
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಮೊದಲ ಕನ್ನಡ ಸಿನಿಮಾ. ಚಿತ್ರದಲ್ಲಿ ಬಾಲಿವುಡ್ ದಿಗ್ಗಜರಾದ ಸಂಜಯ್ ಹಾಗೂ ರವೀನಾ ಟಂಡನ್ ನಟಿಸುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಸಮಯದಿಂದಲೂ ರವೀನಾ ಟಂಡನ್ ಅಭಿನಯಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು. ಕುತೂಹಲ ಹೆಚ್ಚಿಸಿದ ರವೀನಾ ಪಾತ್ರದ ಬಗ್ಗೆ ಪ್ರಶಾಂತ್ ನೀಲ್ ಬಹಿರಂಗಪಡಿಸಿದ್ದಾರೆ.
"
ಕೆಜಿಎಫ್ 2 ಮೀರಿಸುತ್ತಾ ಯಶ್ 20 ನೇ ಸಿನಿಮಾ?
ಇಂದಿರಾ ಗಾಂಧಿ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಪ್ರಶಾಂತ್ ಪಾತ್ರದ ಸ್ಪಷ್ಟನೆ ನೀಡಿದ್ದಾರೆ. ರವೀನಾ ಟಂಡನ್ ರಮಿಕಾ ಸೇನ್ ಎಂಬ ಪಾತ್ರ ನಿಭಾಯಿಸುತ್ತಿದ್ದಾರೆ. ಅದರಲ್ಲಿ ಅವರು ಪ್ರಧಾನ ಮಂತ್ರಿ ಪಾತ್ರ ನಿರ್ವಹಿಸುತ್ತಾರಂತೆ!
'The lady who issues the death warrant has arrived!' ಚಿತ್ರತಂಡಕ್ಕೆ ಸ್ವಾಗತ ರವೀನಾ ಮ್ಯಾಮ್, ಕೆಜಿಎಫ್ ಚಿತ್ರದ ರವೀಕಾ ಸೇನ್' ಎಂದು ಪ್ರಶಾಂತ್ ನೀಲ್ ಟ್ಟೀಟ್ ಮಾಡಿದ್ದಾರೆ.
ಈ ಹಿಂದೆ ಸಂಜಯ್ ದತ್ ಪಾತ್ರವೂ ಹೀಗೆ ಕುತೂಹಲ ಹೆಚ್ಚಿಸಿತ್ತು. ಕಳ್ಳ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 'ಅಧೀರ' ಸಂಜಯ್ ದತ್ ಮೈಸೂರಿನಲ್ಲಿ ಬಿಗಿ ಭದ್ರತೆಯಲ್ಲಿ ಚಿತ್ರೀಕರಣ ಮುಗಿಸಿದ್ದಾರೆ.
ಬಾಹುಬಲಿ ಪ್ರಭಾಸ್ಗೂ ಮೊದಲೇ ರಾಕಿಭಾಯ್ ಆ ಕೆಲಸ ಮಾಡಿದ್ರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.