ಆದಿತ್ಯ-L1 ಸೌರ ವೀಕ್ಷಣಾಲಯದ ಪ್ರಮುಖ ಪೇಲೋಡ್ ವೆಲ್ಕ್ ಅಥವಾ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ ಆಗಿದೆ. ಈ ಪೇಲೋಡ್ ಪ್ರತಿದಿನ ಇಸ್ರೋದ ಗ್ರೌಂಡ್ ಸ್ಟೇಷನ್‌ಗಳಿಗೆ ಕಳಿಸುವ ಫೋಟೋಗಳು ಲೆಕ್ಕವಿಲದಷ್ಟು. ಇದನ್ನು ಪ್ರಕ್ರಿಯೆಗೊಳಿಸಲು ಮತ್ತು ವಿಶ್ಲೇಷಿಸಲು ಸಾಕಷ್ಟು ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿರುತ್ತದೆ.
ಬೆಂಗಳೂರು (ಸೆ.1): ಸೂರ್ಯನನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತ ಕಳಿಸಲಿರುವ ಮೊಟ್ಟಮೊದಲ ಸೌರ ವೀಕ್ಷಣಾಲಯ ಆದಿತ್ಯ ಎಲ್1 ಉಪಗ್ರಹ ನಾಳೆ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ನಿಂದ ನಭಕ್ಕೆ ಹಾರಲಿದೆ. ಇದಕ್ಕಾಗಿ ಇಸ್ರೋ ಸಕಲ ಸಿದ್ಧತೆಯನ್ನೂ ಮಾಡಿದ್ದು, ನಾಲ್ಕು ತಿಂಗಳ ಪ್ರಯಾಣದ ಬಳಿಕ ಆದಿತ್ಯ ಎಲ್1 ನೌಕೆ ಅದು ತನ್ನ ಗಮ್ಯಸ್ಥಾನವಾದ ಲ್ಯಾಂಗ್ರೇಜ್ ಪಾಯಿಂಟ್ 1 ಅಥವಾ ಎಲ್1 ಪಾಯಿಂಟ್‌ಗೆ ತಲುಪಲಿದೆ. ಅಂದಿನಿಂದ ಇದರ ನಿಜವಾದ ಕಾರ್ಯ ಆರಂಭವಾಗಲಿದೆ. ಪ್ರತಿದಿನವೂ ಇದು ಸೂರ್ಯನಿಂದ ಅಪಾರ ಪ್ರಮಾಣದ ಡೇಟಾವನ್ನು ಸಂಗ್ರಹಿಸಲು ಆರಂಭ ಮಾಡುತ್ತದೆ. ಇಸ್ರೋ ನೀಡಿರುವ ಮಾಹಿತಿಯ ಪ್ರಕಾರ, ಆದಿತ್ಯ ಎಲ್1, 2024ರ ಜನರಿಯಿಂದ ಡೇಟಾವನ್ನು ಸಂಗ್ರಹಣೆ ಮಾಡಿ ರವಾನಿಸಲು ಆರಂಭ ಮಾಡುವ ನಿರೀಕ್ಷೆಯಿದೆ. ಆದಿತ್ಯ ಎಲ್-1 ನೌಕೆಯಲ್ಲಿರುವ ಅತ್ಯಂತ ಪ್ರಮುಖ ಪೇಲೋಡ್ ಅಥವಾ ಸಾಧನ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ ಅಥವಾ ವಿಇಎಲ್‌ಸಿ (ವೆಲ್ಕ್) ಎಂದು ಕರೆಯಲಾಗುತ್ತದೆ. ಒಮ್ಮೆ ಇದು ಕೆಲಸ ಮಾಡಲು ಆರಂಭಿಸಿದ ಬಳಿಕ ಬೆಂಗಳೂರಿನಲ್ಲಿರುವ ಇಸ್ರೋ ಕಚೇರಿಗೆ ಪ್ರತಿದಿನ ಸೂರ್ಯನ ಒಟ್ಟು 1440 ಅಲ್ಟ್ರಾ ಹೈ ರೆಸಲ್ಯೂಶನ್‌ನ ಚಿತ್ರಗಳನ್ನು ಕಳಿಸುತ್ತದೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಅಭಿವೃದ್ಧಿಪಡಿಸಿದ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ.ನಷ್ಟು ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 (L1) ಎಂದು ಕರೆಯಲ್ಪಡುವ ಮಹತ್ವದ ವೇಂಟೇಜ್ ಪಾಯಿಂಟ್‌ನಿಂದ ಸೂರ್ಯನ ಕರೋನಾವನ್ನು ಸತತವಾಗಿ ವೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.
