ಇದು ಚಂದ್ರನ ಈವರೆಗಿನ ಅತ್ಯಂತ ಸ್ಪಷ್ಟ ಚಿತ್ರ, ಒಂದು ಚಿತ್ರಕ್ಕಾಗಿ ಎರಡು ವರ್ಷ ಶ್ರಮ!

By Santosh NaikFirst Published Aug 26, 2022, 6:18 PM IST
Highlights

ಚಂದ್ರನ ಚಿತ್ರವನ್ನು ಎರಡು ಮಿಲಿನ್‌ ಬಾರಿ ತೆಗೆದರೆ ಏನಾಗಬಹುದು? ಬಹುಶಃ ಇಂಥದ್ದೊಂದು ಸ್ಪಷ್ಟ ಚಂದ್ರನ ಚಿತ್ರವನ್ನು ಪಡೆಯಬಹುದು. ಸ್ಪಷ್ಟ, ಅತ್ಯಂತ ಸುಂದರವಾದ ಚಂದ್ರನ ಚಿತ್ರ ಇಲ್ಲಿದೆ. ಫೋಟೋದಲ್ಲಿ ಕಾಣುವ ಚಂದ್ರ ಅತ್ಯಂತ ಸ್ಪಷ್ಟವಾಗಿದ್ದಾನೆ. ಈ ಚಿತ್ರವನ್ನು ಇಬ್ಬರು ಖಗೋಳ ಛಾಯಾಗ್ರಾಹಕರು ತೆಗೆದಿದ್ದಾರೆ. ಚಂದ್ರನ ಈ ಚಿತ್ರಕ್ಕಾಗಿ ಅವರು ಅಂದಾಜು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
 

ನ್ಯೂಯಾರ್ಕ್‌ (ಆ.26): ಸಾಮಾನ್ಯವಾಗಿ ಒಂದು ಸೆಲ್ಫಿ ಚಿತ್ರೆ ತೆಗೆದುಕೊಂಡರೆ, ಅದನ್ನು 8 ರಿಂದ 10 ಬಾರಿ ಪರಿಶೀಲನೆ ಮಾಡ್ತೇವೆ. ಯಾವ ಆಂಗಲ್‌ನಲ್ಲಿ ಇದು ಚೆನ್ನಾಗಿ ಕಾಣುತ್ತದೆ ಎನ್ನುವುದನ್ನೂ ಪರಿಶೀಲನೆ ಮಾಡುತ್ತೇವೆ. ಚೆನ್ನಾಗಿ ಬಂದಿಲ್ಲವೆಂದರೆ, ಅದನ್ನು ಬೇರೆ ಬೇರೆ ಫಿಲ್ಟರ್‌, ಕಲರ್‌ ಮಾಡಿಫಿಕೇ‍ಷನ್‌ ಮಾಡಿಕೊಂಡು ಚಿತ್ರ ತೆಗೆಯುತ್ತೇವೆ. ಆದರೆ, ಇಲ್ಲಿರುವ ಚಂದ್ರನ ಚಿತ್ರ ಸಾಮಾನ್ಯದ್ದಲ್ಲ. ಯಾಕೆಂದರೆ ಇದನ್ನು ತೆಗೆಯಲು ಅಂದಾಜು ಎರಡು ವರ್ಷಗಳ ಕಾಲ ಖಗೋಳ ಛಾಯಾಗ್ರಾಹಕರು ಶ್ರಮಪಟ್ಟಿದ್ದಾರೆ. 2 ಲಕ್ಷಕ್ಕೂ ಅಧಿಕ ಬಾರಿ ಚಂದ್ರನ ಚಿತ್ರವನ್ನು ತೆಗೆದ ಬಳಿಕ, ಚಂದ್ರನ ಈವರೆಗಿನ ಅತ್ಯಂತ ಸೂಕ್ಷ್ಮ ಹಾಗೂ ಸ್ಪಷ್ಟವಾದ ಚಿತ್ರ ಈಗ ಜನರು ನೋಡಲು ಸಾಧ್ಯವಾಗಿದೆ. ಬಾಹ್ಯಾಕಾಶ ಛಾಯಾಗ್ರಹಣ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ ಮತ್ತು ಖಗೋಳ ವಿಜ್ಞಾನಿ ಕಾನರ್ ಮ್ಯಾಥರ್ನ್ ಚಂದ್ರನ ಈ ಚಿತ್ರವನ್ನು ತೆಗೆದಿದ್ದಾರೆ. ಚಂದ್ರನ ಅತ್ಯಂತ ಸ್ಪಷ್ಟವಾದ ಫೋಟೋ ಎಂಬ ಸ್ಥಾನಮಾನವನ್ನು ಈ ಚಿತ್ರಗಳಿಗೆ ನೀಡಲಾಗಿದೆ. ಅವರು ಈ ಚಿತ್ರಗಳಿಗೆ  'ಹಂಟ್ ಫಾರ್ ಆರ್ಟೆಮಿಸ್' ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ರೆಸಲ್ಯೂಶನ್ 174 ಮೆಗಾಪಿಕ್ಸೆಲ್ ಆಗಿದೆ. ಅಷ್ಟೇ ಅಲ್ಲ, ಆಂಡ್ರ್ಯೂ ಮತ್ತು ಕಾನರ್ ಇದನ್ನು ಚಂದ್ರನ ಈವರೆಗಿನ ಅತ್ಯಂತ ಸಂಪೂರ್ಣ ವಿವರಣೆಯುಳ್ಳ ಚಿತ್ರ ಎಂದು ಕರೆದಿದ್ದು, ಇದರ ಚಿತ್ರ ಇಂಟರ್ನೆಟ್‌ ಅಲ್ಲಿ ಟ್ರೆಂಡಿಂಗ್‌ ಆಗಿದೆ.

