ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

By BK Ashwin  |  First Published Mar 18, 2023, 11:52 AM IST

ಒನ್ ವೆಬ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಇದು ಲೋ ಅರ್ತ್ ಆರ್ಬಿಟ್ (ಎಲ್ಇಓ) ಉಪಗ್ರಹಗಳ ಮೂಲಕ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಸಂಸ್ಥೆಯು ತನ್ನ 36 ಉಪಗ್ರಹಗಳ ಉಡಾವಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾರ್ಚ್ 26, 2023ರಂದು ಉಡಾವಣೆಗೊಳಿಸುವ ನಿರ್ಧಾರ ಕೈಗೊಂಡಿದೆ.


(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ತನ್ನ ಉಪಗ್ರಹ ಪುಂಜವನ್ನು ಪೂರ್ಣಗೊಳಿಸುವ ಉದ್ದೇಶದಿಂದ, ಒನ್‌ವೆಬ್ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆ ಸಹಭಾಗಿತ್ವ ಹೊಂದಿ, ತನ್ನ ಅಂತಿಮ ಉಡಾವಣೆಯಲ್ಲಿ 36 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಿದೆ.

Tap to resize

Latest Videos

undefined

ಏನು ಈ ಯೋಜನೆ?

ಒನ್ ವೆಬ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಇದು ಲೋ ಅರ್ತ್ ಆರ್ಬಿಟ್ (ಎಲ್ಇಓ) ಉಪಗ್ರಹಗಳ ಮೂಲಕ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಸಂಸ್ಥೆಯು ತನ್ನ 36 ಉಪಗ್ರಹಗಳ ಉಡಾವಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾರ್ಚ್ 26, 2023ರಂದು ಉಡಾವಣೆಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ಉಡಾವಣೆಯು ಒನ್ ವೆಬ್ ಸಂಸ್ಥೆಯ 18ನೇ ಉಡಾವಣೆಯಾಗಿದ್ದು, 2023ರಲ್ಲಿ ಮೂರನೇ ಉಡಾವಣೆಯಾಗಲಿದೆ. ಈ ಉಡಾವಣೆಯ ಮೂಲಕ ಒನ್ ವೆಬ್‌ನ ಮೊದಲ ತಲೆಮಾರಿನ ಎಲ್ಇಓ ಪುಂಜ ಪೂರ್ಣಗೊಳ್ಳಲಿದ್ದು, ಇದರ ಪರಿಣಾಮವಾಗಿ 2023ರಲ್ಲಿ ಜಾಗತಿಕ ಜಾಗತಿಕ ವ್ಯಾಪ್ತಿ ಆರಂಭಿಸಲು ಸಂಸ್ಥೆಗೆ ಸಾಧ್ಯವಾಗುತ್ತದೆ.

ಇದನ್ನು ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

ಯಾಕೆ ಈ ಉಡಾವಣೆ?

ಮಾರ್ಚ್ 26ರಂದು ನಡೆಯಲಿರುವ ಉಡಾವಣೆ ಒನ್ ವೆಬ್ ಸಂಸ್ಥೆಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದ್ದು, ಇದು ಒನ್ ವೆಬ್ ಕಾರ್ಯಾಚರಣೆಗೆ ಇನ್ನೂ 36 ಉಪಗ್ರಹಗಳನ್ನು ಸೇರಿಸಲಿದೆ. ಇದು ಮೊದಲ ಜಾಗತಿಕ ಲೋ ಅರ್ತ್ ಆರ್ಬಿಟ್ ಉಪಗ್ರಹ ಪುಂಜವನ್ನು ಪೂರ್ಣಗೊಳಿಸುವ ಕಾರಣದಿಂದ, ಈ ಉಡಾವಣೆ ಅತ್ಯಂತ ಮಹತ್ವ ಪಡೆದಿದೆ.

