Sunspot: ದೂರದರ್ಶಕದ ಸಹಾಯವಿಲ್ಲದೆ ಕಾಣುವ ಸೌರಕಲೆ!

By Ravi Janekal  |  First Published Jul 16, 2023, 12:33 PM IST

ಸೂರ್ಯನ ಮೇಲ್ಮೈಯಲ್ಲಿ ಒಂದು ಸೌರಕಲೆಯನ್ನು ಗುರುತಿಸಲಾಗಿದೆ, ಇದನ್ನು ಸೌರಕಲೆ 3363 ಎಂದು ಹೆಸರಿಸಿದ್ದಾರೆ, ಅದು ಪ್ರಸ್ತುತ ಯಾವುದೇ ದೂರದರ್ಶಕಗಳ ಸಹಾಯವಿಲ್ಲದೆ ಗೋಚರಿಸುತ್ತಿದೆ.


ಅತುಲ್ ಭಟ್, ಉಪನ್ಯಾಸಕರು, ಖಗೋಳಾಸಕ್ತರು

ಉಡುಪಿ )ಜು.16) : ಸೂರ್ಯನ ಮೇಲ್ಮೈಯಲ್ಲಿ ಒಂದು ಸೌರಕಲೆಯನ್ನು ಗುರುತಿಸಲಾಗಿದೆ, ಇದನ್ನು ಸೌರಕಲೆ 3363 ಎಂದು ಹೆಸರಿಸಿದ್ದಾರೆ, ಅದು ಪ್ರಸ್ತುತ ಯಾವುದೇ ದೂರದರ್ಶಕಗಳ ಸಹಾಯವಿಲ್ಲದೆ ಗೋಚರಿಸುತ್ತಿದೆ.

Tap to resize

Latest Videos

undefined

ಸೌರಕಲೆ ಎಂಬುದು ಸೂರ್ಯನ ಮೇಲ್ಮೈಯಲ್ಲಿರುವ ಒಂದು ಪ್ರದೇಶವಾಗಿದೆ, ಅಲ್ಲಿ ತಾಪಮಾನವು ಅದರ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಕಡಿಮೆ ಇರುತ್ತದೆ. ಸೂರ್ಯನ ಮೇಲ್ಮೈ 5000 ಡಿಗ್ರಿಗಳಷ್ಟು ಬಿಸಿಯಾಗಿರುತ್ತದೆ, ಆದರೆ ಈ ಪ್ರದೇಶವು 4500 ಡಿಗ್ರಿಗಳಲ್ಲಿವೆ. ಈ ಭಾಗ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ನಡುವೆ 500K ಅಷ್ಟು ತಾಪಮಾನದ ವ್ಯತ್ಯಾಸವಿದೆ. ಅಂದರೆ, ಅದರ ಸುತ್ತಮುತ್ತಲಿನ ಪ್ರದೇಶಗಳು ಸೌರಕಲೆಗಿಂತ ಹೆಚ್ಚಿನ ಬೆಳಕನ್ನು ನೀಡುತ್ತದೆ ಹಾಗಾಗಿ ಅದು ಕಪ್ಪಾಗಿ ಕಾಣುತ್ತದೆ.

 

ತ್ಯಂತ ಬಲಿಷ್ಠ ಸೌರಜ್ವಾಲೆ ಹೊರಹಾಕಿದ ಸೂರ್ಯ, ಚಿತ್ರ ರಿಲೀಸ್ ಮಾಡಿದ ನಾಸಾ!

