'ಕೆಜಿಎಫ್ 2'ಗೆ ಕಾಯುತ್ತಿದ್ದವರಿಗೆ ಸಿಕ್ತು ಗುಡ್‌ನ್ಯೂಸ್, ಬಿಡುಗಡೆ ದಿನಾಂಕ ಫಿಕ್ಸ್!

By Suvarna News  |  First Published Aug 22, 2021, 4:17 PM IST

* ಕೆಜಿಎಫ್ 2 ಬಿಡುಗಡೆ ದಿನಾಂಕ ನಿಗದಿ

* ಟ್ವಿಟರ್‌ನಲ್ಲಿ ಕೆಜಿಎಫ್ 2 ಬಿಡುಗಡೆ ಡೇಟ್ ಅನೌನ್ಸ್ ಮಾಡಿದ ಯಶ್

* ಬೆಂಗಳೂರಿನ ನೈಸ್ ರೋಡ್ ನಲ್ಲಿ ಮೂರು ದಿನದ ಶೂಟಿಂಗ್ ಕೆಲಸ ಬಾಕಿ


ಬೆಂಗಳೂರು(ಆ.22): ಭಾರತೀಯ ಚಿತ್ರರಂಗ ಕುತೂಹಲದಿಂದ ಕಾಯುತ್ತಿರುವ ‘ಕೆಜಿಎಫ್​​ 2’ ಸಿನಿಮಾ ಯಾವಾಗ ರಿಲೀಸ್‌ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು ಈ ಬಗ್ಗೆ ಚಿತ್ರತಂಡ ಸಿನಿ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದ್ದು, 2022ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದೆ. 

"

Tap to resize

Latest Videos

ಕೆಜಿಎಫ್‌ ಹೀರೋ ನಟ ಯಶ್, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್​ ಸೋಶಿಯಲ್​ ಮೀಡಿಯಾ ಮೂಲಕ ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನು ಘೋಷಿಸಿದ್ದಾರೆ. 

The uncertainties of today will only delay our resolve, but the eventuality is as promised.We will be out in theaters on april 14th 2022.

— Yash (@TheNameIsYash)

ಈ ಹಿಂದೆ 2021ರ ಜುಲೈ 16 ಕ್ಕೆ ಕೆಜಿಎಫ್ 2 ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಕೊರೋನಾದಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಬಹುನಿರೀಕ್ಷಿತ ಕೆಜಿಎಫ್‌ 2 ಚಿತ್ರ ರಿಲೀಸ್ ಆಗಲಿದೆ. 

ಎಲ್ಲಿಗೆ ತಲುಪಿದೆ ಸಿನಿಮಾ ವರ್ಕ್?

ಸದ್ಯ ಕೆಜಿಎಫ್‌ 2 ಸಿನಿಮಾದ ಪ್ಯಾಚ್ ವರ್ಕ್ ಕೆಲಸ ಬಾಕಿ ಇದೆ. ಬೆಂಗಳೂರಿನ ನೈಸ್ ರೋಡ್‌ನಲ್ಲಿ ಮೂರು ದಿನದ ಶೂಟಿಂಗ್ ಕೆಲಸ ಬಾಕಿ‌ ಇದೆ. ಅಲ್ಲದೇ ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಅತ್ತ ಸಲಾರ್ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆನ್ನಲಾಗಿದೆ. 

click me!