ವಿಷ ಪುರುಷ: 200 ಹಾವುಗಳಿಂದ ಕಚ್ಚಿಸಿಕೊಂಡರೂ ಸಾಯಲಿಲ್ಲ:ಈತನ ರಕ್ತವೀಗ ವಿಷ ನಿರೋಧಕ ಔಷಧಿ

Published : May 06, 2025, 04:03 PM IST
ವಿಷ ಪುರುಷ: 200 ಹಾವುಗಳಿಂದ ಕಚ್ಚಿಸಿಕೊಂಡರೂ ಸಾಯಲಿಲ್ಲ:ಈತನ ರಕ್ತವೀಗ ವಿಷ ನಿರೋಧಕ ಔಷಧಿ

ಸಾರಾಂಶ

ನಾವು ಹೇಳ ಹೊರಟಿರುವುದು ಓರ್ವ ವಿಷ ಪುರುಷನ ಬಗ್ಗೆ. 200 ಹಾವುಗಳಿಂದ ಕಚ್ಚಿಸಿಕೊಂಡರೂ ಈತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ, ಹಾಗಿದ್ದರೆ ಯಾರು ಈ ವಿಷಕಂಠ ಅಂತ ನೋಡೋಣ ಬನ್ನಿ.

ಹಿಂದೆಲ್ಲಾ ರಾಜರುಗಳ ಕಾಲದಲ್ಲಿ ವಿಷಕನ್ಯೆಯರನ್ನು ಸೃಷ್ಟಿ ಮಾಡಲಾಗುತ್ತಿತ್ತು, ಸಣ್ಣ ಮಗುವಿರುವಾಗಲೇ ಅವರಿಗೆ ಸ್ವಲ್ಪ ಸ್ವಲ್ಪವೇ ವಿಷವನ್ನು ನೀಡಿ ಅವರ ದೇಹವನ್ನು ವಿಷಕ್ಕೆ ಒಗ್ಗಿಕೊಳ್ಳುವಂತೆ ಮಾಡಿ ಬಳಿಕ ವಯಸ್ಸಿಗೆ ಬಂದ ಅವರನ್ನು ಶತ್ರುಗಳನ್ನು ಹಿಮ್ಮಟ್ಟಿಸುವುದಕ್ಕಾಗಿ ಬಳಸುತ್ತಿದ್ದರೂ ಎಂಬ ಕತೆಗಳನ್ನು ನೀವು ಕೇಳಿರುತ್ತೀರಿ. ಆದರೆ ಈಗ ನಾವು ಹೇಳ ಹೊರಟಿರುವುದು ಓರ್ವ ವಿಷ ಪುರುಷನ ಬಗ್ಗೆ. ಹಾಗಂತ ಈತನಿಗೆ ಯಾರು ವಿಷವನ್ನು ತಿನ್ನಿಸಿಲ್ಲ, ಆದರೆ ಈತನಿಗೆ ಯಾವುದೇ ಹಾವು ಕಚ್ಚಿದರು ಸಾಯುವುದಿಲ್ಲ, ಇದುವರೆಗೆ ಈತ 200 ಹಾವುಗಳಿಂದ ಕಚ್ಚಿಸಿಕೊಂಡಿದ್ದಾನೆ ಆದರೂ ಈತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ, ಹಾಗಿದ್ದರೆ ಯಾರು ಈ ವಿಷಕಂಠ ಅಂತ ನೋಡೋಣ ಬನ್ನಿ.

ಅಂದಹಾಗೆ ಈತನ ಹೆಸರು ಟೀಮ್ ಫ್ರೈಡ್, 57 ವರ್ಷದ ಇವರು ಮೂಲತಃ ಅಮೆರಿಕಾದ ಕ್ಯಾಲಿಫೋರ್ನಿಯಾದ ನಿವಾಸಿ. ಇವರು ಸುಮಾರು 20 ವರ್ಷಗಳ ಕಾಲ ಬೇಕು ಬೇಕಂತಲೇ 200ಕ್ಕೂ ಹೆಚ್ಚು ವಿಷಪೂರಿತ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ. ಬರೀ ಇಷ್ಟೇ ಅಲ್ಲ ಅವುಗಳ ವಿಷವನ್ನು ತಮ್ಮ ದೇಹಕ್ಕೆ ಇಂಜೆಕ್ಷನ್ ಮೂಲಕವೂ ಚುಚ್ಚಿಸಿಕೊಂಡಿದ್ದಾರೆ. ಪರಿಣಾಮವಾಗಿ ಇವರ ದೇಹ ಇಂದು ಯಾವುದೇ ಹಾವಿನ ವಿಷವನ್ನು ಜೀವಕ್ಕೆ ಅಪಾಯವಾಗದಂತೆ ಅರಗಿಸಿಕೊಳ್ಳಲು ಕಲಿತಿದೆ. ಅದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ ಇವರ ರಕ್ತವನ್ನು ಬಳಸಿ ವಿಜ್ಞಾನಿಗಳು ಈಗ ವಿಷಕ್ಕೆ ಪ್ರತಿರೋಧವನ್ನು ಒಡ್ಡುವ ವಿಷ ನಿರೋಧಕ ಔಷಧಿಯನ್ನು ಪತ್ತೆ ಮಾಡಿದ್ದಾರೆ. 