VELC ಪೇಲೋಡ್‌ನ ಪ್ರಧಾನ ಅಧಿಕಾರಿ ಪ್ರೊಫೆಸರ್ ರಮೇಶ್ ಆರ್ ಪ್ರಕಾರ, ಕರೋನಾಗ್ರಾಫ್ ಅನ್ನು ಪ್ರತಿ ನಿಮಿಷವೂ ಸೂರ್ಯನ ಚಿತ್ರವನ್ನು ಸೆರೆಹಿಡಿಯಲು ನಿಖರವಾಗಿ ರಚಿಸಲಾಗಿದೆ, ಪ್ರತಿದಿನ ಒಟ್ಟು 1,440 ಚಿತ್ರಗಳನ್ನು ಇದು ಸಂಗ್ರಹ ಮಾಡುತ್ತದೆ. "ಇಷ್ಟೊಂದು ದತ್ತಾಂಶದೊಂದಿಗೆ, ಈ ಚಿತ್ರಗಳನ್ನು ನೈಜ ಸಮಯದಲ್ಲಿ ಪ್ರಕ್ರಿಯೆಗೊಳಿಸಲು ಭೂಮಿಯಲ್ಲಿರುವ ಇಸ್ರೋ ಕಚೇರಿ ಸಿದ್ಧವಾಗಿರಬೇಕು ಮತ್ತು 24 ಗಂಟೆಗಳ ನಂತರ ಅವುಗಳನ್ನು ಇಸ್ರೋ ಹಂಚಿಕೊಳ್ಳಬೇಕು. ಇದರಿಂದಾಗಿ ಡೇಟಾವನ್ನು ವೈಜ್ಞಾನಿಕ ಸಮುದಾಯ ಮತ್ತು ಸಾರ್ವಜನಿಕರಿಗೆ ಪ್ರಸಾರ ಮಾಡಲಾಗುತ್ತದೆ" ಎಂದು ತಿಳಿಸಿದ್ದಾರೆ.
ಅಗಾಧವಾದ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿದೆ: ಪ್ರತಿದಿನ ವೆಲ್ಕ್ ಕಳಿಸುವ ಸೂರ್ಯನ ಚಿತ್ರಗಳನ್ನು ಪ್ರಕ್ರಿಯೆಗೊಳಿಸಲು ಇಸ್ರೋ ಮತ್ತು ಐಐಎಗೆ ಇದರ ಡೇಟಾ ವಿಶ್ಲೇಷಣೆ ಮಾಡಿ ಅಧ್ಯಯನ ಮಾಡೋದಕ್ಕೆ ಅಗಾಧವಾದ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿರುತ್ತದೆ.
ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!
ತಡೆರಹಿತ ಡೇಟಾ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಾಫ್ಟ್‌ವೇರ್ ಘಟಕಗಳ ಕಠಿಣ ಪರೀಕ್ಷೆ ನಡೆದಿದೆ ಎಂದು ಪ್ರೊಫೆಸರ್ ರಮೇಶ್ ಹೇಳಿದರು. “ಎಲ್ಲಾ ಸಾಫ್ಟ್‌ವೇರ್‌ಗಳನ್ನು ಪರೀಕ್ಷಿಸಲಾಗುತ್ತಿದೆ ಆದ್ದರಿಂದ ಕನಿಷ್ಠ ಓವರ್‌ಲ್ಯಾಪ್ ಸಮಯದೊಂದಿಗೆ ಬಾಹ್ಯಾಕಾಶ ನೌಕೆಯ ಡೇಟಾವನ್ನು ಬ್ಯಾಲಾಳುವಿನಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್‌ನಲ್ಲಿ ಡೌನ್‌ಲೋಡ್ ಮಾಡಲಾಗುತ್ತದೆ ಅಲ್ಲಿಂದ ಅವರು L0 ಡೇಟಾವನ್ನು [ಹಂತ 0] ಡೇಟಾವನ್ನು ಪ್ರಕ್ರಿಯೆಗೊಳಿಸುತ್ತಾರೆ ಮತ್ತು ಅವುಗಳನ್ನು ಪೇಲೋಡ್ ಕಾರ್ಯಾಚರಣೆಯ ಟೀಮ್‌ಗೆ ಕಳುಹಿಸುತ್ತಾರೆ. ಐಐಎನಲ್ಲಿರುವ ಕೇಂದ್ರ ಈ ಚಿತ್ರಗಳನ್ನು 24 ಗಂಟೆಗಳ ಒಳಗೆ ಪ್ರಕ್ರಿಯೆಗೊಳಿಸಲಿದ್ದು, ಪ್ರಸಾರಕ್ಕಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರಕ್ಕೆ ಕಳುಹಿಸಲಾಗುವುದು, ”ಎಂದು ತಿಳಿಸಿದ್ದಾರೆ.
ಚಂದ್ರಯಾನದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜು: ಶ್ರೀಹರಿಕೋಟಕ್ಕೆ ಬಂದ ಆದಿತ್ಯ-ಎಲ್1 ಉಪಗ್ರಹ
VELC ಆದಿತ್ಯ-L1 ವೀಕ್ಷಣಾಲಯದಲ್ಲಿ ಅತ್ಯಂತ ಪ್ರಮುಖವಾದ ಪೇಲೋಡ್ ಆಗಿದೆ ಮತ್ತು 6 ಇತರ ಪೇಲೋಡ್‌ಗಳ ಇರುತ್ತವೆ. ಇವುಗಳೆಲ್ಲವೂ 5 ವರ್ಷಗಳವರೆಗೆ ಸೂರ್ಯನ ಸುತ್ತ ಕೆಲಸ ಮಾಡುತ್ತವೆ.