ಜನ್ರಿಗೆ ಮಾತ್ರವಲ್ಲ ಚಂದ್ರನಿಗೂ ತಟ್ಟಿತ್ತು ಕೋವಿಡ್ ಲಾಕ್‌ಡೌನ್, ಸ್ಫೋಟಕ ಅಧ್ಯಯನ ವರದಿ

Published : Feb 07, 2025, 05:33 PM IST
ಜನ್ರಿಗೆ ಮಾತ್ರವಲ್ಲ ಚಂದ್ರನಿಗೂ ತಟ್ಟಿತ್ತು ಕೋವಿಡ್ ಲಾಕ್‌ಡೌನ್, ಸ್ಫೋಟಕ ಅಧ್ಯಯನ ವರದಿ

ಸಾರಾಂಶ

ಕೋವಿಡ್ ಲಾಕ್‌ಡೌನ್ ಜನರಿಗೆ ಯಾವ ಮಟ್ಟಿಗೆ ಪರಿಣಾಮ ಬೀರಿತ್ತು ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಆದರೆ ಕೇವಲ ಭೂಮಿ, ಜನರಿಗೆ ಮಾತ್ರವಲ್ಲ, ಚಂದ್ರನಿಗೂ ಲಾಕ್‌ಡೌನ್ ಹೊಡೆತ ಬಿದ್ದಿತ್ತು ಈ ಕುರಿತ ಅಧ್ಯಯನ ವರದಿ ಬಹಿರಂಗವಾಗಿದೆ.

ನವದೆಹಲಿ(ಫೆ.07) ಕೋವಿಡ್ ಲಾಕ್‌ಡೌನ್ ಜಗತ್ತು ಕಂಡ ಅತ್ಯಂತ ಸಂಕಷ್ಟದ ದಿನಗಳು. ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸಿದವರ ಪಾಡು ಹೇಳತೀರದು. ಜಗತ್ತಿನ ಎಲ್ಲಾ ದೇಶಗಳು ಲಾಕ್‌ಡೌನ್ ಸಮಸ್ಯೆ ಎದುರಿಸಿದೆ. ಆದರೆ ಈ ಲಾಕ್‌ಡೌನ್ ಭೂಮಿಗೆ ಮಾತ್ರವಲ್ಲ, ಚಂದ್ರನಿಗೂ ತಟ್ಟಿದೆ ಎಂದರ ನಂಬಲೇ ಬೇಕು. ಈ ಕುರಿತು ಅಧ್ಯಯನ ವರದಿಯೊಂದು ಹಲವು ಸ್ಫೋಟ ಮಾಹಿತಿಗಳನ್ನು ಬಹಿರಂಗಪಡಿಸಿದೆ. ವೆಸ್ಟ್ ಇಂಡೀಸ್‌ನ ಮಿಸ್ಸೋರಿ  S&T ವಿಶ್ವವಿದ್ಯಾಲಯದ ಈ ಅಧ್ಯಯನ ಕೆಲ ಆತಂಕಕ್ಕೂ ಕಾರಣವಾಗಿದೆ.

ಎಪ್ರಿಲ್ 2020ರಿಂದ ಹಲವು ದೇಶಗಳು ಸಂಪೂರ್ಣ ಲಾಕ್ ಆಗಿತ್ತು. ಎರಡನೇ ಮಹಾಯುದ್ಧದ ಬಳಿಕ ಸಣ್ಣ ಪುಟ್ಟ ಯುದ್ಧಗಳು, ಭೂಕಂಪ, ಪ್ರವಾಹ ಸೇರಿದಂತೆ ಹಲವು ವಿಕೋಪಗಳು ನಡೆದರೂ ಭೂಮಿಯ ಯಾವುದೇ ಚಟುವಟಿಕೆ ನಿಂತಿಲ್ಲ. ಈ ವಿಕೋಪಗಳು ಕೆಲ ಪ್ರದೇಶಗಳ ಜನಸಂಖ್ಯೆ, ಚಟುವಟಿಕೆ ಮೇಲೆ ಪಾತ್ರ ಪರಿಣಾಮ ಬೀರಿತ್ತು. ಆದರೆ ಮೊದಲ ಬಾರಿಗೆ ಭೂಮಿಯ ಬಹುತೇಕ ಚಟುವಟಿಕೆ, ಕಾರ್ಖಾನೆ, ಕಂಪನಿಗ, ವಾಹನ ಓಟಾಡ ಎಲ್ಲವೂ ಸ್ಥಬ್ಧಗೊಂಡಿತ್ತು. 2020ರ ಎಪ್ರಿಲ್ ತಿಂಗಳಲ್ಲಿ. ಬಳಿಕ ಮೇ, ಜೂನ್, ಹೀಗೆ ಲಾಕ್‌ಡೌನ್ ಮುಂದುವರಿದಿತ್ತು. ಕೆಲ ದೇಶಗಳಲ್ಲಿ ಕಾರ್ಖಾನೆ, ಕಂಪನಿಗಳ ಓಡಾಟ ಶುರುವಾಗಿತ್ತು. ಆಧರೆ ಭೂಮಿಯಲ್ಲಿ ಏಕಾಏಕಿ ಚಟುವಟಿಕೆ ನಿಂತ ಕಾರಣ ಭೂಮಿ ಮಾಲಿನ್ಯವೂ ಕಡಿಮೆಯಾಗಿತ್ತು. ಜಾಗತಿಕ ತಾಪಮಾನ ಕಡಿಮೆಯಾಗಿತ್ತು. ಇದರ ಪರಿಣಾಮ ಚಂದ್ರನ ಮೇಲೂ ಆಗಿದೆ ಎಂದು ಅಧ್ಯಯನ ವರದಿ ಹೇಳಿದೆ

