
ಕೆಜಿಎಫ್ ಕನ್ನಡಿಗರ ಹೆಮ್ಮೆಯ ಸಿನಿಮಾ. ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳ ಲಿಸ್ಟ್‌ನಲ್ಲಿ ಕನ್ನಡದ ಕೆಜಿಎಫ್ ಸಿನಿಮಾ ಕೂಡ ಇರುವುದು ಸಂತಸದ ವಿಚಾರ. ರಾಕಿಂಗ್ ಸ್ಟಾರ್ ಯಶ್ ನಟನೆ, ಪ್ರಶಾಂತ್ ನೀಲ್ ನಿರ್ದೇಶಕನ, ಹಾಡುಗಳು, ಬ್ರ್ಯಾಗ್ರೌಂಡ್ ಸ್ಕೋರ್ ಸೇರಿದಂತೆ ಪ್ರತಿಯೊಂದು ವಿಚಾರವೂ ಅಭಿಮಾನಿಗಳ ಹೃದಯ ಗೆದ್ದಿತ್ತು. ಪಾರ್ಟ್-1 ರಿಲೀಸ್ ಆಗಿ ದೊಡ್ಡ ಸಕ್ಸಸ್ ಕಂಡ ಬಳಿಕ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಾಯಿತು. ಮೊದಲ ಭಾಗ 2021 ಡಿಸೆಂಬರ್ ನಲ್ಲಿ ರಿಲೀಸ್ ಆದರೆ ಪಾರ್ಟ್-2, 2022 ಏಪ್ರಿಲ್ 14ರಂದು ತೆರೆಗೆ ಬಂತು. ಎರಡು ಭಾಗ ಬ್ಲಾಕ್‌ಬಸ್ಟರ್ ಹಿಟ್.
ಭಾರತ ಮಾತ್ರವಲ್ಲದೇ ಕೆಜಿಎಫ್ ವಿದೇಶಗಳಲ್ಲೂ ಅಬ್ಬರಿಸಿದೆ. ರಾಕಿಂಗ್ ಸ್ಟಾರ್ ವಿಶ್ವದಾದ್ಯಂತ ಹವಾ ಎಬ್ಬಿಸಿದ್ದರು. ಆದರೆ ಇನ್ನೂ ಕೆಲವು ದೇಶಗಳಲ್ಲಿ ಕೆಜಿಎಫ್ ರಿಲೀಸ್ ಆಗಿರಲಿಲ್ಲ. ಇದೀಗ ಕೆಜಿಎಫ್ ಮತ್ತೊಂದು ದೇಶಕ್ಕೆ ಎಂಟ್ರಿ ಕೊಡುತ್ತಿದೆ. ಹೌದು ಅದು ಮತ್ಯಾವುದು ಅಲ್ಲ ಜಪಾನ್. ರಾಕಿಂಗ್ ಸ್ಟಾರ್ ಸಿನಿಮಾ ಈಗ ಜಪಾನ್‌ನಲ್ಲೂ ತೆರೆಗೆ ಬರುತ್ತಿದೆ.
ಇತ್ತೀಚೆಗಷ್ಟೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಜಪಾನ್ ನಲ್ಲಿ ಅದ್ದೂರಿಯಾಗಿ ತೆರೆಗೆ ಬಂದಿತ್ತು. ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲಾಗಿತ್ತು. ಇಡೀ ತಂಡ ಜಪಾನ್‌ಗೆ ಹಾರಿದ್ದರು. ಭಾರತೀಯ ಸಿನಿಮಾವನ್ನು ಜಪಾನಿಗರು ಅದ್ದೂರಿಯಾಗಿ ಸ್ವಾಗತ ಮಾಡಿದ್ದರು. ಆರ್ ಆರ್ ಆರ್ ನೋಡಿ ಜಪಾನಿಗರು ಸಂತಸ ಹೊರಹಾಕಿದ್ದರು. ಇದೀಗ ಕೆಜಿಎಫ್ ಸರದಿ.
Yash New Car: ಹೊಸ ಕಾರು ಖರೀದಿಸಿ ಹೆಂಡತಿ-ಮಕ್ಕಳೊಂದಿಗೆ ಡ್ರೈವ್ ಹೋದ ಯಶ್ !
ಕೆಜಿಎಫ್ 1 ಮತ್ತು ಕೆಜಿಎಫ್-2 ಎರಡು ಭಾಗ ಒಮ್ಮಗೆ ರಿಲೀಸ್ ಆಗುತ್ತಿದೆ. ಅಂದಹಾಗೆ ಕೆಜಿಎಫ್ ಸಿನಿಮಾ ಜುಲೈನಲ್ಲಿ ಜಪಾನ್‌ನಲ್ಲಿ ತೆರೆಗೆ ಬರುತ್ತಿದೆ. ಜುಲೈ 14ರಂದು ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಆರ್ ಆರ್ ಆರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣ ಕೆಜಿಎಫ್ ಸಿನಿಮಾವನ್ನು ಜಪಾನಿಗರು ಅದ್ದೂರಿಯಾಗಿ ಸ್ವಾಗತಿಸುವ ನಿರೀಕ್ಷೆಯಲ್ಲಿದೆ ಸಿನಿಮಾತಂಡ.
ಪಠಾಣ್, RRR ಯಾವುದು ಅಲ್ಲ: ಕೊರೊನಾ ಬಳಿಕ ಅತ್ಯಂತ ಲಾಭದಾಯಕ ಸಿನಿಮಾ ಕನ್ನಡದ KGF, ಇಲ್ಲಿದೆ ಪಕ್ಕಾ ಲೆಕ್ಕ
ಜಪಾನ್ ಸ್ಥಳಿಯ ವರದಿಯ ಪ್ರಕಾರ ಕೆಜಿಎಫ್ ಪಾರ್ಟ್ 1 ಮತ್ತು ಪಾರ್ಟ್ 2 ಜಪಾನ್ ಆವೃತ್ತಿಯ ಪೋಸ್ಟರ್ ಮತ್ತು ಟ್ರೇಲರ್‌ಅನ್ನು ಜಪಾನ್ ಭಾಷೆಯ ಉಪಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಇನ್ನೂ ಸಿನಿಮಾ ಜುಲೈ 14ಕ್ಕೆ ರಿಲೀಸ್ ಆಗುತ್ತಿದೆ. ರಿಲೀಸ್ ಸಮಯಕ್ಕೆ ಕೆಜಿಎಫ್ ತಂಡ ಜಪಾನ್‌ಗೆ ಹೋಗುತ್ತಾ ಎನ್ನುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಜುಲೈ 14ಕ್ಕೆ ತೆರೆಗೆ ಬರುವುದಾದರೆ ಸಿನಿಮಾ ತಂಡ ಜಪಾನ್‌ಗೆ ಹಾರಿದ್ರು ಅಚ್ಚರಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.