ಯುಟ್ಯೂಬರ್ ಚಂದನ್ ಗೌಡ - ನವ್ಯಾ ಎಂಗೇಜ್‌ಮೆಂಟ್‌; ನಿಶ್ಚಿತಾರ್ಥ ಮುಚ್ಚಿಡಲು ಕಾರಣ ಬಿಚ್ಚಿಟ್ಟ ನಟಿ!

Published : Jul 15, 2023, 03:39 PM IST
ಯುಟ್ಯೂಬರ್ ಚಂದನ್ ಗೌಡ - ನವ್ಯಾ ಎಂಗೇಜ್‌ಮೆಂಟ್‌; ನಿಶ್ಚಿತಾರ್ಥ ಮುಚ್ಚಿಡಲು ಕಾರಣ ಬಿಚ್ಚಿಟ್ಟ ನಟಿ!

ಸಾರಾಂಶ

ಸೈಲೆಂಟ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಗೌಡ ಮತ್ತು ನಟಿ ನವ್ಯಾ. ಯುಟ್ಯೂಬ್‌ ಚಾನೆಲ್‌ನಲ್ಲಿ ಕಾರಣ ಬಿಚ್ಚಿಟ್ಟ ಜೋಡಿ.... 

ಕನ್ನಡ ಜನಪ್ರಿಯ ಯುಟ್ಯೂಬರ್ ಚಂದನ್ ಗೌಡ ಕೆಆರ್‌ ಪೇಟೆ ಕುರುಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದರು. ಚುನಾಚಣೆಯಲ್ಲಿ ಗೆದ್ದಿಲ್ಲ ಆದರೆ ಅಪಾರ ಸಂಖ್ಯೆಯಲ್ಲಿ ಜನರನ್ನು ಗಳಿಸಿಕೊಂಡಿರುವೆ ಎಂದು ಖುಷಿಯಿಂದ ವಿಡಿಯೋ ಮಾಡಿದ್ದರು ಅಲ್ಲದೆ ಈಗಲೂ ಜನರ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಲೈಫ್‌ನಲ್ಲಿ ಚಂದನ್ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದು ನಟಿ ನವ್ಯಾ ನಾರಾಯಣ್ ಜೊತೆ....

ಹೌದು! ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ನಟಿ ನವ್ಯಾ ನಾರಾಯಣ್ ಮತ್ತು ಚಂದನ್ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಯಾರಿಗೂ ಹೇಳದ ಹಾಗೆ ಎಲ್ಲಿಯೂ ಶೇರ್ ಮಾಡಿಕೊಳ್ಳದೆ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದಕ್ಕೆ ಜನರು ಕೊಂಚ ಗರಂ ಆಗಿದ್ದರು. ಇತ್ತೀಚಿಗೆ ಯುಟ್ಯೂಬ್‌ಗೆ ಕಾಲಿಟ್ಟ ನವ್ಯಾ ನಾರಾಯಣ್‌ ತಮ್ಮ ಚಾನೆಲ್‌ನಲ್ಲಿ ವಿಡಿಯೋ ಮಾಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸತ್ಯ ಅದು ನಮ್ಮ ಫೋಟೋ ಯಾವ ಸಿನಿಮಾ ಫೋಟೋ ಅಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. 

ಅಮೂಲ್ಯ ಅವಳಿ ಮಕ್ಕಳ ಜೊತೆ ಗಣೇಶ್ ಪತ್ನಿ ಶಿಲ್ಪಾ; ಸ್ವಿಮಿಂಗ್ ಫೋಟೋ ವೈರಲ್!

