
ಎ2 ಮ್ಯೂಸಿಕ್ ಯೂಟ್ಯೂಬ್ ವಾಹಿನಿಯಲ್ಲಿ ಟೀಸರ್ ಅನಾವರಣಗೊಂಡಿದ್ದು, ಟೀಸರ್ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಡಾನ್ ಪಾತ್ರದಲ್ಲಿ ಅರುಣ್ ಗೌಡ ಕಾಣಿಸಿಕೊಂಡಿದ್ದು, ‘ಮುದ್ದು ಮನಸೇ’ ಚಿತ್ರದ ನಂತರ ಅವರಿಗೆ ಈ ಸಿನಿಮಾ ಹೊಸ ಇಮೇಜ್ ನೀಡಲಿದೆ ಎಂಬುದು ಟೀಸರ್ ನೋಡಿದವರ ಮಾತು. ಅನಂತ್ ಶೈನ್ ನಿರ್ದೇಶನದ ಎರಡನೇ ಸಿನಿಮಾ. ಸುನೀಲ್ ರಾಜ್ ನಿರ್ಮಾಣ ಮಾಡಿದ್ದು, ವಿನಿತ್ ರಾಜ್ ಮೆನನ್ ಸಂಗೀತ, ಶಿವು ಬಿ ಕೆ ಕುಮಾರ್ ಹಾಗೂ ಶಿವ ಸೀನ ಕ್ಯಾಮೆರಾ ಚಿತ್ರಕ್ಕಿದೆ. ಸಂದೀಪ್ ಹಾಗೂ ರಘು ಸಂಭಾಷಣೆ ಬರೆದಿದ್ದಾರೆ.
ಇನ್ಸ್‌ಪೆಕ್ಟರ್ ವಿಕ್ರಂನ 'ಹೇ ಗಾಯ್ಸ್' ಹಾಡಿಗೆ ಮೆಚ್ಚುಗೆ!
‘ಪಕ್ಕಾ ಕಮರ್ಷಿಯಲ್ ಅಂಶಗಳಿರುವ ದೊಡ್ಡ ಸಿನಿಮಾ. ಯೂಟ್ಯೂಬ್ನಲ್ಲಿ ಟೀಸರ್ಗೆ ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿದಾಗ ನಮ್ಮ ಶ್ರಮಕ್ಕೆ ಯಶಸ್ಸು ಸಿಗುತ್ತದೆಂಬ ಭರವಸೆ ಮೂಡಿದೆ. ವಿಶೇಷವಾದ ಕತೆ ಚಿತ್ರದಲ್ಲಿದೆ’ ಎನ್ನುತ್ತಾರೆ ನಿರ್ದೇಶಕ ಅನಂತ್ ಶೈನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.