ಸಿಎನ್‌ಎನ್ ವರದಿಯ ಪ್ರಕಾರ ಟೀಮ್ ಫ್ರೈಡ್‌ ಅವರ ರಕ್ತದಲ್ಲಿ 19ಕ್ಕೂಹೆಚ್ಚು ವಿಭಿನ್ನ ಹಾವುಗಳು ಕಚ್ಚಿದಾಗ ಪ್ರತಿರೋಧ ಒಡ್ಡಬಲ್ಲಂತಹ ತಾಕತ್ತು ಇದೆ. 19 ವಿಭಿನ್ನ ಜಾತಿಯ ಹಾವುಗಳಿಂದ ಅವರು ಕಚ್ಚಿಸಿಕೊಂಡರು ಯಾವುದೇ ಹಾನಿಯಾಗದೇ ಅವರು ಬದುಕುಳಿಯಬಲ್ಲರು. ಸ್ವತಃ ವಿಷ ತಜ್ಞನೂ ಆಗಿರುವ ಟೀಮ್ ಫ್ರೈಡ್ ಅವರು, ತಮ್ಮ ಈ ವಿಚಿತ್ರವಾದ ಸಂಶೋಧನೆಯನ್ನು 2001ರಿಂದ ಆರಂಭಿಸಿದರು. ಹಾವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಭಿನ್ನವಾದ ಮಾರ್ಗವನ್ನು ಕಂಡುಕೊಳ್ಳಲು ಬಯಸಿದ ಅವರು ಇದಕ್ಕಾಗಿ ಪ್ರತಿಯೊಂದು ವಿಷಕಾರಿ ಹಾವುಗಳಿಂದ ಕಚ್ಚಿಸಿಕೊಳ್ಳಲು ಶುರು ಮಾಡಿದರು. ಹೀಗೆ ಮಾಡುವ ಮೂಲಕ ಮುಂದೊಂದು ದಿನ ತಾನು ವಿಷಕಾರಿ ಹಾವುಗಳ ಕಡಿತಕ್ಕೆ ಔಷಧಿ ಕಂಡುಹಿಡಿಯಬಲ್ಲೆಎಂದು ಭರವಸೆ ಅವರಲ್ಲಿತ್ತು. ಈಗ ಅವರ ಈ ಸುಧೀರ್ಘ ಕಾಲದ ಸಂಶೋಧನೆ ಯಶಸ್ವಿ ಎನಿಸಿದ್ದು, ಅವರು ಯಾವುದೇ ವಿಷದ ಹಾವಿನಿಂದ ಕಡಿತಕ್ಕೊಳಗಾದರೂ ಜೀವಕ್ಕೆ ಅಪಾಯವಾಗದೇ ಸುರಕ್ಷಿತವಾಗಿದ್ದಾರೆ. 

ಹೀಗಾಗಿ ಈಗ ಅವರ ರಕ್ತದಿಂದ ಹಾವು ಕಡಿದವರ ಜೀವ ಉಳಿಸುವುವ ಔಷಧಿ ತಯಾರಾಗುವ ಬಗ್ಗೆ ಸಂಶೋಧನೆ ಮಾಡುವ ವಿಚಾರದಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ. 2017ರಲ್ಲಿ ರೋಗನಿರೋಧಕ ಔಷಧಿಗಳ ತಜ್ಞ ಜಾಕೋಬ್ ಗ್ಲಾನ್‌ಬಿಲ್ ಅವರು, ಫ್ರೈಡ್ ಟಿಮ್‌ ಅವರ ಆವಿಷ್ಕಾರದ ಬಗ್ಗೆ ಕೇಳಿದ್ದರು ಮತ್ತು ಅದರ ಬಗ್ಗೆ ಕೆಲಸ ಮಾಡಬೇಕೆಂದು ನಿರ್ಧರಿಸಿದರು. ಅದರಂತೆ ಜಾಕೋಬ್ ಅವರು ಟೀಮ್ ಬಳಿ ರಕ್ತದ ಮಾದಿರಯನ್ನು ನೀಡುವಂತೆ ಕೇಳಿದ್ದರು. ಈ ವೇಳೆ ಟೀಮ್ ಫ್ರೈಡ್ ಅವರು ತಾನು ಇದಕ್ಕಾಗಿಯೇ ಕಾಯುತ್ತಿದ್ದಿದ್ದಾಗಿ ಹೇಳಿದ್ದರು ನಂತರ ವಿಜ್ಞಾನಿಗಳು ಟೀಮ್ ಅವರ ರಕ್ತವನ್ನು ಪಡೆದು ಅದರಿಂದ ವಿಷ ನಿರೋಧಕ ಔಷಧಿಯನ್ನು ತಯಾರಿಸಿರುವುದಾಗಿ ಘೋಷಿಸಿದ್ದು, ಈ ವಿಷ ನಿರೋಧಕ ಔಷಧವೂ ಈಗ 19 ವಿಷಕಾರಿ ಹಾವುಗಳಿಂದ ನಿಮ್ಮನ್ನು ರಕ್ಷಿಸಬಲ್ಲದು. 

ಆದರೆ ಈ ಭಷಧಿಯನ್ನು ಇನ್ನೂ ಮಾನವರ ಮೇಲೆ ಪ್ರಯೋಗ ಮಾಡಿಲ್ಲ. ಆದರೆ ಇದು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿದ ಪ್ರತಿವಿಷಕ್ಕಿಂತ ಹೆಚ್ಚು ಉತ್ತಮವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO)ಪ್ರಕಾರ, ಪ್ರತಿ ವರ್ಷ ಸಾವಿರಾರು ಜನರು ವಿಷಪೂರಿತ ಹಾವುಗಳ ಕಡಿತದಿಂದ  ಸಾಯುತ್ತಿದ್ದರೆ ಹಾಗೂ ಅನೇಕರು ಶಾಶ್ವತವಾಗಿ ಅಂಗವಿಕಲರಾಗುತ್ತಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