ಭೂಮಿ ಹೇಗೆ ತಿರುಗುತ್ತೆ? ಭಾರತದ ಖಗೋಳಶಾಸ್ತ್ರಜ್ಞ ಲಡಾಖ್‌ನಲ್ಲಿ ಸೆರೆ ಹಿಡಿದ ಅದ್ಭುತ ವಿಡಿಯೋ

ಎಪ್ರಿಲ್- ಮೇ 2020ರಲ್ಲಿ ಚಂದ್ರನ ಮೇಲಿನ ತಾಪಮಾನ ಮತ್ತಷ್ಟು ಇಳಿಕೆಯಾಗಿತ್ತು. ಕೋವಿಡ್ ಲಾಕ್‌ಡೌನ್‌ನಿಂದ ಜಾಗತಿಕ ತಾಪಮಾನ ಕಡಿಮೆಯಾದ ಬೆನ್ನಲ್ಲೇ ಚಂದ್ರನ ಮೇಲಿನ ತಾಪಮಾನವೂ ಇಳಿಕೆಯಾಗಿದೆ. ಆದರೆ ಲಾಕ್‌ಡೌನ್ ತೆರವಾಗುತ್ತಿದ್ದಂತೆ ಚಂದ್ರನ ಮೇಲಿನ ತಾಪಮಾನ ಮತ್ತೆ ಏರಿಕೆಯಾಗಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. 2017ರಿಂದ 2023ರ ವರೆಗೆ ಚಂದ್ರನ ಮೇಲಿನ ತಾಪಮಾನವನ್ನು ಅಧ್ಯಯನ ನಡೆಸಿದ ವರದಿ ತಯಾರಿಸಲಾಗಿದೆ.

ಈ ವರದಿಯಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಭೂಮಿಯ ಮೇಲಿನ ತಾಪಮಾನ ಹೆಚ್ಚಾದರೆ ಚಂದ್ರನ ಮೇಲಿನ ತಾಪಮಾನವೂ ಹೆಚ್ಚಾಗುತ್ತದೆ ಎಂದರೆ ಇತರ ಗ್ರಹಗಳ ಮೇಲಿನ ತಾಪಮಾನವೂ ಹೆಚ್ಚಾಗಲಿದೆ. ಸದ್ಯ ಜಗತ್ತು ಜಾಗತಿಕ ತಾಪಮಾನ ಎದುರಿಸುತ್ತಿದೆ. ಸಾವಿರಾರು ವರ್ಷಗಳಿಂದ ಕರಗದೆ ಸುರಕ್ಷಿತವಾಗಿರುವ ಮಂಜು ಗಡ್ಡೆಗಳು ಕರಗುತ್ತಿದೆ. ಇದು ಚಂದ್ರ, ಸೂರ್ಯ ಸೇರಿದಂತೆ ಇತರ ಗ್ರಹಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಅನ್ನೋ ಆತಂಕವೂ ಎದುರಾಗಿದೆ.