ಕಳೆದ ಕೆಲವು ದಿನಗಳಲ್ಲಿ ಸೌರಕಲೆ 3363 ಅನ್ನು ಗಮನಿಸಲಾಗಿದ್ದು ಅದರ ಗಾತ್ರ ಹೆಚ್ಚಾಗುತ್ತಿದೆ. ಗಾತ್ರದಲ್ಲಿನ ಈ ಹೆಚ್ಚಳವು ಯಾವುದೇ ದೂರದರ್ಶಕಗಳು ಅಥವಾ ಬೈನಾಕ್ಯುಲರ್‌ಗಳಿಲ್ಲದೆ ಸೌರಶೋಧಕದ ಸಹಾಯದಿಂದ ಬರಿಗಣ್ಣಿಗೆ ಸೌರಕಲೆ ಗೋಚರಿಸುವಂತೆ ಮಾಡಿದೆ. ಸಾಮಾನ್ಯವಾಗಿ, ಸೌರಕಲೆಗಳು ಸೌರ ಶೋಧಕವನ್ನು ಹೊಂದಿದ ದೂರದರದರ್ಶಕದಲ್ಲಿ ಮಾತ್ರ ಗೋಚರಿಸುತ್ತವೆ. ಹಾಗಾಗಿ ಈ ಸೌರಕಲೆ 3363 ರ ಗಾತ್ರವು ಪ್ರಸ್ತುತ ಭೂಮಿಗಿಂತ ದೊಡ್ಡದಾಗಿದೆ ಎಂದು ಸೂಚಿಸುತ್ತದೆ. ವಿಶಿಷ್ಟವಾಗಿ ಸೌರಕಲೆಗಳು ಗಾತ್ರದಲ್ಲಿ 16 ಕಿ.ಮೀ ನಿಂದ 160000 ಕಿ.ಮೀ ವರೆಗೆ ಬದಲಾಗಬಹುದು. ಭೂಮಿಯ ವ್ಯಾಸವು 12742 ಕಿ.ಮೀ. ಆದ ಕಾರಣ, ಸೌರಕಲೆಯು ಭೂಮಿಗಿಂತ ದೊಡ್ಡದಾಗಿರುವುದು ಸಹಜ. ಆದಾಗ್ಯೂ, ಸೌರಕಲೆಗಳ ಗಾತ್ರ ಮತ್ತು ನೋಟವು ಏಕರೂಪವಾಗಿರುವುದಿಲ್ಲ. ಸೌರಕಲೆಗಳ ನೋಟವು ಸೌರ ಚಕ್ರ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದು 11 ವರ್ಷಗಳ ಅವಧಿಯಾಗಿದ್ದು, ಮೊದಲು ಸೂರ್ಯನ ಮೇಲ್ಮೈಯಲ್ಲಿನ ಚಟುವಟಿಕೆಯು ಹೆಚ್ಚಾಗುತ್ತದೆ ನಂತರ ಕಡಿಮೆಯಾಗುತ್ತದೆ ಹೀಗೆ ಇದರ ಪುನರಾವರ್ತನೆಯಾಗುತ್ತದೆ . ಪ್ರಸ್ತುತ  2019 ರಲ್ಲಿ ಈ ಸೌರ ಚಕ್ರವು ಪ್ರಾರಂಭವಾಯಿತು ಮತ್ತು 2025 ರಲ್ಲಿ ಗರಿಷ್ಠ ಚಟುವಟಿಕೆಯನ್ನು ತೋರಿಸುತ್ತದೆ ಅಂದಾಜಿಸಲಾಗಿದೆ. ಆದ್ದರಿಂದ ನಾವು ಭವಿಷ್ಯದಲ್ಲಿಯೂ ಸಹ ಅಂತಹ ಹೆಚ್ಚಿನ ಸೂರ್ಯನ ಕಲೆಗಳನ್ನು ವೀಕ್ಷಿಸುತ್ತೇವೆ. ಆದರೆ ಇದು ಯಾವಾಗಲೂ ಭೂಮಿಗೆ ಎದುರಾಗಿರುವ ಸೂರ್ಯನ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಯಾವುದೇ ಖಾತರಿಯಿಲ್ಲ. ವಿಜ್ಞಾನಿಗಳು ಯಾಕಾಗಿ ಈ ಚಕ್ರವು ಕೇವಲ 11 ವರ್ಷಕ್ಕೆ ಮುಗಿಯುತ್ತದೆ ಎಂಬಂತೆ ಅದರ ಬಗೆಗಿನ ಹಲವಾರು  ರಹಸ್ಯಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಸೌರಕಲೆಯು ಸೂರ್ಯನ ಸಂಕೀರ್ಣ ಕಾಂತೀಯ ಕ್ಷೇತ್ರಗಳ ಪರಿಣಾಮವಾಗಿದೆ. ಸೌರಕಲೆ 3363 ಸ್ಫೋಟಗೊಳ್ಳುವುದಿಲ್ಲ ಮತ್ತು ಭೂಮಿಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬುದು ನಮಗೆ ತಿಳಿದಿರುವ ಏಕೈಕ ವಿಷಯವಾಗಿದೆ.

ಒಂದು ಸೌರಕಲೆಯನ್ನು ಯಾವ ಸ್ಥಳದಿಂದಾದರೂ ಕೆಲವು ದಿನ ಅಥವಾ ಗಂಟೆಗಳವರೆಗೆ ಸೂರ್ಯನ ಮೇಲ್ಮೈಯಲ್ಲಿ ಗುರುತಿಸಬಹುದು. ಸೂರ್ಯನು ಚಲಿಸುವ ಅನುಗುಣಕ್ಕೆ ತಕ್ಕಂತೆ ಸೂರ್ಯನ ಮೇಲ್ಮೈಯಲ್ಲಿರುವ ಸ್ಥಿರವಾದ ಹಾಗೂ ದೊಡ್ಡದಾದ ಸೌರಕಲೆಗಳು ಕೆಲ ದಿನಗಳವರೆಗೆ ಗೋಚರಿಸುತ್ತವೆ ಹಾಗೂ ಇನ್ನೂ ಕೆಲವು ಕೆಲ ಗಂಟೆಗಳ ಒಳಗೆ ಮರೆಯಾಗುತ್ತದೆ. 3363 ಎಂಬ ಸೌರಕಲೆಯು ಈ  ವರ್ಷದ ಜುಲೈ 6 ತಾರೀಕಿನಿಂದ ಗೋಚರಿಸುತ್ತಿದ್ದು,ಇನ್ನೂ ಸ್ವಲ್ಪ ಸಮಯ ಗೋಚರಿಸುವ ಸಾಧ್ಯತೆ ಇದೆ. ಇದಾದ ನಂತರ ನಮ್ಮ ನೋಟದಿಂದ ದೂರ ಹೋಗುವ ಸಾಧ್ಯತೆ ಇದ್ದು, ಮತ್ತೆ ಗೋಚರಿಸಲು ಸಾಧ್ಯವಿಲ್ಲ.

