಿಶೇಷವಾಗಿದೆ. 

ಉಡುಪಿ: ಈ ದೀಪಾವಳಿ ಹಬ್ಬಕ್ಕೆ ವಿಶೇಷವಾಗಿ ಬಾನಂಗಳವನ್ನೇ ಶೃಂಗರಿಸುವಂತೆ 3 ಧೂಮಕೇತುಗಳು ಕಾಣಿಸಿಕೊಂಡಿವೆ. ಈ ಧೂಮಕೇತುಗಳು ಈ ತಿಂಗಳ ಅಂತ್ಯದವರೆಗೂ ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯಲಿವೆ. ಈ ಧೂಮಕೇತುಗಳನ್ನು 'ಲೆಮೆನ್', 'ಸ್ವಾನ್' ಹಾಗೂ 'ಅಟ್ಲಸ್' ಎಂದು ಹೆಸರಿಸಲಾಗಿದೆ. ಇವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ. ಈ ಧೂಮಕೇತು ಸುಮಾರು 1350 ವರ್ಷಗಳಿಗೊಮ್ಮೆ ಸೂರ್ಯನ ಸಮೀಪ ಬಂದು ಹಿಂತಿರುಗುತ್ತದೆ.

ಅಟ್ಲಸ್ ಭಾರಿ ವಿಶೇಷ

ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್ ಭಾರಿ ವಿಶೇಷ. ಅದು ಉಳಿದಲೆಮನ್ ಹಾಗೂ ಸ್ವಾನ್ ಧೂಮಕೇತುಗಳಂತೆನಮ್ಮ ಸೌರವ್ಯೂಹದ ಹೊರವಲಯದಲ್ಲಿರುವ ಊರ್ಸ್ ಕೌಡ್‌ನಿಂದ ಬಂದುದಲ್ಲ. ಈ ಅಟ್ಲಸ್ ನಮ್ಮ ಸೌರವ್ಯೂಹದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ. ಅದರಅಧ್ಯಯನಹೊಸಹೊಸವಿಚಾರಗಳನ್ನು ಉಸುರಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೆ ಹೊಸ ಆಯಾಮವನ್ನು ಕೊಡುತ್ತಿದೆ.

ಲೆಮೆನ್ ಧೂಮಕೇತು ಭೂಮಿಗೆ ಅತೀ ಸಮೀಪ

ಲೆಮೆನ್ ಧೂಮಕೇತು ಅ.21ರಂದು ಭೂಮಿಗೆ ಅತೀ ಸಮೀಪ ಅಂದರೆ ಸುಮಾರು 90 ಮಿಲಿಯನ್ ಕಿ.ಮೀ.ನಷ್ಟು ಹತ್ತಿರಕ್ಕೆ ಬಂದು, ಸಂಜೆಯ ಕೆಲಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು ಸ್ವಾತಿ ನಕ್ಷತ್ರದ ಸಮೀಪ ಕಾಣಿಸಲಿದೆ. ನ.8ರಂದು ಸೂರ್ಯನ ಕಕ್ಷೆಯಿಂದ ಹಿಂತಿರುಗುತ್ತದೆ.

ಚಂದ್ರ  ಬಿಟ್ಟರೆ ಆಕಾಶದಲ್ಲಿ ಧೂಮಕೇತುಗಳೇ ಚೆಂದ

ಚಂದ್ರನನ್ನ ಬಿಟ್ಟರೆ ರಾತ್ರಿಯ ಆಕಾಶದಲ್ಲಿ ಧೂಮಕೇತುಗಳೇ ಚೆಂದ. ಲೆಮೆನ್ ಧೂಮಕೇತು ಅ.21ರಂದು ಭೂಮಿಗೆ ಅತೀ ಸಮೀಪ ಅಂದರೆ ಸುಮಾರು 90 ಮಿಲಿಯನ್ ಕಿ. ಮೀ.ನಷ್ಟು ಹತ್ತಿರಕ್ಕೆ ಬಂದು, ಸಂಜೆಯ ಕೆಲಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು ಸ್ವಾತಿ ನಕ್ಷತ್ರದ ಸಮೀಪ ಕಾಣಿಸಲಿದೆ. ನ.8ರಂದು ಸೂರ್ಯನ ಕಕ್ಷೆಯಿಂದ ಹಿಂತಿರುಗುತ್ತದೆ.

ಅವು ಸೂರ್ಯನ ಸಮೀಪದಲ್ಲಿರುವಾಗ ಉದ್ದುದ್ದ ಬಾಲ ಬೆಳೆಸಿಕೊಂಡು ಖಗೋಳ ವೀಕ್ಷಕನ ಮನ ಸೂರೆಗೊಳ್ಳುತ್ತವೆ. ಈ ಬಾರಿ ಈ ಧೂಮಕೇತುಗಳ ಜೊತೆಗೆ ಪ್ರತೀವರ್ಷ ಈ ಸಮಯದಲ್ಲಿ ಸಂಭವಿಸುವ ಹ್ಯಾಲಿ ಧೂಮಕೇತುವಿನ ಧೂಳಿನ ಉಲ್ಕಾಪಾತ ಕೂಡ ಅಮಾವಾಸ್ಯೆಯ ಕತ್ತಲ ಆಕಾಶವನ್ನು ರಂಗೇರಿಸಲಿವೆ ಎಂದು ಡಾ. ಎ.ಪಿ. ಭಟ್ ತಿಳಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