ಈ ಕಾರ್ಯಾಚರಣೆ ಪೂರ್ಣಗೊಳಿಸುವ ಮೂಲಕ ಒನ್ ವೆಬ್ ಜಾಗತಿಕ ವ್ಯಾಪ್ತಿ ಹೊಂದಲು ಸಾಧ್ಯವಾಗುತ್ತದೆ. ಹಂಚಿಕೆದಾರರ ಜೊತೆ ಸಹಯೋಗ ಹೊಂದುವ ಮೂಲಕ ಒನ್ ವೆಬ್ ಸಂಸ್ಥೆ ಅತ್ಯಂತ ವೇಗವಾದ ಮತ್ತು ನಂಬಿಕಾರ್ಹವಾದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಿದೆ. ಇದು ಸಾರ್ವಜನಿಕರಿಗೆ, ಉದ್ಯಮಗಳಿಗೆ ಹಾಗೂ ಸರ್ಕಾರಗಳಿಗೆ ಜಾಗತಿಕವಾಗಿ ಉತ್ತಮ ಅಂತರ್ಜಾಲ ಸೌಲಭ್ಯ ಒದಗಿಸಲಿದೆ.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಇಸ್ರೋ 2022ರ ಅಕ್ಟೋಬರ್ ತಿಂಗಳಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಒನ್ ವೆಬ್ ಸಂಸ್ಥೆಯ ಆರಂಭಿಕ 36 ಉಪಗ್ರಹಗಳನ್ನು ಉಡಾವಣೆಗೊಳಿಸಿ ಸಾಧನೆಗೈದಿತ್ತು. ಅದೇ ಮೊದಲ ಬಾರಿಗೆ ಇಸ್ರೋದ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III ಜಾಗತಿಕ ವಾಣಿಜ್ಯಿಕ ಉಡಾವಣಾ ಸೇವೆಗಳಿಗೆ ಉಪಯೋಗಿಸಲ್ಪಟ್ಟಿತ್ತು.
ಫ್ಲೋರಿಡಾದ ಉಪಗ್ರಹ ನಿರ್ಮಾಣ ಕೇಂದ್ರದಲ್ಲಿ ನಿರ್ಮಾಣಗೊಂಡ ಒನ್ ವೆಬ್‌ನ 36 ಉಪಗ್ರಹಗಳು ಫೆಬ್ರವರಿ 16ರಂದು ಭಾರತಕ್ಕೆ ಆಗಮಿಸಿದವು. ಅವುಗಳನ್ನು ಬಳಿಕ ಲಾಂಚ್ ವೆಹಿಕಲ್ ಮಾರ್ಕ್ IIIಗೆ ಅಳವಡಿಸಲಾಯಿತು.

ಒನ್ ವೆಬ್ ಸಂಸ್ಥೆಯ ಎರಡನೆಯ ಉಪಗ್ರಹ ಉಡಾವಣೆ ಭಾರತದಿಂದ ನಡೆಯುತ್ತಿದ್ದು, ಇದು ಭಾರತ ಮತ್ತು ಇಂಗ್ಲೆಂಡ್‌ಗಳ ಬಾಹ್ಯಾಕಾಶ ಉದ್ಯಮಗಳ ಸಂಬಂಧ ಹೇಗಿದೆ ಎನ್ನುವುದನ್ನು ತೋರಿಸುತ್ತದೆ. ಭಾರತದಲ್ಲಿನ ಕಾರ್ಯಾಚರಣೆಗಳ ಮೂಲಕ ಒನ್ ವೆಬ್ ಸಂಸ್ಥೆ ಉದ್ಯಮಗಳಿಗೆ, ಪಟ್ಟಣಗಳಿಗೆ, ಗ್ರಾಮಗಳಿಗೆ, ಶಾಲಾ ಕಾಲೇಜುಗಳಿಗೆ, ಭಾರತದ ಸಂಪರ್ಕ ವ್ಯವಸ್ಥೆ ಇರದ ಹಳ್ಳಿ ಹಳ್ಳಿಗಳಿಗೆ ಸುರಕ್ಷಿತ ಅಂತರ್ಜಾಲ ವ್ಯವಸ್ಥೆ ಒದಗಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಒನ್ ವೆಬ್ ಜಾಗತಿಕವಾಗಿ ಪ್ರಮುಖ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆಗಳನ್ನು ಸ್ಥಾಪಿಸಿದ್ದು, ಪ್ರಮುಖ ಅಂತರ್ಜಾಲ ಪೂರೈಕೆದಾರ ಸಂಸ್ಥೆಗಳಾದ ವಿಇಒಎನ್, ಆರೆಂಜ್, ಗ್ಯಾಲಾಕ್ಸಿ ಬ್ರಾಡ್‌ಬ್ಯಾಂಡ್‌, ಪಾರಾಟಸ್, ಟೆಲಿಸ್‌ಪ್ಯಾಸಿಯೋ ಹಾಗೂ ಇತರ ಸಂಸ್ಥೆಗಳೊಡನೆ ಸಹಭಾಗಿತ್ವ ಹೊಂದಿ, ತನ್ನ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಉಡಾವಣೆ ಯಾವಾಗ ನಡೆಯಲಿದೆ..?

ಈಗಾಗಲೇ ಸಿದ್ಧಪಡಿಸಿರುವ ವೇಳಾಪಟ್ಟಿಯ ಪ್ರಕಾರ, ಉಡಾವಣೆ ಮಾರ್ಚ್ 26, 2023ರಂದು, ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 09:00 ಗಂಟೆಗೆ ಉಡಾವಣೆ ನಡೆಯಲಿದೆ. ಇದರ ಹೊರತಾಗಿ, ಬೇರೆ ಯಾವುದೇ ಸಮಯ ನಿಗದಿಪಡಿಸಲಾಗಿಲ್ಲ.

ಇದನ್ನೂ ಓದಿ: ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂಡು ನಮನ

ಉಡಾವಣೆ ಎಲ್ಲಿ ನಡೆಯಲಿದೆ..?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯಿಕ ಅಂಗವಾದ ಎನ್ಎಸ್ಐಎಲ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಡಾವಣೆಯನ್ನು ನಡೆಸಲಿದೆ.

click me!