Elon musk Prediction ಕೊನೆಗೊಳ್ಳುತ್ತಿದೆ ಮಾನವಕುಲ, ಸರ್ವನಾಶ ಸನಿಹದಲ್ಲಿ ಜಗತ್ತು, ಹೊಸ ಬಾಂಬ್ ಸಿಡಿಸಿದ ಮಸ್ಕ್!

By Suvarna NewsFirst Published Sep 3, 2022, 9:27 PM IST
Highlights

ಟ್ವಿಟರ್ ಖರೀದಿಸಲು ಹೋಗಿ ಹಿಂದೇಟು ಹಾಕಿದ ವಿಶ್ವದ ಶ್ರೀಮಂತ, ಟೆಸ್ಲಾ ಮಾಲೀಕ ಎಲನ್ ಮಸ್ಕ್ ಮಾತು ಇದೀಗ ಹೆಚ್ಚಿನವರು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಈ ಬಾರಿ ಮಸ್ಕ್ ಅತ್ಯಂತ ಮಹತ್ವದ ವಿಚಾರ ಹೇಳಿದ್ದಾರೆ. ಜಗತ್ತು ಸರ್ವನಾಶ, ಮಾನವ ಕುಲದ ಅಂತ್ಯದ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಸ್ಕ್ ಸಿಡಿಸಿದ ಹೊಸ ಬಾಂಬ್ ವಿವರ ಇಲ್ಲಿದೆ.

ನ್ಯೂಯಾರ್ಕ್(ಸೆ.03): ವಿಶ್ವದ ಶ್ರೀಮಂತ ಎಲಾನ್ ಮಸ್ಕ್ ಇದೀಗ ಯಾವುದೇ ಹೇಳಿಕೆ ನೀಡಿದರೂ ಅದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿಲ್ಲ. ಅದೆಷ್ಟೇ ಮಹತ್ವದ ವಿಚಾರ ಹೇಳಿದರೂ ಲಘುವಾಗಿ ಪರಿಗಣಿಸುತ್ತಾರೆ. ಮಸ್ಕ್ ಮಾಡಿದ ಟ್ವಿಟರ್ ಡೀಲ್‌ನಿಂದ ಚಹರೆ ಬದಲಾಗಿದೆ. ಆದರೆ ಈ ಬಾರಿ ಎಲನ್ ಮಸ್ಕ್ ಹೊಸ ಥಿಯರಿಯೊಂದನ್ನು ಮುಂದಿಟ್ಟಿದ್ದಾರೆ. ಈ ಬಾರಿ ಎಲನ್ ಮಸ್ಕ್ ಮಂಡಿಸಿದ ಹೊಸ ವಾದವನ್ನು ಸುಲಭವಾಗಿ ಹೇಳಬೇಕೆಂದರೆ, ಡೈನೋಸಾರ್‌ ಅಂತ್ಯಗೊಂಡಂತೆ ಮಾನವಕುಲದ ಅಂತ್ಯವೂ ಆಗಲಿದೆ. ಯಾಕೆಂದರೆ ಜಗತ್ತಿನ ಸರ್ವನಾಶ ಸನಿಹದಲ್ಲಿದೆ ಎಂದು ಮಸ್ಕ್ ಹೇಳಿದ್ದಾರೆ. ಎಲನ್ ಮಸ್ಕ್ ವಾದವನ್ನು ಹಲವರು ಒಪ್ಪಿಕೊಂಡಿದ್ದಾರೆ. ಒಂದಷ್ಟು ಜನ ಇದು ಮಸ್ಕ್‌ನ ಹೊಸ ಬಾಂಬ್. ಕೆಲ ದಿನಗಳ ಬಳಿಕ ಮಸ್ಕ್ ಈ ಕುರಿತು ಸ್ಪಪ್ಟನೆ ನೀಡಿ ನಾನು ಜಗತ್ತು ಅಂತ್ಯವಾದರೆ ಮಾನವ ಕುಲದ ಅಂತ್ಯವಾಗಲಿದೆ ಎಂದಿದ್ದೇನೆ ಅಂದರೂ ಅಚ್ಚರಿ ಇಲ್ಲ ಎಂದಿದ್ದಾರೆ.

ಎಲನ್ ಮಸ್ಕ್(Elon Musk) ಬಿಬಿಸಿಗೆ ಬರೆದ ಲೇಖನದಲ್ಲಿ ಈ ವಿಚಾರವನ್ನು ಮಂಡಿಸಿದ್ದಾರೆ.  ತಮ್ಮ ಲೇಖನದಲ್ಲಿ ಕೆಲ ವೈಜ್ಞಾನಿಕ ವಿಚಾರಗಳನ್ನು ಮಸ್ಕ್ ಉಲ್ಲೇಖಿಸಿದ್ದಾರೆ. ಈ ಹಿಂದೆ ಡೈನೋಸಾರ್, ಜುರಾಸಿಕ್ ಅಂತ್ಯವಾಯಿತು. ಈ ಪ್ರಭೇದ ಪ್ರಾಣಿಗಳ ಜೊತೆಗೆ ಅದೆಷ್ಟೆ ವನ್ಯ ಜೀವಿಗಳು ಅಂತ್ಯಗೊಂಡಿದೆ. ಇದೀಗ ಸಣ್ಣ ಸಣ್ಣ ಪಕ್ಷಿಗಳು, ಪ್ರಾಣಿಗಳು(Wild Life) ಅಳಿವಿನ ಅಂಚಿನಲ್ಲಿದೆ(endangered species). ಹಲವು ಪ್ರಬೇಧಗಳು ನಶಿಸಿ ಹೋಗಿದೆ. ಕೆವಲ ಮಾನವನ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ಈ ಭೂಮಿಯಲ್ಲಿ(Earth) ಕೇವಲ ಮಾನವ ಮಾತ್ರ ಬದುಕಲು ಸಾಧ್ಯವಿಲ್ಲ(mankind will end). ಇದು ಅಸಮತೋಲನೆಯನ್ನು ಸೃಷ್ಟಿಸುವುದು ಮಾತ್ರವಲ್ಲ, ಜಗತ್ತಿನ ಸರ್ವನಾಶಕ್ಕೆ(apocalypse) ನಾಂದಿ ಹಾಡಲಿದೆ ಎಂದು ಎಲಾನ್ ಮಸ್ಕ್ ಹೊಸ ವಾದ ಮಂಡಿಸಿದ್ದಾರೆ.