ಈ ಒಂಚು ಚಿತ್ರವನ್ನು ತೆಗೆಯುವ ಸಲುವಾಗಿ, ಇಬ್ಬರೂ ಎರಡು ವರ್ಷಗಳ ಕಾಲ ಶ್ರಮಪಟ್ಟಿದ್ದಾರೆ. ಈ ಅವಧಿಯಲ್ಲಿ ಒಟ್ಟಾರೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಅಂದರೆ, ಪ್ರತಿ ದಿನ ಇವರಿಬ್ಬರೂ 274 ಚಂದ್ರನ ಚಿತ್ರಗಳನ್ನು ತೆಗೆಯುತ್ತಿದ್ದರು. ಇದಕ್ಕಾಗಿ ಇಬ್ಬರೂ ಒಂದೇ ಕ್ಯಾಮೆರಾ, ಟ್ರೈಪಾಡ್ ಮತ್ತು ಸ್ಟಾರ್ ಟ್ರ್ಯಾಕರ್ ಬಳಸಿದ್ದಾರೆ. ಇದರ ನಂತರ ಎಲ್ಲಾ ಚಿತ್ರಗಳನ್ನು ಒಟ್ಟಿಗೆ ಮಿಶ್ರಣ ಮಾಡಲಾಗಿದೆ. ಅದರಲ್ಲಿ ತೀರಾ ಅತ್ಯುತ್ತಮ ಎನಿಸುವಂಥ ಚಿತ್ರಗಳನ್ನು ಇವರು ಆಯ್ಕೆ ಮಾಡಿದ್ದಾರೆ.

ಆಂಡ್ರ್ಯೂ ಅರಿಜೋನಾದಿಂದ 2 ಲಕ್ಷ ಛಾಯಾಚಿತ್ರಗಳನ್ನು ಮತ್ತು ಕಾನರ್ ಲೂಸಿಯಾನದಿಂದ 500 ಛಾಯಾಚಿತ್ರಗಳನ್ನು ತೆಗೆದುಕೊಂಡರು. ಆಂಡ್ರ್ಯೂ ಫೋಟೋದ ವಿವರಗಳ ಮೇಲೆ ಕೆಲಸ ಮಾಡಿದರೆ, ಕಾನರ್ ಅದರ ಬಣ್ಣದ ಡೇಟಾದಲ್ಲಿ ಕೆಲಸ ಮಾಡಿದರು.

James Webb Telescope ತೆಗೆದ ಅದ್ಭುತ ಚಿತ್ರ, ಬಾಹ್ಯಾಕಾಶದಲ್ಲಿ ಕಂಡಿತು ಕೃಷ್ಣನ ಸುದರ್ಶನ ಚಕ್ರ!

