ಮಾರ್ಚ್‌ 28 ರಂದು ಬಾನಂಗಳದಲ್ಲಿ ಖಗೋಳ ವಿಸ್ಮಯ: ಒಟ್ಟಿಗೆ ಕಾಣಿಸಿಕೊಳ್ಳಲಿವೆ 5 ಗ್ರಹಗಳು..!

By BK Ashwin  |  First Published Mar 20, 2023, 6:01 PM IST

ಮಾರ್ಚ್ 1 ರಂದು, ಶುಕ್ರ ಮತ್ತು ಗುರು ಗ್ರಹಗಳು ಒಟ್ಟಿಗೆ ಸೇರಿಕೊಂಡಿದ್ದವು. ಫೆಬ್ರವರಿಯಲ್ಲಿ, ಗುರು ಮತ್ತು ಶುಕ್ರ ಚಂದ್ರನೊಂದಿಗೆ ಅಲೈನ್‌ ಆಗಿತ್ತು ಮತ್ತು ಪರಸ್ಪರ ಹತ್ತಿರವಾಗುತ್ತಿದ್ದವು.


ನವದೆಹಲಿ (ಮಾರ್ಚ್‌ 20, 2023):  ಮಾರ್ಚ್ 1 ರಂದು, ಶುಕ್ರ ಮತ್ತು ಗುರು ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಂಡಿತ್ತು. ಹಾಗೆ, ಫೆಬ್ರವರಿಯ ಉದ್ದಕ್ಕೂ, ಗುರು ಮತ್ತು ಶುಕ್ರ ಚಂದ್ರನೊಂದಿಗೆ ಅಲೈನ್‌ ಆಗಿದ್ದವು ಮತ್ತು ಪರಸ್ಪರ ಹತ್ತಿರವಾಗುತ್ತಿದ್ದವು. ಈಗ, ಅದೇ ರೀತಿ ಈ ತಿಂಗಳ ಕೊನೆಯ ವಾರದಲ್ಲಿ ಮತ್ತೊಂದು ಖಗೋಳ ವಿಸ್ಮಯ ಸಂಭವಿಸುತ್ತಿದೆ. ಈ ಬಾರಿ ಮಾರ್ಚ್ 28 ರಂದು ಐದು ಗ್ರಹಗಳು ಜತೆಗೆ ಚಂದ್ರ  ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಬಹುತೇಕ ಆರ್ಕ್‌ ರೂಪದಲ್ಲಿ (ವೃತ್ತದ ಒಂದು ಭಾಗ) ಗೋಚರಿಸುತ್ತವೆ. ಐದು ಗ್ರಹಗಳು ಅಕ್ಷರಶಃ ಸರಳ ರೇಖೆಯಲ್ಲಿ ಇರುವುದಿಲ್ಲವಾದರೂ, ಬಹುತೇಕ ಆರ್ಕ್‌ ರೂಪದಲ್ಲಿ ಗೋಚರಿಸುತ್ತವೆ.

ಯಾವ ಎಲ್ಲಾ ಗ್ರಹಗಳು ಗೋಚರಿಸುತ್ತವೆ..?
ಬುಧ (Mercury), ಶುಕ್ರ (Venus), ಮಂಗಳ (Mars), ಗುರು (Jupiter) ಮತ್ತು ಯುರೇನಸ್ (Uranus) ಮಾರ್ಚ್ 28 ರಂದು ಸೂರ್ಯಾಸ್ತದ (Sunset) ನಂತರ ಗೋಚರಿಸುತ್ತದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಗುರು ಗ್ರಹವು ಬುಧ ಗ್ರಹಕ್ಕಿಂತ ಪ್ರಕಾಶಮಾನವಾಗಿ ಕಾಣಿಸಲಿದ್ದು, ಒಟ್ಟಾರೆ ಇಡೀ ಗುಂಪಿನಲ್ಲಿ ಶುಕ್ರ ಗ್ರಹವು ಪ್ರಕಾಶಮಾನವಾದ ಗ್ರಹವಾಗಿದೆ. ಗುರು ಮತ್ತು ಬುಧದ ಮೇಲಿನ ಎಡಭಾಗದಲ್ಲಿ ಶುಕ್ರವು ಪ್ರಕಾಶಮಾನವಾಗಿರುತ್ತದೆ. 

Latest Videos

undefined

ಇದನ್ನು ಓದಿ: ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

ಇನ್ನು, ಶುಕ್ರವು ಬರಿಗಣ್ಣಿನಿಂದ ಗೋಚರಿಸುತ್ತದೆ. ಏಕೆಂದರೆ ಅದು ಎಲ್ಲಾ ಇತರ ಗ್ರಹಗಳಿಗಿಂತ ಹೆಚ್ಚು ಬೆರಗುಗೊಳಿಸುತ್ತದೆ. ಆದರೆ, ದೃಶ್ಯ ಸಾಧನಗಳಿಲ್ಲದೆ ಯುರೇನಸ್ ಅನ್ನು ಕಂಡುಹಿಡಿಯುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಯುರೇನಸ್ ಶುಕ್ರನ ಬಳಿ ಕಾಣಿಸಿಕೊಳ್ಳುತ್ತದೆಯಾದರೂ ಬಹಳ ದುರ್ಬಲವಾಗಿರುತ್ತದೆ. ಮತ್ತು, ಮಂಗಳವು ಆಕಾಶದಲ್ಲಿ ತುಂಬಾ ಎತ್ತರದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಗಮನಾರ್ಹವಾದ ವರ್ಣವನ್ನು ಹೊಂದಿರುತ್ತದೆ.