ಚಂದ್ರನ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ ಆರಂಭಿಸಲು ಚೀನಾ ಸಜ್ಜಾಗಿದೆ. ಚಂದ್ರನ ದೂರದ ಭಾಗದಲ್ಲಿ ಐಸ್ ಪದರಗಳನ್ನು ಹುಡುಕಲು 'ಹಾರುವ ರೋಬೋಟ್' ಕಳಿಸಲು ಚೀನಾ ಸಿದ್ಧತೆ ನಡೆಸುತ್ತಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. 2026 ರ ಚಾಂಗ್'ಇ-7 ಚಂದ್ರಯಾನದ ಭಾಗವಾಗಿ ಈ ರೋಬೋಟ್ ಪ್ರಯಾಣ ಬೆಳೆಸಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ, ಸೂರ್ಯನ ಬೆಳಕು ತಲುಪದ ಕತ್ತಲಿನ ಕುಳಿಗಳಲ್ಲಿ ಐಸ್ ಇರಬಹುದು ಎಂದು ಚೀನಾದ ವಿಜ್ಞಾನಿಗಳು ಅಂದಾಜಿಸಿದ್ದಾರೆ. 

ಇತ್ತ ಚಂದ್ರನ ಕುತೂಹಲಗಳು ಹೆಚ್ಚಾಗುತ್ತಿದ್ದಂತೆ ಚೀನಾ ಮಹತ್ವದ ಹೆಜ್ಜೆ ಇಟ್ಟಿದೆ. ಮುಂದಿನ ವರ್ಷ ಚಂದ್ರನ ದೂರದ ಭಾಗದಲ್ಲಿ ಹೆಪ್ಪುಗಟ್ಟಿದ ನೀರನ್ನು ಹುಡುಕಲು ಚೀನಾದ ಹಾರುವ ರೋಬೋಟ್ ಚಂದ್ರನತ್ತ ಹೊರಡಲಿದೆ. ಚೀನಾದ ಬಾಹ್ಯಾಕಾಶ ಯೋಜನೆಗಳಲ್ಲಿ ಇದು ಪ್ರಮುಖವಾದದ್ದು. ಚಾಂಗ್'ಇ-7 ಯೋಜನೆಯ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ರೋಬೋಟ್ ಇಳಿಯಲಿದೆ. ಐದು ವರ್ಷಗಳಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸಲು ದೇಶವು ಯೋಜನೆ ರೂಪಿಸುತ್ತಿದೆ ಎಂದು ಚೀನೀ ಮಾಧ್ಯಮಗಳು ವರದಿ ಮಾಡಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕಕ್ಕೆ ಪೈಪೋಟಿ ನೀಡಲು ಚೀನಾ ಮಹತ್ವಾಕಾಂಕ್ಷೆಯ ಯೋಜನೆಗಳೊಂದಿಗೆ ಮುನ್ನಡೆಯುತ್ತಿದೆ. 2030 ರಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವುದು ಚೀನಾದ ಗುರಿಯಾಗಿದೆ. 

ಚಂದ್ರನ ಮೇಲೆ ನೀರು ಪತ್ತೆಯಾಗುವುದು ಹೊಸದೇನಲ್ಲ. ಕಳೆದ ವರ್ಷದ ಚಾಂಗ್'ಇ-5 ಯೋಜನೆಯು ಸಂಗ್ರಹಿಸಿದ ಚಂದ್ರನ ಮಣ್ಣಿನ ಮಾದರಿಗಳಲ್ಲಿ ನೀರಿನ ಅಂಶವನ್ನು ಚೀನೀ ಸಂಶೋಧಕರು ಪತ್ತೆ ಹಚ್ಚಿದ್ದರು. ಚಂದ್ರನ ಮೇಲ್ಮೈಯಲ್ಲಿ ನೀರಿನ ಅಂಶವಿದೆ ಎಂದು ನಾಸಾ ಮತ್ತು ಇಸ್ರೋ ಈಗಾಗಲೇ ಸೂಚಿಸಿವೆ. ಆದರೆ ಚಂದ್ರನ ದೂರದ ಭಾಗದಲ್ಲಿರುವ ಕುಳಿಗಳಲ್ಲಿ ಹೆಪ್ಪುಗಟ್ಟಿದ ನೀರಿದ್ದರೆ ಅದು ಭವಿಷ್ಯದ ಬಾಹ್ಯಾಕಾಶಯಾತ್ರಿಗಳಿಗೆ ನೀರಿನ ಮೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಚೀನಾ ವಿವರವಾದ ಅಧ್ಯಯನಕ್ಕಾಗಿ ಹಾರುವ ರೋಬೋಟ್ ಕಳಿಸಲು ಸಿದ್ಧತೆ ನಡೆಸುತ್ತಿದೆ

ಈ ದಿನ ಆಗಸದಲ್ಲಿ ಬುಧ, ಶನಿ ಸೇರಿ 5 ಗ್ರಹಗಳ ಸಮಾಗಮ, ಕಣ್ತುಂಬಿಕೊಳ್ಳಿ ಆಗಸದ ಕೌತುಕ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