9 ಕೆಜಿ ತೂಕ ಕಳೆದುಕೊಂಡ ಎಲಾನ್‌ ಮಸ್ಕ್‌: ಡಯಟ್‌ ಸೀಕ್ರೆಟ್‌ ಬಹಿರಂಗ..!

ಈ ಬಾರಿ ಮಸ್ಕ್ ಹೇಳಿದ ವಿಚಾರ ಗಂಭೀರವಾಗಿದೆ. ಮಸ್ಕ್ ಹೇಳಿದಂತೆ ಹಲವು ಪ್ರಾಣಿಗಳು ಪಕ್ಷಿಗಳು ನಶಿಸಿ ಹೋಗಿದೆ. ಇರುವ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ. ಕಾಡು ಕಡಿಮೆಯಾಗಿದೆ. ಜಲ ಪ್ರವಾಹ(Flood), ಭೂಸುಸಿತ(Landslide) ಹೆಚ್ಚಾಗಿದೆ. ದೂರದಲ್ಲಿ ಕೇಳುತ್ತಿದ್ದ ಭೂಕಂಪನ(earthquake) ಪಕ್ಕದಲ್ಲೇ ಸಂಭವಿಸುತ್ತಿದೆ. ಜಗತ್ತಿನ ಒಂದೊಂದೆ ಭಾಗಗಳು ಜಲ ಸಮಾಧಿಯಾಗುತ್ತಿದೆ. ಇದೆಲ್ಲವೂ ಮಸ್ಕ್ ಸೂಚಿಸಿದ ಜಗತ್ತಿನ ಸರ್ವನಾಶದ ಮುನ್ಸೂಚನೆಯಾಗಿದೆಯಾ ಅನ್ನೋ ಚರ್ಚೆ ಇದೀಗ ಆರಂಭಗೊಂಡಿದೆ. 

30 ರಿಂದ 100 ಮಿಲಿಯನ್ ವರ್ಷಗಳಿಗೊಮ್ಮೆ ಎಲ್ಲವೂ ಬುಡಮೇಲಾಗಿದೆ. ಜಗತ್ತು ಸರ್ವನಾಶವಾಗಿದೆ. ಇದೀಗ ಮಾನವನ ಅತಿ ಆಸೆಯಿಂದ ಈ ಬಾರಿ ಬೇಗನೆ ಸಂಭವಿಸಿದರೂ ಅಚ್ಚರಿಯಿಲ್ಲ ಎಂದು ಮಸ್ಕ್ ಬೆಂಬಲಿಗರು ಹೇಳಿದ್ದಾರೆ. 

ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತೇನೆ ಎಂದಿದ್ದು ತಮಾಷೆಗೆ: ಎಲಾನ್ ಮಸ್ಕ್

ರ್‌ಲಿಂಕ್‌ ನೆಟ್‌ ಹ್ಯಾಕ್‌ಗೆ ರಷ್ಯಾ ವಿಫಲ ಯತ್ನ: ಮಸ್ಕ್‌
ರಷ್ಯಾ ಉಕ್ರೇನ್‌ ಯುದ್ಧ ಆರಂಭವಾದಾಗಿನಿಂದ ಹ್ಯಾಕರ್‌ಗಳು ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ವ್ಯವಸ್ಥೆಯನ್ನು ಹ್ಯಾಕ್‌ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕಂಪನಿಯ ಮುಖ್ಯಸ್ಥ ಎಲಾನ್‌ ಮಸ್ಕ್‌ ಆರೋಪಿಸಿದ್ದಾರೆ. ಆದರೆ ಇಂತಹ ಹ್ಯಾಕಿಂಗ್‌ ಮತ್ತು ಜಾಮಿಂಗ್‌ ದಾಳಿಗಳನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದ ಸಮಯದಲ್ಲಿ ಮೊಬೈಲ್‌ ಟವರ್‌ಗಳನ್ನು ನಾಶಮಾಡಿತ್ತು. ಇದರಿಂದಾಗಿ ಉಕ್ರೇನ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕ ಕಡಿತಗೊಂಡಿತ್ತು. ಆದರೆ ಉಕ್ರೇನ್‌ ಬೇಡಿಕೆಯಂತೆ ಎಲಾನ್‌ ಮಸ್ಕ್‌ ಸ್ಟಾರ್‌ಲಿಂಕ್‌ ಮೂಲಕ ಇಂಟರ್‌ನೆಟ್‌ ಸಂಪರ್ಕ ಒದಗಿಸಿದ್ದರು. ಅದರ ಬೆನ್ನಲ್ಲೇ ಈ ಹ್ಯಾಕಿಂಗ್‌ ಯತ್ನ ನಡೆದಿದೆ.
 

click me!