'ಜನರು ಪದೇ ಪದೇ ನಮ್ಮ ಎಂಗೇಜ್‌ಮೆಂಟ್‌ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು ಹೀಗಾಗಿ ನನ್ನ ಯುಟ್ಯೂಬ್ ಚಾನೆಲ್ ಆರಂಭದಲ್ಲಿ ವಿಡಿಯೋ ಹಾಕಿರುವೆ. ಜೂನ್ 15ರಂದು ಚಂದನ್ ಮತ್ತು ನಾನು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು ನಿಜ ಸ್ವಲ್ಪ ಅರ್ಜೆಂಟ್‌ ಅರ್ಜೆಂಟ್‌ ಆಗಿ ಮಾಡಿಕೊಂಡಿದ್ದು ಅದಿಕ್ಕೆ ಯಾರಿಗೂ ತಿಳಿಸಲು ಆಗಲಿಲ್ಲ. ಆಷಾಢ ಆರಂಭವಾಗುವ ಮುನ್ನ ನಮ್ಮ ಎಂಗೇಜ್‌ಮೆಂಟ್ ಆಗಬೇಕು ಎಂದು ಮನೆಯಲ್ಲಿ ನಿರ್ಧಾರ ಮಾಡಿದ್ದರು ಆಷಾಢಕ್ಕೆ ಕೇವಲ ಎರಡು ದಿನ ಇದ್ದ ಕಾರಣ ಬೇಗ ಬೇಗ ಎಲ್ಲಾ ಕೆಲಸಗಳು ನಡೆಯಿತ್ತು ಕೇವಲ ಎರಡು ದಿನಗಳಲ್ಲಿ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು ನನ್ನ ಸ್ನೇಹಿತರು ಮತ್ತು ಶೂಟಿಂಗ್‌ ಸೆಟ್‌ನಲ್ಲಿ ಯಾರಿಗೂ ಹೇಳಿರಲಿಲ್ಲ ಎರಡು ದಿನ ರಜೆ ಬೇಕು ಎಂದು ಸುಳ್ಳು ಹೇಳಿದ್ದೆ' ಎಂದು ನವ್ಯಾ ಯುಟ್ಯೂಬ್ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಚಂದನ್ ಹೆಂಡ್ತಿಗೆ ದೊಡ್ಡ ಬಟ್ಟೆ ಕೊಡ್ಸಪ್ಪ; ನಿವೇದಿತಾ ಡ್ಯಾನ್ಸ್‌ ವಿಡಿಯೋಗೆ ಹರಿದು ಬಂತು ಕಾಮೆಂಟ್ಸ್‌!

'ಎರಡು ದಿನಗಳಲ್ಲಿ ಎಂಗೇಜ್‌ಮೆಂಟ್‌ ಎಂದು ಹೇಳಿದರೆ ಯಾರೂ ನಂಬುವುದಿಲ್ಲ ಎಂದು ನಾನು ಹೇಳಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಾನು ಎಲ್ಲೂ ಶೇರ್ ಮಾಡಿಕೊಂಡಿರಲಿಲ್ಲ  ಚಂದನ್ ಕೂಡ ಎಲ್ಲೂ ಶೇರ್ ಮಾಡಿಕೊಂಡಿರಲ್ಲ ಸ್ವಲ್ಪ ದಿನಗಳ ನಂತರ ಸಣ್ಣ ವಿಡಿಯೋ ಹಾಕಿದ್ದರು ಅದನ್ನು ಅದೆಷ್ಟೋ ಜನರು ವೀಕ್ಷಿಸಿ ಡೌನ್‌ ಲೋಡ್‌ ಮಾಡಿಕೊಂಡು ಬಿಟ್ಟಿದ್ದರು. ಅದರಿಂದ ಎಲ್ಲರಿಗೂ ತಿಳಿಯಿತ್ತು. ಆಮೇಲೆ ಜನರು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದರು ನಾನ್ ಸ್ಟಾಪ್ ಕರೆ ಮಾಡುತ್ತಿದ್ದರು. ನಿಶ್ಚಿತಾರ್ಥಕ್ಕೆ ಯಾರಿಗೂ ಹೇಳಲಿಲ್ಲ ಆದರೆ ಖಂಡಿತಾ ನಮ್ಮ ಮದುವೆಗೆ ಆಹ್ವಾನಿಸುವೆ. ನಮಗೆ ಹೀಗೆ ಸಪೋರ್ಟ್ ಮಾಡುತ್ತಿರಿ' ಎಂದ ನವ್ಯಾ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?