ಈಗ ಪ್ರಕಟವಾಗಿರುವ ಫೋಟೋ 174 ಮೆಗಾಪಿಕ್ಸಲ್‌ಗಳನ್ನು ಹೊಂದಿದೆ. ಇದರಲ್ಲಿ ಕೆಂಪು ಮತ್ತು ಗನ್ ಮೆಟಲ್ ನೀಲಿ ಬಣ್ಣದ ಪರಿಣಾಮ ಚಂದ್ರನ ಮೇಲೆ ಗೋಚರಿಸುತ್ತದೆ. ಅದರ ಬಲಭಾಗವು ಹೊಳೆಯುತ್ತಿರುವುದು ಕಂಡುಬರುತ್ತದೆ. ಈ ಭಾಗವು ಭೂಮಿಯ ಕಡೆಗೆ ಇದೆ, ಅದು ಹೊಳೆಯುತ್ತಿದೆ. ಕೆಂಪು ಬಣ್ಣದ ಪ್ರದೇಶಗಳು ಚಂದ್ರನಲ್ಲಿ ಗೋಚರಿಸುತ್ತವೆ. ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಫೆಲ್ಡ್ಸ್ಪಾರ್ ಕಂಡುಬಂದಿದೆ. ನಮ್ಮ ಭೂಮಿಯಿಂದ ಬಾಹ್ಯಾಕಾಶಕ್ಕೆ ಹೋಗುವ ಆಮ್ಲಜನಕದ ಅಣುಗಳಿಂದಾಗಿ ಇದು ಆಕ್ಸಿಡೀಕರಣಗೊಂಡಿದೆ. ಇದರರ್ಥ ಕಬ್ಬಿಣ ತುಕ್ಕು ಹಿಡಿಯುವಂತಹ ಸ್ಥಿತಿಯಾಗಿದೆ.

NASA JW Telescope: ಸೆಲ್ಫಿ ಜತೆಗೆ ಬಾಹ್ಯಾಕಾಶದಿಂದ ಮೊದಲ ಚಿತ್ರ ಕಳುಹಿಸಿದ ಜೇಮ್ಸ್ ವೆಬ್ ಟೆಲಿಸ್ಕೋಪ್!

ಅದೇ ಸಮಯದಲ್ಲಿ, ನೀಲಿ ಬಣ್ಣದ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಟೈಟಾನಿಯಂ ಇರುತ್ತದೆ. ಇದು ಚಂದ್ರನ ನಿಜವಾದ ಬಣ್ಣವಲ್ಲ ಎಂದು ನೀವು ಭಾವಿಸಿದರೆ. ಅದು ತಪ್ಪು. ಯಾಕೆಂದರೆ, ಇದು ಚಂದ್ರನ ನಿಜವಾದ ಬಣ್ಣ. ಆದರೆ ನಮ್ಮ ಕಣ್ಣುಗಳು ಅದರ ಬಣ್ಣಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಆಂಡ್ರ್ಯೂ ಚಿತ್ರದ ವಿವರಗಳ ಮೇಲೆ ಕೆಲಸ ಮಾಡಿದ್ದರು. ಈ ಚಿತ್ರವನ್ನು ನೋಡಿದಾಗ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ತೆಗೆದ ಚಿತ್ರದ ರೀತಿ ಕಾಣುತ್ತದೆ. ಆದರೆ, ಇದು ಟೆಲಿಸ್ಕೋಪ್‌ ತೆಗೆದ ಚಿತ್ರವಲ್ಲ. ಮಾಮೂಲಿ ಛಾಯಾಗ್ರಹಣ ಮಾಡುವ ಕ್ಯಾಮೆರಾದಲ್ಲಿ ತೆಗೆದಿದ್ದೇವೆ ಎಂದು ಇಬ್ಬರೂ ಹೇಳಿದ್ದಾರೆ. ಇದು ನಾಸಾದ ಆರ್ಟೆಮಿಸ್ ಮಿಷನ್‌ನಿಂದ ಸ್ಫೂರ್ತಿ ಪಡೆದ ಚಿತ್ರವಾಗಿದೆ. ಇದು ಆರ್ಟೆಮಿಸ್ ಮಿಷನ್‌ಗೆ ಪ್ರೀತಿಯ ಸಂದೇಶ ಎಂದು ಅವರು ಹೇಳಿದ್ದಾರೆ.

click me!