
ರಾಧಿಕಾ- ಯಶ್ ಅಕ್ಷಯ ತೃತೀಯಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುದಿನಗಳಿಂದ ಲಿಟಲ್ ಏಂಜಲ್ ನೋಡಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮುದ್ದು ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.
ಇದುವರೆಗೂ ಮಗಳ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಬ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಆ್ಯಕ್ಟಿವ್ ಇರುವ ರಾಧಿಕಾ ಪಂಡಿತ್ ಕೆಲ ದಿನಗಳ ಹಿಂದೆ ಯಶ್ ಮಗಳ ಜೊತೆ ತುಂಟಾಟ ಮಾಡುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿ ಕುತೂಹಲ ಮೂಡಿಸಿದ್ದರು.
'ನೀನು ಹುಟ್ಟಿದ್ದು ನನಗಾಗಿಯೇ..' ಮಡದಿಗೆ ಯಶ್ ವಿಶ್
ಯಶ್ ಮಗಳ ಫೋಟೋವನ್ನು ಶೇರ್ ಮಾಡಿಕೊಂಡು, ‘ ನನ್ನ ಜಗತ್ತನ್ನು ಆಳುವ ಪುಟಾಣಿ ಇವಳು. ಇವಳಿಗಿನ್ನು ಹೆಸರಿಟ್ಟಿಲ್ಲ. ಸದ್ಯಕ್ಕೆ ಬೇಬಿ ವೈಆರ್ ಎಂದು ಕರೆಯಿರಿ. ನಿಮ್ಮ ಪ್ರೀತಿ, ಆಶೀರ್ವಾದ ಮಗಳ ಮೇಲಿರಲಿ’ ಎಂದು ಯಶ್ ಟ್ವೀಟ್ ಮಾಡಿದ್ದಾರೆ.
ನೀವು ಹೇಳಿದ್ದೇ ಸರಿ.... ಇವಳು ಬರೋವರ್ಗೂ ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ ಎಂದು ಯಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಅತ್ತೆ, ಮಾವ ರಾಧಿಕಾಗೆ ಕೊಟ್ರು ಸ್ಪೆಷಲ್ ಗಿಫ್ಟ್! ಏನದು?
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.