
ಕ್ಯಾಲಿಫೋರ್ನಿಯಾ (ಫೆ.8): 2032 ರಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆಯಿದ್ದರೂ, ವೈಆರ್ 4 ಕ್ಷುದ್ರಗ್ರಹ (Asteroid 2024 YR4) ಬಗ್ಗೆ ನಾಸಾ ಅಧ್ಯಯನ ನಡೆಸುತ್ತಿದೆ. ಈ ಹಿಂದೆ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ. 1.3 ರಷ್ಟಿದ್ದರೆ, ಈಗ ಅದು ಶೇ. 2.3 ಕ್ಕೆ ಏರಿದೆ ಎಂದು ನಾಸಾ ತಿಳಿಸಿದೆ. 2032 ರ ಡಿಸೆಂಬರ್ 22 ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ. 2.3 ರಷ್ಟಿದೆ ಎಂದು ನಾಸಾ ಅಂದಾಜಿಸಿದೆ. ಅಂತರರಾಷ್ಟ್ರೀಯ ಕ್ಷುದ್ರಗ್ರಹ ಜಾಲದ ಭಾಗವಾಗಿ ಭೂಮಿಯಲ್ಲಿರುವ ದೂರದರ್ಶಕಗಳನ್ನು ಬಳಸಿ 2024 ರ ಏಪ್ರಿಲ್ ಅಂತ್ಯದವರೆಗೆ ವೈಆರ್4 ಅನ್ನು ನಾಸಾ ವೀಕ್ಷಿಸಿದೆ. 2028 ರ ಜೂನ್‌ನಲ್ಲಿ ಮಾತ್ರ ಈ ಕ್ಷುದ್ರಗ್ರಹ ಮತ್ತೆ ಗೋಚರಿಸುತ್ತದೆ ಎಂದು ನಾಸಾ ಹೇಳಿದೆ. 2025 ರ ಮಾರ್ಚ್‌ನಲ್ಲಿ ನಾಸಾದ ಜೇಮ್ಸ್ ವೆಬ್ ದೂರದರ್ಶಕವು ವೈಆರ್4 ಕ್ಷುದ್ರಗ್ರಹವನ್ನು ಅಧ್ಯಯನ ಮಾಡಲಿದೆ. ಕ್ಷುದ್ರಗ್ರಹದ ಗಾತ್ರವನ್ನು ನಿಖರವಾಗಿ ಅಳೆಯುವುದು ಜೆಡಬ್ಲ್ಯೂಎಸ್‌ಟಿಯ ಉದ್ದೇಶ. 130 ರಿಂದ 300 ಅಡಿಗಳಷ್ಟು ಗಾತ್ರವಿದೆ ಎಂದು ಪ್ರಸ್ತುತ ಅಂದಾಜಿಸಲಾಗಿದೆ.
2024 ವೈಆರ್4 ಕ್ಷುದ್ರಗ್ರಹದ ಪಥವನ್ನು ನಾಸಾ ವಿಜ್ಞಾನಿಗಳು ನಿಖರವಾಗಿ ಅರ್ಥಮಾಡಿಕೊಂಡಂತೆ ಭೂಮಿಗೆ ಅಪ್ಪಳಿಸುವ ಸಾಧ್ಯತೆಯೂ ಸ್ಪಷ್ಟವಾಗುತ್ತದೆ. ಕ್ಷುದ್ರಗ್ರಹದ ಅಪಾಯದ ಸಾಧ್ಯತೆ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ನಾಸಾದ ನಿಯರ್-ಎರ್ತ್ ಆಬ್ಜೆಕ್ಟ್ ಸ್ಟಡೀಸ್ ಕೇಂದ್ರವು 2024 ವೈಆರ್4 ಅನ್ನು ನಿಗಾ ವಹಿಸುತ್ತಿದೆ. ನಾಸಾದ ಸೆಂಟ್ರಿ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಇಸ್ರೋ ಗಗನಯಾತ್ರಿ ಶುಭಾನ್ಷು ಶುಕ್ಲಾ
ಚಿಲಿಯ ದೂರದರ್ಶಕದಲ್ಲಿ 2024 ರ ಡಿಸೆಂಬರ್‌ನಲ್ಲಿ ವೈಆರ್4 ಕ್ಷುದ್ರಗ್ರಹ ಪತ್ತೆಯಾಯಿತು. ಟೊರಿನೊ ಇಂಪ್ಯಾಕ್ಟ್ ಹಜಾರ್ಡ್ ಸ್ಕೇಲ್ ಪ್ರಕಾರ, ವೈಆರ್4 ಗೆ 10 ರಲ್ಲಿ 3 ರೇಟಿಂಗ್ ನೀಡಲಾಗಿದೆ. ನಾಸಾ ಜೊತೆಗೆ, ಯುಎನ್ ಪ್ಲಾನೆಟರಿ ಡಿಫೆನ್ಸ್ ಆರ್ಗನೈಸೇಶನ್ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಕೂಡ 2024 ವೈಆರ್4 ಕ್ಷುದ್ರಗ್ರಹವನ್ನು ಅಧ್ಯಯನ ಮಾಡುತ್ತಿದೆ.
ಬಾಹ್ಯಾಕಾಶದಲ್ಲಿ 7 ತಿಂಗಳ ವಾಸ, ನಡೆಯೋದನ್ನೇ ಮರೆತುಹೋದ ಸುನೀತಾ ವಿಲಿಯಮ್ಸ್
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.