ಚಂದ್ರಯಾನ-3 ಮೊದಲ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ: ಉತ್ತಮ ಸ್ಥಿತಿಯಲ್ಲಿ ವ್ಯೋಮನೌಕೆ

By Kannadaprabha News  |  First Published Jul 16, 2023, 11:37 AM IST

ಶುಕ್ರವಾರ ನಭಕ್ಕೆ ನೆಗೆದ ಚಂದ್ರಯಾನ-3 ವ್ಯೋಮನೌಕೆ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶನಿವಾರ ಅದರ ಕಕ್ಷೆ ಎತ್ತರಿಸುವ ಅತ್ಯಂತ ಮಹತ್ವದ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. 


ತಿರುವನಂತಪುರ/ಶ್ರೀಹರಿಕೋಟಾ: ಶುಕ್ರವಾರ ನಭಕ್ಕೆ ನೆಗೆದ ಚಂದ್ರಯಾನ-3 ವ್ಯೋಮನೌಕೆ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶನಿವಾರ ಅದರ ಕಕ್ಷೆ ಎತ್ತರಿಸುವ ಅತ್ಯಂತ ಮಹತ್ವದ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. 

ಇದಕ್ಕೂ ಮೊದಲು ಈ ವಿಚಾರವಾಗಿ ತಿರುವನಂತಪುರದಲ್ಲಿ (Tiruvanantapura) ಮಾತನಾಡಿದ ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಎಸ್‌. ಉನ್ನಿಕೃಷ್ಣನ್‌ ನಾಯರ್‌, ‘ಉಡಾವಣಾ ವಾಹಕವು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ಬಾಹ್ಯಾಕಾಶ ನೌಕೆಗೆ ಅಗತ್ಯವಾದ ಆರಂಭಿಕ ಸೂಚನೆಗಳನ್ನು ಅತ್ಯಂತ ನಿಖರವಾಗಿ ಒದಗಿಸಲಾಗಿದೆ. ಚಂದ್ರನನ್ನು ವ್ಯೋಮನೌಕೆ ತಲುಪಲು 40 ದಿನಗಳು ಬೇಕು. ಈ ಹಿನ್ನೆಲೆಯಲ್ಲಿ ಭೂಮಿಯಿಂದ ಮತ್ತಷ್ಟು ದೂರಕ್ಕೆ ಅದನ್ನು ಕಳಿಸಲು ಆನ್‌ಬೋರ್ಡ್‌ ಥ್ರಸ್ಟರ್‌ಗಳನ್ನು ಶನಿವಾರದಿಂದ ಹಾರಿಸಲಾಗುತ್ತಿದೆ ಎಂದರು.

Tap to resize

Latest Videos

undefined

ಚಂದ್ರನ ಮೇಲೆ ಮೂಡಲಿದೆ ಭಾರತದ ಮುದ್ರೆ : ರೋವರ್‌ ಹೆಜ್ಜೆ ಇಟ್ಟಲೆಲ್ಲಾ ಅಶೋಕ ಚಕ್ರ ಸಿಂಹದ ಮುಖ, ಇಸ್ರೋ ಗುರುತು

ಇನ್ನು ಶ್ರೀಹರಿಕೋಟಾದಲ್ಲಿನ (Sriharikota) ವಿಜ್ಞಾನಿಯೊಬ್ಬರು ಮಾತನಾಡಿ, ವಿಜ್ಞಾನಿಗಳು ಶನಿವಾರದಿಂದ ಕಕ್ಷೆ ಎತ್ತರಿಸುವ ಕೆಲಸ ಆರಂಭಿಸಿದ್ದಾರೆ. ಮೊದಲ ಹಂತವು ಶನಿವಾರ ನಡೆದಿದೆ ಎಂದರು.  ಚಂದ್ರಯಾನ ನೌಕೆಯು 5ರಿಂದ 6 ಬಾರಿ ಭೂಮಿಯನ್ನು ಸುತ್ತು ಹಾಕಲಿದೆ. ಈ ವೇಳೆ ನೌಕೆಯ ಕಕ್ಷೆಯನ್ನು ವಿಜ್ಞಾನಿಗಳು ಎತ್ತರಿಸುತ್ತಾರೆ. ಚಂದ್ರನಿಂದ 100 ಕಿ.ಮೀ. ದೂರದಲ್ಲಿ ಅದರ ಕಕ್ಷೆಗೆ ಸೇರಲ್ಪಡುತ್ತದೆ. ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಕಸರತ್ತು ಶುರುವಾಗುತ್ತದೆ. ಆ.23ರಂದು ಸಂಜೆ 5.47ಕ್ಕೆ ಚಂದ್ರನ ಮೇಲೆ ಇಳಿಸುವ ಗುರಿ ಇದೆ. ಬಳಿಕ ವಿಕ್ರಮ್‌ ಲ್ಯಾಂಡರ್‌ನಿಂದ ರೋವರ್‌ ಹೊರಬರಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಹೇಳಿದ್ದರು.

ಇನ್ನು ಕೆಲ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಕಾರಿನ ಗಾತ್ರದ ಉಪಗ್ರಹ; ಜನರ ಜೀವ, ಮೂಲಸೌಕರ್ಯಕ್ಕೂ ಅಪಾಯ!

click me!