
ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದ ‘'ಹೇ ಗಾಯ್ಸ್’ ಹಾಡು ಸಖತ್ ಸದ್ದು ಮಾಡುತ್ತಿದೆ. ಪೊಲೀಸ್ ಡ್ರೆಸ್‌ನಲ್ಲಿ ಪ್ರಜ್ವಲ್ ಹಾಡಿಗೆ ಹಾಕಿರುವ ಸ್ಟೆಫ್ಸ್ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ವಾಹಿನಿಯಲ್ಲಿ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
ಹುಬ್ಬಳ್ಳಿಯಲ್ಲಿ ಇನ್ಸ್‌ಪೆಕ್ಟರ್ ವಿಕ್ರಂ ಆಡಿಯೋ ಜಾತ್ರೆ!
ಈ ಚಿತ್ರದ ವಿಡಿಯೋ ಹಾಡನ್ನು ಇತ್ತಿಚೇಗಷ್ಟೆ ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದರು. ಹಳೆ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರದ ದಿನಗಳನ್ನು ನೆನಪಿಸಿಕೊಂಡು ಚಿತ್ರತಂಡಕ್ಕೆ ಶುಭ ಕೋರಿದರು.
ಪ್ರಜ್ವಲ್ ಪತ್ನಿ ಜೊತೆ ಪುನೀತ್ ಸಿನಿಮಾ?
‘ಹೇ ಗಯ್‌್ಸ ಕೂಲಿಂಗ್ ಗ್ಲಾಸು ಹಾಕ್ಕೊಂಡು ಕೂಲಾಗಿರಿ, ಬ್ಯಾಡ್ ಬಾಯ್‌್ಸ ಸೈಲೆಂಟ್ ಮೋಡ್‌ಗೆ ಹಾಕ್ಕಳಿ ಗೂಂಡಾಗಿರಿ’ ಎಂದು ಸಾಗುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ, ಪ್ರಮೋದ್ ಸಾಹಿತ್ಯ ನೀಡಿದ್ದಾರೆ. ನರಸಿಂಹ ನಿರ್ದೇಶನದ, ಎ ಆರ್ ವಿಖ್ಯಾತ್ ನಿರ್ಮಾಣದ ಈ ಚಿತ್ರಕ್ಕೆ ಭಾವನಾ ಮೆನನ್ ನಾಯಕಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.