
ನವದೆಹಲಿ: ನಿಯಾಂಡರ್ಥಲ್ ಮಾನವರು ಭೂಮಿಯಲ್ಲಿ ಇನ್ನು ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಅಂದರೆ ಸುಮಾರು 50 ಸಾವಿರ ವರ್ಷಗಳ ಹಿಂದೆ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ‘ಹಸಿರು ಧೂಮಕೇತು ಫೆ.2ರಂದು ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬರಲಿದೆ. ಈ ಬಾರಿ ಈ ಧೂಮಕೇತು ಭಾರತದಲ್ಲೂ ಕಾಣಿಸಿಕೊಳ್ಳಲಿದ್ದು, ಬೈನಾಕ್ಯುಲರ್ (binoculars)ಸಹಾಯದಿಂದ ಕತ್ತಲೆಯ ವೇಳೆಯಲ್ಲಿ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈಗಾಗಲೇ ಹಲವು ದೂರದರ್ಶಕಗಳ (telescopes)ಮೂಲಕ ಈ ಧೂಮಕೇತುವಿನ (comet) ಚಿತ್ರವನ್ನು ಸೆರೆಹಿಡಿದಿದ್ದು, ಹಸಿರು ಬಾಲದೊಂದಿಗೆ ಪ್ರಕಾಶಮಾನವಾಗಿ ಈ ಧೂಮಕೇತು ಚಲಿಸುತ್ತಿರುವುದು ಕಂಡುಬಂದಿದೆ.
ಉತ್ತರಾರ್ಧಗೋಳದಲ್ಲಿ (Northern Hemisphere) ಈ ಧೂಮಕೇತು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಪ್ರಸ್ತುತ ಇದು ಪೋಲ್ ಸ್ಟಾರ್ (ಪೊಲಾರಿಸ್) ಮತ್ತು ದ ಗ್ರೇಟ್ ಬೀರ್ (ಸಪ್ತರ್ಷಿ ಮಂಡಲ) ತಾರಾಪುಂಜದ ನಡುವೆ ಕಾಣಿಸಿಕೊಂಡಿದೆ. ಚಂದ್ರನ ಬೆಳಕಿನಿಂದ ಇದು ಸರಿಯಾಗಿ ಕಾಣಿಸದೇ ಇರಬಹುದು. ಹಾಗಾಗಿ ಚಂದ್ರಮರೆಯಾದ ಬಳಿಕ ಸೂರ್ಯೋದಯಕ್ಕೂ ಮೊದಲು ನೋಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
IIT Kanpur New Departments: ಹೊಸದಾಗಿ ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನ ವಿಭಾಗ ಸ್ಥಾಪಿಸಿದ ಐಐಟಿ ಕಾನ್ಪುರ
ಈ ಧೂಮಕೇತುವನ್ನು 2022ರ ಮಾ.2ರಂದು ಖಗೋಳ ವಿಜ್ಞಾನಿಗಳಾದ ಬ್ರೈಸ್ ಬೋಲಿನ್ (Bryce Bolin)ಮತ್ತು ಫ್ರಾಂಕ್ ಮಾಸ್ಕಿ (Frank Maskey) ಕಂಡುಹಿಡಿದರು. ಈ ಮಾದರಿಯ ಧೂಮಕೇತುಗಳು ನಮ್ಮ ಸೌರಮಂಡಲದಾಚೆ ಇರುವ ಊರ್ಚ್ ಕ್ಲೌಡ್ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಿ ಅಲ್ಲಿಂದ ಚಲಿಸಲು ಆರಂಭಿಸುತ್ತವೆ. ಇದೊಂದು ಪ್ರಕಾಶಮಾನವಾದ ಬಾಲ ಹೊಂದಿರುವ ಧೂಮಕೇತುವಾಗಿದ್ದು, ಇಂತಹುದನ್ನು ಮತ್ತೆ 50 ಸಾವಿರ ವರ್ಷಗಳವರೆಗೆ ನೋಡಲಾಗುವುದಿಲ್ಲ ಎಂದು ಖಗೋಳಶಾಸ್ತ್ರಜ್ಞನರು ಹೇಳಿದ್ದಾರೆ.
ದೈತ್ಯ ನಕ್ಷತ್ರ ಸ್ಫೋಟದ ದೃಶ್ಯ ಸೆರೆ: ಖಗೋಳ ಇತಿಹಾಸದಲ್ಲೇ ಮೊದಲು
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.