ಸೂರ್ಯನ ಮೇಲ್ಮೈಯಲ್ಲಿರುವ ಒಂದು ಕಲೆಯು ಆಕಾರದಲ್ಲಿ ನಮ್ಮ ಭೂಮಿಯ ಮೇಲ್ಮೈಗಿಂತ ದೊಡ್ಡದಾಗಿದ್ದು, ಪ್ರಕೃತಿಯಲ್ಲಿ ಗೋಚರಿಸುವ ಇಂತಹ ಅದ್ಭುತ ಕ್ರಿಯೆಯನ್ನು ಗಮನಿಸುವುದು ಅತ್ಯಂತ ಮುಖ್ಯವಾಗಿದೆ, ಇದರ ಜೊತೆಗೆ ಸೂರ್ಯ ಎಷ್ಟು ದೊಡ್ಡದಾಗಿದೆ ಎಂಬ ಸ್ಪಷ್ಟ ಚಿತ್ರಣವನ್ನು ನಮಗೆ ನೀಡುತ್ತದೆ.
ಸೂರ್ಯನನ್ನು ವೀಕ್ಷಿಸುವ ವೇಳೆಯಲ್ಲಿ ನಾವು ಫಿಲ್ಟರ್ ನ ಬಳಕೆಯಂತಹ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂರ್ಯನನ್ನು ನೇರವಾಗಿ ನೋಡುವುದಾಗಲಿ, ದಿನನಿತ್ಯದ ಚಟುವಟಿಕೆಯಲ್ಲಿ ಬಳಸುವ ಎಕ್ಸರೇ ಹಾಳೆ, ಕನ್ನಡಕಗಳನ್ನು ಬಳಸಬಾರದು. ಸೂರ್ಯನನ್ನು ಯಾವಾಗಲೂ ಪ್ರಮಾಣೀಕರಿಸಿದ ಸೋಲಾರ್ ಫಿಲ್ಟರ್ ನ ಮೂಲಕವೇ ನೋಡಬೇಕು. ಈ ವಸ್ತುವಿನ ಹೊರತಾಗಿ ಬೇರೆ ವಸ್ತುಗಳ ಮೂಲಕ ಸೂರ್ಯನನ್ನು ನೋಡಿದರೆ ಕಣ್ಣಿನ ದೃಷ್ಟಿಗೆ ಅಪಾಯವಾಗುತ್ತದೆ ಹಾಗಾಗಿ ಜಾಗೃತೆಯನ್ನು ವಹಿಸುವುದು.
 ಈ ಸೌರಕಲೆಯ ಬೆಳವಣಿಗೆಯ ಹಂತಗಳನ್ನು ನಾಸಾ ಲೈವ್ ನಲ್ಲಿ ಸೂರ್ಯನ ದೃಶ್ಯವನ್ನು ತೋರಿಸಿದಂತೆ ನಮ್ಮ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವೆಬ್ಸೈಟ್ ನಲ್ಲಿ ಟ್ರ್ಯಾಕ್ ಮಾಡುಲಾಗುತ್ತಿದೆ. ಆಸಕ್ತಿಯುಳ್ಳವರು ಇದನ್ನು ಅನುಸರಿಸಬಹುದು. 

ಹೊರ ಹೊಮ್ಮುತ್ತಿದೆ ಹೂಂಕಾರ ನಾದ, ಬ್ರಹ್ಮಾಂಡ ರಹಸ್ಯ ಭೇದಿಸಿದ ಭಾರತೀಯ ಖಗೋಳಶಾಸ್ತ್ರಜ್ಞರ ತಂಡ!

ಮಳೆಗಾಲದ ಈ ಸಮಯದಲ್ಲಿ ಮೋಡದಲ್ಲಿ ಮರೆಯಾದ ಸೂರ್ಯನನ್ನು ನೋಡುವ ಮೂಲಕ ಆತನಲ್ಲಿರುವ ದೊಡ್ಡದಾದ ಸೌರಕಲೆಯನ್ನು ಸ್ಪಷ್ಟವಾಗಿ ಪತ್ತೆಹಚ್ಚಿ ನೋಡಿ ಗುರುತಿಸಬೇಕೆಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಆಶಿಸುತ್ತದೆ.

click me!