ನಾಯಕನಾಗಬೇಕೆಂಬ ಕನಸಿಗೆ ಝೈದ್ ಖಾನ್ ತಯಾರಿ ಹೇಗಿತ್ತು ಗೊತ್ತಾ?

Published : Jul 06, 2022, 03:52 PM IST
ನಾಯಕನಾಗಬೇಕೆಂಬ ಕನಸಿಗೆ ಝೈದ್ ಖಾನ್ ತಯಾರಿ ಹೇಗಿತ್ತು ಗೊತ್ತಾ?

ಸಾರಾಂಶ

ಜಯತೀರ್ಥ ನಿರ್ದೇಶನದ ಬನಾರಸ್ ಮೂಲಕ ಝೈದ್ ಖಾನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. 

ಬಣ್ಣದ ಜಗತ್ತು ಹಕವರನ್ನು ಕೈಬೀಸಿ ಕರೆಯುತ್ತೆ. ಅದೇ ರೀತಿ ಲವ್ವರ್ ಬಾಯ್ ನಂತಿರುವ ಝೈದ್ ಖಾನ್ ನನ್ನು ಆಕರ್ಷಿಸಿದೆ. ಝೈದ್ ಖಾನ್ ಹಣದ ವಿಚಾರದಲ್ಲಿ ಕಡಿಮೆ ಏನು ಇಲ್ಲ. ಆ ವಿಚಾರ ಹೇಳುವ ಅಗತ್ಯವೂ ಇಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸುಖಾಸುಮ್ಮನೆ ಇಂಡಸ್ಟ್ರಿ ಗೆ ಬಂದವರಲ್ಲ. ಸಿನಿಮಾಗೆ ಬಂದು ನೆಲೆ ನಿಲ್ಲಲೇಬೇಕೆಂಬ ಹಠ ತೊಟ್ಟು, ಒಂದಷ್ಟು ತಯಾರಿಯೊಂದಿಗೆ ಎಂಟ್ರಿಯಾಗುತ್ತಿದ್ದಾರೆ.

ಜಯತೀರ್ಥ ನಿರ್ದೇಶನದ ಬನಾರಸ್ ಮೂಲಕ ಝೈದ್ ಖಾನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಮೊದಲ ಸಿನಿಮಾವೇ ಆದರೂ ಆ ವ್ಯತ್ಯಾಸ ಎನ್ನಿಸುತ್ತಲೆ ಇಲ್ಲ. ಸಿನಿಮಾದ ಹಾಡು, ಅಪ್ಡೇಟ್ ಗಳನ್ನು ನೋಡುತ್ತಿದ್ದರೆ ನಟನೆಯ ಪ್ರಬುದ್ಧತೆ ಎದ್ದು ಕಾಣುತ್ತಿದೆ. ಬನಾರಸ್ ಸಿನಿಮಾ ಮೂಲಕ ಲವ್ವರ್ ಬಾಯ್ ಆಗಿ ಎಲ್ಲರ ಹಾರ್ಟ್ ಕದಿಯಲು ರೆಡಿಯಾಗಿದ್ದಾರೆ.

ಇತ್ತೀಚೆಗೆ ಬನಾರಸ್ ಸಿನಿಮಾದ ಮಾಯಾಗಂಗೆ ಹಾಡೊಂದು ರಿಲೀಸ್ ಆಗಿತ್ತು. ಕಾಶಿಯಲ್ಲಿಯೆ ಇಡೀ ಹಾಡು ಚಿತ್ರೀಕರಣಗೊಂಡಿದ್ದು, ನೋಡುಗರ ಮನತಣಿಯುವಂತೆ ಮಾಡಿದೆ. ಇದೇ ಹಾಡಿನ ಮೂಲಕ ಝೈದ್ ಖಾನ್ ಒಂದಷ್ಟು
ಭರವಸೆಯನ್ನು ಮೂಡಿಸಿದ್ದಾರೆ. ಹಾಡಿನ ಮೂಲಕವೇ ಇಷ್ಟೊಂದು ನಿರೀಕ್ಷೆ ಹುಟ್ಟು ಹಾಕಿರುವ ನಟ, ಸಿನಿಮಾದಲ್ಲಿ ಖಂಡಿತ ಎಲ್ಲರ ಮನಸ್ಸನ್ನು ತಟ್ಟುವುದರಲ್ಲಿ ಅನುಮಾನವಿಲ್ಲ. ನಟನೆ, ಡ್ಯಾನ್ಸ್, ಫೈಟ್ ಸೇರಿದಂತೆ ಹಲವು ಬಗೆಗಳಲ್ಲೂ ತರಬೇತಿ ಪಡೆದುಕೊಂಡಿದ್ದಾರೆ. ಆ ತರಬೇತಿಯ ಶ್ರಮ ಪ್ರತಿಯೊಂದು ದೃಶ್ಯದಲ್ಲೂ ಕಣ್ಣಿಗೆ ರಾಚುತ್ತಿದೆ. 

ವಾರಣಾಸಿಯ 84 ಘಾಟ್‌ಗಳಲ್ಲಿ ಚಿತ್ರೀಕರಣ, ಝೈದ್‌ ಖಾನ್‌ ನನ್ನು ಬೈದು ಕೊಂಡಿರುತ್ತಾರೆ: ಜಯತೀರ್ಥ

ಸದ್ಯ ರಿಲೀಸ್ ಗೆ ಎಲ್ಲಾ ರೀತಿಯಲ್ಲೂ ರೆಡಿಯಾಗಿದ್ದು, ಡೇಟ್ ಅನೌನ್ಸ್ ಆಗುವುದೊಂದನ್ನು ಬಾಕಿ ಉಳಿಸಿಕೊಂಡಿದೆ. ಝೈದ್ ಖಾನ್ ಮತ್ತು ಸಯೋನ್‌ರೋನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ತಿಲಕರಾಜ್ ಬಲ್ಲಾಳ್ ಅವರು ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸ್ವಪ್ನಾ ಮುಂತಾದವರು ನಟಿಸಿದ್ದಾರೆ. ಚಿತ್ರವು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಅಜನೀಶ್ ಬಿ ಲೋಕನಾಥ್ ಅವರ ಸಂಗೀತವಿದೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ನಿರ್ವಹಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?