ಮಾರ್ಚ್ 1 ರಂದು, ಶುಕ್ರ ಮತ್ತು ಗುರು ಗ್ರಹಗಳು ಒಟ್ಟಿಗೆ ಸೇರಿಕೊಂಡಿದ್ದವು. ಫೆಬ್ರವರಿಯಲ್ಲಿ, ಗುರು ಮತ್ತು ಶುಕ್ರ ಚಂದ್ರನೊಂದಿಗೆ ಅಲೈನ್‌ ಆಗಿತ್ತು ಮತ್ತು ಪರಸ್ಪರ ಹತ್ತಿರವಾಗುತ್ತಿದ್ದವು.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ

ಗ್ರಹದ ನಡುವಿನ ಸಂಯೋಗವು ಸೌರವ್ಯೂಹದಲ್ಲಿ ಆಗಾಗ್ಗೆ ಸಂಭವಿಸುತ್ತದೆ. ಏಕೆಂದರೆ, ಗ್ರಹಗಳು ಸೂರ್ಯನ ಸುತ್ತ ಸರಿಸುಮಾರು ಒಂದೇ ಸಮತಲದಲ್ಲಿ ಅಂದರೆ ಎಕ್ಲಿಪ್ಟಿಕ್ ಪ್ಲೇನ್‌ನಲ್ಲಿ ಸುತ್ತುತ್ತವೆ.  ಮತ್ತು ಹೀಗೆ ನಮ್ಮ ಆಕಾಶದಾದ್ಯಂತ ಇದೇ ರೀತಿಯ ಮಾರ್ಗಗಳನ್ನು ಪತ್ತೆಹಚ್ಚುತ್ತವೆ ಎಂದು ನಾಸಾ ಹೇಳಿದೆ.

ಈ ಮಧ್ಯೆ, ಖಗೋಳಶಾ ಸ್ತ್ರಜ್ಞರು ಕಳೆದ ವಾರ ಹೊಸ ಧೂಮಕೇತು C/2023 A3 (Tsuchinshan-ATLAS) ಅನ್ನು ಪತ್ತೆ ಹಚ್ಚಿದ್ದರು. ಧೂಮಕೇತುವನ್ನು ಖಗೋಳಶಾಸ್ತ್ರಜ್ಞರು ಚೀನಾದಲ್ಲಿನ ಪರ್ಪಲ್ ಮೌಂಟೇನ್ ಅಬ್ಸರ್ವೇಟರಿ ಮತ್ತು ಕ್ಷುದ್ರಗ್ರಹ ಟೆರೆಸ್ಟ್ರಿಕಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್, ATLAS ನಲ್ಲಿ ಪತ್ತೆಹಚ್ಚಿದ್ದಾರೆ. ಇದು ಪ್ರಸ್ತುತ ಭೂಮಿಯಿಂದ ಶತಕೋಟಿ ಕಿಲೋಮೀಟರ್ ದೂರದಲ್ಲಿರುವ ಗುರು ಮತ್ತು ಶನಿಯ ಕಕ್ಷೆಗಳ ನಡುವೆ ಇದೆ.

ಇದನ್ನೂ ಓದಿ: ಇಂದು ಉಪಗ್ರಹ ಬೀಳಿಸುವ ಕಸರತ್ತು: ಫೆಸಿಫಿಕ್‌ ಸಾಗರದಲ್ಲಿ ಪತನಕ್ಕೆ ಇಸ್ರೋ ಭಾರಿ ಸಾಹಸ

ಇನ್ನು, ಇದು ಒಳಮುಖವಾಗಿ ಬೀಳುತ್ತಿದ್ದು, ಸೆಪ್ಟೆಂಬರ್ 2024 ರಲ್ಲಿ ಸೂರ್ಯನಿಂದ 59 ಮಿಲಿಯನ್ ಕಿಲೋಮೀಟರ್ ಒಳಗೆ ತರುವ ಕಕ್ಷೆಯಲ್ಲಿ ಚಲಿಸುತ್ತದೆ ಎನ್ನಲಾಗಿದೆ. ಅಲ್ಲದೆ, ಧೂಮಕೇತು ತುಂಬಾ ದೂರದಲ್ಲಿದ್ದಾಗ ಕಂಡುಬಂದಿರುವುದು ಖಗೋಳಶಾಸ್ತ್ರಜ್ಞರ ಉತ್ಸಾಹಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

click me!